
ಮುಂಚೆಲ್ಲಾ ಒಂದು ವಯಸ್ಸು ದಾಟಿದ ಮೇಲೆ ಕೂದಲು ಬೆಳ್ಳಗಾಗುತ್ತಿತ್ತು. ಅದು ವಯಸ್ಸಾಗಿರುವ ಲಕ್ಷಣವಾಗಿತ್ತು. ಆದರೆ ಇಂದು ಚಿಕ್ಕಮಕ್ಕಳ ಕೂದಲೂ ಬೆಳ್ಳಗಾಗುತ್ತಿವೆ. ಇವತ್ತಿನ ಜೀವನ ಕ್ರಮ, ಆಹಾರ ಪದ್ಧತಿ, ಪ್ರದೂಷಣೆ, ಮೇಲಾಗಿ ಒತ್ತಡ... ಇನ್ನು ಏನೇನೋ ಕಾರಣಗಳು ಇವುಗಳಿಗೆ ಇವೆ. 25-30 ದಾಟುತ್ತಿದ್ದಂತೆಯೇ ಕೂದಲು ಬೆಳ್ಳಗಾಗುವುದು ಮಾಮೂಲಾಗಿಬಿಟ್ಟಿದೆ. ಇದೇ ಕಾರಣಕ್ಕೆ ಹಲವರಿಗೆ ಮದುವೆ ಕೂಡ ಆಗುತ್ತಿಲ್ಲವಾದರೆ, ಮತ್ತೆ ಕೆಲವರು ಖಿನ್ನತೆಗೆ ಜಾರುವುದು ಇದೆ. ಇದೇ ಕಾರಣಕ್ಕೆ ಹೇರ್ಡೈ ಮೊರೆ ಹೋಗುವುದು ಸರ್ವೇ ಸಾಮಾನ್ಯ. ಪ್ರತಿ ಮನೆಯಲ್ಲಿ ಒಬ್ಬರಾದರೂ ವ್ಯಕ್ತಿ ಹೇರ್ಡೈ ಬಳಸಿಯೇ ಬಳಸುತ್ತಾರೆ ಎನ್ನುತ್ತದೆ ಅಧ್ಯಯನ.
ಇದೇ ಕಾರಣಕ್ಕೆ ಹೇರ್ ಡೈ ಮಾರುಕಟ್ಟೆ ಕೋಟ್ಯಂತರ ಬಿಲಿಯನ್ ವ್ಯವಹಾರ ನಡೆಸುತ್ತಿದೆ. ಭಾರತ ಒಂದರಲ್ಲಿಯೇ 2024ರಲ್ಲಿ 0.66 ಶತಕೋಟಿ ಡಾಲರ್ ಮೌಲ್ಯದ ಭಾರತೀಯ ಕೂದಲು ಬಣ್ಣ ಮಾರುಕಟ್ಟೆ ಇತ್ತು. ಅದು 2030ರ ವೇಳೆಗೆ 1.72 ಶತಕೋಟಿ ಡಾಲರ್ ತಲುಪುವ ನಿರೀಕ್ಷೆಯಿದೆ ಎನ್ನಲಾಗಿದೆ. ಹಾಗಿದ್ದರೆ ಅದೆಷ್ಟು ಮಂದಿ ಇದನ್ನು ಬಳಸುತ್ತಾರೆ ಎನ್ನುವುದನ್ನು ನೋಡಬಹುದು. ಜನರನ್ನು ಆಕರ್ಷಿಸಲು ಕಂಪೆನಿಗಳು ಕೋಟಿ ಕೋಟಿ ಹಣ ಕೊಟ್ಟು ಸಿನಿಮಾ, ಕ್ರಿಕೆಟ್ ಸೆಲೆಬ್ರಿಟಿಗಳನ್ನು ರಾಯಭಾರಿ ಮಾಡುತ್ತಿದ್ದಾರೆ. ಇದೀಗ ಸೋಷಿಯಲ್ ಮೀಡಿಯಾ ಸ್ಟ್ರಾಂಗ್ ಆಗಿರುವ ಕಾರಣ, ಅತಿ ಹೆಚ್ಚು ಫಾಲೋವರ್ಸ್ ಹೊಂದಿರುವ ಕಂಟೆಂಟ್ ಕ್ರಿಯೇಟರ್ಸ್ಗಳು ತಾವೇ ಇದನ್ನು ಬಳಸುವಂತೆ ಹೇಳುತ್ತಾರೆ. ಅದು ಎಷ್ಟು ನಿಜ ಎನ್ನಿಸುತ್ತದೆ ಎಂದು ನಿಮಗೆ ಅದು ಜಾಹೀರಾತು ಎಂದು ಎನ್ನಿಸುವುದೇ ಇಲ್ಲ. ಅವರ ಕೂದಲಿನ ಬಣ್ಣ ನೋಡಿ ಮನಸೋತು, ಖರೀದಿಸಲೇ ಬೇಕು, ಹಾಗೆ ಮೋಡಿ ಮಾಡುತ್ತಾರೆ.
ಆದರೆ, ಹೀಗೆ ಮಾಡುವ ಮುನ್ನ ಕ್ಯಾನ್ಸರ್ ಸರ್ಜನ್ ಡಾ.ರಘುನಾಥ್ ಎಸ್.ಕೆ. ಅವರ ಮಾತನ್ನೊಮ್ಮೆ ಕೇಳಿಬಿಡಿ. ಕಿರಣ್ ಸಾಗರ್ ಫಿಟ್ನೆಸ್ ಎನ್ನುವ ಇನ್ಸ್ಟಾಗ್ರಾಮ್ನಲ್ಲಿ ಇದನ್ನು ಶೇರ್ ಮಾಡಲಾಗಿದ್ದು, ಅದರಲ್ಲಿ ವೈದ್ಯರು ಹೇಳಿದ್ದು ಹೀಗಿದೆ: ಬಹುತೇಕ ಎಲ್ಲಾ ಹೇರ್ಡೈಗಳಲ್ಲಿ ಕೆಮಿಕಲ್ಸ್ ಇರುತ್ತದೆ. ತಲೆಗೆ ಹೋದಾಗ ಅದು ಹೀರಿಕೊಳ್ಳುತ್ತದೆ. ಕ್ರಮೇಣ ಅದು ಶರೀರದ ಒಳಗೆ ಹೋಗುತ್ತದೆ. ಅದು ರಕ್ತವನ್ನು ಸೇರುತ್ತದೆ. ರಕ್ತಕ್ಕೆ ಹೋದ ಮೇಲೆ ಅದು ಹೊರಕ್ಕೆ ಬರಲೇಬೇಕು. ಕಿಡ್ನಿ ಮೂಲಕ ಅದು ಆಚೆ ಬಂದಾಗ ಮೂತ್ರಕೋಶ (Bladder)ನಲ್ಲಿ ಸ್ಟೋರ್ ಆಗುತ್ತದೆ. ಅಲ್ಲಿಯೇ ಕ್ಯಾನ್ಸರ್ ಉತ್ಪತ್ತಿಯಾಗುವುದು ಎಂದಿದ್ದಾರೆ. ಇದಕ್ಕೇನಾದರೂ ಲೆವೆಲ್ ಒನ್ ಸಾಕ್ಷಿ ಇದ್ಯಾ ಎಂದು ಕೇಳಿದರೆ, ಎಲ್ಲಾ ಸಮದಯಲ್ಲಿಯೂ ಸಾಕ್ಷಿ ಇರುವುದಿಲ್ಲ. ಉದಾಹರಣೆಗೆ ಸ್ಮೋಕ್ ಮಾಡುವವರಿಗೆ ಎಲ್ಲರಿಗೂ ಶ್ವಾಸಕೋಶದ ಕ್ಯಾನ್ಸರ್ ಬರುವುದಿಲ್ಲ. ಆದರೆ ನಾವು ಸ್ಟಡಿ ಮಾಡಿದಾಗ, ಇತ್ತೀಚಿನ ದಿನಗಳಲ್ಲಿ ಅದರಲ್ಲಿಯೂ ಹೆಂಗಸರು ಡೇರ್ಡೈ ಹೆಚ್ಚಾಗಿ ಉಪಯೋಗಿಸುವ ಕಾರಣದಿಂದ ಮೂತ್ರಕೋಶದ ಕ್ಯಾನ್ಸರ್ ಹೆಚ್ಚಾಗುತ್ತಿದೆ ಎಂದಿದ್ದಾರೆ ವೈದ್ಯರು.
ಹೆನ್ನಾ ಅದೂಇದೂ ಎನ್ನುತ್ತಾರೆ. ಅದರಲ್ಲಿ ಎಷ್ಟು ಕೆಮಿಕಲ್ಸ್ ಇದೆ ಎನ್ನುವುದು ಸಾಬೀತಾಗಿಲ್ಲ. ಅದರ ಬದಲು ಇರುವುದನ್ನೇ ಒಪ್ಪಿಕೊಂಡು ಚೆನ್ನಾಗಿ ಇದ್ದರೆ ಒಳ್ಳೆಯದು ಎನ್ನುವುದು ಅವರ ಮಾತು. ಅಷ್ಟಕ್ಕೂ, ಹೇರ್ ಕಲರ್ನಿಂದಲೂ ಕ್ಯಾನ್ಸರ್ ಬರುತ್ತಿವೆ. ಬ್ಲಡ್ ಕ್ಯಾನ್ಸರ್ ಹೆಚ್ಚುತ್ತಿದೆ ಎಂದು ಸಂಶೋಧನೆಗಳು ಇದಾಗಲೇ ಹೇಳಿವೆ. ಚರ್ಮದ ಕ್ಯಾನ್ಸರ್, ಗರ್ಭಾಶಯದ ಕ್ಯಾನ್ಸರ್, ಸ್ತನ ಕ್ಯಾನ್ಸರ್ಗಳಿಗೂ ಇದು ಕಾರಣವಾಗಬಲ್ಲುದು ಎಂದು ತಜ್ಞರು ಇದಾಗಲೇ ಹೇಳಿದ್ದಾರೆ. ಚರ್ಮದ ಸಮಸ್ಯೆ ಮಾತ್ರವಲ್ಲದೇ ಹೇರ್ ಡೈಯಲ್ಲಿ ಇರುವ ರಾಸಾಯನಿಕಗಳಿಂದ ಮಾನಸಿಕ ರೋಗಗಳೂ ಬರುತ್ತಿವೆ ಎನ್ನಲಾಗಿದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.