ಇದು ಫಂಕ್ಷನ್‌ಗಳ ಸಂದರ್ಭದಲ್ಲಾದರೆ, ಇತರೆ ದಿನಗಳಲ್ಲಿ ಇದೇ ರೀತಿ ಮೇಕಪ್ ಮಾಡಿಕೊಂಡಿರುವುದು ಅಸಾಧ್ಯ. ಹಾಗಾದರೆ ಪ್ರತೀ ದಿನ ಜಿಡ್ಡಿನ ಮತ್ತು ಬಾಡಿದ ಮುಖವನ್ನು ಹೊಂದಲು ಯಾರೂ ಸಹ ಇಷ್ಟಪಡುವುದಿಲ್ಲ. ದಿನವೂ ಬಳಸುವ ಫೇಸ್ ಪೌಡರ್ ಹೇಗಿರಬೇಕು? ಫೇಸ್ ಪೌಡರ್ ಹಚ್ಚುವುದರಿಂದ ಪ್ರಯೋಜನಗಳೇನು ಎಂಬುದರ ಬಗ್ಗೆ ಮಾಹಿತಿ ಇಲ್ಲಿದೆ.
ಮದುವೆಯಂತಹ ವಿಶೇಷ ಕಾರ್ಯಕ್ರಮಕ್ಕೆ ಹೋಗಬೇಕೆಂದರೆ ಚೆನ್ನಾಗಿ ಕಾಣಬೇಕೆನ್ನುವುದು ಎಲ್ಲರು ಕಾಸ್ಮೆಟಿಕ್ಸ÷್ಗಳ ಮೊರೆ ಹೋಗುವುದು ಸಾಮಾನ್ಯ. ಕಾಂತಿಯುತವಾದ ಮತ್ತು ಆಕರ್ಷಕ ಮುಖವನ್ನು ಪಡೆಯಲು ಮೇಕಪ್ ಅನ್ನುವುದು ಬಹಳ ಮುಖ್ಯವಾಗುತ್ತದೆ. ಮೇಕಪ್ ಕಿಟ್‌ನಲ್ಲಿ ಕ್ರೀಮ್, ಫೌಂಡೇಶನ್, ಲಿಪ್‌ಸ್ಟಿಕ್, ಫೇಸ್ ಪೌಡರ್ ಹೀಗೆ ಇತರೆ ಸೌಂದರ್ಯ ಉತ್ಪನ್ನಗಳು ಹೊಂದಿರಬೇಕು. ಇದು ಫಂಕ್ಷನ್‌ಗಳ ಸಂದರ್ಭದಲ್ಲಾದರೆ, ಇತರೆ ದಿನಗಳಲ್ಲಿ ಇದೇ ರೀತಿ ಮೇಕಪ್ ಮಾಡಿಕೊಂಡಿರುವುದು ಅಸಾಧ್ಯ. ಹಾಗಾದರೆ ಪ್ರತೀ ದಿನ ಜಿಡ್ಡಿನ ಮತ್ತು ಬಾಡಿದ ಮುಖವನ್ನು ಹೊಂದಲು ಯಾರೂ ಸಹ ಇಷ್ಟಪಡುವುದಿಲ್ಲ. ದಿನವೂ ಬಳಸುವ ಫೇಸ್ ಪೌಡರ್ ಹೇಗಿರಬೇಕು? ಫೇಸ್ ಪೌಡರ್ ಹಚ್ಚುವುದರಿಂದ ಪ್ರಯೋಜನಗಳೇನು ಎಂಬುದರ ಬಗ್ಗೆ ಮಾಹಿತಿ ಇಲ್ಲಿದೆ.
ಕೆಲವರ ಸ್ಕಿನ್‌ಗೆ ಅನುಗುಣವಾಗಿ ಫೇಸ್ ಪೌಡರ್ ಉಪಯೋಗಿಸುತ್ತಾರೆ. ಒಂದು ದಿನ ಪೌಡರ್ ಹಚ್ಚದಿದ್ದರೂ ಮುಖದಲ್ಲಿ ಆಗುವ ಬದಲಾವಣೆ ಸರಿ ಮಾಡಿಕೊಳ್ಳಲು ಒಂದು ವಾರ ಬೇಕಾಗುತ್ತದೆ. ಫೇಸ್ ಪೌಡರ್ ಒಂದು ವಿಶೇಷವಾಗಿ ತಯಾರಿಸಲಾದ ಕಾಸ್ಮೆಟಿಕ್ ಪೌಡರ್. ಚರ್ಮದ ಜೀವಿತಾವಧಿಯನ್ನು ಹೆಚ್ಚಿಸಲು, ಚರ್ಮದ ರಂಧ್ರಗಳು ಮತ್ತು ಮುಖದ ಮೇಲಿನ ಸೂಕ್ಷö್ಮ ರೇಖೆಗಳ ನೋಟವನ್ನು ಮರೆಮಾಡಲು ಇದನ್ನು ಹಚ್ಚಲಾಗುತ್ತದೆ. ಎಲ್ಲರಿಗೂ ಫೇಸ್ ಪೌಡರ್ ಅಗತ್ಯವಾದ ಸೌಂದರ್ಯವರ್ಧಕ ಉತ್ಪನ್ನವಾಗಿದೆ.ಚರ್ಮಕ್ಕೆ ಹಾಗೂ ಮುಖಕ್ಕೆ ಅನುಗುಣವಾಗಿ ಫೇಸ್ ಪೌಡರ್ ಆಯ್ಕೆ ಮಾಡಿಕೊಳ್ಳುವುದು ಒಳ್ಳೆಯದು. ಅಂದ ಹಾಗೆ ಫೇಸ್ ಪೌಡರ್‌ನಲ್ಲೂ ನಾನಾ ರೀತಿಯಲ್ಲಿವೆ.
2023ರಲ್ಲಿ ಸಿಗಲ್ಲ Johnson & Johnson ಬೇಬಿ ಪೌಡರ್; ವಿಶ್ವಾದ್ಯಂತ ಮಾರಾಟ ಸ್ಥಗಿತ ನಿರ್ಧಾರ ಪ್ರಕಟಿಸಿದ ಕಂಪನಿ
1. ಲೂಸ್ ಪೌಡರ್
ಇದು ಅತ್ಯುತ್ತಮ ಪೌಡರ್‌ಗಳಾಗಿದ್ದು, ಹಗುರವಾದ ವ್ಯಾಪ್ತಿಗೆ ಸೂಕ್ತವಾಗಿದೆ. ಸಾಮಾನ್ಯವಾಗಿ ಇದನ್ನು ಮನೆಯಲ್ಲಿ ಬಳಸುವುದು ಸೂಕ್ತ. ಇದನ್ನು ಬಳಸಿದರೆ ಮುಖದ ತ್ವಚೆಯು ಮೃದು ಹಾಗೂ ಹೊಳೆಯುವಂತೆ ಮಾಡುತ್ತದೆ.
2. ಅರೆ ಪಾರದರ್ಶಕ ಪೌಡರ್
ಇದು ವ್ಯಕ್ತಿಯ ಟೋನ್ಗೆ ಅನುಗುಣವಾಗಿ ತಯಾರಿಸಲಾಗುತ್ತದೆ. ಅರೆ ಪಾರದರ್ಶಕ ಪೌಡರ್ ಮುಖಕ್ಕೆ ಮ್ಯಾಟ್ ಫಿನಿಶ್ ನೀಡುತ್ತದೆ ಮತ್ತು ಭಾರವಾಗುವುದಿಲ್ಲ.
3. ಪೌಡರ್ಸೆಟ್ಟಿಂಗ್ ಪುಡಿ
ಇದು ಪೋಸ್ಟ್ ಫೌಂಡೇಶನ್‌ನಲ್ಲಿ ಬಳಸಲಾಗುತ್ತದೆ. ಮುಂದಿನ ಮೇಕಪ್‌ಗೆ ಇದು ಅಡಿಪಾಯದಂತೆ ಕೆಲಸ ಮಾಡುತ್ತದೆ. ಚರ್ಮದಿಂದ ಬಿಡುಗಡೆಯಾಗುವ ಹೆಚ್ಚುವರಿ ಎಣ್ಣೆಯನ್ನು ತೆಗೆದುಹಾಕುತ್ತದೆ ಮತ್ತು ಜಿಗುಟು ಭಾವನೆ ಮತ್ತು ಹೊಳಪನ್ನು ಕಡಿಮೆ ಮಾಡುತ್ತದೆ.
4. ಪ್ರೆಸ್ಸಡ್ ಪೌಡರ್
ಕಾಂಪ್ಯಾಕ್ಟ್ ಅಥವಾ ಪ್ರೆಸ್ಸಡ್ ಪೌಡರ್ ಎಲ್ಲಾ ಮಹಿಳೆಯರ ವ್ಯಾನಿಟಿ ಬ್ಯಾಗ್‌ನಲ್ಲಿ ಇರುವ ಪುಟ್ಟ ಪೌಡರ್. ಇದರಲ್ಲೂ ವಿಭಿನ್ನ ಸ್ಕಿನ್ ಟೋನ್ಗಳಿಗೆ ಸೂಕ್ತವಾದ ವಿಭಿನ್ನ ಛಾಯೆಗಳಲ್ಲಿ ಬರುತ್ತವೆ. ಇದನ್ನು ಹೆಚ್ಚಾಗಿ ಫೌಂಡೇಶನ್ ರೂಪದಲ್ಲಿ ಬಳಸಲಾಗುತ್ತದೆ.
5. ಎಚ್‌ಡಿ ಪುಡಿ ಮತ್ತು ಫಿನಿಶಿಂಗ್ ಪೌಡರ್
ಈ ಪೌಡರ್‌ಗಳು ಮುಖಕ್ಕೆ ಕಾಮತಿಯುತ ಮೈಬಣ್ಣವನ್ನು ನೀಡುತ್ತದೆ. ಇದನ್ನು ಹೆಚ್ಚಾಗಿ ಟಿವಿ ನಿರೂಪಕರು ಬಳಸುತ್ತಾರೆ. ಏಕೆಂದರೆ ಈ ಪೌಡರ್‌ಗಳು ಪ್ರಕಾಶ ಮಾನವಾದ ದೀಪ ಮತ್ತು ಕ್ಯಾಮೆರಾ ಎದುರು ಕೆಲಸ ಮಾಡುತ್ತವೆ.
ಬೇಬಿ ಪೌಡರ್ ಮಗುವಿನ ಆರೋಗ್ಯಕ್ಕೆ ಡೆಂಜರ್ ಆಗಬಹುದೇ?
ಪ್ರಯೋಜನಗಳು
1 ಫೇಸ್ ಪೌಡರ್ ತ್ವಚೆಗೆ ದೈವಿಕ ಹೊಳಪನ್ನು ನೀಡುತ್ತದೆ. ಜೊತೆಗೆ ಅದನ್ನು ನಯವಾಗಿ ಮತ್ತು ಹೆಚ್ಚು ಟೋನ್ ಆಗಿ ಕಾಣುವಂತೆ ಮಾಡುತ್ತದೆ.
2. ಫೇಸ್ ಪೌಡರ್‌ಗಳು ಹೆಚ್ಚಿನ ಫೌಂಡೇಶನ್ ಮತ್ತು ಮಾಯಿಶ್ಚರೈಸರ್‌ಗಳಿಗೆ ಹೋಲಿಸಿದರೆ ಶಾಶ್ವತ ಪರಿಣಾಮ ಬೀರುವುದು ಹೆಚ್ಚು. ಚರ್ಮವು ಆರೋಗ್ಯಕರವಾಗಿ ಮತ್ತು ಹೊಳೆಯುವಂತೆ ಮಾಡುವಲ್ಲಿ ಬಹಳ ಪ್ರಮುಖ ಪಾತ್ರ ವಹಿಸುತ್ತವೆ. ಮೇಕಪ್‌ನಲ್ಲಿಯೂ ದೊಡ್ಡ ಪಾತ್ರ ವಹಿಸುತ್ತದೆ.
3. ತ್ವಚೆಯ ಮತ್ತು ತೇಪೆಗಳ ಜಿಡ್ಡಿನಾಂಶವನ್ನು ತೆಗೆದುಹಾಕಲು ಪೌಡರ್ ಸಹಾಯಕವಾಗುತ್ತದೆ. ಮುಖಕ್ಕೆ ಹಚ್ಚುವುದರಿಂದ ಎಣ್ಣೆಯುಕ್ತ ತ್ವಚೆಯನ್ನು ಹೊಂದುವAತೆ ಮಾಡುತ್ತದೆ.
4. ಫೇಸ್ ಪೌಡರ್ ಬಳಸುವುದರಿಂದ ಬೆವರು ಉತ್ಪಾದನೆ ಕಡಿಮೆ ಮಾಡುತ್ತದಲ್ಲದೆ, ದೇಹದ ವಾಸನೆಯನ್ನು ನಿಲ್ಲಿಸಲು ಮತ್ತು ಶಿಲೀಂಧ್ರಗಳ ಸೋಂಕನ್ನು ತಡೆಯಲು ಸಹಾಯ ಮಾಡುತ್ತದೆ.
5. ಮುಖಕ್ಕೆ ಪೌಡರ್ ಹಚ್ಚುವುದರಿಂದ ಕಾಂತಿಯುತ, ಹೊಳೆಯುವ ಮತ್ತು ಆರೋಗ್ಯಕರ ಚರ್ಮ ನೀಡುವುದಲ್ಲದೆ, ಮೊಡವೆ, ಕಲೆಗಳು ಮುಂತಾದ ಚರ್ಮದ ಸಮಸ್ಯೆಗಳನ್ನು ಹೋಗಲಾಡಿಸುವಂತೆ ಮಾಡುತ್ತದೆ.
6. ವಯಸ್ಸಾದ ಚಿಹ್ನೆಗಳು ಮುಖದಲ್ಲಿ ಮೂಡಿದ್ದರೆ ಈ ಬಗ್ಗೆ ಚಿಂತೆ ಪಡುವವರು ಇದ್ದಾರೆ. ಫೇಸ್ ಪೌಡರ್ ಹಚ್ಚುವುದರಿಂದ ಮುಖದಲ್ಲಿ ಕಾಣಿಸಿಕೊಳ್ಳುವ ಸುಕ್ಕು, ಬಹು ಬೇಗನೆ ವಯಸ್ಸಾಗುವುದು ಈ ರೀತಿಯ ಸಮಸ್ಯೆಗಳು ನಿವಾರಣೆಯಾಗುತ್ತದೆ.
7. ಫೇಸ್ ಪೌಡರ್ ಹಚ್ಚಿಕೊಂಡು ಹೊರಗಡೆ ಹೋಗುವುದರಿಂದ ಮುಖದ ಟೋನ್ ಆಗುವುದು, ಚರ್ಮದ ಟ್ಯಾನ್ ಆಗುವುದನ್ನು ತಡೆಯುತ್ತದೆ.