
ಒಳ ಉಡುಪುಗಳು ದೇಹದಿಂದ ಬೆವರು, ದೇಹದ ದ್ರವಗಳು ಮತ್ತು ಇತರ ದ್ರವಗಳನ್ನು ಹೀರಿಕೊಳ್ಳುತ್ತವೆ ಮತ್ತು ಅವು ಹೊರಗಿನ ಬಟ್ಟೆಗಳಿಗೆ ಅಂಟಿಕೊಳ್ಳದಂತೆ ತಡೆಯುತ್ತವೆ. ಹಾಗಾದರೆ, ಅಂತಹ ಒಳ ಉಡುಪುಗಳಿಗೆ ಎಕ್ಸ್‌ಪೈರಿ ಡೇಟ್ ಇದ್ಯಾ?
ಅಂಡರ್‌ವೇರ್‌ಗೆ ನಿರ್ದಿಷ್ಟ ' ಎಕ್ಸ್‌ಪೈರಿ ಡೇಟ್' ಇಲ್ಲ . ಅಂದರೆ ಆಹಾರ ಪದಾರ್ಥಗಳಿಗೆ ಇರುವ ಹಾಗೇ, ಯಾವುದೇ ಮುಕ್ತಾಯ ದಿನಾಂಕವಿಲ್ಲ. ಆದಾಗ್ಯೂ, ನೈರ್ಮಲ್ಯ ಮತ್ತು ಸೌಕರ್ಯಕ್ಕಾಗಿ ಅವುಗಳನ್ನು ಕಾಲಕಾಲಕ್ಕೆ ಬದಲಾಯಿಸುವುದು ಅಥವಾ ಹೊಸದನ್ನು ಖರೀದಿಸುವುದು ಮುಖ್ಯ. NYU ಸ್ಕೂಲ್ ಆಫ್ ಮೆಡಿಸಿನ್ ಪ್ರಾಧ್ಯಾಪಕ ಫಿಲಿಪ್ ಟಿಯರ್ನ್ ಪ್ರಕಾರ, ಅವುಗಳನ್ನು ಪ್ರತಿ ಎಂಟು ತಿಂಗಳಿಂದ ಒಂದು ವರ್ಷಕ್ಕೆ ಬದಲಾಯಿಸಬೇಕು.
ಒಳ ಉಡುಪುಗಳಲ್ಲಿ ರಂಧ್ರಗಳು, ತೆಳು ಇದ್ದಾಗ ಅದನ್ನು ಬದಲಾಯಿಸಬೇಕು. ಅವು ಸರಿಯಾಗಿ ಹೊಂದಿಕೊಳ್ಳದಿದ್ದರೆ ಅವು ಆರಾಮದಾಯಕವಲ್ಲ.
ಸೊಂಟದ ಸುತ್ತಲಿನ ಎಲಾಸ್ಟಿಕ್ ಅಥವಾ ತೊಡೆಯ ಸುತ್ತಲಿನ ಎಲಾಸ್ಟಿಕ್ ಸಡಿಲವಾಗಿದ್ದರೆ ಮತ್ತು ಒಳ ಉಡುಪು ಜಾರಿಬೀಳುತ್ತಿದ್ದರೆ ಅಥವಾ ಸರಿಯಾಗಿ ಹಿಡಿದಿಲ್ಲದಿದ್ದರೆ, ಅದನ್ನು ಬದಲಾಯಿಸಬೇಕು.
ಎಷ್ಟೇ ತೊಳೆದರೂ ಹೋಗದ ಕಲೆಗಳು (ವಿಶೇಷವಾಗಿ ಯೋನಿ ಡಿಸ್ಚಾರ್ಜ್, ರಕ್ತದ ಕಲೆಗಳು ಅಥವಾ ಇತರ ದೇಹದ ದ್ರವ ಕಲೆಗಳು) ಇದ್ದಾಗ ಅವುಗಳನ್ನು ಬದಲಾಯಿಸುವುದು ಒಳ್ಳೆಯದು.
ಸರಿಯಾಗಿ ತೊಳೆದ ನಂತರವೂ ಕೆಟ್ಟ ವಾಸನೆ ಬಂದರೆ, ಬ್ಯಾಕ್ಟೀರಿಯಾಗಳು ಸಂಗ್ರಹವಾಗಿವೆ ಎಂದರ್ಥ. ಇದು ನೈರ್ಮಲ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಅದಕ್ಕಾಗಿಯೇ ಅವುಗಳನ್ನು ಬದಲಾಯಿಸಬೇಕು.
ಒಳ ಉಡುಪು ತನ್ನ ಮೂಲ ಆಕಾರವನ್ನು ಕಳೆದುಕೊಂಡಾಗ, ಸಡಿಲವಾದಾಗ ಅಥವಾ ಸರಿಯಾದ ಬೆಂಬಲವನ್ನು ನೀಡದಿದ್ದಾಗ ಅದು ಇನ್ನು ಮುಂದೆ ಆರಾಮದಾಯಕವಾಗುವುದಿಲ್ಲ. ಅಂತಹ ಸಮಯದಲ್ಲಿ, ಅವುಗಳನ್ನು ಬದಲಾಯಿಸಬೇಕು.
ನೈರ್ಮಲ್ಯದ ಕಾರಣಗಳು
ಕಾಲಾನಂತರದಲ್ಲಿ, ಯೀಸ್ಟ್ ಮತ್ತು ಇ. ಕೋಲಿಯಂತಹ ಬ್ಯಾಕ್ಟೀರಿಯಾಗಳು ಒಳ ಉಡುಪುಗಳ ನಾರುಗಳಲ್ಲಿ ಸಂಗ್ರಹವಾಗಬಹುದು. ಸರಿಯಾಗಿ ತೊಳೆದರು ಇದು ಸಂಪೂರ್ಣವಾಗಿ ಹೋಗುವುದಿಲ್ಲ. ಈ ಬ್ಯಾಕ್ಟೀರಿಯಾಗಳು ಮೂತ್ರನಾಳದ ಸೋಂಕು ಅಥವಾ ಯೀಸ್ಟ್ ಸೋಂಕುಗಳಿಗೆ ಕಾರಣವಾಗಬಹುದು. ಆದ್ದರಿಂದ, ನೈರ್ಮಲ್ಯವನ್ನು ಕಾಪಾಡಿಕೊಳ್ಳಲು ಪ್ರತಿ 6 ತಿಂಗಳಿಂದ 1 ವರ್ಷಕ್ಕೊಮ್ಮೆ ನಿಮ್ಮ ಸಂಪೂರ್ಣ ಒಳ ಉಡುಪು ಬದಲಾಯಿಸಲು ತಜ್ಞರು ಶಿಫಾರಸು ಮಾಡುತ್ತಾರೆ. ಇದು ನೀವು ಅವುಗಳನ್ನು ಎಷ್ಟು ಬಾರಿ ಧರಿಸುತ್ತೀರಿ ಮತ್ತು ನೀವು ಅವುಗಳನ್ನು ಹೇಗೆ ತೊಳೆಯುತ್ತೀರಿ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ.
ಒಳ ಉಡುಪು ಸುರಕ್ಷತೆಗೆ ಸಲಹೆಗಳು
ಪ್ರತಿದಿನ ಒಳ ಉಡುಪುಗಳನ್ನು ಬದಲಾಯಿಸುವುದು ಅತ್ಯಗತ್ಯ. ವ್ಯಾಯಾಮ ಮಾಡುವಾಗ ಅಥವಾ ಹೆಚ್ಚು ಬೆವರು ಇದ್ದಾಗ ದಿನಕ್ಕೆ ಎರಡು ಬಾರಿ ಅದನ್ನು ಬದಲಾಯಿಸುವುದು ಉತ್ತಮ.
ಬಿಸಿ ನೀರಿನಲ್ಲಿ ಒಳ ಉಡುಪುಗಳನ್ನು ತೊಳೆಯುವುದರಿಂದ ಬ್ಯಾಕ್ಟೀರಿಯಾವನ್ನು ಪರಿಣಾಮಕಾರಿಯಾಗಿ ತೆಗೆದುಹಾಕಬಹುದು.
ಸಾಧ್ಯವಾದಾಗಲೆಲ್ಲಾ ಅವುಗಳನ್ನು ಬಿಸಿಲಿನಲ್ಲಿ ಒಣಗಿಸಿ. ಸೂರ್ಯನ ಬೆಳಕು ನೈಸರ್ಗಿಕ ಸೋಂಕುನಿವಾರಕವಾಗಿ ಕಾರ್ಯನಿರ್ವಹಿಸುತ್ತದೆ.
ಹತ್ತಿಯಂತಹ ಉಸಿರಾಡುವ ಬಟ್ಟೆಗಳನ್ನು ಆರಿಸಿ, ಏಕೆಂದರೆ ಅವು ತೇವಾಂಶವನ್ನು ಹೀರಿಕೊಳ್ಳುತ್ತವೆ ಮತ್ತು ಬ್ಯಾಕ್ಟೀರಿಯಾದ ಬೆಳವಣಿಗೆಯನ್ನು ಕಡಿಮೆ ಮಾಡುತ್ತವೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.