
ನವದೆಹಲಿ: ಆರ್ಟಿಫೀಶಿಯಲ್ ಇಂಟಲಿಜೆನ್ಸ್ ತಂತ್ರಜ್ಞಾನ ಇದೀಗ ಹಲವು ಕುತೂಹಲಕಾರಿ ಘಟನೆಗಳಿಗೆ ಸಾಕ್ಷಿಯಾಗ್ತಿದೆ. ಹಲವು ಕ್ಷೇತ್ರಗಳಲ್ಲಿ AI ತಂತ್ರಜ್ಞಾನವನ್ನು ಯಶಸ್ವಿಯಾಗಿ ಬಳಸಿಕೊಳ್ಳಲಾಗುತ್ತಿದೆ. ಸ್ಟೂಡೆಂಟ್ಸ್, ಉದ್ಯೋಗಿಗಳು ಹೀಗೆ ಎಲ್ಲರೂ ಈ ಟೆಕ್ನಾಲಜಿಯನ್ನು ಸಮರ್ಥವಾಗಿ ಬಳಸಿಕೊಳ್ಳುತ್ತಿದ್ದಾರೆ. ಆದರೆ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್‌ನಿಂದ ಎಡವಟ್ಟುಗಳ ಸಹ ಆಗಬಹುದು ಅನ್ನೋದನ್ನು ಇತ್ತೀಚಿನ ಘಟನೆ ಸಾಬೀತುಪಡಿಸಿದೆ.
ಗೂಗಲ್ ಸರ್ಚ್‌ನ ಇತ್ತೀಚಿನ AI-ಚಾಲಿತ ಪುನರಾವರ್ತನೆಯು ಸರ್ಚ್ ಜನರೇಟಿವ್ ಎಕ್ಸ್‌ಪೀರಿಯೆನ್ಸ್ (SGE) ಕಿಡ್ನಿ ಕಲ್ಲುಗಳನ್ನು ಹೋಗಲಾಡಿಸಲು ಏನು ಮಾಡಬೇಕು ಎಂದು ಬಳಕೆದಾರರು ಕೇಳಿದ ಪ್ರಶ್ನೆಗೆ ಕನಿಷ್ಟ ಎರಡು ಲೀಟರ್ ಮೂತ್ರವನ್ನು ಕುಡಿಯುವಂತೆ ಸೂಚಿಸಿದೆ. ಡ್ರಿಲ್ ಎಂಬ ಬಳಕೆದಾರ, ಕಿಡ್ನಿ ಸ್ಟೋನ್ ಹೋಗಲಾಡಿಸಲು ಏನು ಮಾಡಬೇಕು ಎಂದು ಕೇಳಿದಾಗ, AI ನೀಡಿದ ವಿಚಿತ್ರ ಉತ್ತರವನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ.
ಉರಿ ಮೂತ್ರ ಸಮಸ್ಯೆ ಕಾಡುತ್ತಿದ್ರೆ ಕಿಡ್ನಿ ಸ್ಟೋನ್ ಆಗಿರ್ಬಹುದು, ಸ್ವಲ್ಪ ಹುಷಾರು!
ಸ್ಕ್ರೀನ್‌ಶಾಟ್‌ನಲ್ಲಿ 'ಕಿಡ್ನಿ ಕಲ್ಲುಗಳು ತ್ವರಿತವಾಗಿ ಹೋಗಲಾಡಿಸುವುದು ಹೇಗೆ' ಎಂಬ ಪ್ರಶ್ನೆ ಕೇಳಲಾಗಿದೆ. ಇದಕ್ಕೆ ಆರ್ಟಿಫೀಶಿಯಲ್ ಇಂಟಲಿಜೆನ್ಸ್, 'ನೀರು, ಶುಂಠಿ ಏಲ್, ನಿಂಬೆ-ನಿಂಬೆ ಸೋಡಾ ಅಥವಾ ಹಣ್ಣಿನ ರಸದಂತಹ ಸಾಕಷ್ಟು ದ್ರವಗಳನ್ನು ಕುಡಿಯುವುದು ಮೂತ್ರಪಿಂಡದ ಕಲ್ಲುಗಳನ್ನು ತ್ವರಿತವಾಗಿ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಪ್ರತಿ 24 ಗಂಟೆಗಳಿಗೊಮ್ಮೆ ನೀವು ಕನಿಷ್ಟ 2 ಲೀಟರ್ ಮೂತ್ರವನ್ನು ಕುಡಿಯಬೇಕು ಮತ್ತು ನಿಮ್ಮ ಮೂತ್ರವು ತಿಳಿ ಬಣ್ಣದಲ್ಲಿರಬೇಕು' ಎಂದು ಉತ್ತರ ನೀಡಿದೆ.
ಸದ್ಯ ಈ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಎಕ್ಸ್ ಬಳಕೆದಾರರು ಸ್ಕ್ರೀನ್‌ಶಾಟ್‌ನ್ನು ಶೀರ್ಷಿಕೆಯೊಂದಿಗೆ ಹಂಚಿಕೊಂಡಿದ್ದಾರೆ. ನೆಟ್ಟಿಗರು ಇದಕ್ಕೆ ನಾನಾ ರೀತಿ ಪ್ರತಿಕ್ರಿಯೆ ನೀಡಿದ್ದಾರೆ.
ತುಂಬಾ ಬಿಸಿಯಾಗಿರೋ ನೀರು ಕುಡಿತೀರಾ? ಕಿಡ್ನಿ ಸ್ಟೋನ್ ಆಗಬಹುದು ಹುಷಾರ್ !
ಒಬ್ಬ ಬಳಕೆದಾರರು, 'ಇದನ್ನು ಪ್ರಯತ್ನಿಸಬೇಡಿ, ಆರೋಗ್ಯ ಸಮಸ್ಯೆಯಾಗುವುದು ಖಂಡಿತ' ಎಂದು ಬರೆದಿದ್ದಾರೆ. ಇನ್ನೊಬ್ಬರು, 'AI ಎಂಥಾ ಹಾಸ್ಯಾಸ್ಪದವಾಗಿದೆ' ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, 'ಇದು ನಾನು ಕುಡಿಯುವ ಮೂತ್ರವೇ ಅಥವಾ ನಾನು ಮಾಡುವ ಮೂತ್ರವು ತಿಳಿ ಬಣ್ಣದಲ್ಲಿರಬೇಕು ಎಂದು ಅದು ನನಗೆ ಹೇಳುವುದಿಲ್ಲ' ಎಂದು ವ್ಯಂಗ್ಯವಾಡಿದ್ದಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.