ಗಂಟಲಲ್ಲಿ ಸಿಕ್ಕಾಕಿಕೊಂಡ ಮೀನಿನ ಮುಳ್ಳು! ಭಯಬಿಟ್ಟು ಇದನ್ನ ಟ್ರೈ ಮಾಡಿ, ನಿಮಿಷದಲ್ಲಿ ಸಿಗುತ್ತೆ ಪರಿಹಾರ

Published : Jul 20, 2026, 07:06 PM IST
Fish bone stuck in throat

ಸಾರಾಂಶ

Fish bone stuck in throat: ಊಟ ಮಾಡುವಾಗ ಮೀನಿನ ಮುಳ್ಳು ಗಂಟಲಿನಲ್ಲಿ ಸಿಲುಕಿಕೊಂಡರೆ, ಗಾಬರಿಯಾಗುವ ಬದಲು ಸೂಕ್ತ ಕ್ರಮ ತೆಗೆದುಕೊಳ್ಳುವುದು ಮುಖ್ಯ. ಗಂಟಲಿನಲ್ಲಿ ಮೀನಿನ ಮುಳ್ಳು ಸಿಲುಕಿದಾಗ ಮಾಡಬೇಕಾದ ತಕ್ಷಣದ ಉಪಾಯಗಳು, ತಡೆಗಟ್ಟುವಿಕೆ ಮತ್ತು ವೈದ್ಯರನ್ನು ಯಾವಾಗ ಭೇಟಿ ಮಾಡಬೇಕು ಎಂಬುದರ ವಿವರ ಇಲ್ಲಿದೆ.

ಗಂಟಲಿನಲ್ಲಿ ಮೀನಿನ ಮುಳ್ಳು ಸಿಲುಕಿಕೊಂಡಿದೆಯೇ?

ಮೀನು ತಿನ್ನುವುದು ಆರೋಗ್ಯಕ್ಕೆ ಪ್ರಯೋಜನಕಾರಿ, ಆದರೆ ಕೆಲವೊಮ್ಮೆ ಅದರ ಸೂಕ್ಷ್ಮ ಮುಳ್ಳು ಗಂಟಲಿನಲ್ಲಿ ಸಿಲುಕಿಕೊಳ್ಳುತ್ತವೆ. ಈ ಸಂದರ್ಭದಲ್ಲಿ ಹಲವಾರು ಸಮಸ್ಯೆಗಳು ಉಂಟಾಗುತ್ತವೆ. ಆದರೆ ಮೀನಿನ ಮುಳ್ಳು ಗಂಟಲಲ್ಲಿ ಸಿಕ್ಕಿಕೊಂಡಾಗ ಭಯ ಪಡುವ ಬದಲು, ಶಾಂತವಾಗಿ ಕುಳಿತು, ಕೆಲವೊಂದು ಪರಿಹಾರಗಳನ್ನು ಮಾಡಿದರೆ ನಿಮಿಷದಲ್ಲಿ ಪರಿಹಾರ ಸಿಗುತ್ತೆ. ನಿಮ್ಮ ಗಂಟಲಿನಲ್ಲಿ ಮುಳ್ಳು ಸಿಲುಕಿಕೊಂಡಾಗ, ಶಾಂತವಾಗಿರುವುದು ತುಂಬಾನೆ ಮುಖ್ಯ. ಭಯದಿಂದಾಗಿ ನೀವು ಪದೇ ಪದೇ ಏನಾದರು ತಿನ್ನುತ್ತಾ, ಮುಳ್ಳನ್ನು ತಳ್ಳಲು ಪ್ರಯತ್ನಿಸುವಿರಿ, ಇದರಿಂದ ಹೆಚ್ಚಿನ ಸಮಸ್ಯೆ ಆಗಬಹುದು. ಅದರ ಬದಲಾಗಿ ನೀರು ಕುಡಿಯಿರಿ. ಶಾಂತವಾಗಿರಿ ಹಾಗೂ ಈ ಕೆಳಗೆ ನೀಡಿದಂತಹ ಪರಿಹಾರ ಟ್ರೈ ಮಾಡಿ.

ಅನ್ನದ ಉಂಡೆ

ಇದು ನಿಮ್ಮ ಗಂಟಲಿನಿಂದ ಮುಳ್ಳನ್ನು ತೆಗೆದುಹಾಕಲು ಇದು ಬೆಸ್ಟ್ ಪರಿಹಾರ ಸ್ವಲ್ಪ ಪ್ರಮಾಣದ ಅನ್ನವನ್ನು ತೆಗೆದುಕೊಂಡು ಅದಕ್ಕೆ ನೀರು ಸೇರಿಸದೆ ಸಣ್ಣ, ಒಣಗಿದ ಉಂಡೆ ಮಾಡಿ. ಅದನ್ನು ಗಂಟಲಿಗೆ ಹಾಕಿ ಅಗಿಯದೆ ಅದನ್ನು ನುಂಗಿ. ಅನ್ನದ ಭಾರವಾದ ಮತ್ತು ಜಿಗುಟಾದ ರಚನೆಯು ಮುಳ್ಳನ್ನು ಆವರಿಸುತ್ತದೆ ಮತ್ತು ಅದನ್ನು ನೇರವಾಗಿ ಹೊಟ್ಟೆಗೆ ಒಯ್ಯುತ್ತದೆ, ಅಲ್ಲಿ ಹೊಟ್ಟೆಯ ಆಮ್ಲವು ಅದನ್ನು ಸುಲಭವಾಗಿ ಜೀರ್ಣಿಸಿಕೊಳ್ಳುತ್ತದೆ.

ಮಾಗಿದ ಬಾಳೆಹಣ್ಣಿನ ದೊಡ್ಡ ಹೋಳು

ಬಾಳೆಹಣ್ಣುಗಳು ಮೃದುವಾದ ಮತ್ತು ಜಿಗುಟಾದ ರಚನೆಯನ್ನು ಹೊಂದಿವೆ. ನಿಮ್ಮ ಗಂಟಲಿನಲ್ಲಿ ಮುಳ್ಳು ಅಂಟಿಕೊಂಡಂತೆ ಅನಿಸಿದರೆ, ಒಂದು ದೊಡ್ಡ ಹೋಳು ಬಾಳೆಹಣ್ಣನ್ನು ತೆಗೆದುಕೊಂಡು ಹೆಚ್ಚು ಅಗಿಯದೆ ಒಂದೇ ಬಾರಿಗೆ ನುಂಗಲು ಪ್ರಯತ್ನಿಸಿ. ಬಾಳೆಹಣ್ಣು ಗಂಟಲಿನ ಕೆಳಗೆ ಚಲಿಸುವಾಗ, ಮುಳ್ಳನ್ನು ಕೂಡ ಫುಡ್ ಪೈಪ್ ನಿಂದ ಕೆಳಕ್ಕೆ ತಳ್ಳುತ್ತವೆ.

ಒಣ ಬ್ರೆಡ್ ಅಥವಾ ಟೋಸ್ಟ್ ತಿನ್ನಿರಿ

ಅಕ್ಕಿಯಂತೆಯೇ, ಒಣ ಬ್ರೆಡ್ ಅಥವಾ ಟೋಸ್ಟ್ ಕೂಡ ಉತ್ತಮ ಪರಿಹಾರ. ಮೊದಲಿಗೆ ನೀರು ಅಥವಾ ಹಾಲಿನಲ್ಲಿ ಬ್ರೆಡ್ ತುಂಡನ್ನು ಲಘುವಾಗಿ ಅದ್ದಿ, ಅದನ್ನು ಉಂಡೆ ಮಾಡಿ, ನಂತರ ಅದನ್ನು ನುಂಗಿರಿ. ಬ್ರೆಡ್‌ನ ನಾರುಗಳು ಮುಳ್ಳನ್ನು ಹಿಡಿದು ಕೆಳಕ್ಕೆ ನೂಕಲು ಸಹಾಯ ಮಾಡುತ್ತವೆ..

ಈ ತಪ್ಪುಗಳನ್ನು ಅವಾಯ್ಡ್ ಮಾಡಿ:

  1. ಅನ್ನ ಅಥವಾ ಬ್ರೆಡ್‌ನ ದೊಡ್ಡ ತುಂಡುಗಳನ್ನು ಬಲವಂತವಾಗಿ ನುಂಗಬೇಡಿ.
  2. ಮುಳ್ಳನ್ನು ತೆಗೆದುಹಾಕಲು ಚಿಮುಟಗಳು, ಟೂತ್‌ಪಿಕ್‌ಗಳು ಅಥವಾ ಇತರ ಚೂಪಾದ ವಸ್ತುಗಳನ್ನು ಬಳಸಬೇಡಿ.
  3. ನೋವು ತೀವ್ರವಾಗಿದ್ದರೆ ಹೆಚ್ಚು ಸಮಯ ಕಾಯಬೇಡಿ.ವೈದ್ಯರನ್ನು ಸಂಪರ್ಕಿಸಿ.

ಯಾವಾಗ ವೈದ್ಯರನ್ನು ಕಾಣಬೇಕು?

ಈ ಮನೆಮದ್ದುಗಳು 20-30 ನಿಮಿಷಗಳಲ್ಲಿ ಪರಿಹಾರ ನೀಡದಿದ್ದರೆ ಮತ್ತು ನೀವು ಈ ಕೆಳಗಿನ ಸಮಸ್ಯೆಗಳನ್ನು ಅನುಭವಿಸಿದರೆ, ತಕ್ಷಣ ENT ತಜ್ಞರನ್ನು ಸಂಪರ್ಕಿಸಿ.

  • ಉಸಿರಾಟದ ತೊಂದರೆ
  • ನುಂಗುವಾಗ ತೀವ್ರ ನೋವು
  • ನಿರಂತರ ರಕ್ತಸ್ರಾವ
  • ಮುಳ್ಳು ಗೋಚರಿಸುತ್ತದೆ ಆದರೆ ತೆಗೆಯಲಾಗುವುದಿಲ್ಲ
  • ಕೆಲವು ಗಂಟೆಗಳ ನಂತರವೂ ಸಮಸ್ಯೆ ಮುಂದುವರಿದರೆ

ನೆನಪಿಡಿ, ಮನೆಮದ್ದುಗಳು ಎಲ್ಲಾ ಸಂದರ್ಭಗಳಲ್ಲಿ ಗಂಟಲಿನಲ್ಲಿ ಸಿಲುಕಿರುವ ಮೀನಿನ ಮೂಳೆಯನ್ನು ತೆಗೆದುಹಾಕುವುದಿಲ್ಲ. ನೀವು ನೋವು, ಊತ, ನುಂಗಲು ತೊಂದರೆ ಅಥವಾ ಉಸಿರಾಟದ ಸಮಸ್ಯೆ ಅನುಭವಿಸಿದರೆ, ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಉತ್ತಮ..

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

Cyclospora: ಈ ಕಾಯಿಲೆ ಬಂದ್ರೆ ದಿನಕ್ಕೆ 30 ಸಲ ಶೌಚಕ್ಕೆ ಹೋಗಬೇಕಾಗುತ್ತೆ! ನಿಮ್ಮ ಮುದ್ದು ಮಕ್ಕಳೇ ಟಾರ್ಗೆಟ್!
Belly Fat Loss: ಹೊಟ್ಟೆಯ ಬೊಜ್ಜು ಕರಗಿಸಲು ಸಹಾಯ ಮಾಡುವ 5 ಪಾನೀಯಗಳಿವು!