ಗರ್ಭಿಣಿಯರಿಗೆ ಕೊರೋನಾ ಅಥವಾ ಒಮಿಕ್ರಾನ್ ಸೋಂಕು ಉಂಟಾಗದಂತೆ ಹೆಚ್ಚು ಎಚ್ಚರಿಕೆ ವಹಿಸಬೇಕು. ಒಂದೊಮ್ಮೆ ಸೋಂಕುಂಟಾದರೆ ಅವಧಿಗೂ ಮುನ್ನವೇ ಮಗು ಜನಿಸುವ ಸಾಧ್ಯತೆ ಹೆಚ್ಚಾಗುತ್ತದೆ ಎನ್ನುತ್ತಾರೆ ತಜ್ಞರು.
ಈಗಂತೂ ಎಲ್ಲಿ ನೋಡಿದರಲ್ಲಿ ಜ್ವರ(Fever). ಯಾರನ್ನು ಕೇಳಿದರೂ ಕೆಮ್ಮು(Caugh), ನೆಗಡಿ, ತಲೆಭಾರ ಎನ್ನುತ್ತಾರೆ. ಇದು ಕೊರೋನಾವೇ ಅಥವಾ ಬೇರೆ ಇನ್ಯಾವುದೋ ಸಮಸ್ಯೆಯೇ ಎನ್ನುವುದನ್ನು ತಿಳಿಯಲು ಮುಂದಾಗುವ ಆಸಕ್ತಿಯೂ ಇಂದು ಯಾರಿಗೂ ಇಲ್ಲ. ಏಕೆಂದರೆ, ಈಗ ಕೊರೋನಾ (Corona), ಒಮಿಕ್ರಾನ್ (Omicron) ಗಳ ಜತೆಗೆ ಸೀಸನಲ್ ಫ್ಲೂ (Flu) ಕೂಡ ಸೇರಿಕೊಂಡು ಜನರನ್ನು ಬಾಧಿಸುತ್ತಿದೆ. ಜ್ವರ ಕಡಿಮೆಯಾಗಿ, ಮಾಮೂಲಿ ದಿನಚರಿಗೆ ಮರಳಿದರೆ ಸಾಕು, ಟೆಸ್ಟುಗಳ ಸಹವಾಸ ಯಾರಿಗೆ ಬೇಕು ಎನ್ನುತ್ತಾರೆ. ಆದರೆ, ಮನೆಯಲ್ಲಿ ಗರ್ಭಿಣಿ(Pregnant)ಯರಿದ್ದರೆ ಈ ನಿರ್ಲಕ್ಷ್ಯ ಸಲ್ಲದು, ಹೆಚ್ಚು ಎಚ್ಚರಿಕೆ ವಹಿಸಬೇಕು.
ಗರ್ಭಿಣಿಯರಿಗೆ ಒಮಿಕ್ರಾನ್ ಅಥವಾ ಕೊರೋನಾ ಸೋಂಕು ಬಾಧಿಸದಂತೆ ಕಾಳಜಿ ವಹಿಸಬೇಕು. ಒಂದೊಮ್ಮೆ ಅವರಿಗೆ ಸೋಂಕು ತೀವ್ರವಾಗಿ ಬಾಧಿಸಿದರೆ ಪ್ರಿಮ್ಯಚೂರ್ (Premature) ಅಂದರೆ ಅವಧಿಗೂ ಮುನ್ನವೇ ಮಗು ಜನಿಸುವ ಅಪಾಯವುಂಟಾಗಬಹುದು. ಸ್ತ್ರೀರೋಗ (Gynecologist) ತಜ್ಞರ ಪ್ರಕಾರ, ಗರ್ಭಿಣಿಯರಿಗೆ ಕೊರೋನಾ ಬಂದರೆ ಎಲ್ಲಕ್ಕಿಂತ ಹೆಚ್ಚಿನ ಅಪಾಯದ ಸಾಧ್ಯತೆ ಇರುವುದು ಇಲ್ಲಿಯೇ. ತೀವ್ರವಾಗಿ ಜ್ವರ ಬಂದ ಗರ್ಭಿಣಿಯರಿಗೆ ಅವಧಿಗಿಂತ ಮುನ್ನವೇ ಹೆರಿಗೆ (Delivery) ನೋವು ಶುರುವಾದ ಹಲವಾರು ಪ್ರಕರಣಗಳಿವೆ. ಆಗ ಪ್ರಿಮ್ಯಾಚೂರ್ ಡಿಲೆವರಿ ಆಗುವ ಸಾಧ್ಯತೆ ಹೆಚ್ಚಾಗುತ್ತದೆ. ಜತೆಜತೆಗೆ, ಮಗುವಿನ ಜೀವಕ್ಕೂ ಅಪಾಯವಾಗಬಲ್ಲದು. ಹೀಗಾಗಿ, ಗರ್ಭೀಣಿಯರ ಕುರಿತಾಗಿ ಹೆಚ್ಚಿನ ಕಾಳಜಿ ವಹಿಸಬೇಕು.
ಸುರಕ್ಷಿತ ಅಂತರವಿರಲಿ
ಗರ್ಭಿಣಿಯರು ಜನ ಸೇರುವ ಯಾವುದೇ ಕಾರ್ಯಕ್ರಮಗಳಿಗೆ ಹೋಗದಿರಿ. ಸಮೀಪದ ಮದುವೆ (Marriage) ಎಂದೋ, ಯಾವುದೋ ಸಮಾರಂಭವೆಂದೋ, ಮನೆಯಲ್ಲೇ ಇದ್ದು ಬೋರಾಯಿತು ಎಂದೋ ಎಲ್ಲಿಗೂ ಹೋಗಬೇಡಿ. ಒಂದೊಮ್ಮೆ ಜ್ವರ ಸಣ್ಣದಾಗಿ ಬಂದರೂ ಸುಮ್ಮನೆ ಔಷಧಗಳನ್ನು ನುಂಗಬೇಕಾಗುತ್ತದೆ. ಇದರಿಂದ ಹೊಟ್ಟೆಯಲ್ಲಿರುವ ಮಗುವಿಗೆ ಹಾನಿಯಾದರೂ ಆದೀತು. ಹೊರಗೆ ಹೋಗಬೇಕಾದ ಸನ್ನಿವೇಶದಲ್ಲಿ ಕಡ್ಡಾಯವಾಗಿ ಮಾಸ್ಕ್ ಧರಿಸಿ. ಕೈಗಳನ್ನು ಆಗಾಗ ಸ್ಯಾನಿಟೈಸ್ (Sanitize) ಮಾಡಿಕೊಳ್ಳಿ. ಹೊರಗೆ ಹೋಗಿ ಬಂದ ಬಟ್ಟೆಗಳನ್ನು ತೊಳೆಯುವುದು, ತರಕಾರಿಗಳನ್ನು ಮುಟ್ಟದಿರುವುದು ಅಥವಾ ಮುಟ್ಟಿದರೂ ಸ್ವಚ್ಛತೆ ಕಾಪಾಡಿಕೊಳ್ಳುವುದನ್ನು ಮಾಡಿ. ಒಂದೊಮ್ಮೆ ಜ್ವರ ಬಂದೇ ಬಿಟ್ಟಿತು ಎಂದಾದರೆ ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಮಾಡದರೆ ವೈದ್ಯರನ್ನು ಕಾಣಬೇಕು.
67 ವರ್ಷಗಳಿಂದ ಸ್ನಾನ ಮಾಡಿಲ್ಲ... ಆದರೂ ಇವರಷ್ಟು ಆರೋಗ್ಯವಾಗಿ ಬೇರಾರು ಇಲ್ಲ...! ಏನೀ ವಿಚಿತ್ರ
ಈ ಸಮಯದಲ್ಲಿ ದ್ರವಾಹಾರ (Liquid) ಸೇವನೆಯನ್ನು ಹೆಚ್ಚು ಮಾಡಬೇಕು. ಸಾಕುಸಾಕೆನಿಸುವಷ್ಟು ನೀರು (Water) ಕುಡಿಯಬೇಕು. ಪಾಲಿಕ್ ಆಸಿಡ್ (Focil Acid) ಮಾತ್ರೆಗಳನ್ನು ಸರಿಯಾಗಿ ತೆಗೆದುಕೊಳ್ಳಬೇಕು. ವಿಟಮಿನ್ ಡಿ (Vitamin D) ಕೊರತೆ ನಿವಾರಣೆಗೆ ದಿನವೂ ಸ್ವಲ್ಪ ಸಮಯ ಬಿಸಿಲಿಗೆ ಹೋಗುವ ಪರಿಪಾಠ ಬೆಳೆಸಿಕೊಳ್ಳಬೇಕು.
ಗರ್ಭಿಣಿಯರಿಗೆ ಕೊರೋನಾ ಬಂದರೆ ಲಕ್ಷಣಗಳೇನೂ ಬೇರೆ ರೀತಿಯಾಗಿರುವುದಿಲ್ಲ. ಸಾಮಾನ್ಯರಲ್ಲಿ ಕಂಡುಬರುವ ಲಕ್ಷಣಗಳೇ ಇರುತ್ತವೆ. ಜ್ವರ ಬರಬಹುದು. ಉಸಿರಾಟದಲ್ಲಿ ತೊಂದರೆ ಉಂಟಾಗಬಹುದು. ವಾಸನೆ ಶಕ್ತಿ ನಷ್ಟವಾಗಬಹುದು. ಹಾಗೂ ಎಲ್ಲಕ್ಕಿಂತ ಹೆಚ್ಚಾಗಿ ವಿಪರೀತ ಎನಿಸುವಷ್ಟು ಸುಸ್ತೆನಿಸಬಹುದು. ಇದು ಗರ್ಭಿಣಿಯರಿಗೆ ಹೆಚ್ಚು ಸಮಸ್ಯೆ ತಂದೊಡ್ಡಬಲ್ಲದು.
ಇಂಥ ಸಮಯದಲ್ಲಿ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡುವುದು ಸೂಕ್ತ. ಒಂದೊಮ್ಮೆ ಹೆರಿಗೆ ಸಮಯದಲ್ಲಿ ಕೊರೋನಾ ಪಾಸಿಟಿವ್ (Possitive) ಇದ್ದರೂ ಮಗುವಿಗೆ ಸೋಂಕು ಬರಲೇಬೇಕು ಎಂದಿಲ್ಲ. ಅಮ್ಮ ಕೊರೋನಾ ಪಾಸಿಟಿವ್ ಆಗಿದ್ದರೂ ಮಗುವಿಗೆ ಕೊರೋನಾ ಇಲ್ಲದಿರುವ ಪ್ರಕರಣಗಳು ಸಾಕಷ್ಟಿವೆ. ಆದರೆ, ಮಗುವಿಗೂ ಕೊರೋನಾ ಉಂಟಾಗುವ ಸಾಧ್ಯತೆ ಸಾಕಷ್ಟಿರುವುದರಿಂದ ಮುನ್ನೆಚ್ಚರಿಕೆ ತೆಗೆದುಕೊಳ್ಳುವುದು ಅನಿವಾರ್ಯ.
Snoring Problem: ಗೊರಕೆ ಹೊಡೀತೀರಾ? ಮೊದಲು ಬೊಜ್ಜು ಕರಗಿಸಿಕೊಳ್ಳಿ
ಹೆರಿಗೆ ಸಮಯದಲ್ಲಿ ಅಮ್ಮ ಪಾಸಿಟಿವ್ ಆಗಿದ್ದರೂ ನಿರ್ಯೋಚನೆಯಿಂದ ತನ್ನ ಮಗುವಿಗೆ ಹಾಲೂಡಬಹುದು. ಕಳೆದ ಬಾರಿಯ ಕೋವಿಡ್ 2ನೇ ಅಲೆಯ ಸಂದರ್ಭದಲ್ಲಿ ಬಹಳಷ್ಟು ತಾಯಂದಿರುವ ಕೊರೋನಾಪೀಡಿತರಾಗಿ ಮಕ್ಕಳಿಗೆ ಹಾಲೂಡುವುದನ್ನು ಬಿಟ್ಟುಬಿಟ್ಟಿದ್ದರು. ಆದರೆ, ಇದು ಸರಿಯಲ್ಲ. ಹಾಲಿನ ಮೂಲಕ ಸೋಂಕು (Infection) ಬರುವುದಿಲ್ಲ. ಹೀಗಾಗಿ, ಈ ಕುರಿತಾಗಿ ಭಯ ಪಡುವುದು ಅನಗತ್ಯ ಎನ್ನುತ್ತಾರೆ ತಜ್ಞರು.