ತೂಕ ಹೆಚ್ಚಾಗ್ತಿದ್ದಂತೆ ಹೆಕ್ಕಿ ಹೆಕ್ಕಿ ತಿನ್ನುವ ಸ್ಥಿತಿಗೆ ನಾವು ಬರ್ತೇವೆ. ಏನೇ ರುಚಿಯಾದ ಅಡುಗೆ ಮುಂದಿಟ್ರೂ ಬಾಯಿ ಕಟ್ಬೇಕು. ಕಾಫಿ ವಿಷ್ಯದಲ್ಲೂ ಇದು ಸತ್ಯವಾದ್ರೂ, ಒಂದೇ ಒಂದು ಹೆಚ್ಚುವರಿ ಕಾಫಿ ಏನು ಮಾಡುತ್ತೆ ಎಂಬುದನ್ನು ಅಧ್ಯಯನ ಬಹಿರಂಗಪಡಿಸಿದೆ.
ಕಾಫಿ ಪ್ರೇಮಿಗಳ ಸಂಖ್ಯೆ ಭಾರತದಲ್ಲಿ ಹೆಚ್ಚಿದೆ. ಬೆಳಿಗ್ಗೆ ಎದ್ದ ತಕ್ಷಣ ಟೀಯಂತೆ ಕಾಫಿ ಕುಡಿಯುವವರನ್ನು ನೀವು ನೋಡಿರಬಹುದು. ಇಲ್ಲ ನೀವೇ ಪ್ರತಿ ದಿನ ಬೆಳಿಗ್ಗೆ ಕಾಫಿ ಸೇವನೆ ಮಾಡುವ ಮೂಲಕವೇ ನಿಮ್ಮ ದಿನವನ್ನು ಶುರು ಮಾಡ್ತಿರಬಹುದು. ಕಾಫಿ ಹಿತಮಿತವಾಗಿದ್ದರೆ ಆರೋಗ್ಯಕ್ಕೆ ಒಳ್ಳೆಯದು. ಕಾಫಿ ಮೇಲೆ ಈಗ ಮತ್ತೊಂದು ಅಧ್ಯಯನ ನಡೆದಿದೆ. ಕಾಫಿ ಪ್ರೇಮಿಗಳು ಹಾಗೂ ಪ್ರತಿ ನಿತ್ಯ ಕಾಫಿ ಸೇವನೆ ಮಾಡುವವರಿಗೆ ಅಧ್ಯಯನ ಖುಷಿ ಸುದ್ದಿ ನೀಡಿದೆ.
ಈಗಿನ ದಿನಗಳಲ್ಲಿ ನಮ್ಮ ಜೀವನ ಶೈಲಿಯಲ್ಲಿ ಸಾಕಷ್ಟು ಬದಲಾವಣೆಯಾಗಿದೆ. ನಾವು ಆರೋಗ್ಯ (Health) ದ ಬಗ್ಗೆ ಎಷ್ಟೆ ಕಾಳಜಿವಹಿಸ್ತೇವೆ ಅಂದ್ರೂ ತೂಕ (Weight) ಹೆಚ್ಚಾಗ್ತಿದೆ . ಕೊಬ್ಬು, ತೂಕ ನಿಯಂತ್ರಣಕ್ಕೆ ನಾನಾ ಕಸರತ್ತು ಮಾಡ್ಬೇಕಿದೆ. ಯಾವುದೇ ಆಹಾರ ಸೇವನೆ ಮಾಡುವ ಮುನ್ನ, ಇದು ತೂಕ ಹೆಚ್ಚು ಮಾಡ್ತಿದೆಯಾ ಎಂದು ಪ್ರಶ್ನೆ ಮಾಡಿಕೊಂಡು ಸೇವನೆ ಮಾಡ್ತಿದ್ದೇವೆ. ಕಾಫಿಯಲ್ಲಿ ಕೆಫೀನ್ (Caffeine) ಇರುವ ಕಾರಣ ಅನೇಕರು ಕಾಫಿ ಆರೋಗ್ಯಕ್ಕೆ ಹಾನಿಕರ ಎಂದೇ ಭಾವಿಸಿದ್ದಾರೆ. ಆದ್ರೆ ಹೊಸ ಅಧ್ಯಯನದಲ್ಲಿ ಕುತೂಹಲಕಾರಿ ಸಂಗತಿಯನ್ನು ಹೇಳಲಾಗಿದೆ. ನೀವು ದಿನದಲ್ಲಿ ಒಂದು ಹೆಚ್ಚುವರಿ ಕಾಫಿ ಸೇವನೆ ಮಾಡಿದ್ರೆ ನಿಮ್ಮ ತೂಕ ಏರಿಕೆ ಆಗೋದಿಲ್ಲ. ನಿಮ್ಮ ತೂಕವನ್ನು ನೀವು ನಿಯಂತ್ರಿಸಲು ಹೆಚ್ಚುವರಿ ಕಾಫಿ ಸೇವನೆ ಮಾಡ್ಬಹುದು. ಆದ್ರೆ ಕೆಲ ಕಂಡಿಷನ್ ಪಾಲನೆ ಮಾಡ್ಬೇಕು.
undefined
HEALTH TIPS: ಅಧಿಕ ಕೊಲೆಸ್ಟ್ರಾಲ್ ಹೃದಯಕ್ಕೆ ಅಪಾಯ… ಕಾಲಲ್ಲಿ ಈ ನೋವು ಕಂಡ್ರೆ ಸುಮ್ಮಿರರ್ಬೇಡಿ!
ಕಾಫಿ ಸೇವನೆಯಿಂದ ತೂಕ ಕಡಿಮೆಯಾಗುತ್ತಾ? : ಅಧ್ಯಯನಕಾರರು ಹೌದು ಎನ್ನುತ್ತಾರೆ. ತೂಕ ನಿಯಂತ್ರಣದಲ್ಲಿಟ್ಟುಕೊಳ್ಳಬೇಕು ಎನ್ನುವವರು ಕಾಫಿ ಸೇವನೆ ಮಾಡುವಾಗ ಕೆಲ ವಿಷ್ಯವನ್ನು ಗಮನದಲ್ಲಿಟ್ಟುಕೊಳ್ಳಬೇಕು. ಹೆಚ್ಚುವರಿ ಕಾಫಿ ಸೇವನೆ ಮಾಡುವಾಗ ನೀವು ಸಕ್ಕರೆ ಅಥವಾ ಕ್ರೀಂ ಅದಕ್ಕೆ ಹಾಕದಂತೆ ನೋಡಿಕೊಳ್ಳಬೇಕು. ಹೆಚ್ಚುವರಿ ಸಕ್ಕರೆ ಅಥವಾ ಕ್ರೀಂ ಹಾಕದೆ ನೀವು ಹೆಚ್ಚುವರಿ ಕಾಫಿ ಸೇವನೆ ಮಾಡಿದ್ರೆ ನಿಮ್ಮ ತೂಕ ಕಡಿಮೆಯಾಗುತ್ತದೆ ಎಂದು ಅಧ್ಯಯನ ಹೇಳಿದೆ.
ಮೊಡವೆ ಕಡಿಮೆಯಾಗಬೇಕಾ? ಇವನ್ನೆಲ್ಲಾ ಮುಟ್ಟಲೇ ಬೇಡಿ!
ಕಾಫಿ ತೂಕವನ್ನು ಕಡಿಮೆ ಮಾಡುತ್ತದೆ ಎಂದು ಸಂಶೋಧಕರು ಕಂಡುಕೊಂಡಿದ್ದಾರೆ. ದಿನಕ್ಕೆ ಒಂದು ಕಪ್ ಹೆಚ್ಚುವರಿ ಕಾಫಿ ಕುಡಿಯುವವರು ನಾಲ್ಕು ವರ್ಷಗಳಲ್ಲಿ 0.12 ಕೆಜಿ ಕಡಿಮೆ ತೂಕವನ್ನು ಪಡೆಯುವ ಸಾಧ್ಯತೆಯಿದೆ ಎಂದು ಅಧ್ಯಯನ ಹೇಳಿದೆ. ಅದೇ ನೀವು ಈ ಕಾಫಿಗೆ ಸಕ್ಕರೆ ಬೆರೆಸಿ ಸೇವನೆ ಮಾಡಿದ್ರೆ ಆಗ ನಿಮ್ಮ ತೂಕ ಹೆಚ್ಚಾಗುತ್ತದೆ. ಸಕ್ಕರೆ ಹಾಕಿದ ಹೆಚ್ಚುವರಿ ಕಾಫಿ ಸೇವನೆ ಮಾಡೋದ್ರಿಂದ ನಾಲ್ಕು ವರ್ಷದಲ್ಲಿ ನಿಮ್ಮ ತೂಕ 0.09 ಕೆಜಿ ಹೆಚ್ಚಾಗಬಹುದು.
ಈ ಬಗ್ಗೆ ನಡೆದಿದೆ ಮೂರು ಸಂಶೋಧನೆ : 1986 ರಿಂದ 2010 ಮತ್ತು 1991 ರಿಂದ 2015 ರವರೆಗೆ ಸಂಶೋಧಕರು ಆರೋಗ್ಯ ಅಧ್ಯಯನ ನಡೆಸಿದ್ದಾರೆ. ಅದರಲ್ಲಿ 2.3 ಲಕ್ಷ ಮಂದಿ ದಾದಿಯರು ಭಾಗವಹಿಸಿದ್ದರು. ಇನ್ನು 1991 ರಿಂದ 2014 ರವರೆಗೆ ನಡೆದ ಮತ್ತೊಂದು ಅಧ್ಯಯನದಲ್ಲಿ 50,000 ಪುರುಷರು ಪಾಲ್ಗೊಂಡಿದ್ದರು. ಆ ಎರಡೂ ಡೇಟಾಗಳನ್ನು ಪರಿಶೀಲಿಸಿ ವರದಿ ನೀಡಲಾಗಿದೆ. ಕಾಫಿ ಸೇವನೆಯಿಂದ ತೂಕ ಹೆಚ್ಚಾಗಿದ್ಯಾ ಎಂಬ ಪ್ರಶ್ನೆಯನ್ನು ಅವರ ಮುಂದಿಡಲಾಗಿತ್ತು. ದಾದಿಯರ ಮೇಲೆ ನಡೆಸಿದ ಅಧ್ಯಯನದಲ್ಲಿ ಕಾಫಿ ಸೇವನೆ ಮಾಡಿದ ದಾದಿಯರು ಪ್ರತಿ ನಾಲ್ಕು ವರ್ಷಗಳಿಗೊಮ್ಮೆ 1.2 ರಿಂದ 1.7 ಕೆಜಿ ಹೆಚ್ಚಾಗಿದೆ ಎಂದಿದ್ದರು.
ಪುರುಷರಿಗೂ ಇದೇ ಪ್ರಶ್ನೆಯನ್ನು ಕೇಳಲಾಗಿತ್ತು. ಸಂಶೋಧನೆಯ ಅಂತಿಮದಲ್ಲಿ ಹೆಚ್ಚುವರಿ ಕಾಫಿ ಸೇವನೆಯಿಂದ ತೂಕ ಹೆಚ್ಚಾಗುವುದಿಲ್ಲ, ಸಕ್ಕರೆ ಬೆರೆಸಿದ ಕಾಫಿ ಸೇವನೆಯಿಂದ ತೂಕ ಏರಿಕೆಯಾಗುತ್ತದೆ ಎಂಬುದು ಗೊತ್ತಾಯ್ತು. ಕಾಫಿಗೆ ಹಾಲು ಹಾಕಿ ಸೇವನೆ ಮಾಡಿದ್ರೂ ಅದ್ರಿಂದ ಏನೂ ನಷ್ಟವಿಲ್ಲ. ಆದ್ರೆ ಸಕ್ಕರೆ ನಿಮ್ಮ ತೂಕವನ್ನು 0.09 ಕೆಜಿ ಹೆಚ್ಚಿಸುತ್ತದೆ. ಕೆಫೀನ್ ನೈಸರ್ಗಿಕ ಉತ್ತೇಜಕವಾಗಿದೆ. ಇದು ಹಸಿವನ್ನು ಕಡಿಮೆ ಮಾಡುತ್ತದೆ. ಕೆಫೀನ್ ಚಯಾಪಚಯ ವೇಗವನ್ನು ಹೆಚ್ಚಿಸುವ ಕೆಲಸ ಮಾಡುತ್ತದೆ ಎಂದು ಸಂಶೋಧಕರು ಹೇಳಿದ್ದಾರೆ.