ಇವನ್ನು ತಿಂದರೆ ಬಾಯಿ ದುರ್ನಾತ ಬೀರೋದು ಗ್ಯಾರಂಟಿ

By Suvarna NewsFirst Published Apr 2, 2021, 12:58 PM IST
Highlights

ಬಾಯಿ ಸಿಕ್ಕಾಪಟ್ಟೆ ದುರ್ವಾಸನೆ ಬರುತ್ತಿದ್ದರೆ ಕಾರಣ ನಿಮ್ಮ ಆಹಾರದ ಆಯ್ಕೆ ಇರಬಹುದು | ಬಾಯಿ ದುರ್ನಾತ ಬೀರುವಂತೆ ಮಾಡುತ್ತೆ ನೀವು ಸೇವಿಸೋ ಈ ಕೆಲವು ಆಹಾರ 

ಬಾಯಿಯ ಆರೋಗ್ಯ ಕಾಪಾಡಿಕೊಳ್ಳುವುದು ಇಡೀ ದೇಹದ ಆರೊಗ್ಯ ಕಾಪಾಡಿಕೊಳ್ಳುವಷ್ಟೇ ಮುಖ್ಯವಾಗಿದೆ. ತಮ್ಮ ಬಾಯಿ ವಾಸನೆ ಬರುತ್ತಿದೆ ಎಂದು ತಮ್ಮಿಂದ ಯಾರಾದರೂ ದೂರ ಸರಿಯುವುದು ಯಾರಿಗೂ ಇಷ್ಟವಾಗಲ್ಲ. ಹಲವು  ಬಾರಿ ನಾವು ಸೇವಿಸುವ ಆಹಾರ ನಮ್ಮ ಬಾಯಿ ವಾಸನೆ ಬರುವುದಕ್ಕೆ ಕಾರಣವಾಗುತ್ತದೆ.

ಬಾಯಿ ವಾಸನೆಯಿಂದ ನಿಮ್ಮ ಇಡಿ ದಿನ ಹಾಳಾಗಬಹುದು ಇಲ್ಲದಿದ್ದರೆ ನಿಮ್ಮ ಸಂಬಂಧಗಳಲ್ಲೂ ತೊಡಕು ಬರಬಹುದು. ನಿಮ್ಮ ಕಾರ್ಯ ಕ್ಷೇತ್ರದಲ್ಲೂ ನಿಮಗೆ ತೊಂದರೆಯಾಗಬಹುದು. ಹಾಗಾಗಿ ಬಾಯಿ ವಾಸನೆ ಬರಿಸುವಂತಹ ಈ ಐದು ಆಹಾರಗಳನ್ನು ಅವಾಯ್ಡ್ ಮಾಡಿ. ನಿಮಗೂ ಬಾಯಿ ವಾಸನೆ ಸಮಸ್ಯೆ ಇದ್ದರೆ ಈ ಆಹಾರಗಳನ್ನು ಸೇವಿಸದಿರುವುದ ಒಳ್ಳೇದು.

ನೈಸರ್ಗಿಕವಾಗಿ ಬ್ರೆಸ್ಟ್ ಸೈಝ್ ಹೆಚ್ಚಿಸೋ ಆಹಾರಗಳಿವು..!

ಮಾಂಸ ಮತ್ತು ಮೀನು:

ನಮ್ಮ ಹೊಟ್ಟೆಯಲ್ಲಿರುವ ಉಪಯುಕ್ತ ಆಸಿಡ್ ಮತ್ತು ಬ್ಯಾಕ್ಟೀರಿಯಾಗಳು ಮಾಂಸ ಮತ್ತು ಮೀನಿನ ಪದಾರ್ಥಗಳನ್ನು ಅಮೈನೊ ಆಸಿಡ್ ಆಗಿ ಪರಿವರ್ತಿಸುತ್ತವೆ. ಈ ಪ್ರಕ್ರಿಯೆಯಲ್ಲಿ ನಮ್ಮ ಜಠರದಲ್ಲಿ ಅಮೋನಿಯಾ ಬಿಡುಗಡೆಯಾಗುತ್ತದೆ. ಈ ಅಮೋನಿಯಾ ದುರ್ವಾಸನೆಯನ್ನು ಹೊಂದಿದ್ದು ರಕ್ತದ ಮೂಲಕ ನಮ್ಮ ಶ್ವಾಸಕೋಶ ತಲುಪಿ ಬಾಯಿಯಿಂದ ಕೆಟ್ಟ ವಾಸನೆ ಬರುವಂತೆ ಮಾಡುತ್ತದೆ. ವಿಶೇಷವಾಗಿ ಮೀನಿನ ಪದಾರ್ಥಗಳನ್ನು ಸರಿಯಾದ ಮಸಾಲೆ ಪದಾರ್ಥಗಳನ್ನು ಹಾಕಿ ಬೇಯಿಸದೇ ಸೇವಿಸಿದರೆ ಬಾಯಿಯ ವಾಸನೆಯನ್ನು ಹೆಚ್ಚುತ್ತದೆ 

ಬೆಳ್ಳುಳ್ಳಿ:

ಬೆಳ್ಳುಳ್ಳಿಯಲ್ಲಿ ಅತಿ ಹೆಚ್ಚು ವಾಸನೆ ಹೊಂದಿರುವ ಸಲ್ಫರ್ ಅಧಿಕ ಪ್ರಮಾಣದಲ್ಲಿ ಇರುತ್ತದೆ. ಬೆಳ್ಳುಳ್ಳಿ ಸೇವಿಸುವುದರಿಂದ ಬಾಯಿಯಲ್ಲಿ ದುರ್ವಾಸನೆ ಬರುತ್ತದೆ. ಸಂಶೋಧನೆಯ ಪ್ರಕಾರ ಬೆಳ್ಳುಳ್ಳಿ ಸೇವನೆಯಿಂದ ಹೊಟ್ಟೆಯಲ್ಲಿ ಆಲಿ ಮಿಥೈಲ್ ಸಲ್ಫೈಡ್ ಎಂಬ ರಾಸಾಯನಿಕ ಬಿಡುಗಡೆಯಾಗುತ್ತದೆ. ಇದರಿಂದ ನಮ್ಮ ಬಾಯಿ ವಾಸನೆ ಬರುವ ಸಾಧ್ಯತೆ ಇರುತ್ತದೆ.

ಈರುಳ್ಳಿ

ಈರುಳ್ಳಿ ಮತ್ತು ಬೆಳ್ಳುಳ್ಳಿ ಒಂದೇ ಜಾತಿಯ ಹೂವಿನ ಸಸ್ಯಗಳ ಕುಟುಂಬಕ್ಕೆ ಸೇರಿವೆ. ಬೆಳ್ಳುಳ್ಳಿ ರೀತಿಯಲ್ಲಿ ಈರುಳ್ಳಿಯಲ್ಲಿ ಕೂಡ ಸಲ್ಫರ್ ಪ್ರಮಾಣ ಇರುತ್ತದೆ. ಹಾಗಾಗಿ ಹಸಿ ಈರುಳ್ಳಿಯನ್ನು ತಿನ್ನುವುದರಿಂದ ಬಾಯಿ ವಾಸನೆ ಬರುತ್ತದೆ. ಈರುಳ್ಳಿಯನ್ನು ಬೇಯಿಸಿದಾಗ ಅದರ ವಾಸನೆ ಮತ್ತು ರುಚಿಯನ್ನು ಕಡಿಮೆ ಮಾಡಬಹುದು. ನೀರಿನಲ್ಲಿ ಮುಳುಗಿಸಿ ಇಡುವುದರಿಂದ ಅಥವಾ ವಿನೆಗರ್, ಮಸಾಲೆ ಪದಾರ್ಥಗಳನ್ನು ಬಳಸುವುದರಿಂದ ಈರುಳ್ಳಿ ವಾಸನೆ ಕಡಿಮೆ ಮಾಡಬಹುದು.

ಡೈರಿ ಪದಾರ್ಥಗಳು

ಹಾಲು ಮತ್ತು ಚೀಸ್ ಸೇವಿಸುವುದರಿಂದ ಕೂಡ ಬಾಯಿ ವಾಸನೆ ಬರಬಹುದು. ಡೈರಿ ಪದಾರ್ಥಗಳಲ್ಲಿರುವ ಅಮೈನೊ ಆಸಿಡ್‌ನಿಂದ ನಮ್ಮ ವಸಡುಗಳಲ್ಲಿರುವ ಬ್ಯಾಕ್ಟಿರೀಯಾಗಳು ಒಡೆಯುತ್ತವೆ. ಈ ಪ್ರಕ್ರಿಯೆಯಿಂದ ಸಲ್ಫರ್ ಬಿಡುಗಡೆಯಾಗುತ್ತದೆ. ಇದರಿಂದ ಬಾಯಿ ವಾಸನೆ ಬರುವ ಸಾಧ್ಯತೆ ಇರುತ್ತದೆ.

ಕಾಫಿ

ಬಹಳ ಜನ ತಾವು ಆಕ್ಟಿವ್ ಆಗಿರಬೇಕೆಂದು ಪದೇ ಪದೇ ಕಾಫಿ ಕುಡಿಯುವ ಹವ್ಯಾಸ ಬೆಳೆಸಿಕೊಂಡಿರುತ್ತಾರೆ. ಪುಡಿ ಮಾಡಿರುವ ಕಾಫಿ ಬೀಜಗಳು ವಾಸನೆಯನ್ನು ಹೊರಸೂಸುತ್ತವೆ. ಕಾಫಿ ಕೂಡ ಸಲ್ಫರನ್ನು ಹೊಂದಿರುತ್ತದೆ. ಕಾಫಿ ಕೆಫೆನ್ ಕೂಡ ಹೊಂದಿರುತ್ತದೆ. ಇದು ನಮ್ಮ ಬಾಯಿಯಲ್ಲಿರುಬ ಜೊಲ್ಲನ್ನು ಒಣಗಿಸುತ್ತದೆ. ಇದರಿಂದ ಬಾಯಿಯಲ್ಲಿ ಕೆಟ್ಟ ಬ್ಯಾಕ್ಟಿರೀಯಾಗಳ ಮೂಲಕ ಬಾಯಿ ವಾಸನೆ ಬರುವ ಸಾಧ್ಯತೆ ಇರುತ್ತದೆ.

click me!