Weight Loss : ಮೈ ಇಳಿಸೋಕೆ ಇಲ್ಲಿದೆ ಸಿಂಪಲ್ ಮದ್ದು, ನೋಡಿ ಮ್ಯಾಜಿಕ್

By Suvarna News  |  First Published Jan 21, 2022, 4:29 PM IST

ಇಂದಿನ ದಿನಗಳಲ್ಲಿ ತೂಕ ಇಳಿಸಿಕೊಳ್ಳುವುದು ಕಷ್ಟದ ಕೆಲಸ. ಬಹಳ ಸಮಯ ಒಂದೇ ಕಡೆ ಕುಳಿತು ಕೆಲಸ ಮಾಡುವುದು ಹಾಗೂ ಜಂಕ್ ಫುಡ್ ಸೇವನೆ ಜೊತೆ ಲಾಕ್ ಡೌನ್ ನಿಂದ ಬ್ರೇಕ್ ಆದ ವರ್ಕೌಟ್ ತೂಕ ಏರಲು ಕಾರಣವಾಗಿದೆ. ಡಯಟ್ ,ಜಿಮ್ ಸಾಧ್ಯವಿಲ್ಲ ಎನ್ನುವವರು ಅಡುಗೆ ಮನೆಯಲ್ಲಿರುವ ಮಸಾಲೆ ಬಳಸಿ ತೂಕ ಇಳಿಸಿಕೊಳ್ಳಬಹುದು. 
 


ಸೋಂಪು(Fennel) ಎಲ್ಲರಿಗೂ ಇಷ್ಟವಾಗುವ ಮಸಾಲೆ (Spice)ಗಳಲ್ಲಿ ಒಂದು. ಊಟದ ನಂತ್ರ ಸೋಂಪು ಬಾಯಿಗೆ ಹಾಕಿಕೊಳ್ಳುವ ಅಭ್ಯಾಸ ಬಹುತೇಕರಿಗಿದೆ. ಸೋಂಪ್ ಮೌತ್ ಫ್ರೆಶ್ನರ್ (Mouth Freshner) ಆಗಿಯೂ ಕೆಲಸ ಮಾಡುತ್ತದೆ. ಬಾಯಿಯನ್ನು ಮಾತ್ರವಲ್ಲ ಮನಸ್ಸನ್ನೂ ಇದು ತಾಜಾಗೊಳಿಸುತ್ತದೆ. ಸೋಂಪು ರಿಫ್ರೆಶ್ ಮಸಾಲೆ ಮಾತ್ರವಲ್ಲ, ಇದು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಆಹಾರ ಸೇವನೆ ನಂತ್ರ ಇದನ್ನು ಸೇವಿಸುವುದ್ರಿಂದ ಬಾಯಿ ವಾಸನೆ ಹೋಗುವುದಲ್ಲದೆ, ಜೀರ್ಣಕ್ರಿಯೆ (Digestion) ಸುಗಮವಾಗಿ ಆಗುತ್ತದೆ. ಬೊಜ್ಜು ಈಗಿನ ದಿನಗಳಲ್ಲಿ ಸಾಂಕ್ರಾಮಿಕ ರೋಗದಂತೆ ಕಾಡ್ತಿದೆ. ಅನೇಕರು ಬೊಜ್ಜಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ. ತೂಕ ಇಳಿಸಿಕೊಳ್ಳಲು ಅನೇಕ ಕಸರತ್ತುಗಳನ್ನು ಮಾಡ್ತಾರೆ. ಆದ್ರೂ ಏರಿದ ತೂಕ ಕಡಿಮೆಯಾಗುವುದಿಲ್ಲ. ಇಂಥವರಿಗೆ ಸೋಂಪು ಒಳ್ಳೆಯ ಮದ್ದಾಗಬಹುದು. ಸೋಂಪು ತೂಕ ಇಳಿಸಿಕೊಳ್ಳಲು ನೆರವಾಗುತ್ತದೆ. ಸೋಂಪಿನ ಈ ಲಾಭ ಕೇಳಿದ್ರೆ ನೀವು ಇಂದಿನಿಂದಲೇ ನಿಯಮಿತವಾಗಿ ಅದ್ರ ಸೇವನೆ ಶುರು ಮಾಡ್ತಿರಾ. ಇಂದು ಸೋಂಪು ಹೇಗೆ ನಿಮ್ಮ ತೂಕ ಇಳಿಸಲು ನೆರವಾಗುತ್ತದೆ ಎಂಬುದನ್ನು ನಾವು ಹೇಳ್ತೆವೆ. 

Paracetamol Side Effects: ಜ್ವರ, ತಲೆನೋವು ಅಂತ ಟ್ಯಾಬ್ಲೆಟ್ ತಿನ್ನೋ ಮುನ್ನ ತಿಳ್ಕೊಳ್ಳಿ

Tap to resize

Latest Videos

ಸೋಂಪಿನಿಂದ ತೂಕ ಇಳಿಕೆ : ಸೋಂಪು, ಬಾಯಿಗೆ ತಾಜಾತನವನ್ನು ನೀಡುವುದಲ್ಲದೆ, ಇದು ಹೆಚ್ಚು ಲಾಲಾರಸವನ್ನು ಉತ್ಪಾದಿಸುತ್ತದೆ. ಇದು ನಿಮ್ಮ ಹಲ್ಲುಗಳನ್ನು ಸ್ವಚ್ಛಗೊಳಿಸುವುದಲ್ಲದೆ, ದೇಹದಿಂದ ವಿಷವನ್ನು ತೆಗೆದುಹಾಕುತ್ತದೆ.ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಇದರಲ್ಲಿ ಫೈಬರ್‌ ಸಮೃದ್ಧವಾಗಿದೆ. ಇದರಿಂದಾಗಿ ಜೀರ್ಣಕ್ರಿಯೆಯು ಉತ್ತಮವಾಗುತ್ತದೆ. ಇದು ಮಲಬದ್ಧತೆಯ ಸಮಸ್ಯೆಯನ್ನು ಸಹ ಕಡಿಮೆ ಮಾಡುತ್ತದೆ. ಆದ್ರೆ ಇದನ್ನು ಅತಿಯಾಗಿ ಸೇವನೆ ಮಾಡಬಾರದು. ಅತಿಯಾದ ಸೇವನೆ ಆರೋಗ್ಯಕ್ಕೆ ಹಾನಿಕರ. ತ್ವರಿತವಾಗಿ ತೂಕ ಇಳಿಸಿಕೊಳ್ಳಲು ಬಯಸುವವರು ಎರಡು ವಿಧಾನದಲ್ಲಿ ಸೋಂಪಿನ ಸೇವನೆ ಮಾಡಬೇಕು.  

ಸೋಂಪಿನ ನೀರು ಅಥವಾ ಟೀ : ಸೋಂಪಿನ ನೀರು ನಿಮ್ಮ ತೂಕವನ್ನು ಅತಿ ವೇಗವಾಗಿ ಕಡಿಮೆ ಮಾಡುತ್ತದೆ. ಸೋಂಪಿನ ನೀರನ್ನು ಸುಲಭವಾಗಿ ತಯಾರಿಸಬಹುದು. 2 ಲೋಟ ನೀರಿಗೆ 1 ಚಮಚ ಸೋಂಪು ಮತ್ತು ಅರ್ಧ ಚಮಚ ಅರಿಶಿನವನ್ನು ಹಾಕಿ ಅದನ್ನು ನೆನೆಸಿಡಬೇಕು. ರಾತ್ರಿಯಿಡೀ ನೆನೆಸಿಟ್ಟ ನಂತರ ಬೆಳಿಗ್ಗೆ  ಆನೀರನ್ನು ಕುದಿಸಬೇಕು. ಅದು ಒಂದು ಲೋಟಕ್ಕೆ ಬಂದ ಮೇಲೆ ಫಿಲ್ಟರ್ ಮಾಡಿ,ಟೀ ರೀತಿಯಲ್ಲಿ ಕುಡಿಯಬೇಕು. ನೀವು ಅದನ್ನು ಸಂಜೆಯೂ ಕುಡಿಯಬಹುದು. ನಿಯಮಿತವಾಗಿ ಇದನ್ನು ಮಾಡುವುದ್ರಿಂದ ತೂಕ ವೇಗವಾಗಿ ಕಡಿಮೆಯಾಗುತ್ತದೆ.

ಸೋಂಪಿನ ನೀರು ತೂಕ ಇಳಿಕೆಗೆ ಮಾತ್ರವಲ್ಲ ಇನ್ನೂ ಅನೇಕ ಆರೋಗ್ಯ ಗುಣವನ್ನು ಹೊಂದಿದೆ. ಪ್ರತಿದಿನ ಬೆಳಿಗ್ಗೆ ಸೋಂಪಿನ ನೀರನ್ನು ಕುಡಿಯುವುದ್ರಿಂದ ದಿನ,ಆರೋಗ್ಯಕರವಾಗಿ ಆರಂಭವಾಗುತ್ತದೆ. ಸೋಂಪಿನ ನೀರನ್ನು ಕುಡಿಯುವುದು ದೇಹದಲ್ಲಿ ಸಂಗ್ರಹವಾದ ಕೊಬ್ಬನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಇದ್ರಲ್ಲಿರುವ ಅಂಶಗಳು ಕ್ಯಾಲೊರಿಗಳನ್ನು ಸುಡಲು ಸಹಾಯ ಮಾಡುತ್ತದೆ. ಸೋಂಪು ಹೆಚ್ಚಿನ ಪ್ರಮಾಣದ ಫೈಬರ್ ಅನ್ನು ಹೊಂದಿರುತ್ತದೆ. ಇದು ದೀರ್ಘಕಾಲದವರೆಗೆ ಹೊಟ್ಟೆ ತುಂಬಿದ ಅನುಭವ ನೀಡುತ್ತದೆ. ಸೋಂಪಿನ ಬೀಜದ ಸಮೇತ ನೀರನ್ನು ಕುಡಿಯುವುದು ಚಯಾಪಚಯವನ್ನು ಬಲಪಡಿಸಲು ಸಹಾಯ ಮಾಡುತ್ತದೆ.

Snoring Problem: ಗೊರಕೆ ಹೊಡೀತೀರಾ? ಮೊದಲು ಬೊಜ್ಜು ಕರಗಿಸಿಕೊಳ್ಳಿ

ಸೋಂಪಿನ ಪುಡಿ : ಸೋಂಪಿನ ನೀರು ಅಥವಾ ಟೀ ಸೇವನೆ ಮಾತ್ರವಲ್ಲ ಅದನ್ನು ಪುಡಿಯ ರೀತಿಯಲ್ಲೂ ಸೇವನೆ ಮಾಡಬಹುದು.  ಸೋಂಪಿನ ಈ ಪುಡಿ,ತೂಕ ಇಳಿಕೆಗೆ ಮಾತ್ರವಲ್ಲದೆ ಗ್ಯಾಸ್,ಹೊಟ್ಟೆ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ.ಊಟದ ನಂತ್ರ ನೀರಿನ ಜೊತೆ ಈ ಪುಡಿ ಸೇವನೆ ಮಾಡಿದ್ರೆ ಬೇಗ ತೂಕ ಕಡಿಮೆ ಮಾಡಬಹುದು. ನಾಲ್ಕು ಚಮಚ ಸೋಂಪು,2 ಚಮಚ ಓಂ ಕಾಳು,2 ಚಮಚ ಜೀರಿಗೆ,1 ಚಮಚ ಮೆಂತ್ಯೆ,ಕಪ್ಪು ಉಪ್ಪು ಮತ್ತು ರಾಕ್ ಕ್ಯಾಂಡಿಯನ್ನು ಸಣ್ಣ ಉರಿಯಲ್ಲಿ ಹುರಿದುಕೊಳ್ಳಬೇಕು. ನಂತರ ಅದನ್ನು ಪುಡಿ ಮಾಡಿಕೊಳ್ಳಬೇಕು. ಊಟದ ನಂತ್ರ ಈ ಪುಡಿಯನ್ನು ನೀರಿನ ಜೊತೆ ಸೇವನೆ ಮಾಡಬೇಕು. ಪ್ರತಿದಿನ ಇದರ ಸೇವನೆಯಿಂದ ಬೊಜ್ಜು ಕರಗುತ್ತದೆ.

click me!