
ಕೂದಲಿನ ವಿಷಯ ಬಂದಾಗ ಎಲ್ಲರೂ ತಲೆಕೆಡಿಸಿಕೊಳ್ಳುತ್ತಾರೆ. ಕೂದಲ ಬೆಳವಣಿಗೆ, ಉದುರುವಿಕೆ, ಸ್ಪಿಲ್ಕ್, ತೆಳ್ಳಗಾಗುವುದು, ಬಹು ಬೇಗ ಬೆಳ್ಳಗಾಗುವುದು ಹೀಗೆ ಹಲವು ವಿಚಾರಗಳಿಗೆ ತಲೆಕೆಡಿಸಿಕೊಳ್ಳುತ್ತೇವೆ. ಇದಕ್ಕೆ ಬೆಸ್ಟ್ ಮೆಡಿಸಿನ್ ಆಮ್ಲಾ ಅಂದರೆ ನೆಲ್ಲಿಕಾಯಿ ಎಂದು ಆಯುರ್ವೇದದಲ್ಲಿ ಹೇಳವಾಗಿದೆ. ಆಮ್ಲಾ ಕೂದಲು ಉದುರುವಿಕೆ ಸೇರಿ ಹಲವು ಸಮಸ್ಯೆಗಳಿಗೆ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ನೆಲ್ಲಿಕಾಯಿ ಸೀಜನ್‌ನಲ್ಲಿ ಮನೆಯಲ್ಲೇ ನೆಲ್ಲಿಕಾಯಿಯನ್ನು ತುರಿದು ಒಣಗಿಸಿ ಪುಡಿ ಮಾಡಿಟ್ಟುಕೊಂಡರೆ ಬಹಳ ಒಳ್ಳೆಯದು. ಇದು ಎಷ್ಟೇ ವರ್ಷವಿಟ್ಟರೂ ಕೆಡದ ಕಾರಣ ಬೇಕಾದಾಗ ಬಳಸಿಕೊಳ್ಳಬಹುದು. ಆರೋಗ್ಯಕ್ಕೂ ಇದು ಉತ್ತಮ. ದಿನ ಬೆಳಗ್ಗೆ ಒಂದು ಲೋಟ ನೀರಿಗೆ ಒಂದು ಚಮಚ ನೆಲ್ಲಿಕಾಯಿ ಪುಡಿ ಮಿಕ್ಸ್ ಮಾಡಿ ಕುಡಿದರೆ ಆರೋಗ್ಯಕ್ಕೆ ಬಹಳ ಒಳ್ಳೆಯದು. ಇನ್ನು ಕೂದಲು, ತ್ವಚೆಯ ವಿಷಯದಲ್ಲಿ ಇಂದು ಬಹಳ ಜನಪ್ರಿಯವಾಗುತ್ತಿದೆ ಈ ನೆಲ್ಲಿಕಾಯಿ ಪುಡಿ.
ಆಮ್ಲಾದಲ್ಲಿ ಹಲವಾರು ಗುಣಗಳಿದ್ದು, ಕೂದಲು ಮತ್ತು ಚರ್ಮದ ಆರೋಗ್ಯ ಎರಡನ್ನೂ ಹೆಚ್ಚಿಸುತ್ತದೆ. ಇದು ನೆತ್ತಿಯ ಆರೋಗ್ಯವನ್ನು ಉತ್ತೇಜಿಸುತ್ತದೆ ಹಾಗೂ ಕೂದಲನ್ನು ಪೋಷಿಸುತ್ತದೆ ಮತ್ತು ತಲೆಹೊಒಟ್ಟು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಉತ್ತಮ ನೆತ್ತಿಯ ಆರೋಗ್ಯ ಎಂದರೆ ಉತ್ತಮ ಕೂದಲ ಕೋಶಕ ಎಂದು. ಇದು ಕೂದಲು ಬೆಳವಣಿಗೆ ಮತ್ತು ನಿಯಂತ್ರಿತ ಕೂದಲು ಉದುರುವಿಕೆಗೆ ಕಾರಣವಾಗುತ್ತದೆ. ಇದು ಕೂದಲಿಗೆ ಬಳಸಬಹುದಾದ ಹಳೆಯ ಆಯುರ್ವೇದ ಪರಿಹಾರವಾಗಿದೆ. ಹೇರ್ ಮಾಸ್ಕ್ಗಳನ್ನು ತಯಾರಿಸಲು ಆಮ್ಲಾ ಪುಡಿಯನ್ನು ಹಲವಾರು ಸರಳ ಪದಾರ್ಥಗಳೊಂದಿಗೆ ಬೆರೆಸಬಹುದು. ಕೂದಲು ದಪ್ಪವಾಗಿ ಮತ್ತು ಆರೋಗ್ಯಕರವಾಗಿ ಬೆಳೆಯಲು ನೆಲ್ಲಿಕಾಯಿಯನ್ನು ಹೀಗೆ ಉಪಯೋಗಿಸಿ.
6 ವರ್ಷ ಕಷ್ಟ ಪಟ್ಟು ಬೆಳೆಸಿದ ಕೂದಲನ್ನು ಕ್ಯಾನ್ಸರ್ ರೋಗಿಗಳಿಗೆ ದಾನ ಮಾಡಿದ ಸುಶ್ಮಿತಾ ಗೌಡ!
ಆಮ್ಲಾ ಮತ್ತು ನಿಂಬೆಹಣ್ಣು(Lemon)
ಕೂದಲು ಉದುರುವಿಕೆ ಹಾಗೂ ತೆಳ್ಳಗಾಗಲು ಪ್ರಮುಖ ಕಾರಣ ಎಂದರೆ Vitamin C. ಕೂದಲ ಬೆಳವಣಿಗೆಗೆ ಈ ನಿಂಬೆ ಹಾಗೂ ನೆಲ್ಲಿಯ ಮಿಶ್ರಣವು ನೆತ್ತಿಗೆ ವಿಟಮಿನ್ ಸಿ ಒದಗಿಸುತ್ತದಲ್ಲದೆ ಕೂದಲು ಆರೋಗ್ಯವಾಗಿ ಬೆಳೆಯಲು ಸಹಾಯ ಮಾಡುತ್ತದೆ. ನೆಲ್ಲಿಕಾಯಿ ರಸಕ್ಕೆ ಒಂದು ಚಮಚ ತಾಜಾ ನಿಂಬೆ ರಸವನ್ನು ಹಿಂಡಿ ಎರಡನ್ನೂ ಚೆನ್ನಾಗಿ ಕಲಸಬೇಕು ಬೆರಳಿನ ತುದಿಯನ್ನು ಈ ರಸದಲ್ಲಿ ಅದ್ದಿ ಮತ್ತು ಅದನ್ನು ನೆತ್ತಿಗೆ ವೃತ್ತಾಕಾರದಲ್ಲಿ ಮಸಾಜ್ ಮಾಡಬೇಕು. ಸುಮಾರು 15 ನಿಮಿಷಗಳ ನಂತರ ಗಿಡಮೂಲಿಕೆಗಳ ಶಾಂಪೂ ಬಳಸಿ ತಲೆ ಸ್ನಾನ ಮಾಡಬೇಕು. ಹೀಗೆ ಕೆಲ ತಿಂಗಳವರೆಗೂ ಮಾಡುವುದರಿಂದ ಉತ್ತಮ ಫಲಿತಾಂಶ ಪಡೆಯಬಹುದು.
ಆಮ್ಲಾ ಮತ್ತು ಹೆನ್ನಾ(Henna)
ಕೂದಲಿಗೆ ಹೆನ್ನಾ(Henna) ಮತ್ತು ಆಮ್ಲಾ ಪುಡಿ ಹಳೆಯ ಪರಿಹಾರವಾಗಿದೆ. ಇದು ಕೂದಲಿನ ರಚನೆ ಮತ್ತು ಬೆಳವಣಿಗೆಯನ್ನು ಸುಧಾರಿಸುತ್ತದೆ. ಈ ಹೇರ್ ಮಾಸ್ಕ್ ಕೂದಲು ಮತ್ತು ನೆತ್ತಿಯ ಹಾನಿ, ಶುಷ್ಕತೆ ಮತ್ತು ಅಕಾಲಿಕ ಬೂದುಬಣ್ಣವನ್ನು ನೋಡಿಕೊಳ್ಳುತ್ತದೆ.
ಹೆನ್ನಾ ಪುಡಿ ಮೂರು ಚಮಚ ಮತ್ತು 1 ಚಮಚ ನಿಂಬೆ ರಸವನ್ನು ನೆಲ್ಲಿಕಾಯಿ ಪುಡಿಗೆ ಹಾಕಿ ಚೆನ್ನಾಗಿ ಕಲಸಿ ಪೇಸ್ಟ್ ರೀತಿ ಮಾಡಿಕೊಳ್ಳಬೇಕು. ಈ ಪೇಸ್ಟ್ ಅನ್ನು 2 ಗಂಟೆಗಳ ಕಾಲ ನೆನೆಯಲು ಬಿಡಬೇಕು. ಈ ಮಿಶ್ರಣವನ್ನು ನೆತ್ತಿಗೆ ಹಚ್ಚಿದ 2 ಗಂಟೆಯ ನಂತರ ಉಗುರು ಬೆಚ್ಚಗಿನ ನೀರಿನಲ್ಲಿ ಗಿಡಮೂಲಿಕೆಗಳ ಶಾಂಪೂವಿನಲ್ಲಿ ತಲೆ ಸ್ನಾನ ಮಾಡಬೇಕು. ಹೀಗೆ ತಿಂಗಳಿಗೆ ಎರಡು ಬಾರಿ ಮಾಡಿದರೆ ಆರೋಗ್ಯಕಾರಿ ಕೂದಲು ಪಡೆಯಬಹುದು.
ಆಮ್ಲಾ ಮತ್ತು ಕೊಬ್ಬರಿ ಎಣ್ಣೆ(Coconut Oil)
ಭಾರತದಲ್ಲಿ ಅತ್ಯಂತ ಜನಪ್ರಿಯವಾದ ಕಾಂಬಿನೇಷನ್ ಎಂದರೆ ಅದು ಆಮ್ಲಾ ಮತ್ತು ಕೊಬ್ಬರಿ ಎಣ್ಣೆ. ಇದು ತಲೆಯಲ್ಲಿನ ಹೊಟ್ಟಿನ ಸಮಸ್ಯೆಯನ್ನು ನಿವಾರಿಸುತ್ತದಲ್ಲದೆ ಕೂದಲಿಗೆ ಬೇಕಾದ ತೇವಾಂಶ ಮತ್ತು ಪೋಷಣೆ, ಫ್ಲಾಕಿನೆಸ್ ತೊಡೆದುಹಾಕಲು, ತುರಿಕೆ ನಿವಾರಿಸಲು ಮತ್ತು ನೆತ್ತಿಯ ಆರೋಗ್ಯವನ್ನು ಕಾಪಾಡುತ್ತವೆ.
ಆಮ್ಲಾ ರಸ ಹಾಗೂ ಶುದ್ಧ ಕೊಬ್ಬರಿ ಎಣ್ಣೆಯನ್ನು ಸಮಪ್ರಮಾಣದಲ್ಲಿ ತೆಗೆದುಕೊಳ್ಳಬೇಕು. ಇದನ್ನು ಚೆನ್ನಾಗಿ ಕಲಸಿ ನೆತ್ತಿಗೆ ಹಚ್ಚಿ 5 ನಿಮಿಷ ಮಸಾಜ್ ಮಾಡಬೇಕು. ಇದನ್ನು ರಾತ್ರಿ ಇಡೀ ಹಚ್ಚಿ ಬೆಳಗ್ಗೆ ಎದ್ದು ಉಗುರು ಬೆಚ್ಚಗಿನ ನೀರಿನಲ್ಲಿ ಹರ್ಬಲ್ ಶಾಂಪೂವಿನಲ್ಲಿ ತಲೆಸ್ನಾನ ಮಾಡಬೇಕು. ಈ ರೀತಿ ತಿಂಗಳಲ್ಲಿ ಮರ‍್ನಾಲ್ಕು ಬಾರಿ ಮಾಡಿದರೆ ಒಳ್ಳೆಯ ಫಲಿತಾಂಶ ಪಡೆಯಬಹುದು.
Hair Health: ನಯಾಪೈಸೆ ಖರ್ಚಿಲ್ಲದೆ ಕೂದಲ ಆರೋಗ್ಯ ಹೀಗೆ ಕಾಪಾಡಿಕೊಳ್ಳಿ
ಆಮ್ಲಾ ಮತ್ತು ಸೀಗೆಕಾಯಿ(Shikakai)
ಅತ್ಯಂತ ಪ್ರಾಚೀನವಾದ ಸೀಗೆಕಾಯಿ ಆಯುರ್ವೇದದಲ್ಲಿ ಕೂದಲಿಗೆ ಇರುವ ದಿವ್ಯೌ಼ಷಧ ಎಂದರೆ ತಪ್ಪಾಗುವುದಿಲ್ಲ. ಸೀಗೆಕಾಯಿಯು ನೂರಾರು ಕೂದಲ ರಕ್ಷಣೆ ಮಾಡುವುದಲ್ಲದೆ, ಕೂದಲು ಉದುರುವಿಕೆ ಮತ್ತು ಹೊಳೆಯುವಂತೆ ಮಾಡುತ್ತದೆ.
ಆಮ್ಲಾ ಪೌಡರ್ ಮತ್ತು ಸೀಗೆಕಾಯಿ ಪುಡಿ ಎರಡೂ ಸಮ ಪ್ರಮಾಣದಲ್ಲಿ ತೆಗೆದುಕೊಂಡು ನೀರಿನಲ್ಲಿ ದಪ್ಪ ಪೇಸ್ಟ್ ರೀತಿ ಕಲಸಬೇಕು. ಈ ಮಿಶ್ರಣವನ್ನು ತಲೆಯ ಎಲ್ಲಾ ಭಾಗಕ್ಕೂ ಹಚ್ಚಿ 30 ನಿಮಿಷಗಳ ಕಾಲ ಬಿಡಬೇಕು. ನಂತರ ಉಗುರು ಬೆಚ್ಚಗಿನ ನೀರಿನಲ್ಲಿ ತಲೆ ಸ್ನಾನ ಮಾಡಬೇಕು. ಹೀಗೆ ತಿಂಗಳಿಗೆ ಮೂರು ಬಾರಿ ಮಾಡುವುದರಿಂದ ಹೊಳೆಯುವ, ಕಪ್ಪು ಬಣ್ಣದ ಕೂದಲು ನಿಮ್ಮದಾಗಿಸಿಕೊಳ್ಳಬಹುದು.
ಆಮ್ಲಾ ಎಣ್ಣೆ
ಸುಮಾರು ಮೂರು ಚಮದಷ್ಟು ಆಮ್ಲಾ ಎಣ್ಣೆಯನ್ನು ಬೆಚ್ಚಗೆ ಮಾಡಿಕೊಂಡು ಇದನ್ನು ತಲೆಗೆ ಹಚ್ಚಿ ಮಸಾಜ್ ಮಾಡಬೇಕು. ಇದು ದೈನಂದಿನ ಕೆಲಸದಿಂದ ಸೂಸ್ತಾಗಿದ್ದರೆ, ರಕ್ತ ಸಂಚಲನಕ್ಕೆ(Blood Circulation) ಸಹಾಯ ಮಾಡುತ್ತದೆ. ಅಲ್ಲದೆ ವಿಟಮಿನ್, ಮಿನರಲ್ಸ್, ಆಂಟಿಆಕ್ಸಿಡೆAಟ್‌ಗಳನ್ನು ಕೂದಲಿಗೆ ಒದಗಿಸುವುದರ ಜೊತೆಗೆ ಕೂದಲು ದಪ್ಪ ಹಾಗೂ ಆರೋಗ್ಯಕರವಾಗಿ ಬೆಳೆಯುವಂತೆ ಮಾಡುತ್ತದೆ. ದೀರ್ಘಾವಧಿಯಲ್ಲಿ ಇದನ್ನು ಬಳಸುವುದರಿಂದ ಒತ್ತಡ ಮತ್ತು ಕೂದಲು ಉದುರುವಿಕೆ ಕಡಿಮೆ ಮಾಡುತ್ತದೆ. ಆಮ್ಲಾ ಎಣ್ಣೆಯನ್ನು ಬೆಚ್ಚಗೆ ಮಾಡಿಕೊಂಡು ಅದನ್ನು ತಲೆಗೆ ಮಸಾಜ್ ಮಾಡಬೇಕು. ಒಂದೆರಡು ಗಂಟೆಗಳ ನಂತರ ಬೆಚ್ಚಗಿನ ನೀರಿನಲ್ಲಿ ತಲೆಸ್ನಾನ ಮಾಡುವುದರಿಂದ ಕೂದಲಿನ ಆರೋಗ್ಯ ಕಾಪಾಡಿಕೊಳ್ಳಬಹುದು.
ಆಮ್ಲಾ ಮತ್ತು ಮೊಸರು(Curd)
ಮೊಸರು ಕೂದಲನ್ನು ಪೋಷಿಸುತ್ತದೆ ಮತ್ತು ಒಣ ನೆತ್ತಿ ಮತ್ತು ಕೂದಲಿನ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ನೆತ್ತಿಗೆ ಮೊಸರು ಬಳಸುವುದರಿಂದ ತಲೆಹೊಟ್ಟು ನಿಯಂತ್ರಿಸುತ್ತದೆ.
ಆಮ್ಲಾ ಪುಡಿಯನ್ನು ಮೊಸರಿನಲ್ಲಿ ಚೆನ್ನಾಗಿ ಕಲಸಿ ಪೇಸ್ಟ್ ತಯಾರಿಸಿಕೊಳ್ಳಿ ಇದನ್ನು ಹೇರ್ ಮಾಸ್ಕ್ ರೀತಿ ಕೂದಲು ಮತ್ತು ನೆತ್ತಿಯ ಮೇಲೆ ಹಚ್ಚಿ ಸ್ವಲ್ಪ ಸಮಯದ ನಂತರ ಎಂದಿನAತೆ ತಲೆ ಸ್ನಾನ ಮಾಡಿ.
Monsoon Hair Care: ತಲೆಯಲ್ಲಿ ತುರಿಕೆನಾ? ಕೂದಲ ಆರೋಗ್ಯಕ್ಕೆ ಹೀಗ್ಮಾಡಿ
ಆಮ್ಲಾ ಮತ್ತು ಮೆಂತ್ಯೆ(Fenugreek)
ಮೆಂತೆ ಆರೋಗ್ಯ ಹಾಗೂ ಕೂದಲಿಗೂ ಬಹಳ ಒಳ್ಳೆಯದು. ಮೆಂತ್ಯೆಯು ಕೂದಲು ಉದುರುವುದು ಕಡಿಮೆ ಮಾಡುವುದಲ್ಲದೆ ಕೂದಲಿನ ದಟ್ಟಣೆ ಹೆಚ್ಚಿಸುತ್ತದೆ. ಮೆಂತ್ಯೆಯನ್ನು ರಾತ್ರಿ ಇಡೀ ನೆನೆಸಿ ಬೆಳಗ್ಗೆ ಅದನ್ನು ದಪ್ಪ ಪೇಸ್ಟ್ ರೀತಿ ರುಬ್ಬಿಕೊಳ್ಳಬೇಕು. ರುಬ್ಬಿದ ಮೆಂತ್ಯೆ ಪೇಸ್ಟ್ಗೆ ಆಮ್ಲಾ ಪುಡಿ, ನೀರು ಹಾಕಿ ರುಬ್ಬಿಕೊಳ್ಳಿ. ಇದನ್ನು ಕೂದಲ್ಲಿ ಹೇರ್ ಮಾಸ್ಕ್ ರೀತಿ ಹಚ್ಚಿಕೊಂಡು ಎರಡು ಗಂಟೆಯ ನಂತರ ತಲೆ ಸ್ನಾನ ಮಾಡಬೇಕು. ಹೀಗೆ ತಿಂಗಳಿಗೆ ಮೂರು ಬಾರಿ ಮಾಡಿದರೆ ಕೂದಲ ಆರೋಗ್ಯ ಚೆನ್ನಾಗಿ ಕಾಯ್ದುಕೊಳ್ಳಬಹುದು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.