ಮಾನವ ದೇಹದಲ್ಲಿ 500 ಕೆಲಸ ಮಾಡುವ ಲಿವರ್‌ಗೆ ಒಳ್ಳೆಯ Vs ಕೆಟ್ಟ ಪಾನೀಯಗಳು ಯಾವುವು?

Published : Jul 04, 2025, 07:29 PM IST
Healthy drinks for kids recipes

ಸಾರಾಂಶ

ಲಿವರ್ ಆರೋಗ್ಯಕ್ಕೆ ಪಾನೀಯಗಳ ಪ್ರಭಾವದ ಬಗ್ಗೆ ಹಾರ್ವರ್ಡ್ ಮತ್ತು ಸ್ಟ್ಯಾನ್‌ಫೋರ್ಡ್ ವೈದ್ಯಕೀಯ ಸಂಸ್ಥೆಗಳ ತಜ್ಞರು ಮಾಹಿತಿ ನೀಡಿದ್ದಾರೆ. ನೀರು ಲಿವರ್‌ಗೆ ಅತ್ಯುತ್ತಮ ಪಾನೀಯವಾಗಿದ್ದು, ಪ್ಯಾಕ್ ಮಾಡಿದ ಹಣ್ಣಿನ ರಸ ಹಾನಿಕಾರಕ. ಸಕ್ಕರೆ ಪಾನೀಯಗಳು ಲಿವರ್‌ಗೆ ಹಾನಿ ಮಾಡುತ್ತವೆ.

ಬೆಂಗಳೂರು (ಜು. 5): ಮನುಷ್ಯನ ದೇಹದ ಪ್ರಮುಖ ಅಂಗವಾಗಿರುವ ಲಿವರ್ (ಯಕೃತ್) ಆರೋಗ್ಯಕ್ಕೆ ಪಾನೀಯಗಳ ಪ್ರಭಾವ ಎಷ್ಟು ಮಹತ್ವಪೂರ್ಣ ಎಂಬುದನ್ನು ಹಾರ್ವರ್ಡ್ ಮತ್ತು ಸ್ಟ್ಯಾನ್‌ಫೋರ್ಡ್ ವೈದ್ಯಕೀಯ ಸಂಸ್ಥೆಗಳ ಜಠರ ಮತ್ತು ಕರುಳಿನ ತಜ್ಞ ಡಾ. ಸೌರಭ್ ಸೇಥಿ ವಿವರಿಸಿದ್ದಾರೆ. ಸಾಮಾಜಿಕ ಜಾಲತಾಣದ ಮೂಲಕ ಅವರು ಲಿವರ್‌ಗೆ ಒಳ್ಳೆಯದು ಮತ್ತು ಹಾನಿಕಾರಕವಾಗಿರುವ ಪಾನೀಯಗಳ ಬಗ್ಗೆ ವಿಡಿಯೊ ಬಿಡುಗಡೆ ಮಾಡಿದ್ದಾರೆ. ಇದರ ಜತೆಗೆ, ಪ್ರತಿಯೊಂದು ಪಾನೀಯಕ್ಕೆ ಯಕ್ಕೃತ್ತಿನ ಮೇಲೆ ಬೀರಬಹುದಾದ ಪರಿಣಾಮಗಳನ್ನು ಆಧರಿಸಿ 10ರಲ್ಲಿ ಎಷ್ಟು ಅಂಕ ಕೊಡಬಹುದು ಎಂಬ ಆಧಾರದಲ್ಲಿ ಅಂಕಗಳನ್ನೂ ನೀಡಿದ್ದಾರೆ.

ಲಿವರ್‌ಗೆ ಉತ್ತಮ-ಕೆಟ್ಟ ಪಾನೀಯಗಳು ಇಲ್ಲಿವೆ:

ಡಾ. ಸೇಥಿ ಪ್ರಕಟಿಸಿದ ಪಟ್ಟಿ ಪ್ರಕಾರ, ಪ್ಯಾಕ್ ಮಾಡಿದ ಹಣ್ಣಿನ ರಸ ಲಿವರ್‌ಗೆ ಅತ್ಯಂತ ಹಾನಿಕಾರಕವಾಗಿದೆ. ಇದಕ್ಕೆ ಅವರು ಕೇವಲ 1/10 ಅಂಕ ನೀಡಿದ್ದು, ಅದರಲ್ಲಿ ಹೆಚ್ಚಾಗಿ ಸಂರಕ್ಷಕ ದ್ರವ್ಯಗಳು (Preservatives) ಮತ್ತು ಸಕ್ಕರೆ (Sugar) ಹೆಚ್ಚಾಗಿರುತ್ತವೆ. ಆದ್ದರಿಂದ ಇವುಗಳಿಂದ ಆತಂಕವಿದೆ ಎಂದು ತಿಳಿಸಿದ್ದಾರೆ.

  • ಪ್ಯಾಕ್ ಮಾಡಿದ ಹಣ್ಣಿನ ರಸ – 1/10
  • ಸಕ್ಕರೆ ಮಿಶ್ರಿತ ಚಹಾ – 2/10
  • ತಾಜಾ ಹಣ್ಣಿನ ರಸ – 4/10
  • ಗ್ರೀನ್ ಸ್ಮೂಥಿ – 5/10
  • ನಿಂಬೆ ಪಾನಕ – 6/10
  • ಬೀಟ್ರೂಟ್ ರಸ – 7/10
  • ಸಕ್ಕರೆ ರಹಿತ ತರಕಾರಿ ರಸ – 8/10
  • ಬ್ಲ್ಯಾಕ್ ಕಾಫಿ – 9/10
  • ನೀರು – 10/10

ನೀರು ಅತ್ಯುತ್ತಮ:

ನೀರಿಗೆ 10/10 ಅಂಕ ನೀಡಿರುವ ಡಾ. ಸೇಥಿ, 'ನೀರು ದೇಹದಿಂದ ಕಲ್ಮಶಗಳನ್ನು ಹೊರಹಾಕುವ ಮೂಲಕ ಲಿವರ್‌ಗೆ ಸಹಕಾರಿಯಾಗುತ್ತದೆ. ಹೆಚ್ಚು ನೀರು ಸೇವನೆ, ಲಿವರ್‌ ಮೇಲೆ ಹತ್ತಿರದ ಒತ್ತಡವನ್ನೂ ಕಡಿಮೆ ಮಾಡುತ್ತದೆ. ಇನ್ನು ಬ್ಲ್ಯಾಕ್ ಕಾಫಿಗೆ 9 ಅಂಕ ನೀಡಲಾಗಿದ್ದು, ಇದು ಲಿವರ್‌ ಅನ್ನು ಶಕ್ತಿಯುತಗೊಳಿಸುವ ಮೂಲಕ ಅದರ ಕಾರ್ಯನಿರ್ವಹಣೆಗೆ ನೆರವಾಗುತ್ತದೆ. ಸಕ್ಕರೆ ರಹಿತ ತರಕಾರಿ ರಸ, ಬೀಟ್ರೂಟ್ ರಸ, ನಿಂಬೆ ಪಾನಕ ಮುಂತಾದ ನೈಸರ್ಗಿಕ ಪಾನೀಯಗಳು ಲಿವರ್‌ನ ಆರೋಗ್ಯವನ್ನು ಬಲಪಡಿಸುತ್ತವೆ ಎಂದು ತಿಳಿಸಿದ್ದಾರೆ.

ಸಕ್ಕರೆ ಪಾನೀಯಗಳ ಅಪಾಯ:

ಪ್ಯಾಕ್ ಮಾಡಿದ ಜ್ಯೂಸ್ ಅಥವಾ ಸಿಹಿ ಚಹಾ ಸೇವನೆ ಲಿವರ್‌ಗೆ ತೀವ್ರ ಹಾನಿಯನ್ನುಂಟುಮಾಡಬಹುದು. ಸಕ್ಕರೆ ಅಧಿಕ ಪ್ರಮಾಣದಲ್ಲಿ ಲಿವರ್‌ನಲ್ಲಿ ಕೊಬ್ಬು ಸಂಗ್ರಹವಾಗಲು ಕಾರಣವಾಗುತ್ತದೆ. ಇದು ಮುಂದೆ ಫ್ಯಾಟಿ ಲಿವರ್ ಕಾಯಿಲೆ, ಸಿರೋಸಿಸ್ ಮುಂತಾದ ಗಂಭೀರ ಸಮಸ್ಯೆಗಳಿಗೆ ದಾರಿ ಹಾಕುತ್ತದೆ.

ದೇಹದ 500 ಕಾರ್ಯ ಮಾಡುವ ಲಿವರ್:

ಇನ್ನು ಲಿವರ್ ದೇಹದಲ್ಲಿ 500ಕ್ಕೂ ಹೆಚ್ಚು ಕಾರ್ಯಗಳನ್ನು ನಿರ್ವಹಿಸುತ್ತದೆ. ಇದರಲ್ಲಿ ವಿಷಕಾರಕ ದ್ರವ್ಯಗಳನ್ನು ಹೊರಹಾಕುವುದು, ಪಿತ್ತರಸ ಉತ್ಪಾದನೆ, ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಣ, ಪೋಷಕಾಂಶ ಸಂಗ್ರಹ ಮತ್ತು ಔಷಧೀಯ ಜೀರ್ಣನ ಮೊದಲಾದವು ಸೇರಿವೆ. ಲಿವರ್ ಹಾನಿಗೊಳಾದರೆ ದೇಹದ ಸಮಗ್ರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಅಂದರೆ, ಒಂದು ದೇಶಕ್ಕೆ ರಕ್ಷಣಾ ಪಡೆಯ ದಂಡನಾಯಕ ಹೇಗೆ ಕೆಲಸ ಮಾಡುತ್ತಾನೋ ಹಾಗೆ ಇಡೀ ದೇಹಕ್ಕೆ ಲಿವರ್ ಒಬ್ಬ ದಂಡನಾಯಕನ ರೀತಿಯಲ್ಲಿ ಕೆಲಸ ಮಾಡುತ್ತದೆ.

ಲಿವರ್ ಸಂರಕ್ಷಣೆ ಸಲಹೆ:

  • ದಿನವಿಡೀ ನೀರು ಕುಡಿಯುವುದು.
  • ನೈಸರ್ಗಿಕ ಪಾನೀಯಗಳ ಸೇವನೆ.
  • ಸಕ್ಕರೆ, ಆಲ್ಕೋಹಾಲ್ ಪ್ರಮಾಣವನ್ನು ಕಡಿಮೆ ಮಾಡುವುದು.
  • ಸಮತೋಲಿತ ಆಹಾರ ಕ್ರಮ.
  • ಲಿವರ್ ಆರೋಗ್ಯ ಉಳಿಸಿಕೊಳ್ಳುವುದು ಒಬ್ಬರ ದೈನಂದಿನ ಜೀವನದಲ್ಲಿ ಅತ್ಯಂತ ಅವಶ್ಯಕ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಭಾರತದಲ್ಲಿ ಲಭ್ಯವಿರುವ ತೂಕ ಇಳಿಸುವ ಔಷಧಿಗಳು ಯಾವುವು? ಇದರ ಬೆಲೆ ಎಷ್ಟು, ಯಾರೆಲ್ಲಾ ಬಳಸಬಹುದು?
Coriander Leaves Farming: ಇಷ್ಟು ಎಲೆಗೆ ಅಷ್ಟು ಯಾಕೆ ಕೊಡ್ತೀರಿ? ಸಣ್ಣ ಪಾಟ್‌ನಲ್ಲೇ ಕೊತ್ತುಂಬರಿ ಬೆಳೆಯಲು Tips