ರಕ್ತ ಕಡಿಮೆಯಾಗಿ ಸುಸ್ತಾ? ಆಹಾರದಲ್ಲಾಗಲಿ ಸ್ವಲ್ಪ ಬದಲಾವಣೆ!

By Suvarna NewsFirst Published Jul 21, 2022, 4:30 PM IST
Highlights

ದೇಹದಲ್ಲಿ ಆಕ್ಸಿಜನ್ ಅಗತ್ಯ ಪ್ರಮಾಣದಲ್ಲಿ ಸಿಗಬೇಕಾದರೆ ಅದಕ್ಕೆ ಹಿಮೋಗ್ಲೋಬಿನ್ ಮಟ್ಟ ಸರಿಯಾಗಿರಬೇಕು. ಇಂದಿನ ಬಹುತೇಕರಲ್ಲಿ ಕಡಿಮೆ ಹಿಮೋಗ್ಲೋಬಿನ್‌ನಿಂದ ಬಳಲುತ್ತಿದ್ದು, ಆರೋಗ್ಯದ ಸಮಸ್ಯೆಗೆ ಕಾರಣವಾಗುತ್ತಿದೆ. ಹಾಗಾಗಿ ದೇಹದಲ್ಲಿ ಹಿಮೋಗ್ಲೋಬಿನ್ ಮಟ್ಟ ಸರಿಯಾಗಿ ಕಾಯ್ದುಕೊಳ್ಳಲು ಈ ಆಹಾರಗಳು ಸಹಕಾರಿಯಾಗಿವೆ. ಈ ಬಗ್ಗೆ ಮಾಹಿತಿ ಇಲ್ಲಿದೆ.

ನಮ್ಮ ದೇಹದಲ್ಲಿ ಹಿಮೋಗ್ಲೋಬಿನ್ ಪ್ರಮುಖ ಪಾತ್ರ ವಹಿಸುತ್ತದೆ. ಕೆಂಪು ರಕ್ತ ಕಣಗಳಲ್ಲಿನ ಪ್ರೋಟೀನ್ ಇದಾಗಿದ್ದು, ಇಡೀ ದೇಹದಲ್ಲಿ ಆಮ್ಲಜನಕವನ್ನು ಒದಗಿಸುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ಜನರು ಮೂತ್ರಪಿಂಡದ ಕಾಯಿಲೆ, ಅವಧಿ, ಗರ್ಭಧಾರಣೆ, ಪೋಷಕಾಂಶಗಳ ಕೊರತೆ ಮತ್ತು ನಾನಾ ಕ್ಯಾನ್ಸರ್‌ಗಳಿಂದ ಕಡಿಮೆ ಹಿಮೋಗ್ಲೋಬಿನ್ ಮಟ್ಟವನ್ನು ಎದುರಿಸುತ್ತಿದ್ದಾರೆ. 
ಕಡಿಮೆ ಹಿಮೋಗ್ಲೋಬಿನ್ ಸಮಸ್ಯೆಯನ್ನು ಸರಿಯಾದ ರೀತಿಯಲ್ಲಿ ಪರಿಹರಿಸಿಕೊಳ್ಳದಿದ್ದಲ್ಲಿ ಅನಿಮಿಯಾಗೆ ತಿರುಗುವ ಸಾಧ್ಯತೆಗಳು ಹೆಚ್ಚು. ಹಿಮೋಗ್ಲೋಬಿನ್ ಮಟ್ಟವನ್ನು ಸರಿಯಾಗಿ ಕಾಯ್ದುಕೊಳ್ಳಲು ಕೆಲ ಆಹಾರಗಳಿದ್ದು, ಅದನ್ನು ಸರಿಯಾದ ರೀತಿಯಲ್ಲಿ ಸೇವಿಸಿದಲ್ಲಿ ಈ ಸಮಸ್ಯೆಯಿಂದ ಹೊರ ಬರಬಹುದಾಗಿದೆ. ಹಾಗಾದರೆ ಹಿಮೋಗ್ಲೋಬಿನ್ ಸರಿಯಾಗಿ ಕಾಯ್ದುಕೊಳ್ಳಲು ಯಾವ ಆಹಾರಗಳನ್ನು ಸೇವಿಸಬೇಕು  ಇಲ್ಲಿದೆ ಅದರ ಮಾಹಿತಿ.

ಕಲ್ಲಂಗಡಿ
ಪ್ರತೀ ದಿನ ಕಲ್ಲಂಗಡಿ ಹಣ್ಣು ತಿನ್ನುವುದರಿಂದ ದೇಹ ನಿರ್ಜಲೀಕರಣ(Dehydrate) ಆಗುವುದಿಲ್ಲ. ಅಲ್ಲದೆ ದೇಹದಲ್ಲಿ ಹಿಮೋಗ್ಲೋಬಿನ್ ಹೆಚ್ಚಿಸುತ್ತದೆ. ಈ ಹಣ್ಣಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕಬ್ಬಿಣಾಂಶ ಮತ್ತು Vitamin C ಇರುವುದರಿಂದ ದೇಹದಲ್ಲಿ ಬ್ಲಡ್ ಕೌಂಟ್ ಹೆಚ್ಚಿಸುತ್ತದೆ. 

Health Tips: ದೇಹದಲ್ಲಿ ಈ ವಿಷಯದ ಕೊರತೆ ಉಂಟಾದರೆ ಅದನ್ನು ನೆಗ್ಲೆಕ್ಟ್ ಮಾಡ್ಬೇಡಿ

ಫೋಲಿಕ್ ಆಸಿಡ್ (Folic Acid)
ಫೋಲಿಕ್ ಆಸಿಡ್ ಇದು ಬಿ ಕಾಂಪ್ಲೆಕ್ಸ್ ವಿಟಮಿನ್ ಆಗಿದ್ದು, ಕೆಂಪು ರಕ್ತಕಣ ಹೆಚ್ಚಿಸುವಂತೆ ಮಾಡುತ್ತದೆ. ದೇಹದಲ್ಲಿ ಫೋಲಿಕ್ ಆಸಿಡ್ ಕಡಿಮೆ ಇದ್ದರೂ ಹಿಮೋಗ್ಲೋಬಿನ್ ಕಡಿಮೆ ಆಗುತ್ತದೆ. ಹಾಗಾಗಿ ಹಸಿರೆಲೆ ಸೊಪ್ಪು ತರಕಾರಿಗಳು, ಕಾಳು ಬೀನ್ಸ್, ಕಡಲೇಬೀಜ, ಬಾಳೆಹಣ್ಣು, ಬ್ರೊಕೋಲಿಯಂತಹ ಆಹಾರ ಸೇವಿಸುವುದರಿಂದ ಇಂತಹ ಸಮಸ್ಯೆಯಿಂದ ದೂರ ಇರಬಹುದು.

ಹರಿವೆ ಸೊಪ್ಪು
ಹಸಿರು ಸೊಪ್ಪು ತಿನ್ನುವುದರಿಂದ ಆರೋಗ್ಯಕ್ಕೆ ಬಹಳ ಒಳ್ಳೆಯದು. ಅದರಲ್ಲೂ ಹಿಮೋಗ್ಲೋಬಿನ್ ಹೆಚ್ಚಿಸಿಕೊಳ್ಳಲು ಇದು ಬೆಸ್ಟ್ ಮೆಡಿಸಿನ್. ಏಕೆಂದರೆ ಇದರಲ್ಲಿ ಹೇರಳವಾದ ಕಬ್ಬಿಣಾಂಶವಿದ್ದು, ದೇಹದಲ್ಲಿ ಕೆಂಪು ರಕ್ತ ಕಣಗಳನ್ನು ಹೆಚ್ಚಿಸಲು ಉತ್ತೇಜಿಸುತ್ತದೆ.

ಬೀಟ್ರೂಟ್ (Beet Root)
ದಿನ ನಿತ್ಯ ಬೀಟ್ರೂಟ್ ಜ್ಯೂಸ್ ಕುಡಿದರೆ ಬಹಳ ಒಳ್ಳೆಯದು. ಇದರಲ್ಲಿ ಕೇವಲ ಕಬ್ಬಿಣಾಂಶವಲ್ಲದೆ ರಕ್ತಕ್ಕೆ ಅಗತ್ಯವಿರುವ ಫೋಲಿಕ್ ಆಸಿಡ್, ಪೊಟ್ಯಾಶಿಯಂ, ಫೈಬರ್ ಸಹ ಹೇರಳವಾಗಿದೆ. ಹಾಗಾಗಿ ಹಿಮೋಗ್ಲೋಬಿನ್ ಕಡಿಮೆ ಇರುವವರಿಗೆ ಬೀಟ್ರೂಟ್ ಜ್ಯೂಸ್ ಕುಡಿಯಲು ಹೇಳಲಾಗುತ್ತದೆ.

ದಾಳಿಂಬೆ (Pomogranate) 
ದಾಳಿಂಬೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕ್ಯಾಲ್ಶಿಯಂ, ಐರನ್, ಪ್ರೋಟೀನ್, ಕಾರ್ಬೋಹೈಡ್ರೇಟ್, ಫೈಬರ್ ಅಂಶವಿದೆ. ಹಿಮೋಗ್ಲೋಬಿನ್ ಹೆಚ್ಚಿಸಿಕೊಳ್ಳಲು ಇದು ಬೆಸ್ಟ್ ಫುಡ್ ಆಗಿದ್ದು ಪ್ರತೀ ದಿನ ಜ್ಯೂಸ್ ಮಾಡಿ ಕುಡಿಯುವುದರಿಂದ ಉತ್ತಮ ಫಲಿತಾಂಶ ಪಡೆಯಬಹುದಾಗಿದೆ.

ಕಾಳುಗಳು
ಮಸೂರ, ಶೇಂಗಾ(ಕಡಲೇಬೀಜ), ಬಟಾಣಿ, ಬೀನ್ಸ್ ಈ ರೀತಿಯ ಕಾಳುಗಳಲ್ಲಿ ಐರನ್ ಹಾಗೂ ಫೋಲಿಕ್ ಆಸಿಡ್ ಹೆಚ್ಚಿನ ಪ್ರಮಾಣದಲ್ಲಿರುತ್ತವೆ. ಪ್ರತೀ ದಿನ ಈ ರೀತಿಯ ಕಾಳುಗಳನ್ನು ಸೇವಿಸುವುದರಿಂದ ಕೆಂಪು ರಕ್ತ ಕಣಗಳ ಉತ್ಪನ್ನ ಹೆಚ್ಚುತ್ತದೆ. 

ಒಣ ದ್ರಾಕ್ಷಿ
ಒಣದ್ರಾಕ್ಷಿಯಲ್ಲಿ ಐರನ್ ಹಾಗೂ ಕಾಪರ್(Copper) ಅಂಶ ಹೇರಳವಾಗಿದ್ದು, ದೇಹದಲ್ಲಿ ಕೆಂಪು ರಕ್ತಕಣಗಳನ್ನು ಹೆಚ್ಚಿಸುವಲ್ಲಿ ಸಹಾಯ ಮಾಡುತ್ತದೆ. ಪ್ರತೀ ರಾತ್ರಿ 8 ಒಣ ದ್ರಾಕ್ಷಿ ನೆನೆಸಿಟ್ಟು, ಬೆಳಗ್ಗೆ ಆ ದ್ರಾಕ್ಷಿಯನ್ನು ನೀರಿನೊಂದಿಗೆ ಸೇವಿಸುವುದರಿಂದ ದೇಹದಲ್ಲಿ ಹಿಮೋಗ್ಲೋಬಿನ್ ಮಟ್ಟ ಹೆಚ್ಚುತ್ತದೆ.

ಕೊರೋನಾ ಮಧ್ಯೆ ಹೊಸ ರೋಗ, ನಾಲಗೆ ಬಣ್ಣ ಹಳದಿ!

ಡೇಟ್ಸ್ (Dates0
ಖರ್ಜೂರದಲ್ಲಿರುವ ಕಬ್ಬಿಣಾಂಶವು ಎರಿಥ್ರೋಸೈಟ್‌ಗಳ(Erythrocytes) ಸಂಖ್ಯೆಯನ್ನು ಹೆಚ್ಚಿಸಿ ಹಿಮೋಗ್ಲೋಬಿನ್ ಮಟ್ಟವನ್ನೂ ಹೆಚ್ಚಿಸುತ್ತದೆ. ಖರ್ಜೂರ ಒಂದರಲ್ಲೇ ದೇಹಕ್ಕೆ ಬೇಕಾದ ಕಬ್ಬಿಣ, Vitamin C, B, ಫೋಲಿಕ್ ಆಸಿಡ್ ಅಂಶವನ್ನು ಒಳಗೊಂಡಿದೆ. ಹಾಗಾಗಿ ಇದು ಕೆಂಪು ರಕ್ತ ಕಣಗಳ ರಚನೆಗೆ ಸಹಾಯ ಮಾಡುತ್ತದಲ್ಲದೆ ಅನಿಮಿಯಾ(Anemia) ಆಗುವುದನ್ನು ನಿಯಂತ್ರಿಸುತ್ತದೆ.

ಎಳ್ಳು
ಬಿಳಿ ಎಳ್ಳನ್ನು ಅರ್ಧ ಗಂಟೆ ನೆನೆಸಿ ನಂತರ ಅದನ್ನು ರುಬ್ಬಿ ಅದಕ್ಕೆ ಬೆಲ್ಲ, ಹಾಲು ಹಾಕಿಕೊಂಡು ಒಂದು ಲೋಟ ಕುಡಿಯುವುದರಿಂದ ಉತ್ತಮ ಆರೋಗ್ಯ ಕಾಯ್ದುಕೊಳ್ಳಬಹುದು. ಇದರಲ್ಲಿ ಪ್ರಮುಖ ನ್ಯೂಟ್ರೀಶನ್ ಅಂಶಗಳಾದ ಐರನ್, ಫೊಲೆಟ್, ಫ್ಲೆವೊನಾಯ್ಡ್, ಕಾಪರ್ ಅಂಶಗಳಿವೆ. ಹಾಗಾಗಿ ಇದು ಹಿಮೋಗ್ಲೋಬಿನ್ ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.
 

click me!