ವೀಳ್ಯದೆಲೆಯನ್ನು ಪೂಜೆಗೆ ಮಾತ್ರವಲ್ಲ ಔಷಧಿಗೂ ಬಳಕೆ ಮಾಡಲಾಗುತ್ತದೆ. ಅನೇಕ ಔಷಧಿ ಗುಣ ವೀಳ್ಯದೆಲೆಯಲ್ಲಿದೆ. ಇದನ್ನು ಖಾಲಿ ಹೊಟ್ಟೆಯಲ್ಲಿ ಸೇವನೆ ಮಾಡಿದ್ರೆ ಪ್ರಯೋಜನ ಹೆಚ್ಚು. ಅನೇಕ ರೋಗಕ್ಕೆ ಈ ವೀಳ್ಯದೆಲೆ ಮದ್ದಿನ ರೂಪದಲ್ಲಿ ಕೆಲಸ ಮಾಡುತ್ತದೆ.
ವೀಳ್ಯದೆಲೆಯನ್ನು ಭಾರತೀಯರು ಅತಿ ಹೆಚ್ಚಾಗಿ ಬಳಕೆ ಮಾಡ್ತಾರೆ. ಕೆಲವರ ಮನೆ ಮುಂದೆ ವೀಳ್ಯದೆಲೆ ಬಳ್ಳಿಯನ್ನು ನಾವು ನೋಡಬಹುದು. ವೀಳ್ಯದೆಲೆ ದೇವರ ಪೂಜೆಯಲ್ಲಿ ಮಹತ್ವದ ಪಾತ್ರವಹಿಸುತ್ತದೆ. ಯಾವುದೇ ವಿಶೇಷ ಹಬ್ಬ, ಸಮಾರಂಭಗಳಲ್ಲಿ ವೀಳ್ಯದೆಲೆ ಮೇಲೆ ಅಡಿಕೆ ಇಟ್ಟು ಪೂಜೆ ಮಾಡಲಾಗುತ್ತದೆ. ಕೆಲವರು ವೀಳ್ಯದೆಲೆಯನ್ನು ದೇವರಿಗೆ ಅರ್ಪಿಸುತ್ತಾರೆ. ವೀಳ್ಯದೆಲೆಗೆ ವಾಸ್ತು ಶಾಸ್ತ್ರದಲ್ಲೂ ಮಹತ್ವವಿದೆ. ಇಷ್ಟೇ ಅಲ್ಲ ವೀಳ್ಯದೆಲೆಯನ್ನು ಔಷಧಿ ರೂಪದಲ್ಲಿ ಬಳಕೆ ಮಾಡಲಾಗುತ್ತದೆ.
ಸಣ್ಣ ಕೆಮ್ಮಿ (Cough) ನಿಂದ ಹಿಡಿದು ದೊಡ್ಡ ಸಮಸ್ಯೆಯನ್ನು ತೊಡೆದು ಹಾಕುವ ಶಕ್ತಿ ವೀಳ್ಯದೆಲೆ (Betel Leaves) ಗಿದೆ. ಕೆಲವರು ಊಟವಾದ್ಮೇಲೆ ವೀಳ್ಯದೆಲೆಯನ್ನು ಅಡಿಗೆ ಜೊತೆ ತಿನ್ನುತ್ತಾರೆ. ಊಟ ಸರಿಯಾಗಿ ಜೀರ್ಣ (Digestion) ವಾಗುತ್ತದೆ ಎನ್ನುವ ಕಾರಣಕ್ಕೆ ಎಲೆ – ಅಡಿಕೆ ಹಾಕಲಾಗುತ್ತದೆ. ಈ ವೀಳ್ಯದೆಲೆಯಲ್ಲಿ ವಿಟಮಿನ್ ಸಿ, ಥಯಾಮಿನ್, ನಿಯಾಸಿನ್, ರೈಬೋಫ್ಲಾವಿನ್ ಕ್ಯಾರಟಿನ್, ಕ್ಯಾಲ್ಸಿಯಂ ಮುಂತಾದ ಪೋಷಕಾಂಶಗಳು ಕಂಡುಬರುತ್ತವೆ. ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ವೀಳ್ಯದೆಲೆಯನ್ನು ತಿನ್ನುವುದ್ರಿಂದ ಅನೇಕ ಲಾಭವನ್ನು ನಾವು ಪಡೆಯಬಹುದು. ಖಾಲಿ ಹೊಟ್ಟೆಯಲ್ಲಿ ವೀಳ್ಯದೆಲೆ ಸೇವನೆ ಮಾಡಿದ್ರೆ ಏನೆಲ್ಲ ಪ್ರಯೋಜನವಿದೆ ಎಂಬುದನ್ನು ನಾವಿಂದು ಹೇಳ್ತೆವೆ.
undefined
ವೀಳ್ಯದೆಲೆ ಸೇವನೆಯಿಂದಾಗುವ ಪ್ರಯೋಜನ :
ಜೀರ್ಣಕ್ರಿಯೆ ಸುಧಾರಣೆಗೆ ವೀಳ್ಯದೆಲೆ : ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ವೀಳ್ಯದೆಲೆ ಸೇವನೆ ಮಾಡುವುದ್ರಿಂದ ನಿಮ್ಮ ಜೀರ್ಣಕ್ರಿಯೆ ಸುಧಾರಿಸುತ್ತದೆ. ಹೊಟ್ಟೆಯ ಸಮಸ್ಯೆಗಳಿದ್ದರೆ ನೀವು ಖಾಲಿ ಹೊಟ್ಟೆಯಲ್ಲಿ ವೀಳ್ಯದೆಲೆ ತಿನ್ನಬೇಕು. ಪ್ರತಿದಿನ ಬೆಳಗ್ಗೆ ವೀಳ್ಯದೆಲೆ ತಿನ್ನುವುದರಿಂದ ಪೋಷಕಾಂಶಗಳ ಕೊರತೆ ನೀಗುತ್ತದೆ. ಕರುಳಿನ ಆರೋಗ್ಯಕ್ಕೆ ವೀಳ್ಯದೆಲೆ ಒಳ್ಳೆಯದು.
ಸೋಂಕಿನಿಂದ ರಕ್ಷಿಸುತ್ತೆ ವೀಳ್ಯದೆಲೆ : ವೀಳ್ಯದೆಲೆಯಲ್ಲಿ ನಂಜುನಿರೋಧಕ ಗುಣಗಳು ಕಂಡುಬರುತ್ತವೆ. ಪ್ರತಿದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ವೀಳ್ಯದೆಲೆಯನ್ನು ತಿನ್ನುವುದರಿಂದ ಯಾವುದೇ ರೀತಿಯ ಸೋಂಕು ನಿಮ್ಮನ್ನು ಕಾಡುವುದಿಲ್ಲ. ವೀಳ್ಯದೆಲೆ ಅನೇಕ ರೀತಿಯ ಸೋಂಕುಗಳನ್ನು ತೊಡೆದುಹಾಕಲು ಸಹಾಯ ಮಾಡುತ್ತದೆ. ವೀಳ್ಯದೆಲೆ ಸೇವನೆ ಮಾತ್ರವಲ್ಲ, ಸೋಂಕಿರುವ ಜಾಗಕ್ಕೆ ವೀಳ್ಯದೆಲೆಯಿಂದ ತಯಾರಿಸಿದ ಪೇಸ್ಟ್ ಹಚ್ಚಿದ್ರೆ ಕೂಡ ಸೋಂಕು ಕಡಿಮೆಯಾಗುತ್ತದೆ. ಜೊತೆಗೆ ನೋವಿನಿಂದ ಪರಿಹಾರ ಸಿಗುತ್ತದೆ.
ವೀಳ್ಯದೆಲೆಯಲ್ಲಿದೆ ಕೀಲು ನೋವಿ ಹೋಗಲಾಡಿಸುವ ಶಕ್ತಿ : ನೀವು ಕೀಲು ನೋವಿನಿಂದ ಬಳಲುತ್ತಿದ್ದರೆ ವೀಳ್ಯದೆಲೆಯನ್ನು ಅಗತ್ಯವಾಗಿ ಸೇವಿಸಿ. ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ವೀಳ್ಯದೆಲೆಯನ್ನು ತಿನ್ನುವುದರಿಂದ ಕೀಲು ನೋವು ದೊಡ್ಡ ಮಟ್ಟದಲ್ಲಿ ಕಡಿಮೆಯಾಗುತ್ತದೆ. ಈ ಎಲೆಗಳಲ್ಲಿ ಉರಿಯೂತದ ಗುಣಲಕ್ಷಣಗಳು ಕಂಡುಬರುತ್ತವೆ. ಇದು ಕೀಲು ನೋವನ್ನು ನಿವಾರಿಸಲು ಸಹಾಯ ಮಾಡುತ್ತದೆ. ಇದಲ್ಲದೆ, ಸಂಧಿವಾತದವರಲ್ಲಿ ಕಾಣಿಸಿಕೊಳ್ಳುವ ಊತ ಮತ್ತು ನೋವಿಗೆ ಇದರಿಂದ ಪರಿಹಾರ ಸಿಗುತ್ತದೆ.
Fat in Body: ದೇಹದ ಈ ಭಾಗಗಳಲ್ಲಿ ಕೊಬ್ಬು ಸಂಗ್ರಹ ಆಗ್ಬಾರ್ದು!
ಬಾಯಿಯ ಆರೋಗ್ಯ ವೃದ್ಧಿಗೆ ವೀಳ್ಯದೆಲೆ : ವೀಳ್ಯದೆಲೆ ಮೌಖಿಕ ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿ. ಇದ್ರಲ್ಲಿ ಆಂಟಿಫಂಗಲ್ ಗುಣಲಕ್ಷಣವಿದೆ. ಆಂಟಿಫಂಗಲ್, ಬಾಯಿಯಲ್ಲಿರುವ ಬ್ಯಾಕ್ಟೀರಿಯಾವನ್ನು ನಾಶಮಾಡುತ್ತವೆ. ಪ್ರತಿದಿನ ಬೆಳಿಗ್ಗೆ ವೀಳ್ಯದೆಲೆ ಅಗಿಯುವುದರಿಂದ ವಸಡು ಊತಕ್ಕೆ ಪರಿಹಾರ ಸಿಗುತ್ತದೆ. ಹಲ್ಲುನೋವು ಕೂಡ ಇದ್ರಿಂದ ಕಡಿಮೆಯಾಗುತ್ತದೆ. ಸೋಂಕು ದೂರವಾಗುತ್ತದೆ. ಮೌತ್ ಫ್ರೆಶ್ನರ್ ಆಗಿ ವೀಳ್ಯದೆಲೆ ಕೆಲಸ ಮಾಡುತ್ತದೆ.
Garlic In Winters: ಚಳಿಗಾಲದಲ್ಲಿ ಬೆಳ್ಳುಳ್ಳಿ ತಿಂದು ಹೃದಯದ ಆರೋಗ್ಯ ಕಾಪಾಡಿ
ಮಲಬದ್ಧತೆ ಸಮಸ್ಯೆಗೆ ಪರಿಹಾರ : ಅನೇಕರು ಚಳಿಗಾಲದಲ್ಲಿ ಮಲಬದ್ಧತೆ ಸಮಸ್ಯೆ ಎದುರಿಸುತ್ತಾರೆ. ಇದಕ್ಕೆ ಮಾತ್ರೆ ನುಂಗುವವರಿದ್ದಾರೆ. ಮಾತ್ರೆ ನಿಮ್ಮ ದೇಹದ ಮೇಲೆ ಅಡ್ಡಪರಿಣಾಮ ಬೀರುವ ಸಾಧ್ಯತೆಯಿರುತ್ತದೆ. ಮಾತ್ರೆ ಬದಲು ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ವೀಳ್ಯದೆಲೆ ಸೇವಿಸಿ ನೋಡಿ. ಖಾಲಿ ಹೊಟ್ಟೆಯಲ್ಲಿ ವೀಳ್ಯದೆಲೆ ಜಗಿಯುವುದರಿಂದ ಗ್ಯಾಸ್, ಮಲಬದ್ಧತೆಯಂತಹ ಸಮಸ್ಯೆಗೆ ಪರಿಹಾರ ಸಿಗುತ್ತದೆ. ಇದಲ್ಲದೆ ವೀಳ್ಯದೆಲೆಯಲ್ಲಿ ಆಂಟಿಆಕ್ಸಿಡೆಂಟ್ ಇದೆ. ಇದು ಫ್ರೀ ರೆಡಿಕಲ್ಸ್ ಕಾರಣದಿಂದ ಉಂಟಾಗುವ ಹಾನಿಯಿಂದ ನಮ್ಮ ದೇಹವನ್ನು ರಕ್ಷಿಸಲು ಸಹಾಯ ಮಾಡುತ್ತದೆ. ಹೊಟ್ಟೆಯನ್ನು ಸ್ವಚ್ಛಗೊಳಿಸುವ ಕೆಲಸವನ್ನು ವೀಳ್ಯದೆಲೆ ಮಾಡುತ್ತದೆ. ನೀವು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ವೀಳ್ಯದೆಲೆ ರಸವನ್ನು ಮಾತ್ರ ಸೇವನೆ ಮಾಡಬೇಕು.