Fat in Body: ದೇಹದ ಈ ಭಾಗಗಳಲ್ಲಿ ಕೊಬ್ಬು ಸಂಗ್ರಹ ಆಗ್ಬಾರ್ದು!

By Sumana Lakshmeesha  |  First Published Dec 1, 2022, 7:24 PM IST

ಸ್ತನ, ಹೊಟ್ಟೆ, ಸೊಂಟ, ಕತ್ತಿನ ಭಾಗಗಳಲ್ಲಿ ಕೊಬ್ಬು ಸಂಗ್ರಹವಾಗುವುದು ಆರೋಗ್ಯಕ್ಕೆ ಒಳ್ಳೆಯದಲ್ಲ. ಇಲ್ಲಿ ಜಮಾವಣೆಯಾಗುವ ಕೊಬ್ಬು ಮಧುಮೇಹ ಸೇರಿದಂತೆ ಅನೇಕ ಆರೋಗ್ಯ ಸಮಸ್ಯೆಗಳನ್ನು ತರಬಹುದು. ದೇಹದ ಹಿಂಭಾಗ ಅಥವಾ ಸೊಂಟದ ಭಾಗಕ್ಕಿಂತ ಹೊಟ್ಟೆ ದಪ್ಪಗಾಗದಂತೆ ನೋಡಿಕೊಳ್ಳಬೇಕು. 
 


ದೊಡ್ಡ ಸ್ತನಗಳು ಸೌಂದರ್ಯದ ಪ್ರತೀಕ ಎನಿಸಬಹುದು. ಆದರೆ, ಸ್ತನ ಸೇರಿದಂತೆ ದೇಹದ ಕೆಲವು ಭಾಗಗಳಲ್ಲಿ ಹೆಚ್ಚು ಕೊಬ್ಬು ಶೇಖರವಾಗುವುದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಲ್ಲ. ಯಾರು ಹೆಚ್ಚು ಕ್ಯಾಲರಿಯುಕ್ತ ಆಹಾರ ಸೇವಿಸುತ್ತಾರೋ ಹಾಗೂ ಅದಕ್ಕೆ ತಕ್ಕಂತೆ ದೈಹಿಕ ಚಟುವಟಿಕೆ ಮಾಡುವುದಿಲ್ಲವೋ ಅವರ ದೇಹದಲ್ಲಿ ಕೊಬ್ಬು ಶೇಖರವಾಗುತ್ತ ಹೋಗುತ್ತದೆ. ದೇಹದಲ್ಲಿ ಕೊಬ್ಬು ಸಂಗ್ರಹವಾದರೆ ಆಕೃತಿಯೇ ಬದಲಾಗುತ್ತ ಸಾಗುತ್ತದೆ. ತಜ್ಞರ ಪ್ರಕಾರ, ದೇಹದ ಕೆಲವು ಭಾಗಗಳಲ್ಲಿ ಕೊಬ್ಬು ಶೇಖರವಾಗುವುದು ಕೆಟ್ಟದ್ದು. ದೇಹದಲ್ಲಿ ಜಮಾವಣೆಯಾಗುವ ಕೆಟ್ಟ ಕೊಬ್ಬು ಟೈಪ್‌ 2 ಮಧುಮೇಹ ಹಾಗೂ ಊತಕ್ಕೆ ಕಾರಣವಾಗುತ್ತದೆ. ಕೆಲವು ಜನ ದೇಹದ ಬೊಜ್ಜು ಹೆಚ್ಚುವುದಕ್ಕೆ ಚಿಂತಿತರಾಗಿ ಅದನ್ನು ಕಡಿಮೆ ಮಾಡುವುದಕ್ಕೆ ಶತಪ್ರಯತ್ನ ನಡೆಸುತ್ತಾರೆ. ಆದರೆ, ಬಹಳಷ್ಟು ಜನ ಅದರ ಬಗ್ಗೆ ಹೆಚ್ಚು ಗಮನ ನೀಡುವುದಿಲ್ಲ. ದೇಹದ ಕೆಲವು ಭಾಗಗಳಲ್ಲಿ ಒಳ್ಳೆಯ ಕೊಬ್ಬು ಶೇಖರವಾದರೆ ಹೆಚ್ಚಿನ ಸಮಸ್ಯೆ ಉಂಟಾಗುವುದಿಲ್ಲ. ಹಾಗಾದರೆ, ಯಾವ ಭಾಗದಲ್ಲಿ ಕೊಬ್ಬು ಸಂಗ್ರಹವಾದರೆ ತೊಂದರೆ ಇಲ್ಲ, ಯಾವ ಭಾಗದಲ್ಲಿ ಉಂಟಾದರೆ ಹಾನಿ ಹೆಚ್ಚು ಎಂದು ತಿಳಿದುಕೊಳ್ಳೋಣ.

•    ಹಿಂಭಾಗ ಮತ್ತು ತೊಡೆ (Hips and Thighs) 
ಹಿಪ್ಸ್‌ ಮತ್ತು ತೊಡೆಗಳಲ್ಲಿ ಕೆಲಮಟ್ಟಿಗೆ ಕೊಬ್ಬು (Fat) ಸಂಗ್ರಹವಾದರೆ ಸಮಸ್ಯೆ ಇಲ್ಲ. ಆದರೆ, ಅಲ್ಲಿನ ಮಾಂಸಖಂಡಗಳ ಮೇಲೆ ಒತ್ತಡವುಂಟಾಗುವಷ್ಟು ಕೊಬ್ಬು ಜಮಾವಣೆ ಆಗಬಾರದು. ಫ್ಲೋರಿಡಾ ಸ್ಯಾನ್‌ ಫೋರ್ಡ್‌ ಸಂಶೋಧನಾ ಸಂಸ್ಥೆಯ ಮಧುಮೇಹ (Diabetes) ತಜ್ಞರ ಪ್ರಕಾರ, ಹಿಂಭಾಗದಲ್ಲಿ ಕೊಬ್ಬು ಸಂಗ್ರಹವಾಗುವುದರಿಂದ ಹೃದಯ ರೋಗಗಳು (Heart Problems) ಮತ್ತು ಮಧುಮೇಹದ ಅಪಾಯ ಕಡಿಮೆ ಆಗುತ್ತದೆ. ಹೃದಯಾಘಾತ (Heart Attack) ಉಂಟಾಗುವ ಮಹಿಳೆಯರಲ್ಲಿ ಸಾಮಾನ್ಯವಾಗಿ ಹಿಂಭಾಗಕ್ಕಿಂತ ಹೊಟ್ಟೆಯ ಪ್ರದೇಶದಲ್ಲಿ ಹೆಚ್ಚು ಕೊಬ್ಬು ಶೇಖರವಾಗುವುದು ಕಂಡುಬಂದಿದೆ. 

Latest Videos

undefined

ಈ ಲಕ್ಷಣಗಳು ಕಂಡು ಬಂದರೆ, ರಕ್ತದಲ್ಲಿ ಕೊಬ್ಬು ಹೆಚ್ಚಾಗಿದೆ ಎಂದರ್ಥ!

•    ಸ್ತನಗಳ ಕೊಬ್ಬು (Fat in Breasts)
ಸ್ತನಗಳು ದೊಡ್ಡದಾಗಿದ್ದರೆ ಸೌಂದರ್ಯದ ಪ್ರತೀಕ ಎನ್ನುವಂತೆ ಭಾವಿಸಲಾಗುತ್ತದೆ. ಸ್ತನಗಳ ಗಾತ್ರ ದೊಡ್ಡದಾಗಿರುವುದಕ್ಕೆ ಮುಖ್ಯ ಕಾರಣ ಆನುವಂಶೀಯತೆ (Genetic). ಆದರೆ, ಸ್ತನಗಳು ದೊಡ್ಡದಾಗಿದ್ದರೆ ಕೆಲವು ರೋಗಗಳ ಅಪಾಯ ಹೆಚ್ಚು. ಒಂದು ಅಧ್ಯಯನದಂತೆ ದೊಡ್ಡ ಸ್ತನಗಳನ್ನು ಹೊಂದಿರುವ 20 ವರ್ಷದ ಯುವತಿಯರಿಗೆ ಮುಂದಿನ ಹತ್ತು ವರ್ಷಗಳಲ್ಲಿ ಮಧುಮೇಹದ ಸಾಧ್ಯತೆ ಹೆಚ್ಚು. ಸ್ತನಗಳಲ್ಲಿ ಕೆಟ್ಟ  ಕೊಬ್ಬು ಸಂಗ್ರಹವಾಗುವ ಅಪಾಯ ಹೆಚ್ಚು ಎನ್ನುವುದೇ ಸಮಸ್ಯೆಯ ಮೂಲ ಕಾರಣ. ಹಾಗೂ ದೊಡ್ಡ ಸ್ತನಗಳನ್ನು ಹೊಂದಿರುವ ಮಹಿಳೆಯರಲ್ಲಿ ಕ್ಯಾನ್ಸರ್‌ (Cancer) ಅಪಾಯವೂ ಅಧಿಕ ಎನ್ನುವುದು ಸಾಬೀತಾಗಿದೆ. 

•    ಹೊಟ್ಟೆಯ (Stomach) ಕೊಬ್ಬು
ಕೆಟ್ಟ ಕೊಬ್ಬು ಆರೋಗ್ಯಕ್ಕೆ ಅತ್ಯಂತ ಅಪಾಯಕಾರಿ (Health Risk). ಇದು ಹೃದಯ ರೋಗಗಳು, ಪಾರ್ಶ್ವವಾಯು (Paralysis Stroke), ಕ್ಯಾನ್ಸರ್‌ ನಂತಹ ಅಪಾಯವನ್ನು ಹೆಚ್ಚಿಸುತ್ತದೆ. ಅಲ್ಲದೆ ಇದು ಖಿನ್ನತೆ (Depression), ಮರೆವು ರೋಗ, ಮಧುಮೇಹಕ್ಕೂ ಕಾರಣವಾಗುತ್ತದೆ. ಈ ಕೆಟ್ಟ ಕೊಬ್ಬು ಅಥವಾ ಅನ್‌ ಸ್ಯಾಚುರೇಟೆಡ್‌ ಕೊಬ್ಬು ಹೊಟ್ಟೆ ಹಾಗೂ ಸೊಂಟದ ಭಾಗದಲ್ಲಿ ಜಮಾವಣೆಯಾಗುತ್ತದೆ. ಟೈರ್‌ ಹೆಚ್ಚುತ್ತ ಸಾಗುವುದು ಇದೇ ಕಾರಣಕ್ಕೆ. ಹಿಂಭಾಗಕ್ಕಿಂತ ಸೊಂಟ ಹಾಗೂ ಹೊಟ್ಟೆಯ ಸುತ್ತಳತೆ ಯಾರಲ್ಲಿ ಹೆಚ್ಚಿರುತ್ತದೆಯೋ ಹೃದಯದ ಸಮಸ್ಯೆ ಕಂಡುಬರುತ್ತದೆ. ಸೊಂಟದ ಸುತ್ತಳತೆ ಕಡಿಮೆ ಮಾಡಿಕೊಳ್ಳಲು ಕಾರ್ಬೋಹೈಡ್ರೇಟ್‌ (Carbohydrates) ಸೇವನೆ ಕಡಿಮೆ ಮಾಡಿ ಪ್ರೊಟೀನ್‌ ಸೇವನೆ ಹೆಚ್ಚಿಸಬೇಕು. ಜತೆಗೆ ಸೂಕ್ತವಾದ ವ್ಯಾಯಾಮ (Exercise) ಮಾಡಬೇಕು.

ಕೊಬ್ಬು ಹೆಚ್ಚಾಗಿದ್ಯಾ? ಕಡಿಮೆಯಾಗಲು ಈ ಮನೆ ಮದ್ದು ಹೆಲ್ಪ್ ಮಾಡುತ್ತೆ!

•    ಕತ್ತಿನಲ್ಲಿ (Neck) ಕೊಬ್ಬು
ಬಹಳಷ್ಟು ಜನರಿಗೆ ಕತ್ತಿನ ಭಾಗದಲ್ಲಿ ಕೊಬ್ಬು ಸಂಗ್ರಹವಾಗುವುದನ್ನು ನೋಡಿರಬಹುದು. ಇದರಿಂದ ಹೃದಯದ ಸಮಸ್ಯೆ ಉಂಟಾಗುತ್ತದೆ ಅಥವಾ ಮೊದಲೇ ಸಮಸ್ಯೆ ಇದ್ದರೆ ಅದು ಹೆಚ್ಚುತ್ತದೆ. ಶ್ವಾಸಕೋಶಕ್ಕೆ (Lungs) ಅಧಿಕ ಒತ್ತಡ (Stress), ನಿದ್ರಾಹೀನತೆಯೂ (Sleep Disorder) ಉಂಟಾಗಬಹುದು. ಅಲ್ಲದೆ, ಹಾರ್ಮೋನ್‌ (Hormones) ಏರಿಳಿತ ಆಗುತ್ತದೆ. ಪುರುಷರಲ್ಲಿ ಟೆಸ್ಟಾಸ್ಟಿರೋನ್‌ ಹಾರ್ಮೋನ್‌ ಮಟ್ಟ ಕಡಿಮೆ ಆಗುತ್ತದೆ. 

 
 

click me!