Explained: ಮಗುವಿನ ಆರೋಗ್ಯ ವೃದ್ಧಿಸುತ್ತೆ ಈ ಕೇಸರಿ

By Suvarna News  |  First Published Jul 13, 2022, 6:48 PM IST

ಮಸಾಲೆ ಪದಾರ್ಥಗಳ ಸಾಲಿನಲ್ಲಿ ಕೇಸರಿಯೂ ಒಂದು. ಆಯುರ್ವೇದದಲ್ಲಿ ಕೇಸರಿಯನ್ನು ತ್ರಿದೋಷರ ಎಂದು ವರ್ಗೀಕರಿಸಲಾಗಿದೆ. ಶಿಶುಗಳ ಆರೋಗ್ಯಕ್ಕೂ ಒಳ್ಳೆಯದಾಗಿದ್ದು, ಕೇಸರಿಯನ್ನು ಮಿತವಾಗಿ ಬಳಸಿದಾಗ ಅಗಾಧ ಪ್ರಯೋಜನ ಪಡೆಯಬಹುದು. ಈ ಬಗ್ಗೆ ಮಾಹಿತಿ ಇಲ್ಲಿದೆ.


ಮಸಾಲೆ ಪದಾರ್ಥಗಳ ಸಾಲಿನಲ್ಲಿ ಕೇಸರಿಯೂ ಒಂದು. ಕೇಸರಿಯು ಅತ್ಯಂತ ದುಬಾರಿಯಾಗಿದ್ದು, ಸ್ಯಾಫ್ರಾನ್ ಕ್ರೊಕಸ್ ಎಂಬ ಹೂವಿನಲ್ಲಿ ಸಿಗುತ್ತದೆ. ಇದರಲ್ಲಿ ಅದ್ಭುತ ಸೌಂದರ್ಯ ಮತ್ತು ಆರೋಗ್ಯಕ್ಕೆ ಬಹಳ ಪ್ರಯೋಜನವಿದೆ. ಆಯುರ್ವೇದದಲ್ಲಿ ಕೇಸರಿಯನ್ನು ತ್ರಿದೋಷರ ಎಂದು ವರ್ಗೀಕರಿಸಲಾಗಿದೆ. ಮಾನವ ದೇಹದಲ್ಲಿನ ಅಸಮತೋಲಿತ ಗಾಳಿ, ಶಾಖ, ಮತ್ತು ಕಫದ ಪರಿಣಾಮಕಾರಿ ನಾಶಕವಾಗಿದೆ. ಇದು ಆಹಾರಕ್ಕೆ ಸುವಾಸನೆ ಮತ್ತು ಪರಿಮಳವನ್ನು ಸೇರಿಸುವುದಲ್ಲದೆ ದೇಹದಲ್ಲಿನ ದೌರ್ಬಲ್ಯವನ್ನು ತಡೆಯುತ್ತದೆ. ಇದು ಆಯುರ್ವೇದ ಚಿಕಿತ್ಸೆಯಲ್ಲಿ ಬಳಸಲಾಗುವ ದಾರದಂತಹ ಒಣ ಹಾಗೂ ದುಬಾರಿ ಮಸಾಲೆಯಾಗಿದೆ. ಇದು ಎಲ್ಲಾ ವರ್ಗದ ಜನರಿಗೂ, ಶಿಶುಗಳ ಆರೋಗ್ಯಕ್ಕೂ ಒಳ್ಳೆಯದಾಗಿದ್ದು, ಶಿಶುಗಳಿಗೆ ಕೇಸರಿಯನ್ನು ಮಿತವಾಗಿ ಬಳಸಿದಾಗ ಅಗಾಧವಾದ ಪ್ರಯೋಜನ ಪಡೆಯಬಹುದು.

ನವಜಾತ ಮಗುವಿಗೆ ಕೇಸರಿ
ಆಗತಾನೆ ಹುಟ್ಟಿದ ಮಗುವಿಗೆ ಕೇಸರಿ ನೀಡಬಹುದು. ಆದರೆ ಅದು ಮಿತವಾಗಿರಬೇಕು ಅಷ್ಟೆ. ಕೇಸರಿ ಕೊಡುವುದರಿಂದ ಹಲವಾರು ಕಾಯಿಲೆಗಳ ವಿರುದ್ಧ ಹೋರಾಡುತ್ತದೆ. ಅವರ ದೇಹವನ್ನು ಬಲಪಡಿಸುತ್ತದೆ  ಕೂಡ. ನವಜಾತ ಶಿಶುವಿಗೆ ಎದೆಹಾಲಿನಲ್ಲಿ ಮಾತ್ರ ನೀಡಬೇಕು. 6 ತಿಂಗಳ ನಂತರ ಕೇಸರಿಯನ್ನು ಇತರೆ ಗಿಡಮೂಲಿಕೆಗಳು ಮತ್ತು ಮಸಾಲೆಗಳೊಂದಿಗೆ ಬೆರೆಸಬಹುದು. ಇದು ಅವರ ಜೀರ್ಣಕ್ರಿಯೆಯ ಪ್ರಕ್ರಿಯೆಗೆ ಸಹಾಯ ಮಾಡುತ್ತದೆ. ಉರಿಯೂತದ ಗುಣಲಕ್ಷಣಗಳನ್ನು ಹೊಂದಿದೆ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಮೌಖಿಕ ನೈರ್ಮಲ್ಯವನ್ನು ಖಾತ್ರಿಗೊಳಿಸುತ್ತದೆ. ಶಿಶುಗಳಿಗೆ ಕೇಸರಿ ಚಳಿಗಾಲದಲ್ಲಿ ಉತ್ತಮ ಆಯ್ಕೆಯಾಗಿದೆ. ಎರಡು ಎಸಳಿಗಿಂತ ಹೆಚ್ಚಿನದಾಗಿ ಮಗುವಿಗೆ ನೀಡುವಂತಿಲ್ಲ ಎಂಬುದು ನೆನಪಿನಲ್ಲಿರಲಿ.

Tap to resize

Latest Videos

ಇದನ್ನೂ ಓದಿ: ಮುಖದ ಹೊಳಪಿಗೆ ದುಬಾರಿ ಕ್ರೀಮುಗಳೇಕೆ? ಕೇಸರಿ ಬಳಸಿ ಸಾಕು..

ಪ್ರಯೋಜನಗಳು
1. ಸಂತೋಷ ನೀಡುತ್ತದೆ
ಕೇಸರಿಯು ಶಿಶುಗಳಲ್ಲಿ ಸಂತೋಷದ ಭಾವವನ್ನು ಮೂಡಿಸುತ್ತದೆ. ತಾಯಿಯ ಎದೆಹಾಲಿನಲ್ಲಿ ಬೆರೆಸಿ ಕೊಡುವುದರಿಂದ ಶಿಶುವಿನಲ್ಲಿನ ಹುಚ್ಚುತನವನ್ನು ಹೋಗಲಾಡಿಸುತ್ತದೆ. ಮಗುವಿನ ಚಡಪಡಿಕೆಯನ್ನಿ ಶಾಂತಗೊಳಿಸಲು ಸಹಾಯ ಮಾಡುತ್ತದೆ. ಕೇಸರಿಯಲ್ಲಿರುವ ವಿವಿಧ ಸಂಯುಕ್ತಗಳು ಅವರ ಉತ್ಸಾಹವನ್ನು ಜೀವಂತವಾಗಿಡಲು ಹೆಚ್ಚಿನ ಆನಂದದ ಭಾವನೆಗಳನ್ನು  ಉಂಟುಮಾಡುತ್ತದೆ.

2. ಬಲಿಷ್ಠ ಮೂಳೆ
ಶಿಶುಗಳಿಗೆ ಕೇಸರಿಯ ಪ್ರಮುಖ ಪ್ರಯೋಜನವೆಂದರೆ ಅವರ ಮೂಳೆಗಳನ್ನು ಬಲಪಡಿಸಲು ಸಹಾಯ ಮಾಡುತ್ತದೆ. ಇದು ಕ್ಯಾಲ್ಶಿಯಂ ಅನ್ನು ಹೀರಿಕೊಳ್ಳಲು ಮತ್ತು ಮೂಳೆಗಳನ್ನು ಬಲಪಡಿಸುತ್ತದೆ. ಒಂದು ಚಿಟಿಕೆ ಕೇಸರಿ ಪುಡಿ ಅಥವಾ ಒಂದೇ ಎಸಳನ್ನು ಮಗುವಿಗೆ ಎದೆಹಾಲು ಉಣಿಸುವುದು ಒಳ್ಳೆಯದು.

ಇದನ್ನೂ ಓದಿ: ಮಾವಿನ ಹಣ್ಣು ಮಾತ್ರವಲ್ಲ, ಗೊರಟೆಯೂ ಆರೋಗ್ಯಕ್ಕೆ ಬೆಸ್ಟ್‌

3. ಶೀತ ನಿವಾರಣೆ
ಕೇಸರಿಯಲ್ಲಿ ಔಷಧೀಯ ಗುಣಗಳು ಹೇರಳವಾಗಿದೆ. ಶಿಶುವಿಗೆ ಶೀತ, ಕೆಮ್ಮು, ಜ್ವರ ಇದ್ದಲ್ಲಿ ಅದನ್ನು ಹೋಗಲಾಡಿಸಲು ಸಹಕಾರಿಯಾಗಿದೆ. ತಾಯಿಯ ಎದೆಹಾಲಿನಲ್ಲಿ ಕೇಸರಿಯ ಎಸಳನ್ನು ಮಿಕ್ಸ್ ಮಾಡಿ ಕುಡಿಸಬೇಕು. ಸ್ವಲ್ಪ ನೀರಿನಲ್ಲಿ ಕೇಸರಿ, ಲವಂಗದೊAದಿಗೆ ಜಾಯಿಕಾಯಿ ಪೇಸ್ಟ್ ಅನ್ನು ತಯಾರಿಸಿ ತ್ವರಿತ ಪರಿಹಾರ ಪಡೆಯಲು ಮಗುವಿನ ಎದೆಗೆ ಅಥವಾ ಬೆನ್ನಿಗೆ ಇದನ್ನು ಹಚ್ಚಬೇಕು. 

4. ಮಿದುಳಿಗೆ ಸಹಕಾರಿ
ಶಿಶುಗಳ ಮಿದುಳು ಬೆಳವಣಿಗೆಗೆ ಕೇಸರಿ ಉತ್ತಮವಾಗಿದ್ದು ಮಗುವಿನ ನರಮಂಡಲಕ್ಕೆ ಪ್ರಯೋಜನವನ್ನು ನೀಡುತ್ತದೆ. ಅಲ್ಲದೆ ಪ್ರೆಗ್ನೆನ್ಸಿಯಲ್ಲಿಯೂ ಕೆಲ ತಾಯಂದಿರು ಕೇಸರಿ ಹಾಲನ್ನು ಕುಡಿಯುತ್ತಾರೆ. ಏಕೆಂದರೆ ಹೊಟ್ಟೆಯಲ್ಲಿನ ಮಗುವಿನ ಬೆಳವಣಿಗೆ ಹಾಗೂ ಬುದ್ಧಿವಂತಿಕೆಯಾಗಿರಲಿ ಎಂದು ಹೀಗೆ ಮಾಡಲಾಗುತ್ತದೆ.

5. ಚರ್ಮ ಕಾಂತಿ ಹೆಚ್ಚುತ್ತದೆ
ಸಾಮಾನ್ಯವಾಗಿ ಶಿಶುಗಳಲ್ಲಿ ಕಾಣಿಸಿಕೊಳ್ಳುವ ಚರ್ಮ ಒಣಗುವಿಕೆ ಮತ್ತು ರ‍್ಯಾಶಸ್‌ಗಳನ್ನು ಕೇಸರಿ ಸೇವನೆಯಿಂದ ಹೋಗಲಾಡಿಸಬಹುದು. ಏಕೆಂದರೆ ಕೇಸರಿಯಲ್ಲಿ ಆಂಟಿಆಕ್ಸಿಡೆAಟ್ ಪ್ರಮಾಣ ಹೆಚ್ಚಿದ್ದು, ಚರ್ಮದ ಅಲರ್ಜಿಗಳನ್ನು ಹೋಗಲಾಡಿಸುವುದಲ್ಲದೆ, ಬೆಳೆಯುವುದಕ್ಕೂ ಉತ್ತೇಜಿಸುತ್ತದೆ.

6. ಹೃದಯಕ್ಕೆ ಒಳ್ಳೆಯದು
ಹೃದಯಕ್ಕೆ ಕೇಸರಿ ಉತ್ತಮವಾದ ಔಷಧವಾಗಿದೆ. ಇದು ಹೃದಯರಕ್ತನಾಳದ ಕಾರ್ಯನಿರ್ವಹಣೆಯನ್ನು ಸಮರ್ಥವಾಗಿ ಬೆಂಬಲಿಸುತ್ತದೆ. ಜೊತೆಗೆ ಹೆಚ್ಚಿನ ಶಕ್ತಿಯನ್ನು ಉತ್ತೇಜಿಸುತ್ತದೆ.

7. ಗ್ಯಾಸ್ಟಿçಕ್ ನಿವಾರಣೆ
ನವಜಾತ ಶಿಶುಗಳು ಹೊರಗಿನ ವಾತಾವರಣಕ್ಕೆ ಹೊಂದುಕೊಳ್ಳಲು ಸಮಯ ಹಿಡಿಯುತ್ತದೆ. ಅಲ್ಲದೆ ಈ ಸಂದರ್ಭದಲ್ಲಿ ಅವುಗಳಿಗೆ ಗ್ಯಾಸ್ಟಿçಕ್ ಸಮಸ್ಯೆ ಕಾಣಿಸಿಕೊಳ್ಳುವುದು ಸಾಮಾನ್ಯ. ಹಾಲಿನಲ್ಲಿ ಕೇಸರಿಯನ್ನು ನೆನೆಸಿಟ್ಟು ಆ ಹಾಲನ್ನು ಮಕ್ಕಳಿಗೆ ಕುಡಿಸುವುದರಿಂದ ಗ್ಯಾಸ್ಟಿçಕ್ ಸಮಸ್ಯೆ ನಿವಾರಣೆಯಾಗುತ್ತದೆ.

ಇದನ್ನೂ ಓದಿ: ಹಾಲು ಕುಡಿದ ತಕ್ಷಣ ಮಗು ವಾಂತಿ ಮಾಡುತ್ತಿದೆಯಾ? ಇದು ಜೀರ್ಣ ಸಮಸ್ಯೆಯ ಮುನ್ಸೂಚನೆ

ಈ ವಯಸ್ಸಿನ ಶಿಶುಗಳಿಗೆ ಕೇಸರಿ ನೀಡಬಹುದು
ಮಗುವಿಗೆ ತಾಯಿಯ ಎದೆಹಾಲು ಸುರಕ್ಷಿತವಾದ ಆಹಾರ. ಹಾಗಾಗಿ 6 ತಿಂಗಳ ರಿಂದ 1 ವರ್ಷದ ಮಗುವಿಗೆ ಎದೆಹಾಲಿನಲ್ಲಿ ಕೇಸರಿ ನೆನೆಸಿ ಸಾಂದರ್ಭಿಕವಾಗಿ ಸೇವಿಸಿದರೆ ಒಳಿತು. ಅತಿಯಾಗಿ ಅಥವಾ ಹೆಚ್ಚಿನ ಪ್ರಮಾಣದಲ್ಲಿ ಸೇವಿಸಿದ್ದಲ್ಲಿ ಅದು ಅತಿಸಾರ ಮತ್ತು ವಾಂತಿಗೆ ಕಾರಣವಾಗಬಹುದಾದ್ದರಿಂದ ನೀಡುವ ಪ್ರಮಾಣದಲ್ಲಿ ಎಚ್ಚರಿಕೆ ವಹಿಸಬೇಕು.

click me!