ಯೋನಿಯಲ್ಲಿ ಊತ, ಇರಬಹುದು ಕಾರಣಗಳು ನೂರು, ನಿರ್ಲಕ್ಷ್ಯ ಮಾತ್ರ ಬೇಡ!

By Suvarna News  |  First Published Mar 3, 2024, 12:46 PM IST

ಸೋಂಕು ಸೇರಿ ಹಲವು ಕಾರಣಗಳಿಂದ ಕಾಣಿಸಿಕೊಳ್ಳಬಹುದಾದ ಯೋನಿ ಊತಕ್ಕೆ ತಕ್ಷಣವೇ ವೈದ್ಯರನ್ನು ಸಂಪರ್ಕಿಸಬೇಕು. ಇಗ್ನೋರ್ ಮಾಡಿದರೆ ವಿಪರೀತ ಅನುಭವಿಸಬೇಕಾಗಬಹುದು. 
 


ಪಿರಿಯಿಡ್ಸ್ ಟೈಮಲ್ಲಿ ಕೆಲವರಿಗೆ ಮತ್ತೆ ಕೆಲವರಿಗೆ ಲೈಂಗಿಕ ಕ್ರಿಯೆ ನಂತರ ಒಟ್ಟಿನಲ್ಲಿ ಯೋನಿಯಲ್ಲಿ ಆಗೊಮ್ಮೆ ಈಗೊಮ್ಮೆ ಊತ ಕಾಣಿಸಿಕೊಳ್ಳುವುದು ಕಾಮನ್. ಒಂದೆರಡು ದಿನಗಳಿದ್ದರೆ ಹೋದರೆ ಓಕೆ, ಆದರೆ ಪದೆ ಪದೇ ಇದು ಕಾಣಿಸಿಕೊಳ್ಳುತ್ತಿದ್ದರೆ ಯಾವುದೇ ಕಾರಣಕ್ಕೂ ಇಗ್ನೋರ್ ಮಾಡಬಾರದು. ಮುಂದೆ ಇದು ಮಾರಾಣಾಂತಿಕವಾಗಬಹುದು. 

ಸಾಮಾನ್ಯವಾಗಿ ಯೋನಿ ಊತಕ್ಕೆ ಈಸ್ಟ್ ಸೋಂಕು ಎಂದೇ ಹೇಳುತ್ತಾರೆ. ಇದೂ ಒಂದು ಯೋನಿ ಊತಕ್ಕೆ ಕಾರಣವಾಗುವುದು ಹೌದಾದರೂ ಎಲ್ಲ ಟೈಮಲ್ಲೂ ಇದೇ ಕಾರಣವಲ್ಲ. ಅದರಲ್ಲಿಯೂ ಲೈಂಗಿಕ ಕ್ರಿಯೆ ನಂತರ ಈ ನೋವು ಕಾಣಿಸಿಕೊಂಡರೆ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಬೇಕು. ಲೈಂಗಿಕ ಪ್ರಚೋದನೆ ವೇಳೆ ಕೆಳಮುಖ ರಕ್ತದ ಹರಿವು ಹೆಚ್ಚಾಗಿರುತ್ತದೆ. ಇದರಿಂದಲೂ ಯೋನಿಯೂತ ಕಾಣಿಸಿಕೊಳ್ಳಬಹುದು. ಇದರ ಜೊತೆ ತುರಿಕೆಯೂ ಕಾಣಿಸಿಕೊಳ್ಳಬಹುದು. ಒರಟಾದ ಲೈಂಗಿಕ ಕ್ರಿಯೆಯೂ ಈ ನೋವಿಗೆ ಪ್ರಮುಖ ಕಾರಣಗಳಲ್ಲೊಂದು. 

Tap to resize

Latest Videos

ಯೋನಿ ಊತದಿಂದ ಬಳಲುತ್ತಿರುವ ಜನರು ಸಾಮಾನ್ಯವಾಗಿ ಇದನ್ನು ಯೀಸ್ಟ್ ಸೋಂಕಿನ ಕಾರಣದಿಂದಾಗಿ ಹೀಗಾಗಿರಬಹುದೆಂದು ಪರಿಗಣಿಸುತ್ತಾರೆ. ಆದರೆ ವಾಸ್ತವವಾಗಿ ಯೋನಿ ಊತದ ಹಲವು ಕಾರಣಗಳಲ್ಲಿ ಇವು ಒಂದಾಗಿದೆ. ಇದನ್ನು ತುಂಬಾ ಸಾಮಾನ್ಯವೆಂದು ಪರಿಗಣಿಸುವ ತಪ್ಪನ್ನು ಮಾಡಬೇಡಿ. ಇದಕ್ಕಾಗಿ ತಕ್ಷಣ ನಿಮ್ಮ ವೈದ್ಯರ ಸಲಹೆ ಪಡೆಯುವುದು ಮುಖ್ಯ.

Women Health: ಬಲವಂತದ ಸಂಭೋಗ ಬಿಟ್ಟರೆ ಮತ್ತೇನು ಯೋನಿ ಊತಕ್ಕೆ ಆಗಬಹುದು ಕಾರಣ?

ಇನ್ನೂ ಏನೇನು ಕಾರಣಗಳಿರುತ್ತೆ: 
ಬಲವಂತದ ಸಂಭೋಗ (Forcefull Intercourse): ಬಲವಂತವಾಗಿ ಅಥವಾ ತಪ್ಪಾಗಿ ಲೈಂಗಿಕ ಕ್ರಿಯೆ ನಡೆಸಿದರೆ, ಸೂಕ್ಷ್ಮವಾಗಿರುವ ಯೋನಿ ಅಂಗಾಂಶಗಳಲ್ಲಿ ಊತ ಕಾಣಿಸಿಕೊಳ್ಳುತ್ತದೆ. ಯೋನಿ ಶುಷ್ಕವಾಗಿರುವಾಗ ಲೈಂಗಿಕ ಕ್ರಿಯೆ, ಒತ್ತಾಯಪೂರ್ವಕ ಲೈಂಗಿಕ ಕ್ರಿಯೆ ನಡೆಸಿದಾಗಲೂ ಯೋನಿ ಊತ ಕಾಣಿಸಿಕೊಳ್ಳುತ್ತದೆ. ಲೈಂಗಿಕ ಆಟಿಕೆಗಳ ಬಳಕೆಯೂ ಇದಕ್ಕೆ ಕಾರಣವಾಗಬಹುದು. ಸೂಕ್ತ ಕ್ರೀಮ್ ಬಳಕೆಯಿಂದ ಈ ನೋವು, ಊತವನ್ನು ತಡೆಯಲುಟ್ರೈ ಮಾಡಬಹುದು. 

ಅಲರ್ಜಿ (Allergy): ಯೋನಿಯನ್ನು ಸ್ವಚ್ಛವಾಗಿಡಬೇಕು. ಬಳಸುವ ಕ್ರೀಮ್ ವೈದ್ಯರ ಅನುಮತಿ ಇಲ್ಲದೇ ಬಳಸಬಾರದು. ಪರಿಮಳ ಇರೋ ಸೋಪ್‌ ಬಳಕೆಯೂ ಅಪಾಯಕಾರಿ. ನಿಟರಿ ಪ್ಯಾಡ್ ಅನ್ನು ಆಗಾಗ ಬದಲಿಸದೇ ಇರುವುದು, ಟ್ಯಾಂಪೂನ್ ಅನ್ನು ಹೇಗೇಗೋ ಬಳಸುವುದು, ಚರ್ಮದ ಕ್ರೀಮ್‌ಗಳು ಮತ್ತು ಲೋಷನ್‌ ಬಳಕೆ, ಲೂಬ್ರಿಕಂಟ್‌, ಲ್ಯಾಟೆಕ್ಸ್ ಕಾಂಡೋಮ್ಸ್, ಗರ್ಭನಿರೋಧಕಗಳು ಸೇರಿ ಅರ್ಲಜಿಯಾಗುವ ವಸ್ತುಗಳ ಬಳಕೆಯಿಂದ ಯೋನಿ ಊದಿಕೊಳ್ಳಬಹುದು. ಇದಕ್ಕೆ ಸೌಮ್ಯವಾದ, ಉರಿಯೂತ ತಗ್ಗಿಸುವ ಸ್ಟೀರಾಯ್ಡ್ ಕ್ರೀಮ್ ಬಳಸಬೇಕು. ನಿಮಗೆ ಯಾವುದು ಅಲರ್ಜಿ ಎಂಬುದನ್ನು ಪತ್ತೆ ಮಾಡಿಕೊಳ್ಳಬೇಕು. ರಾಸಾಯನಿಕಯುಕ್ತ ಸೋಪ್ ಬಳಸಬೇಡಿ. ನಿಮಗೆ ಹೊಂದಿಕೊಳ್ಳುವಂಥ ಪ್ಯಾಡ್ಸ್ ಬಳಸಿದರೆ ಒಳಿತು. 

ಲೈಂಗಿಕ ಸೋಂಕು (Sexual Infection): ಲೈಂಗಿಕ ಸೋಂಕುಗಳು ಯೋನಿ ಕಿರಿಕಿರಿ ಮತ್ತು ಉರಿಯೂತವನ್ನು ಉಂಟು ಮಾಡುತ್ತದೆ. ಇವು ದದ್ದು, ಗುಳ್ಳೆ ಅಥವಾ ಹುಣ್ಣುಗಳನ್ನು ಉಂಟುಮಾಡುತ್ತವೆ. ಇದ್ರಿಂದ ಯೋನಿ ನೋವು ಕಾಣಿಸಿಕೊಳ್ಳುತ್ತದೆ. ಮೂತ್ರ ವಿಸರ್ಜಿಸುವಾಗಲೂ ಸಂಕಟವಾಗುವಷ್ಟು ನೋವು ತರಿಸುತ್ತದೆ. ಸಂಭೋಗದ (Sexual Intercourse) ಟೈಮಲ್ಲೂ ಕಿರಿಕಿರಿ ಅನುಭವಿಸಬೇಕಾಗುತ್ತದೆ.  

Vaginal Swelling : ಮುಜುಗರ ತರಿಸುವ ಯೋನಿಯ ಊತ, ತುರಿಕೆಗೆ ಇವು ಕಾರಣ

ಗರ್ಭಧಾರಣೆ : ಪ್ರೆಗ್ನೆನ್ಸಿ ಟೈಮಲ್ಲೂ ಅನೇಕರಿಗೆ ಯೋನಿ ಊತ ಕಾಣಿಸಿಕೊಳ್ಳಬಹುದು. ಬೆಳೆಯುತ್ತಿರುವ ಭ್ರೂಣಕ್ಕೆ ಅಗತ್ಯವಿರುವುದರಿಂದ ಗರ್ಭಾಶಯಕ್ಕೆ ರಕ್ತದ ಹರಿವು ಹೆಚ್ಚಾಗುತ್ತದೆ. ಇದು ಯೋನಿ ಊತಕ್ಕೆ ಆಗಬಹುದು ಕಾರಣ. ಊತ ಮತ್ತು ನೋವು ಕಡಿಮೆ ಮಾಡಲು ಓವರ್-ದಿ-ಕೌಂಟರ್ ನಾನ್ ಸ್ಟೆರೊಯ್ಡೆಲ್ ಉರಿಯೂತದ ಔಷಧ ಬಳಸಬಹುದು. ಕೋಲ್ಡ್ ಕಂಪ್ರೆಸ್ ಸಹ ಸಹಾಯಕಾರಿ.

click me!