Fasting Tips: ಆರೋಗ್ಯಕರ ಉಪವಾಸ ಆರೋಗ್ಯ ಚೆನ್ನಾಗಿಡುತ್ತೆ!

By Suvarna News  |  First Published Sep 27, 2022, 11:01 AM IST

ನವರಾತ್ರಿ ಇದು ದೇವಿ ದುರ್ಗೆಯನ್ನು ನಾನಾ ಅವತಾರದಲ್ಲಿ ಆರಾಧಿಸುವ ಒಂಭತ್ತು ದಿನಗಳ ಹಬ್ಬ. ಭಾರತೀಯ ಸಂಪ್ರದಾಯದಲ್ಲಿ ನವರಾತ್ರಿಯನ್ನು ವಿಜೃಂಭಣೆಯಿAದ ಆಚರಿಸಲಾಗುತ್ತದೆ. ಹಿಂದೂ ಭಕ್ತರು ಈ ಒಂಭತ್ತು ದಿನಗಳ ಎಲ್ಲಾ ದಿನಗಳಲ್ಲಿ ಉಪವಾಸ ಮಾಡುವವರು ಇದ್ದಾರೆ. ಉಪವಾಸ ಮಾಡುವುದು ಆರೋಗ್ಯಕ್ಕೂ ಒಳ್ಳೆಯದು. ಆದರೆ ಆರೋಗ್ಯಕರ ಉಪವಾಸ ಮಾಡುವುದು ಹೇಗೆ ಇಲ್ಲಿದೆ ಮಾಹಿತಿ.


ದಸರಾ ಹಬ್ಬ ಕರ್ನಾಟಕದಲ್ಲಿ ಗೊಂಬೆಗಳನ್ನಿಟ್ಟು ಆಚರಿಸಲಾಗುತ್ತದೆ. ದೇವಿಯ ಆರಾಧನೆಯನ್ನು ವಿವಿಧ ಭಾಗಗಳಲ್ಲಿ ನಾನಾ ರೀತಿಯಲ್ಲಿ ಆಚರಿಸಲಾಗುತ್ತದೆ. ಈ ಹಬ್ಬದ ಸಂದರ್ಭದಲ್ಲಿ ಹಲವರು ಉಪವಾಸ ಮಾಡುತ್ತಾರೆ. ಇನ್ನು ಕೆಲವರು ಮೊದಲ ಎರಡು ಮತ್ತು ಕೊನೆಯ ಎರಡು ದಿನಗಳನ್ನು ಉಪವಾಸ ಮಾಡಲು ಆಯ್ಕೆ ಮಾಡುತ್ತಾರೆ. ನವರಾತ್ರಿಯನ್ನು ಆಚರಿಸಲು ಯಾವುದೇ ಸ್ಥಿರ ನಿಯಮಗಳಿಲ್ಲ ಮತ್ತು ವಿವಿಧ ರಾಜ್ಯಗಳಲ್ಲಿ ಆಚರಣೆಗಳು ಸ್ವಲ್ಪ ಬದಲಾಗುತ್ತವೆ. ಉತ್ತರ ಭಾರತದಲ್ಲಿ, ಜನರು ಹೆಚ್ಚಾಗಿ ನವರಾತ್ರಿಯ ಸಮಯದಲ್ಲಿ ಉಪವಾಸ ಮಾಡುತ್ತಾರೆ, ಆದರೆ ಗುಜರಾತ್‌ನಲ್ಲಿ ನವರಾತ್ರಿಯು ದಾಂಡಿಯಾ ರಾಸ್ ಮತ್ತು ಗರ್ಬಾಗೆ ಸಮಾನಾರ್ಥಕವಾಗಿದೆ. ಪಶ್ಚಿಮ ಬಂಗಾಳದಲ್ಲಿ ಈ ಹಬ್ಬವು ಭವ್ಯವಾದ ದುರ್ಗಾ ಪೂಜೆಯ ಪಾಂಡಲ್‌ಗಳು, ಧುನುಚಿ ನಾಚ್ ಮತ್ತು ಸಿಂಧೂರ್ ಖೇಲಾಗಳ ಬಗ್ಗೆ ಇರುತ್ತದೆ. ದಕ್ಷಿಣ ಭಾರತದಲ್ಲಿ, ನವರಾತ್ರಿಯನ್ನು ಬೊಮ್ಮಾಯಿ ಗೋಲು ಎಂದು ಆಚರಿಸಲಾಗುತ್ತದೆ. ಇಲ್ಲಿ ಜನರು ಒಂಭತ್ತು ದಿನಗಳವರೆಗೆ ತಮ್ಮ ಮನೆಯಲ್ಲಿ ಸುಂದರವಾದ ಗೋಲು ಗೊಂಬೆಗಳನ್ನು ಪ್ರದರ್ಶಿಸುತ್ತಾರೆ.
ಈ ನವರಾತ್ರಿಯ ಸಂದರ್ಭದಲ್ಲಿ ಉಪವಾಸ ಆಚರಿಸುವ ಜನರು ಫಲಹಾರ ಎಂಬ ಆಹಾರ ಕ್ರಮವನ್ನು ಅನುಸರಿಸುತ್ತಾರೆ. ಈ ಉಪವಾಸಕ್ಕೆ ರಾಗಿ, ನವಣೆ, ಸಾಬುದಾನ, ರಾಜಗಿರಾ, ಆಲೂಗಡ್ಡೆ, ಸಿಹಿ ಗೆಣಸು, ಸೋರೆಕಾಯಿ, ಕುಂಬಳಕಾಯಿ, ಪಾಲಕ, ಸೌತೆಕಾಯಿ, ಕ್ಯಾರೆಟ್ ಮತ್ತು ಎಲ್ಲಾ ಹಣ್ಣುಗಳನ್ನು ಸೇವಿಸುತ್ತಾರೆ. ಆದರೆ ಈ ಸಮಯದಲ್ಲಿ ಗೋಧೀ, ಅಕ್ಕಿ, ರವೆ, ಮೈದಾ, ಜೋಳದ ಹಿಟ್ಟು, ಕಾಳುಗಳ ಸೇವನೆ ನಿಷೇಧಿಸಲಾಗಿದೆ. ಉಪವಾಸದ ದಿನಗಳ ಸಂಖ್ಯೆ, ಉಪವಾಸದ ಅವಧಿ ಒಳಗೊಂಡಿರುತ್ತದೆ. ಈ ಸಮಯದಲ್ಲಿ ತಪ್ಪಿಸುವ ಆಹಾರಗಳ ಪ್ರಕಾರದಲ್ಲಿ ದೇಹದಲ್ಲಿ ಅನೇಕ ವ್ಯತ್ಯಾಸಗಳನ್ನು ಗಮನಿಸಬಹುದು. ಕೆಲವರು ನೀರು ಮಾತ್ರ ಸೇವಿಸಿದರೆ, ಇನ್ನು ಕೆಲವರು ಮಧ್ಯಂತರ ಉಪವಾಸ ಮಾಡುತ್ತಾರೆ, ಮತ್ತೆ ಕೆಲವರು ಹಣ್ಣು, ಹಾಲು ಸೇವಿಸಿದರೆ ಇನ್ನು ಕೆಲವರು ಒಂದು ಊಟವನ್ನು ಮಾತ್ರ ತೆಗೆದುಕೊಳ್ಳುತ್ತಾರೆ.

ಉಪವಾಸದ ಪ್ರಯೋಜನಗಳು 
ಆಧ್ಯಾತ್ಮಿಕ ಅಂಶದ ಜೊತೆಗೆ ಉಪವಾಸವನ್ನು ಸರಿಯಾದ ರೀತಿಯಲ್ಲಿ ಅಭ್ಯಾಸ ಮಾಡುವಾಗ ಹಲವಾರು ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ. ಅಧ್ಯಯನದ ಪ್ರಕಾರ ಉಪವಾಸ ಮಾಡುವುದರಿಂದ ಕೊಬ್ಬು ಕರಗುವುದು, ತೂಕ ನಷ್ಟದ ಮೇಲೆ ಪರಿಣಾಮ ಬೀರುತ್ತದೆ ಎಂದು ಹೇಳಿದೆ. ನಿರ್ಬಂಧಿತ ಆಹಾರ ಸೇವನೆಯು ಅಧಿಕ ಕೊಲೆಸ್ಟಾçಲ್, ಹೃದಯ ಸಂಬAಧಿತ ಕಾಯಿಲೆ, ಅಧಿಕ ರಕ್ತದೊತ್ತಡದಂತಹ ದೀರ್ಘಕಾಲದ ಕಾಯಿಲೆಗಳನ್ನು ತಡೆಯಬಹುದು. ಜೊತೆಗೆ ಮಾನಸಿಕ ಯೋಗಕ್ಷೇಮವನ್ನು ಸುಧಾರಿಸುತ್ತದೆ.
ಉಪವಾಸ ಮಾಡುವುದರಿಂದ ನಮ್ಮ ದೇಹವು ವಿಶ್ರಾಂತಿ ಪಡೆಯುತ್ತದೆ. ಇದು ನಮ್ಮ ಜೀರ್ಣಾಂಗ ವ್ಯವಸ್ಥೆಯನ್ನು ದೇಹದಲ್ಲಿ ಡಿಟಾಕ್ಸ್ ಪ್ರಕ್ರಿಯೆಯನ್ನು ಪ್ರಾರಂಭಿಸಲು ಮತ್ತು ನಮ್ಮ ಕರುಳನ್ನು ಶುದ್ಧೀಕರಿಸಲು ಸಹಾಯ ಮಾಡುತ್ತದೆ.

Tap to resize

Latest Videos

ಇದನ್ನೂ ಓದಿ: Navratri Special: ಹಬ್ಬಕ್ಕೆ ಕುಂಬಳಕಾಯಿಯ ಈ ತಿಂಡಿ ಟ್ರೈ ಮಾಡಿ!

ಆರೋಗ್ಯಕರ ಉಪವಾಸಕ್ಕಾಗಿ ಕೆಲ ಸಲಹೆಗಳು ಇಲ್ಲಿವೆ
ಕಿಚಡಿ ಅಥವಾ ರೋಟಿ ಸೇವಿಸಿ

ಅಕ್ಕಿ ಮತ್ತು ಗೋಧಿಯಂತಹ ಸಾಮಾನ್ಯ ಧಾನ್ಯಗಳನ್ನು ಉಪವಾಸದ ಸಮಯದಲ್ಲಿ ಸೇವಿಸದಿದ್ದರೂ, ಇತರೆ ಧಾನ್ಯಗಳಾದ ಕುತ್ತು, ಸಿಂಗಾರ ಹಿಟ್ಟು, ಸಾಬುದಾನ, ರಾಜಗಿರಾ ಹಿಟ್ಟಿನ ಬಗ್ಗೆ ಗಮನವಿರಲಿ. ಇವುಗಳನ್ನು ಪೂರಿ, ಪಕೋಡ, ವಡಾ ಅಥವಾ ಹಲ್ವಾಗಳಲ್ಲಿ ಬಳಸುವುದಕ್ಕಿಂತ ಹೆಚ್ಚಾಗಿ ಖಿಚಡಿ ಅಥವಾ ರೊಟ್ಟಿಗಳಲ್ಲಿ ಬಳಸಿ.

ಹಣ್ಣಿನ ಚಾಟ್
ಈ ಸಮಯದಲ್ಲಿ ಜಿಡ್ಡಿನ ಆಹಾರಗಳಿಂದ ದೂರವಿರಿ. ಆಲುಗೆಡ್ಡೆಯಂತಹ ಕರಿದ ತಿಂಡಿಗಳು ಬಾಯಲ್ಲಿ ನೀರೂರಿಸಬಹುದು. ಆದರೆ ಕರಿದ ತಿಂಡಿಗಳು ದಿನದ ಕೊನೆಯಲ್ಲಿ ಹೊಟ್ಟೆ ಉಬ್ಬಿದಂತೆ ಗ್ಯಾಸ್ಟಿçಕ್ ಸಮಸ್ಯೆ ಕಾಣಿಸುತ್ತದೆ. ಆಲೂಗೆಡ್ಡೆ ಫ್ರೆöÊಗಳ ಬದಲಿಗೆ ಫ್ರೂಟ್ ಚಾಟ್‌ಗೆ ಆದ್ಯತೆ ನೀಡಿ. ಹಣ್ಣುಗಳನ್ನು ಸೇವಿಸಿ 

ಹಣ್ಣು ಸೇವಿಸಿ
ಹಣ್ಣುಗಳನ್ನು ಸೇವಿಸುವುದರಿಂದ ದೇಹಕ್ಕೆ ಬೇಕಾಗುವ ವಿಟಮಿನ್‌ಗಳು, ಖನಿಜಗಳು, ಮತ್ತು ಫೈಬರ್‌ಗಳು ಸಿಗುತ್ತದೆ. ಅಲ್ಲದೆ ನೈಸರ್ಗಿಕವಾದ ಸಕ್ಕರೆಯನ್ನು ಸಹ ದೇಹಕ್ಕೆ ನೀಡುತ್ತದಲ್ಲದೆ ದಿನವಿಡೀ ಶಕ್ತಿಯುತವಾಗಿರುವಂತೆ ಚಟುವಟಿಕೆಯಿಂದ ಇರುವಂತೆ ನೋಡಿಕೊಳ್ಳುತ್ತದೆ. 

ಇದನ್ನೂ ಓದಿ: Navratri Festival: ಉಪವಾಸಕ್ಕೂ ಕೆಲ ದಿನಗಳ ಮೊದಲು ಸಕ್ಕರೆ ತಿನ್ನೋದು ಬಿಟ್ಬಿಡಿ, ನಿಶ್ಯಕ್ತಿ ಕಾಡಲ್ಲ

ಬೇರು ತರಕಾರಿಗಳಿಂದ ದೂರವಿರಿ
ಅನೇಕ ಜನರು ತಮ್ಮ ಊಟದಲ್ಲಿ ಆಲೂಗಡ್ಡೆ, ಸಿಹಿ ಗೆಣಸು, ಕುಂಬಳಕಾಯಿಯAತಹ ಬೇರು ತರಕಾರಿಗಳನ್ನು ಸೇರಿಸುತ್ತಾರೆ. ಇವುಗಳಲ್ಲಿ ವಿಟಮಿನ್ ಬಿ, ಖನಿಜಗಳು ಮತ್ತು ನಾರಿನ ಪ್ರಮಾಣ ಹೇರಳವಾಗಿರುವ ಪಿಷ್ಟ ತರಕಾರಿಗಳಾಗಿವೆ. ಅದಾಗ್ಯೂ, ಅವು ನಿಮಗೆ ಬಹಳಷ್ಟು ಕ್ಯಾಲೊರಿಗಳನ್ನು ಒದಗಿಸುತ್ತವೆ. ಹಾಗಾಗಿ ಈ ರೀತಿಯ ತರಕಾರಿಗಳನ್ನು ಅತಿಯಾಗಿ ತಿನ್ನಬೇಡಿ. 

ಹಾಲು ಮತ್ತು ಡೈರಿ
ಉಪವಾಸ ದಿನದಲ್ಲಿ ದೇಹಕ್ಕೆ ಪ್ರೋಟೀನ್ ಮತ್ತು ಕ್ಯಾಲ್ಸಿಯಂ ಅವಶ್ಯಕತೆಗಳನ್ನು ಪೂರೈಸಲು ಹಾಲು ಮತ್ತು ಮೊಸರು, ಮಜ್ಜಿಗೆ ಮತ್ತು ಪನೀರ್ ಮತ್ತು ತುಪ್ಪದಂತಹ ಡೈರಿಗಳನ್ನು ಸೇವಿಸಿ.

ಚಹಾ ಮತ್ತು ಕಾಫಿ ಮುಟ್ಟಬೇಡಿ 
ಚಹಾ/ಕಾಫಿ ಸೇವಿಸುವುದರಿಂದ ಈ ಸಮಯದಲ್ಲಿ ದೂರ ಇರುವುದು ಒಳ್ಳೆಯದು. ಏಕೆಂದರೆ ಇವುಗಳಲ್ಲಿ ದೇಹವನ್ನು ನಿರ್ಜಲೀಕರಣಗೊಳಿಸುವ ಸಾಮರ್ಥ್ಯವಿದೆ. ಇದರ ಬದಲಿಗೆ ಎಳನೀರು, ನಿಂಬು ಪಾನಕ, ಮಜ್ಜಿಗೆ, ಮಿಲ್ಕ್ಶೇಕ್ ಅಥವಾ ಸರಳವಾದ ನೀರನ್ನು ಸೇವಿಸಿ.

ಆರೋಗ್ಯಕರ ತಿಂಡಿ ಆಯ್ಕೆ ಮಾಡಿ 
ಉಪವಾಸ ಮಾಡುವಾಗ ನೀವು ನಿರ್ದಿಷ್ಟ ಸಮಯದಲ್ಲಿ ಹಸಿದಿರಬಹುದು. ಆದ್ದರಿಂದ, ಹುರಿದ ಚಿಪ್ಸ್ ಅನ್ನು ತಿನ್ನುವುದಕ್ಕಿಂತ ಹೆಚ್ಚಾಗಿ ಬೇಯಿಸಿದ ಸಿಹಿ ಗೆಣಸುಗಳು, ಹಣ್ಣುಗಳು ಮತ್ತು ಒಣ ಹಣ್ಣು(Dry Fruits)ಗಳಂತಹ ಆರೋಗ್ಯಕರ ತಿಂಡಿಗಳನ್ನು ಆರಿಸಿಕೊಳ್ಳಿ. 

ಇದನ್ನೂ ಓದಿ: ನವರಾತ್ರಿ ಉಪವಾಸದ ನಂತ್ರ ಅಸಿಡಿಟಿ ಸಮಸ್ಯೆ ಕಾಡ್ಬಾರ್ದು ಅಂದ್ರೆ ಹೀಗ್ ಮಾಡಿ

ಸಕ್ಕರೆ ಸೇವನೆ ಬೇಡ
ಹಬ್ಬದ ಸಮಯದಲ್ಲಿ ತಯಾರಿಸುವ ಪಾಯಸ ಅಥವಾ ಹಲ್ವಾಗಳಲ್ಲಿ ಸಕ್ಕರೆಯ ಬಳಕೆ ತಪ್ಪಿಸಿ. ಪದಾರ್ಥದಲ್ಲಿನ ಪರಿಮಳ ಹಾಗೂ ರುಚಿ ಹೆಚ್ಚಿಸಲು ಹೆಚ್ಚು ಏಲಕ್ಕಿ, ಜೇನುತುಪ್ಪ, ಖರ್ಜೂರ, ದಾಲ್ಚಿನ್ನಿ ಮತ್ತು ತಾಜಾ ಹಣ್ಣುಗಳನ್ನು ಸೇರಿಸಲು ಪ್ರಯತ್ನಿಸಿ. 

ಪೋಷಕಾಂಶ ಹೆಚ್ಚಿರುವ ಆಹಾರ ಸೇವಿಸಿ 
ದೀರ್ಘ ಗಂಟೆಗಳ ಕಾಲದ ಉಪವಾಸವನ್ನು ಮೊದಲು ತಪ್ಪಿಸಿ. ನಿಮಗೆ ಸಾಕಷ್ಟು ಶಕ್ತಿಯನ್ನು ನೀಡಲು ಹಣ್ಣುಗಳು ಮತ್ತು ಒಣ ಹಣ್ಣು(ಡ್ರೆöÊ ಫ್ರೂಟ್ಸ್)ಗಳಂತಹ ಪೌಷ್ಟಿಕಾಂಶ ದಟ್ಟವಾದ ಆಹಾರವನ್ನು ಸೇವಿಸಿ.

ವೇಗದ ಸೇವನೆ ಬೇಡ
ಉಪವಾಸ ಮುಗಿಯುತ್ತಿದ್ದಂತೆ ಅತಿಯಾದ ಆಹಾರ ಸೇವನೆ ಒಳ್ಳೆಯದಲ್ಲ. ಉಪವಾಸ ಮುರಿದ ನಂತರ ಲಘು ಆಹಾರ ಸೇವಿಸಿ. ವೇಗವಾಗಿ ಹೊಟ್ಟೆ ಬಿಗಿಯುವಂತೆ ಆಹಾರ ಸೇವಿಸಿದರೆ ಗ್ಯಾಸ್ಟಿçಕ್, ಅಜೀರ್ಣದಂತಹ ಸಮಸ್ಯೆ ಕಾಣಿಸಿಕೊಳ್ಳಬಹುದು. ಉಪವಾಸ ಮಾಡುವಾಗ ನಂಬಿಕೆ ಮತ್ತು ಸಮಾಧಾನದೊಂದಿಗೆ ಮಾಡಿದರೆ ಆರೋಗ್ಯದ ಮೇಲೆ ಅಗಾಧ ಪ್ರಯೋಜನ ಪಡೆಯಬಹುದು. ಉಪವಾಸದ ಸಮಯದಲ್ಲಿ ಗರ್ಭಿಣಿ, ಹಾಲುಣಿಸುವ ತಾಯಂದಿರು, ತಿನ್ನುವ ಅಸ್ವಸ್ಥತೆ ಇರುವವರು ಮತ್ತು ದೀರ್ಘಕಾಲದ ಕಾಯಿಲೆ ಇರುವವರು, ಔಷಧಿ ಸೇವಿಸುವವರು ಈ ಬಗ್ಗೆ ಬಹಳ ಎಚ್ಚರಿಕೆಯಿಂದ ಇರಬೇಕು.

click me!