ಸ್ವಘೋಷಿತ ದೇವಮಾತೆ, ದೇವಮಾನವರಿಂದಲೇ ಅಪಾಯ!

Suvarna News   | Asianet News
Published : Mar 27, 2020, 05:59 PM IST
ಸ್ವಘೋಷಿತ ದೇವಮಾತೆ, ದೇವಮಾನವರಿಂದಲೇ ಅಪಾಯ!

ಸಾರಾಂಶ

ಉತ್ತರ ಪ್ರದೇಶದಲ್ಲಿರುವ, ತನ್ನನ್ನು ತಾನೇ ದೇವಮಾತೆ ಎಂದು ಘೋಷಿಸಿಕೊಂಡಿರುವ ಒಬ್ಬಾಕೆ, ಗುಂಪು ಚದುರಿಸಲು ಬಂದ ಪೊಲೀಸರಿಗೆ ಮಚ್ಚು ತೋರಿಸಿ ಕೂಗಾಡಿ ಈಗ ಜೈಲಿನಲ್ಲಿದ್ದಾಳೆ. ಈಕೆ ಮಚ್ಚು ತೋರಿಸುತ್ತಿರುವ ವಿಡಿಯೋ ವೈರಲ್‌ ಆಗಿದೆ.

ಉತ್ತರಪ್ರದೇಶದಲ್ಲಿರುವ, ತನ್ನನ್ನು ತಾನೇ ದೇವಮಾತೆ ಎಂದು ಘೋಷಿಸಿಕೊಂಡಿರುವ ಒಬ್ಬಾಕೆ, ಗುಂಪು ಚದುರಿಸಲು ಬಂದ ಪೊಲೀಸರಿಗೆ ಮಚ್ಚು ತೋರಿಸಿ ಕೂಗಾಡಿ ಈಗ ಜೈಲಿನಲ್ಲಿದ್ದಾಳೆ. ಈಕೆ ಮಚ್ಚು ತೋರಿಸುತ್ತಿರುವ ವಿಡಿಯೋ ವೈರಲ್‌ ಆಗಿದೆ. ಈಕೆ ತನ್ನ ಆಶ್ರಮದಲ್ಲಿ ಜನ ಸೇರಿಸಿ, ಕೊರೊನಾ ಓಡಿಸಲು ಪ್ರಾರ್ಥನೆ ಮಾಡುತ್ತಿದ್ದಳಂತೆ. ಇದನ್ನು ತಿಳಿದು ಪೊಲೀಸರು ಅಲ್ಲಿಗೆ ಹೋಗಿದ್ದಾರೆ. ನೀವೆಲ್ಲ ಪ್ರಾರ್ಥನೆಯ ಹೆಸರಿನಲ್ಲಿ ಗುಂಪುಗೂಡಿದರೇ ಕೊರೋನಾ ಹರಡುವ ಅಪಾಯ ಹೆಚ್ಚು. ಆದ್ದರಿಂದ ಎಲ್ಲರ ಚದುರಿ ಎಂದು ಆದೇಶಿಸಿದ್ದಾರೆ. ಆದರೆ ದೇವಮಾತೆಯ ಮೈಮೇಲಿರುವ ದೈವೀ ಆವೇಶ ಬಿಡಬೇಕಲ್ಲ! ಅದು ಕೆರಳಿ ನಿಂತಿದೆ. ಹೂಂ ಎಂದು ಆರ್ಭಟಿಸುತ್ತ ಆಕೆ ಮಚ್ಚು ಹಿಡಿದು, ಹತ್ತಿರ ಬಂದರೆ ಕೊಚ್ಚಿ ಬಿಡುತ್ತೇನೆ ಎಂದು ಪೊಲೀಸರಿಗೆ ಆವಾಜ್‌ ಹಾಕುತ್ತ ನಿಂತಿದ್ದಾಳೆ. ಕರ್ತವ್ಯಕ್ಕೆ ಅಡ್ಡಿಪಡಿಸಿದ, ಕೊರೋನಾ ಹಬ್ಬಲು ಕಾರಣಕರ್ತಳಾಗಬಹುದಾದ ಆದಿಶಕ್ತಿ ಮಾಳನ್ನು ಕೆಡಹಾಕಿ ಪೊಲೀಸರು ಜೈಲಿಗೆ ಒಯ್ದಿದ್ದಾರೆ. ಆಶ್ರಮದಲ್ಲಿ ಸೇರಿದ್ದ ಅಂಧಭಕ್ತರಿಗೂ ಅಂಡಿಗೆ ಬಿಟ್ಟಿದ್ದಾರೆ. ಕೆಂಪು ಸೀರೆ ಧರಿಸಿ, ಕೈಯಲ್ಲಿ ಮಚ್ಚು ಹಿಡಿದುಕೊಂಡು ಪೊಲೀಸರಿಗೆ ಬೆದರಿಸುತ್ತಿರುವ ಈಕೆಯ ವಿಡಿಯೋ ಈಗ ವೈರಲ್‌ ಆಗಿದೆ. 

ಕೊರೋನಾ ಓಡಿಸಲು ಒಂದಾದ 10 ಸಾವಿರ ಮುಸಲ್ಮಾನರು: ಅನೇಕರಿಗೆ ಸೋಂಕು

ಇಂಥ ಸಾಕಷ್ಟು ಹುಚ್ಚರು, ಮೂಢರು ಈ ದೇಶದಲ್ಲಿ ಇದ್ದಾರೆ. ಇವರಿಗೆ ದೇಶವಿಡೀ ಲಾಕ್‌ಡೌನ್‌ ಆದರೂ ತಮ್ಮ ಹೆಗ್ಗಳಿಕೆ ಉಳಿಸಿಕೊಳ್ಳೋ ಹುಚ್ಚು. ಅದಕ್ಕೇ ಜನ ಸೇರಿಸಿ, ತಾವು ಅವರೆಲ್ಲರ ರಕ್ಷಕರಂತೆ ಪೋಸು ಕೊಡುತ್ತಾರೆ. ಉದಾಹರಣೆಗೆ ಕಾಶ್ಮೀರದ ಶ್ರೀನಗರದಲ್ಲಿ ಮೊನ್ನೆ ಹೀಗೇ ಆಯ್ತು. ಅಲ್ಲಿ ರಾತ್ರೋರಾತ್ರಿ ಇದ್ದಕ್ಕಿದ್ದಂತೆ ಪ್ರಾರ್ಥನಾ ಮಂದಿರಗಳಿಂದ ಆಜಾನ್‌ ಶುರುವಾಯಿತು, ಇದ್ದಕ್ಕಿದ್ದಂತೆ ಎಲ್ಲರೂ ಪ್ರಾರ್ಥನಾ ಮಂದಿರಕ್ಕೆ ಧಾವಿಸಿದರು. ನೋಡಿದರೆ, ಎಲ್ಲರೂ ಒಟ್ಟು ಸೇರಿ ಪ್ರಾರ್ಥಿಸೋಣ ಎಂಬ ನಿಟ್ಟಿನಲ್ಲಿ ಕೊಟ್ಟ ಕರೆ ಅದು. ಪ್ರಾರ್ಥನೆ ಯಾಕೆ? ಯಾಕೆಂದರೆ ಕೊರೋನಾ ಓಡಿಸಲು ದೇವರನ್ನು ಪ್ರಾರ್ಥಿಸೋಣ ಎಂಬುದೇ ಕಾರಣ. ಅಷ್ಟೊಂದು ಮಂದಿ ಒಟ್ಟು ಸೇರಿ, ಹತ್ತಿರ ಕೂತು ಪ್ರಾರ್ಥಿಸಿದರೆ, ಅವರಲ್ಲಿ ಒಬ್ಬನಿಗೆ ಕೊರೋನಾ ಇದ್ದರೂ ಉಳಿದವರಿಗೆ ಹಬ್ಬಬಹುದು ಎಂಬ ಸಣ್ಣ ಸಾಮಾನ್ಯ ಜ್ಞಾನವೂ ಅವರಿಗೆ ಇರಲಿಲ್ಲ. ಅಥವಾ ಮಾಹಿತಿಯ ಕೊರತೆ ಇತ್ತು. 

ಕೊರೋನಾ ಮಹಾಮಾರಿ ಓಡಿಸಲು ಶೃಂಗೇರಿ ಶ್ರೀಗಳಿಂದ ದೇವಿ ಸ್ತೋತ್ರ 

ಇದು ತಿಳಿವಳಿಕೆ ಕಡಿಮೆ ಇರುವವರು ಸಮಸ್ಯೆ ಎನ್ನೋಣ. ಆದರೆ ಎಲ್ಲ ತಿಳಿದವರೂ ಅನೇಕ ಕಿತಾಪತಿ, ಕಿಡಿಗೇಡಿತನ ಮಾಡಿ ಕೊರೊನಾ ಹಬ್ಬಲು ಕಾರಣ ಆಗಿಬಿಡುತ್ತಿದ್ದಾರೆ. ಉದಾಹರಣೆಗೆ, ಕೇರಳದ ಕೊಲ್ಲಂ ಎಂಬಲ್ಲಿನ ಸಬ್‌ ಕಲೆಕ್ಟರ್‌, ಜವಾಬ್ದಾರಿಯುತ ಸರಕಾರಿ ಹುದ್ದೆಯಲ್ಲಿರುವ ವ್ಯಕ್ತಿ, ಐಎಎಸ್‌ ಆಫೀಸರ್‌ನನ್ನು ಇತ್ತೀಚೆಗೆ ವಿದೇಶ ಪ್ರಯಾಣ ಮಾಡಿ ಬಂದ ಕಾರಣ ಆತನ ಮನೆಯಲ್ಲಿ ಹದಿನೈದು ದಿನಗಳ ಕ್ವಾರಂಟೈನ್‌ನಲ್ಲಿ ಇಡಲಾಗಿತ್ತು. ಆದರೆ ಆತ ಅದನ್ನು ತಪ್ಪಿಸಿಕೊಂಡು ಉತ್ತರಪ್ರದೇಶದ ತನ್ನ ಮನೆಗೆ ಪರಾರಿಯಾಗಿದ್ದಾನೆ. ಗ ಆತನ ಮೇಲೆ ಕೇಸು ದಾಖಲಾಗಿದ್ದು, ಪೊಲೀಸರು ಹುಡುಕಾಡುತ್ತಿದ್ದಾರೆ. ಹೆಡ್ಡರಿಗೆ ಬುದ್ಧಿ ಹೇಳಬಹುದು. ತಾನೇ ಸರಕಾರದ ಪರ ನಿಂತು, ಲಾಕ್‌ಡೌನ್‌ ಮಾಡಿಸಬೇಕಾದ ಐಎಎಸ್‌ ಆಫೀಸರ್ ಅದನ್ನು ಉಲ್ಲಂಘಿಸಿದರೆ ಏನು ಹೇಳುವುದು?

ಇಂಥಾ ಕಷ್ಟದ ಟೈಮ್‌ನಲ್ಲೂ ಅದೃಷ್ಟವಿರುವ ಐದು ರಾಶಿಗಳು 

ಇದನ್ನೇ ಕರ್ನಾಟಕ ಸೇರಿದಂತೆ ಅನೇಕ ರಾಜ್ಯಗಳಲ್ಲಿ ನೋಡಬಹುದು. ವಿದೇಶ ಪ್ರಯಾಣ ಮಾಡಿ ಬಂದ ಅನೇಕರನ್ನು ಕನಿಷ್ಠ ಎರಡು ವಾರ ಮನೆಯಲ್ಲಿರಿ ಎಂದು ಹೇಳಲಾಗಿತ್ತು. ಆದರೆ ಈ ದಿವ್ಯಾತ್ಮರು, ತಾವು ಎಲ್ಲ ರೋಗಗಳಿಗೂ ಅತೀತರಾದವರು ಎಂದು ಭಾವಿಸಿದವರು, ಎರಡೇ ದಿನದಲ್ಲಿ ಮನೆಯಿಂದ ಹೊರಬಿದ್ದು ಓಡಾಡತೊಡಗಿದರು. ಇದನ್ನು ಕಂಡು ಸರಕಾರವೇ, ನಂತರ ಬಂದವರಿಗೆ ಕೈಗಳಿಗೆ ಸೀಲು ಹಾಕಲಾರಂಭಿಸಿತು, ನಂತರೂ ಕೆಲವರು ಹೊರಗಡೆ ಓಡಾಡಿದರು. ಅಂತವರನ್ನು ಸಾರ್ವಜನಿಕರು ಹಿಡಿದು ಪೊಲೀಸರಿಗೆ ಕೊಡಬೇಕಾಯಿತು. ಊರಿಗೇ ರೋಗ ಬಂದರೂ ತಮಗೇನೂ ಆಗದು ಎಂಬ ಉಡಾಫೆಯ ಜೊತೆಗೆ, ತನಗೆ ರೋಗ ಬಂದರೆ ತಾನು ಊರಿಗೆಲ್ಲ ಹಬ್ಬಿಸಿಬಿಡಬೇಕು ಎಂದು ದುಷ್ಟತನವೂ ಇವರಲ್ಲಿ ಇರುವಂತಿದೆ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಇವನ್ನೆಲ್ಲಾ ಸ್ಟೀಲ್ ಪಾತ್ರೆಯಲ್ಲಿ ಹಾಕಿಡಬೇಡಿ.. ರುಚಿ, ಪರಿಮಳ ಇರಲ್ಲ, ಆರೋಗ್ಯನೂ ಹಾಳಾಗುತ್ತೆ!
Foods that Block Arteries: ನೀವು ಪ್ರತಿದಿನ ಸೇವಿಸೋ ಈ ಆಹಾರಗಳೇ ಹೃದಯಾಘಾತಕ್ಕೆ ಕಾರಣವಾಗಬಹುದು ಎಚ್ಚರ