Medicine Expiry: ಅವಧಿ ಮುಗಿದರೂ ಸೇವಿಸಬಹುದಾದ ಔಷಧಿ ಯಾವುದು ಗೊತ್ತಾ?

By Suvarna NewsFirst Published Dec 3, 2021, 8:09 PM IST
Highlights

ಅವಧಿ ಮುಗಿದ ಆಹಾರ,ಕ್ರೀಂ ಉಪಯೋಗ ಅಪಾಯಕಾರಿ. ಅನೇಕರು ಇವುಗಳನ್ನು ಕಸಕ್ಕೆ ಹಾಕುತ್ತಾರೆ. ಅವಧಿ ಮೀರಿದ ಔಷಧಿ-ಮಾತ್ರೆಗಳ ಬಳಕೆಯೂ ತುಂಬಾ ಅಪಾಯಕಾರಿ ಎಂಬ ಮಾತಿದೆ. ಆದ್ರೆ ಕೆಲವೊಂದು ಮಾತ್ರೆಗಳು ಅವಧಿ ಮುಗಿದರೂ ಔಷಧಿ ಗುಣ ಹೊಂದಿರುತ್ತವೆ. ಅವು ಯಾವುವು? ಅವಧಿ ಮುಗಿದ ಔಷಧಿ ಸೇವನೆ ಎಷ್ಟು ಯೋಗ್ಯ ಎಂಬ ಮಾಹಿತಿ ಇಲ್ಲಿದೆ.

ಪ್ಯಾಕೇಜ್ ಆಹಾರದಿಂದ ಹಿಡಿದು,ಸೌಂದರ್ಯ ವರ್ದಕ ಸೇರಿದಂತೆ ಔಷಧಿ-ಮಾತ್ರೆಗಳನ್ನು ತಯಾರಿಸಿದ ನಂತರ ಅದನ್ನು ಕೊನೆಯದಾಗಿ ಯಾವಾಗ ಬಳಸಬೇಕೆಂದು ದಿನಾಂಕ ನಮೂದಿಸಲಾಗುತ್ತದೆ. ಅದಕ್ಕೆ ಎಕ್ಸ್ ಪೈರಿ ಡೇಟ್  (Expiry date ) ಎನ್ನಲಾಗುತ್ತದೆ. ಆ ದಿನಾಂಕ ಮುಗಿದರೆ ಅದನ್ನು ಅವಧಿ ಮುಗಿದ ಔಷಧಿ,ಆಹಾರ ಎನ್ನಲಾಗುತ್ತದೆ. ಅನೇಕರು ಈ ಅವಧಿಯನ್ನು ನಂಬುವುದಿಲ್ಲ. ಇದು ಸುಳ್ಳು ಎನ್ನುವ ಮೂಲಕ,ಅದರ ಬಳಕೆ ಮುಂದುವರೆಸುತ್ತಾರೆ. ಕೆಲ ಔಷಧಿಗಳು ಅವಧಿ ಮುಗಿದ ಕೆಲ ದಿನ ಬಳಸಲು ಯೋಗ್ಯವಾಗಿರುತ್ತವೆ. ಮತ್ತೆ ಕೆಲವು ಅವಧಿ ಮುಗಿದ ನಂತ್ರ ಬಳಕೆಗೆ ಬರುವುದಿಲ್ಲ.   ಮೊದಲು, ಔಷಧಿಯ ಅವಧಿ ಮುಗಿಯುವುದು(Expiry date) ಎಂಬುದರ ಅರ್ಥವೇನು ಎಂಬುದನ್ನು ತಿಳಿಯಬೇಕು. ಎಲ್ಲ ಔಷಧಿಗಳ ಮೇಲೆ ಎರಡು ದಿನಾಂಕವನ್ನು ಕಾಣಬಹುದು. ಮೊದಲು ಅದನ್ನು ತಯಾರಿಸಿದ  ದಿನಾಂಕವರುತ್ತದೆ. ನಂತರ ಮುಕ್ತಾಯದ ದಿನಾಂಕವಿರುತ್ತದೆ. ಮುಕ್ತಾಯದ ದಿನಾಂಕದ ನಂತರ ಔಷಧಿ ಬಳಸಿ,ಅದರಿಂದಾಗುವ ಪರಿಣಾಮದ ಹೊಣೆಯನ್ನು ಔಷಧಿ ಕಂಪನಿಗಳು ಹೊರುವುದಿಲ್ಲ.   

ಎಲ್ಲರಿಗೂ ತಿಳಿದಂತೆ ಔಷಧಿಗಳು (Drugs ) ರಾಸಾಯನಿಕಗಳಾಗಿವೆ (chemicals). ಎಲ್ಲಾ ರಾಸಾಯನಿಕ ವಸ್ತುಗಳ ವಿಶೇಷತೆಯೆಂದರೆ ಅವುಗಳ ಪರಿಣಾಮವು ಕಾಲಾನಂತರದಲ್ಲಿ ಬದಲಾಗುತ್ತದೆ. ಅನೇಕ ಬಾರಿ, ಗಾಳಿ, ತೇವಾಂಶ, ಶಾಖ ಇತ್ಯಾದಿಗಳಿಂದಾಗಿ ಔಷಧಿಯಲ್ಲಿರುವ ರಾಸಾಯನಗಳು ಬದಲಾಗುತ್ತವೆ. ಔಷಧಿ ಪರಿಣಾಮ ನಿಧಾನವಾಗಿ ಕಡಿಮೆಯಾಗುತ್ತದೆ.  

ಅವಧಿ ಮುಗಿದ ನಂತರ ಔಷಧಿ ಸೇವನೆ ಮಾಡುವುದರಿಂದ ಅದು ನಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು. ಇದೇ ಕಾರಣಕ್ಕೆ ಎಲ್ಲಾ ಔಷಧಿ ಕಂಪನಿಗಳು ತಮ್ಮ ಉತ್ಪನ್ನಗಳ ಮೇಲೆ ನಿಗದಿತ ದಿನಾಂಕವನ್ನು ಹಾಕುತ್ತವೆ.  

ಕಿಡ್ನಿ ಆರೋಗ್ಯಕ್ಕೆ ಈ ಯೋಗ ಒಳಿತು

ಅಮೆರಿಕದ ವೈದ್ಯಕೀಯ ಸಂಸ್ಥೆ AMA 2001ರಲ್ಲಿ ಈ ಬಗ್ಗೆ ತನಿಖೆ ನಡೆಸಿದೆ. 122 ವಿವಿಧ ಔಷಧಗಳ 3000 ಬ್ಯಾಚ್‌ಗಳನ್ನು ತನಿಖೆಗೆ ಬಳಸಿದ್ದಾರೆ. ತನಿಖೆ ನಂತರ, ಹೆಚ್ಚಿನ ಔಷಧಿಗಳು ಅವಧಿ ಮುಗಿದ ದಿನಾಂಕಕಿಂತ ಹೆಚ್ಚು ಕೆಲಸ ಮಾಡುವ ಸಾಮರ್ಥ್ಯವನ್ನು ಹೊಂದಿರುತ್ತವೆ ಎಂಬ ವಿಷ್ಯವನ್ನು ಬಹಿರಂಗಪಡಿಸಲಾಗಿದೆ.    

ಅವಧಿ ಮುಗಿದ ನಂತರವೂ ಔಷಧಿಗಳನ್ನು ಸೇವಿಸಬಹುದೇ? : 
ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ. ಆದ್ರೆ ಔಷಧ ಟ್ಯಾಬ್ಲೆಟ್ ಅಥವಾ ಕ್ಯಾಪ್ಸುಲ್ ರೂಪದಲ್ಲಿದ್ದರೆ, ಅದರ ಪರಿಣಾಮವು ಅದರ ಮುಕ್ತಾಯ ದಿನಾಂಕದ ನಂತರ ಹೆಚ್ಚು ದಿನಗಳವರೆಗೆ ಇರುತ್ತದೆ ಎಂಬುದು ಗೊತ್ತಾಗಿದೆ. ಆದರೆ ಸಿರಪ್, ಕಣ್ಣಿನ ಡ್ರಾಪ್ಸ್ ಮತ್ತು ಚುಚ್ಚುಮದ್ದುಗಳನ್ನು ಅವಧಿ ಮುಗಿದ ನಂತರ ಬಳಸಬಾರದು.  
 
ಅವಧಿ ಮುಗಿದ ತಕ್ಷಣ ವಿಷವಾಗುವ ಔಷಧಿ:  ವೈದ್ಯಕೀಯ ಸಂಘದ ಪ್ರಕಾರ, ಕೆಲವು ಔಷಧಿಗಳು ಅವಧಿ ಮುಗಿದ ನಂತರ ವಿಷವಾಗುತ್ತವೆ. ಅವಧಿ ಮುಗಿದ ನಂತರ ಅವುಗಳನ್ನು ಬಳಸಬಾರದು. ಮಧುಮೇಹದ ಔಷಧಿ, ಎದೆನೋವಿನ ಸಂದರ್ಭದಲ್ಲಿ ಹೃದಯ ರೋಗಿಗಳಿಗೆ ನೀಡಲಾಗುವ ಔಷಧಿ ಇದರಲ್ಲಿ ಸೇರಿದೆ. ಹಾಗೆ ಯಾವುದೇ ಮಾತ್ರೆಯ ರ್ಯಾಪರ್ ತೆಗೆದ ತಕ್ಷಣ ಸೇವನೆ ಮಾಡಬೇಕು. ರ್ಯಾಪರ್ ತೆಗೆದಿಟ್ಟು ದೀರ್ಘ ಸಮಯದ ನಂತರ ಅಥವಾ ಕೆಲ ದಿನಗಳ ನಂತರ ಬಳಸಬಾರದು.   

ಡ್ರೋನ್‌ನಲ್ಲಿ ತಲುಪಿತು ಅಗತ್ಯ ಔಷಧಿ

ಇತ್ತೀಚಿನ ದಿನಗಳಲ್ಲಿ ಗೂಗಲ್ ಸರ್ಚ್,ಜನರಿಗೆ ಆಪ್ತವಾಗಿದೆ. ವೈದ್ಯರಿಗಿಂತ,ಗೂಗಲ್ ಹೇಳುವುದನ್ನು ಜನರು ಕೇಳಲು ಶುರು ಮಾಡಿದ್ದಾರೆ. ಸಣ್ಣ ಖಾಯಿಲೆ ಕಾಣಿಸಿಕೊಂಡರೂ ಗೂಗಲ್ ನಲ್ಲಿ ಹುಡುಕಾಟ ನಡೆಸಿ,ಮಾತ್ರೆ ಸೇವನೆ ಮಾಡುತ್ತಾರೆ. ಅದರ ಅಡ್ಡ ಪರಿಣಾಮಗಳ ಬಗ್ಗೆ ಆಲೋಚನೆ ಮಾಡುವುದಿಲ್ಲ. ಇದು ಸಂಪೂರ್ಣ ತಪ್ಪು. ಯಾವುದೇ ಸಮಸ್ಯೆ ಎದುರಾದರೂ ಮೊದಲು ವೈದ್ಯರನ್ನು ಭೇಟಿಯಾಗಬೇಕು. ನಿಮ್ಮ ಬಳಿ ಮೊದಲೇ ಮಾತ್ರೆಯಿದ್ದರೂ,ಸೇವನೆಗಿಂತ ಮೊದಲು ವೈದ್ಯರ ಸಲಹೆ ಪಡೆಯಬೇಕು. ಕೆಲವೊಮ್ಮೆ ರೋಗ ಲಕ್ಷಣ ಒಂದೇ ರೀತಿಯಲ್ಲಿರುತ್ತದೆ. ಆದರೆ ರೋಗ ಬೇರೆಯಾಗಿರುತ್ತದೆ. ನೀವು ತಪ್ಪಾಗಿ ಸೇವಿಸುವ ಮಾತ್ರೆ ನಿಮ್ಮ ಆರೋಗ್ಯ ಹಾಳು ಮಾಡಬಹುದು ಎಚ್ಚರ. 

click me!