Hara Hachi Bu: ಜಪಾನೀಯರ ಆರೋಗ್ಯ ರಹಸ್ಯ ಇದು: ಹರಾ ಹಚಿ ಬು!

By Suvarna News  |  First Published Apr 19, 2024, 1:39 PM IST

ಓಕಿನಾವಾನ್‌ಗಳು ಅಸಾಧಾರಣವಾದ ದೀರ್ಘ ಮತ್ತು ಆರೋಗ್ಯಕರ ಜೀವನವನ್ನು ನಡೆಸುತ್ತಾರೆ. "ನೀಲಿ ವಲಯ" ಎಂಬ ಪದಗುಚ್ಛವನ್ನು ಕಾಯಿನ್ ಮಾಡಿದ ಸಂಶೋಧಕ ಡಾನ್ ಬುಟ್ನರ್ ಪ್ರಕಾರ, ಇವರ 'ಹರಾ ಹಚಿ ಬು' ಪರಿಕಲ್ಪನೆಯೇ ಇದಕ್ಕೆ ಕಾರಣ.


'ಹರಾ ಹಚಿ ಬು' ನಮಗೆ ಬರೀ ಶಬ್ದದಂತೆ ಕೇಳಿಸಿದರೆ, ಜಪಾನೀಯರಿಗೆ ಅದು ಆರೋಗ್ಯಕರ ಬದುಕಿನ ಮೂಲಸೂತ್ರ. ಇದೊಂದು ಆರೋಗ್ಯಕರ ಆಹಾರ ಪದ್ಧತಿ. ಸುಮಾರು ಒಂದು ಸಾವಿರ ವರ್ಷಗಳ ಕಾಲದಿಂದ  ಜಪಾನಿನ ಓಕಿನಾವಾ ದ್ವೀಪಸಮೂಹವು ಅಸಾಧಾರಣವಾದ ದೀರ್ಘಾವಧಿಯ ಜೀವಿತಾವಧಿಯ ವ್ಯಕ್ತಿಗಳಿಗೆ ಹೆಸರುವಾಸಿಯಾಗಿದೆ. ವಿಶ್ವದ 'ನೀಲಿ ವಲಯ' ಪ್ರದೇಶಗಳಲ್ಲಿ ಇದು ಒಂದು. ನೀಲಿ ವಲಯ ಅಥವಾ ಬ್ಲೂ ಜೋನ್ ಎಂದರೆ ದೀರ್ಘಾಯುಷಿಗಳ ತಾಣ. ಓಕಿನಾವಾನ್‌ಗಳು ಅಸಾಧಾರಣವಾದ ದೀರ್ಘ ಮತ್ತು ಆರೋಗ್ಯಕರ ಜೀವನವನ್ನು ನಡೆಸುತ್ತಾರೆ. "ನೀಲಿ ವಲಯ" ಎಂಬ ಪದಗುಚ್ಛವನ್ನು ಕಾಯಿನ್ ಮಾಡಿದ ಸಂಶೋಧಕ ಡಾನ್ ಬುಟ್ನರ್ ಪ್ರಕಾರ, ಇವರ 'ಹರಾ ಹಚಿ ಬು' ಪರಿಕಲ್ಪನೆಯೇ ಇದಕ್ಕೆ ಕಾರಣ.

ಊಟವನ್ನು ಪ್ರಾರಂಭಿಸುವ ಮೊದಲು, ಓಕಿನಾವಾನ್ ಹಿರಿಯರು ಈ ಕನ್ಫ್ಯೂಷಿಯನ್ ಪ್ರೇರಿತ ಗಾದೆಯನ್ನು ಪಠಿಸುತ್ತಾರೆ: 'ಹರಾ ಹಚಿ ಬು' ಎಂದರೆ ನಿಮ್ಮ ಹೊಟ್ಟೆ 80 ಪ್ರತಿಶತದಷ್ಟು ತುಂಬಿದಾಗ ತಿನ್ನುವುದನ್ನು ನಿಲ್ಲಿಸಿ ಎಂಬ ಸೂಚನೆ. ಬುಟ್ನರ್ ಪ್ರಕಾರ, ಕ್ಯಾಲೋರಿ ನಿರ್ಬಂಧದ ಈ ಸಾಂಸ್ಕೃತಿಕ ಅಭ್ಯಾಸ ಮತ್ತು ಸಾವಧಾನದಿಂದ ತಿನ್ನುವುದು ಓಕಿನಾವಾ ವಿಶ್ವದಲ್ಲೇ ಅತಿ ಹೆಚ್ಚು ಶತಾಯುಷಿಗಳನ್ನು ಹೊಂದಲು ಕಾರಣ.

Latest Videos

undefined

ಡಯೆಟಿಷಿಯನ್ ಏಕ್ತಾ ಸಿಂಘ್ವಾಲ್ ಕೂಡ ಇದನ್ನು ಒಪ್ಪಿಕೊಳ್ಳುತ್ತಾರೆ. "ಇದು ಅತಿಯಾಗಿ ತಿನ್ನುವುದನ್ನು ನಿಲ್ಲಿಸಲು, ನಿಮ್ಮ ದೇಹವು ಹೊಟ್ಟೆ ತುಂಬಿದ ಸಿಗ್ನಲ್ ನೀಡುವ ಮೊದಲೇ ನಿಲ್ಲಿಸಲು, ಎಚ್ಚರಿಕೆಯಿಂದ ತಿನ್ನುವುದನ್ನು ಉತ್ತೇಜಿಸುತ್ತದೆ. ಇದು ತೂಕ ನಿರ್ವಹಣೆ ಮತ್ತು ತೂಕ ನಷ್ಟಕ್ಕೆ ಪರಿಣಾಮಕಾರಿಯಾಗಿದೆ" ಎನ್ನುತ್ತಾರೆ ಅವರು.

ಅತಿಯಾಗಿ ತಿನ್ನುವುದು ಸಾಮಾನ್ಯವಾಗಿ ಹೆಚ್ಚಿನ ಕ್ಯಾಲೋರಿ ಸೇವನೆಗೆ ಕಾರಣವಾಗುತ್ತದೆ ಮತ್ತು ಶೇಕಡಾ 80ರಲ್ಲಿ ನಿಲ್ಲಿಸುವ ಮೂಲಕ, ನೀವು ಕಡಿಮೆ ಕ್ಯಾಲೊರಿಗಳನ್ನು ಸೇವಿಸುವ ಸಾಧ್ಯತೆಯಿದೆ, ಅಂತಿಮವಾಗಿ ಇದು ತೂಕ ನಿಯಂತ್ರಣದಲ್ಲಿ ಸಹಾಯ ಮಾಡುತ್ತದೆ.

ಈ ತತ್ವಶಾಸ್ತ್ರದ ಇತರ ಪ್ರಯೋಜನಗಳು ಯಾವುವು?
- ಸುಧಾರಿತ ಜೀರ್ಣಕ್ರಿಯೆ
- ಬೊಜ್ಜು ಮತ್ತು ಜೀರ್ಣಕಾರಿ ಸಮಸ್ಯೆಗಳಂತಹ ಅತಿಯಾಗಿ ತಿನ್ನುವ ಸಂಬಂಧಿತ ಆರೋಗ್ಯ ಸಮಸ್ಯೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ
- ನಿಮ್ಮ ದೇಹದ ಹಸಿವು ಮತ್ತು ಹೊಟ್ಟೆ ತುಂಬುವಿಕೆಯ ಸೂಚನೆಗಳ ಉತ್ತಮ ಅರಿವು
- ಇದು ನೀವು ತಿನ್ನುವ ಆಹಾರದ ಬಗ್ಗೆ ಹೆಚ್ಚಿನ ಮೆಚ್ಚುಗೆಗೆ ಕಾರಣವಾಗುವುದು. 
- ಊಟದ ಸಮಯದ ಸಾಂಸ್ಕೃತಿಕ ಮತ್ತು ಸಾಮಾಜಿಕ ಅಂಶಗಳಿಗೆ ಆಳವಾದ ಸಂಪರ್ಕವನ್ನು ಉಂಟುಮಾಡಬಹುದು.

ಬರೀ ಕಿತ್ತಳೆ ಜೂಸ್ ಕುಡಿದು 40 ದಿನ ಬದುಕ್ಕಿದ್ದವಳಿಗೆ, ಅಧ್ಯಾತ್ಮ ಅನುಭವವೂ ಆಯ್ತಂತೆ!

ಹರಾ ಹಚಿ ಬು ತತ್ವ ಆಚರಣೆಗೆ ತರುವುದು ಹೇಗೆ?
ಈ ತತ್ವವನ್ನು ಆಚರಣೆಗೆ ತರಲು ಈ ಕೆಳಗಿನ ಕ್ರಮಗಳನ್ನು ಅಳವಡಿಸಿಕೊಳ್ಳಬಹುದು:
- ಆಹಾರದಲ್ಲಿ ಸಣ್ಣ ಭಾಗದ ತುತ್ತುಗಳನ್ನು ಬಳಸಿ. ಪ್ರತಿ ಬೈಟ್ ಅನ್ನು ಸವಿಯಲು ಸಾಕಷ್ಟು ಸಮಯವನ್ನು ತೆಗೆದುಕೊಳ್ಳಿ.
- ನಿಧಾನವಾಗಿ ಮತ್ತು ಎಚ್ಚರಿಕೆಯಿಂದ ತಿನ್ನಿರಿ. ನಿಮ್ಮ ದೇಹ ಸಾಕೆನ್ನುತ್ತಿರುವುದರ ಸೂಚನೆಗಳಿಗೆ ಗಮನ ಕೊಡಿ.
- ನೀವು ತೃಪ್ತರಾಗಿದ್ದಾಗ ತಿನ್ನುವುದನ್ನು ನಿಲ್ಲಿಸಿ
- ನೀವು ನಿಜವಾಗಿಯೂ ಹಸಿದಿರದಿದ್ದರೆ, ಹಸಿಯುವವರೆಗೆ ಊಟ ಮಾಡಬೇಡಿ.
- ಹದವಾಗಿ ಬಿಸಿಯಾದ ಊಟವನ್ನೇ ಮಾಡಿ. ಅತಿ ಬಿಸಿಯಾದ ಅಥವಾ ಅತಿ ತಣ್ಣಗಾದ ಊಟ ಬೇಡ.
ನೆನಪಿಡಿ, ನಿಮ್ಮ ನಿರ್ದಿಷ್ಟ ಆರೋಗ್ಯ ಮತ್ತು ತೂಕ ಗುರಿಗಳನ್ನು ಸಾಧಿಸಲು ನಿಮ್ಮ ಆಹಾರದಲ್ಲಿ ಈ ತತ್ವಶಾಸ್ತ್ರವನ್ನು ಅಳವಡಿಸಲು ವೈಯಕ್ತಿಕ ಮಾರ್ಗದರ್ಶನಕ್ಕಾಗಿ ಪೌಷ್ಟಿಕತಜ್ಞ ಅಥವಾ ಆರೋಗ್ಯ ವೃತ್ತಿಪರರೊಂದಿಗೆ ಸಮಾಲೋಚಿಸುವುದು ಅತ್ಯಗತ್ಯ.

ಗಂಡಸರಿಗೆ ಹೆಂಗಸರಿಗಿಂತ ಬೇಗ ವಯಸ್ಸಾಗತ್ತಂತೆ ಯಾಕೆ ?
 

click me!