76ನೇ ವಯಸ್ಸಿನಲ್ಲಿ ನರೇಂದ್ರ ಮೋದಿ ಯಂಗ್ : ಅವರ ಫಿಟ್ನೆಸ್ ಸೀಕ್ರೆಟ್ ಈ ಮಂತ್ರ

Published : Sep 17, 2026, 12:16 PM IST
Narendra Modi

ಸಾರಾಂಶ

Narendra modi fitness habit : ನರೇಂದ್ರ ಮೋದಿ ಇಂದು 76ನೇ ವಯಸ್ಸಿಗೆ ಕಾಲಿಡ್ತಿದ್ದಾರೆ. ಬ್ಯುಸಿ ಜೀವನದಲ್ಲೂ ಅವರು ಇಷ್ಟೊಂದು ಫಿಟ್ ಆಗಿರಲು ಕಾರಣವಿದೆ. ಮೋದಿ ಏಳು ಮಂತ್ರಗಳನ್ನು ತಪ್ಪದೆ ಪಾಲಿಸ್ತಾರೆ.

ಪ್ರಧಾನಿ ನರೇಂದ್ರ ಮೋದಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಮೋದಿ ಸೆಪ್ಟೆಂಬರ್ 17ರಂದು 76ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಬಿಡುವಿಲ್ಲದ ಕೆಲಸಗಳ ನಡುವೆಯೂ ಮೋದಿ ಆರೋಗ್ಯದಿಂದಿರಲು ಅವರ ಅಭ್ಯಾಸಗಳೇ ಕಾರಣ. ಯೋಗ, ದೈಹಿಕ ಚಟುವಟಿಕೆ, ಸಮತೋಲಿತ ಆಹಾರ ಮತ್ತು ಉತ್ತಮ ನಿದ್ರೆಯಂತಹ ಮೂಲಭೂತ ಅಭ್ಯಾಸಗಳಿಗೆ ಅವರು ಒತ್ತು ನೀಡುತ್ತಾರೆ. ಅಷ್ಟಕ್ಕೂ ಪ್ರಧಾನಿ ಮೋದಿ ಅವರ ಫಿಟ್ನೆಸ್ ದಿನಚರಿ ಹೇಗಿದೆ ಎಂಬ ವಿವರ ಇಲ್ಲಿದೆ.

ಯೋಗದಿಂದ ದಿನದ ಆರಂಭ

ನರೇಂದ್ರ ಮೋದಿಯವರಿಗೆ ಯೋಗ ಕೇವಲ ವ್ಯಾಯಾಮವಲ್ಲ. ಅದು ಅವರ ಜೀವನಶೈಲಿಯ ಒಂದು ಭಾಗವಾಗಿದೆ. ಪ್ರಧಾನಿ ಮೋದಿ ಅವರ ಫಿಟ್ನೆಸ್ ರೂಟೀನ್ನಲ್ಲಿ ಯೋಗಕ್ಕೆ ಪ್ರಮುಖ ಸ್ಥಾನವಿದೆ. 2026ರ ಜೂನ್ನಲ್ಲಿ ಯೋಗದ ಕುರಿತು ಮಾತನಾಡಿದ್ದ ಅವರು, ನಿಯಮಿತ ಯೋಗಾಭ್ಯಾಸ ದೇಹವನ್ನು ಆರೋಗ್ಯವಾಗಿಡುವುದರ ಜೊತೆಗೆ ಮನಸ್ಸನ್ನು ಶಾಂತವಾಗಿರಿಸುತ್ತದೆ ಮತ್ತು ಜೀವನವನ್ನು ಸಮತೋಲನಗೊಳಿಸುತ್ತದೆ ಎಂದು ಹೇಳಿದ್ದರು. ಯೋಗವನ್ನು ಒಂದು ದಿನ ಅಥವಾ ಒಂದು ಕಾರ್ಯಕ್ರಮಕ್ಕೆ ಮಾತ್ರ ಸೀಮಿತಗೊಳಿಸದೆ, ಅದನ್ನು ದೈನಂದಿನ ಜೀವನದ ಭಾಗವಾಗಿಸಿಕೊಂಡಿದ್ದಾರೆ.

ಫಿಟ್ನೆಸ್ ಎಂದರೆ ಕೇವಲ ಒಂದು ರೀತಿಯ ವ್ಯಾಯಾಮ ಮಾಡುವುದಲ್ಲ. ದೇಹದ ಆರೋಗ್ಯದ ಜೊತೆಗೆ ಯೋಗ, ವ್ಯಾಯಾಮ, ಆಹಾರ ಮತ್ತು ನಿದ್ರೆಯ ಮೇಲೂ ಗಮನ ಹರಿಸುವುದು ಮುಖ್ಯ ಎಂಬುದನ್ನು ಪ್ರಧಾನಿ ಮೋದಿ ಹಲವು ಸಂದರ್ಭಗಳಲ್ಲಿ ಒತ್ತಿ ಹೇಳಿದ್ದಾರೆ. ದೇಹವನ್ನು ಸಕ್ರಿಯವಾಗಿಟ್ಟುಕೊಳ್ಳುವುದರ ಜೊತೆಗೆ ಮನಸ್ಸಿನ ಆರೋಗ್ಯಕ್ಕೂ ಗಮನ ನೀಡಬೇಕು ಎಂಬುದು ಅವರ ಮಾತು.

ನಿದ್ರೆಗೆ ಆದ್ಯತೆ

ಬ್ಯುಸಿ ಲೈಫ್ಸ್ಟೈಲ್ ಇದ್ದರೂ ನಿದ್ರೆ ನಿರ್ಲಕ್ಷಿಸಬೇಡಿ ಎಂಬುದು ಮೋದಿ ಹೇಳಿಕೆ. ಬಿಡುವಿಲ್ಲದ ದಿನಚರಿಯ ನಡುವೆಯೂ ನಿದ್ರೆಯನ್ನು ನಿರ್ಲಕ್ಷಿಸಬಾರದು. 2026ರ ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳೊಂದಿಗೆ ಮಾತನಾಡುವಾಗ, ಉತ್ತಮ ನಿದ್ರೆ ದೇಹ ಮತ್ತು ಮನಸ್ಸನ್ನು ಚೈತನ್ಯದಿಂದ ಇಡುತ್ತದೆ ಎಂದು ಪ್ರಧಾನಿ ಮೋದಿ ಹೇಳಿದ್ದರು. ಹೀಗಾಗಿ ಫಿಟ್ನೆಸ್ಗಾಗಿ ವ್ಯಾಯಾಮ ಮಾಡುವಷ್ಟೇ, ದೇಹಕ್ಕೆ ಅಗತ್ಯವಾದ ವಿಶ್ರಾಂತಿ ನೀಡುವುದೂ ಮುಖ್ಯ. ಅದನ್ನು ಮೋದಿ ಪಾಲಿಸಿಕೊಂಡು ಬರ್ತಿದ್ದಾರೆ.

ಆಹಾರದಲ್ಲಿ ಸಮತೋಲನ

ಆಹಾರದ ವಿಚಾರದಲ್ಲೂ ಯಾವುದೇ ಕಠಿಣ ಅಥವಾ ಮ್ಯಾಜಿಕಲ್ ಡಯಟ್ ಅನ್ನು ಪ್ರಧಾನಿ ಮೋದಿ ಪ್ರತಿಪಾದಿಸಿಲ್ಲ. 2026ರಲ್ಲಿ ವಿದ್ಯಾರ್ಥಿಗಳೊಂದಿಗೆ ನಡೆದ ಸಂವಾದದಲ್ಲಿ ತಮ್ಮ ಆಹಾರದ ಬಗ್ಗೆ ಮಾತನಾಡಿರುವ ಅವರು, ತಾವು ಸಸ್ಯಾಹಾರಿ ಆಹಾರ ಸೇವಿಸುವುದಾಗಿ ತಿಳಿಸಿದ್ದಾರೆ. ಆಹಾರ ವ್ಯಕ್ತಿಯ ಅಗತ್ಯ ಮತ್ತು ಆಯ್ಕೆಗೆ ಅನುಗುಣವಾಗಿರಬೇಕು ಎಂಬುದಕ್ಕೂ ಅವರು ಒತ್ತು ನೀಡಿದ್ದಾರೆ.

ದೈಹಿಕ ಚಟುವಟಿಕೆ

ಫಿಟ್ ಆಗಿರಲು ಪ್ರತಿದಿನವೂ ದೈಹಿಕ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವುದು ಮುಖ್ಯ. ಯೋಗ ಮತ್ತು ವ್ಯಾಯಾಮವನ್ನು ದೈನಂದಿನ ಜೀವನದ ಭಾಗವಾಗಿಸಿಕೊಳ್ಳಬೇಕು ಎಂದು ಪ್ರಧಾನಿ ಮೋದಿ ಹಲವು ಸಂದರ್ಭಗಳಲ್ಲಿ ಹೇಳಿದ್ದಾರೆ. 2026ರ ಅಂತರರಾಷ್ಟ್ರೀಯ ಯೋಗ ದಿನದಂದು ಕೂಡ, ಯೋಗವು ದೈಹಿಕ ಆರೋಗ್ಯದ ಜೊತೆಗೆ ಮಾನಸಿಕ ನೆಮ್ಮದಿ ಮತ್ತು ಸಮತೋಲಿತ ಜೀವನಕ್ಕೆ ಸಹಾಯಕ ಎಂದು ಅವರು ಹೇಳಿದ್ದಾರೆ. 76ರ ವಯಸ್ಸಿನಲ್ಲೂ ಪ್ರಧಾನಿ ಮೋದಿ ಅವರ ಫಿಟ್ನೆಸ್ ಸಂದೇಶದ ಪ್ರಮುಖ ಅಂಶಗಳು ಸರಳವಾಗಿವೆ. ಯೋಗ, ದೈಹಿಕ ಚಟುವಟಿಕೆ, ಸಮತೋಲಿತ ಆಹಾರ, ಉತ್ತಮ ನಿದ್ರೆ ಮತ್ತು ನಿಯಮಿತ ಜೀವನಶೈಲಿ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಫ್ರಿಡ್ಜ್‌ನಲ್ಲಿಟ್ಟ ಮೊಸರು ಹಾಳಾಗಲ್ಲ ಅಂತ ದಿನಾ ಬಳಸ್ತೀರಾ? ಇಲ್ಲಿದೆ ಶಾಕಿಂಗ್ ಸತ್ಯ
Dark Circles: ಕಣ್ಣಿನ ಸುತ್ತಲಿನ ಡಾರ್ಕ್ ಸರ್ಕಲ್‌ಗೆ ಗುಡ್‌ಬೈ ಹೇಳಿ.. ಈ ಮನೆಮದ್ದು ಸಾಕು!