ಟೂತ್‌ಪೇಸ್ಟ್ ಖರೀದಿಸುವಾಗ ಇವಿಷ್ಟು ವಿಚಾರ ಗಮನಿಸ್ಲೇಬೇಕು

By Suvarna NewsFirst Published Jun 14, 2022, 5:04 PM IST
Highlights

ಟೂತ್‌ಪೇಸ್ಟ್‌ (Toothpaste) ನೀವು ಹೇಗೆ ಖರೀದಿ ಮಾಡ್ತೀರಾ ? ಫ್ಲೇವರ್, ಟೂತ್‌ಪೇಸ್ಟ್ ಕಲರ್ (Colour) ನೋಡ್ತೀರಾ ? ಅಷ್ಟೇ ಸಾಕಾಗಲ್ಲ ಬಿಡಿ, ನೀವು ಬಳಸೋ ಟೂತ್‌ಪೇಸ್ಟ್‌  ಹಲ್ಲನ್ನು (Teeth) ಸದೃಢವಾಗಿಡ್ಬೇಕು ಅಂದ್ರೆ ಟೂತ್‌ಪೇಸ್ಟ್ ಖರೀದಿಸುವ ಇವಿಷ್ಟು ವಿಚಾರ ಗಮನಿಸ್ಲೇಬೇಕು

ಹಿಂದೆಲ್ಲಾ ಬೇವಿನ ಕಡ್ಡಿ, ಮೊದಲಾದವುಗಳನ್ನು ಬಳಸಿ ಹಲ್ಲುಜ್ಜುತ್ತಿದ್ದರು. ಆದ್ರೆ ಈಗ್ಲೋ ಅವೆಲ್ಲಾ ನೋಡೋದಕ್ಕೇ ಇಲ್ಲ. ಬದಲಿಗೆ ಉಪ್ಪು, ಲವಂಗ ಎಲ್ಲಾ ಸೇರಿಸಿದ್ದೀವಿ ಅನ್ನೋ ವೆರೈಟಿ ವೆರೈಟಿ ಟೂತ್‌ಪೇಸ್ಟ್ (Toothpaste) ಬರುತ್ತೆ. ಟೂತ್‌ಪೇಸ್ಟ್ ಇರೋದು ಜಸ್ಟ್ ಬ್ರಶ್‌ಗೆ ಹಾಕ್ಕೊಂಡು ಹಲ್ಲುಜ್ಜೋಕೆ. ಆದ್ರೆ ಅದ್ರಲ್ಲೂ ಎಷ್ಟೊಂದು ವೆರೈಟಿ ಬರುತ್ತೆ ಅಂದ್ರೆ ಅಬ್ಬಬ್ಬಾ..ಮಾರ್ನಿಂಗ್ ಫ್ರೆಶ್‌ನರ್‌, ಲವಂಗ, ನೀಮ್‌ ಹಾಕಿರೋದು ಹೀಗೆ ಹಲವು ವೆರೈಟಿಯ ಟೂತ್‌ಪೇಸ್ಟ್‌ಗಳು. ಕೆಂಪು, ನೀಲಿ, ಬಿಳಿ, ಹಸಿರು ಹಲವು ವಿಧದ ಬಣ್ಣಗಳು (Colours). ಕಲರ್, ಫ್ಲೇವರ್ ಚೆನ್ನಾಗಿದೆ ಅಂತ್ಹೇಳಿ ಟೂತ್‌ಪೇಸ್ಟ್‌ ಖರೀದಿಸೋದನ್ನು ಬಿಟ್ಬಿಡಿ. ಮೊದ್ಲಿಗೆ ಯಾವ ಟೂತ್‌ಪೇಸ್ಟ್‌ ನಿಮ್ಮ ಹಲ್ಲಿನ ಆರೋಗ್ಯ (Teeth Health)ಕ್ಕೆ ಒಳ್ಳೇದು ಅನ್ನೋದನ್ನು ತಿಳ್ಕೊಳ್ಳೋದು ಒಳ್ಳೇದು.

ಹಲ್ಲುಗಳು ಮಾನವ ದೇಹದ ಅವಿಭಾಜ್ಯ ಅಂಗವಾಗಿದೆ. ವಿಶೇಷವಾಗಿ ಪ್ರಾಚೀನ ಕಾಲದಲ್ಲಿ, ಹಲ್ಲುಗಳು ವ್ಯಕ್ತಿಯ ಆರೋಗ್ಯದ ಸೂಚಕವಾಗಿತ್ತು. ಮೊದಲು, ಹಲ್ಲುಗಳನ್ನು ಸ್ವಚ್ಛಗೊಳಿಸಲು ಮರದ ಕಾಂಡಗಳನ್ನು, ಎಲೆಗಳನ್ನು ಬಳಸಲಾಗುತ್ತಿತ್ತು. ನಂತರದ ದಿನದಲ್ಲಿ ಟೂತ್‌ಪೇಸ್ಟ್‌ನ ಆವಿಷ್ಕಾರವಾಯಿತು. ಕ್ರಮೇಣ, ಟೂತ್‌ಪೇಸ್ಟ್‌ ಸಾಂಪ್ರದಾಯಿಕ ವಿಧಾನಗಳಿಗೆ ಪರ್ಯಾಯವಾಗಿ ಹೊರಹೊಮ್ಮಿತು. ಆದರೆ ನೀವು ಬಳಸುತ್ತಿರುವ ಟೂತ್‌ಪೇಸ್ಟ್‌ನ ಪ್ರಕಾರವನ್ನು ನೀವು ಎಂದಾದರೂ ಗಮನಿಸಿದ್ದೀರಾ ? ಇದು ಹಲ್ಲುಗಳಿಗೆ ಸೂಕ್ತವೇ ಅಲ್ಲವೇ ಎಂಬುದನ್ನು ಕಂಡು ಕೊಂಡಿದ್ದೀರಾ ? ಇಲ್ಲವಾದಲ್ಲಿ ಇಲ್ಲಿದೆ ನಿಮ್ಮ ಉಪಯೋಗಕ್ಕೆ ಬರುವಂಥಹಾ ಮಾಹಿತಿ.

ಹಲ್ಲುಗಳ ಬಣ್ಣಗೆಡಿಸೋ ಆಹಾರಗಳಿವು, ತಿಂದ್ರೆ ಕಲೆ ಹಾಗೇ ಉಳಿದುಬಿಡುತ್ತೆ !

ಮುಖ್ಯವಾಗಿ ಟೂತ್‌ಪೇಸ್ಟ್ ಖರೀದಿಸುವಾಗ ಟೂತ್‌ಪೇಸ್ಟ್‌ನ ಕೆಳಭಾಗದಲ್ಲಿರುವ ಗುರುತನ್ನು ಗ್ರಾಹಕರು (Customers) ನೋಡಿಕೊಳ್ಳಬೇಕಾದುದು ಬಹಳ ಮುಖ್ಯವಾಗಿದೆ ಹಾಗಿದ್ರೆ ಟೂತ್‌ಪೇಸ್ಟ್ ಯಾವ ಬಣ್ಣ, ಏನನ್ನು ಸೂಚಿಸುತ್ತದೆ ಎಂಬುದನ್ನು ತಿಳಿಯೋಣ.

ಕಪ್ಪು: ಕೊಳವೆಯ ಕೆಳಭಾಗದಲ್ಲಿ ಕಪ್ಪು ಗುರುತು ಕಂಡುಬಂದರೆ, ಅದು ನಿಮ್ಮ ಹಲ್ಲುಗಳಿಗೆ ಅಪಾಯದ ಸಂಕೇತವಾಗಿದೆ. ಕಪ್ಪು ಗುರುತು ಉತ್ಪನ್ನವು ಹೆಚ್ಚಿನ ಪ್ರಮಾಣದ ರಾಸಾಯನಿಕಗಳನ್ನು ಹೊಂದಿದ್ದು ಅದು ಹಲ್ಲುಗಳಿಗೆ ಹಾನಿಯನ್ನುಂಟುಮಾಡುತ್ತದೆ ಎಂದು ಸೂಚಿಸುತ್ತದೆ.

ಕೆಂಪು: ಪೇಸ್ಟ್‌ನಲ್ಲಿ ಕೆಂಪು ಗುರುತು ಕಂಡುಬಂದರೆ, ನೀವು ಹೆಚ್ಚು ಚಿಂತಿಸಬೇಕಾಗಿಲ್ಲ ಏಕೆಂದರೆ ಅದು ಕಪ್ಪು ಗುರುತುಗಿಂತ ಸ್ವಲ್ಪ ಉತ್ತಮವಾಗಿದೆ. ಉತ್ಪನ್ನವು ರಾಸಾಯನಿಕಗಳು ಮತ್ತು ನೈಸರ್ಗಿಕ ಅಂಶಗಳ ಮಿಶ್ರಣವಾಗಿದೆ ಎಂದು ಬಣ್ಣವು ಸಂಕೇತಿಸುತ್ತದೆ.

ನೀಲಿ: ನೀಲಿ ಗುರುತು ಹೊಂದಿರುವ ಟೂತ್‌ಪೇಸ್ಟ್ ಹಸಿರು ಸಿಗ್ನಲ್ ಇದ್ದಂತೆ. ಇದರಲ್ಲಿ ಯಾವುದೇ ಹಾನಿಕಾರಕ ರಾಸಾಯನಿಕಗಳಿಲ್ಲದೆ ಇದನ್ನು ಸುರಕ್ಷಿತವೆಂದು ಪರಿಗಣಿಸಲಾಗುತ್ತದೆ.

ಹಸಿರು: ಟೂತ್‌ಪೇಸ್ಟ್‌ನಲ್ಲಿನ ಈ ಗುರುತು ಅತ್ಯುತ್ತಮವಾಗಿದೆ ಎಂಬುದನ್ನು ಸೂಚಿಸುತ್ತದೆ. ಏಕೆಂದರೆ ಈ ಉತ್ಪನ್ನವನ್ನು ನೈಸರ್ಗಿಕ ಪದಾರ್ಥಗಳನ್ನು ಬಳಸಿ ತಯಾರಿಸಲಾಗುತ್ತದೆ ಮತ್ತು ಬಾಯಿಯ ಆರೋಗ್ಯಕ್ಕೆ ಉತ್ತಮವಾಗಿದೆ ಎಂದರ್ಥ.

ಬೆಳಗ್ಗೆ ಹಲ್ಲುಜ್ಜದೆ ನೀರು ಕುಡಿಯುವುದು ಆರೋಗ್ಯಕರವೇ ? ತಜ್ಞರು ಏನ್ ಹೇಳ್ತಾರೆ ಕೇಳಿ

ಟೂತ್‌ಪೇಸ್ಟ್‌ನಲ್ಲಿರುವ ಯಾವ ಅಂಶವು ಹಾನಿಕಾರಕವಾಗಿದೆ ?

ಫ್ಲೋರೈಡ್ ಅಂಶವಿರುವ ಟೂತ್‌ಪೇಸ್ಟ್: ಟೂತ್‌ಪೇಸ್ಟ್ ಖರೀದಿಸುವಾಗ ಅದರಲ್ಲಿ ಯಾವುದೆಲ್ಲಾ ಅಂಶ ಅಡಕವಾಗಿದೆ ಎಂಬುದನ್ನು ತಿಳಿದುಕೊಳ್ಳಬೇಕು. ಹೆಚ್ಚಿನ ಪ್ರಮಾಣದಲ್ಲಿ ಫ್ಲೋರೈಡ್ ಅಂಶವಿರುವ ಟೂತ್‌ಪೇಸ್ಟ್ ಹಲ್ಲಿನ ಆರೋಗ್ಯಕ್ಕೆ ಉತ್ತಮವಲ್ಲ. ಫ್ಲೋರೈಡ್ ಒಂದು ಖನಿಜವಾಗಿದ್ದು ಇದನ್ನು ಹೆಚ್ಚಾಗಿ ಟೂತ್‌ಪೇಸ್ಟ್‌ಗೆ  ಸೇರಿಸಲಾಗುತ್ತದೆ. ಹೆಚ್ಚಿನ ಫ್ಲೋರೈಡ್ ಫ್ಲೋರೋಸಿಸ್‌ಗೆ ಕಾರಣವಾಗಬಹುದು. ಇದರಿಂದ ಹಲ್ಲಿನ ಮೇಲೆ ಕಲೆಗಳು ಶಾಶ್ವಿತವಾಗಿ ಉಳಿದುಬಿಡುತ್ತದೆ. ಅಲ್ಲದೆ ಇದು ನರವೈಜ್ಞಾನಿಕ ಮತ್ತು ಅಂತಃಸ್ರಾವಕ ಅಪಸಾಮಾನ್ಯ ಕ್ರಿಯೆ ಸೇರಿದಂತೆ ಹಲವಾರು ಗಂಭೀರ ಪ್ರತಿಕೂಲ ಆರೋಗ್ಯ ಪರಿಣಾಮಗಳನ್ನು ಸಹ ಉಂಟುಮಾಡಬಹುದು.

ಸಿಹಿಯಾಗಿರುವ ಟೂತ್‌ಪೇಸ್ಟ್: ಬ್ರಷ್ ಮಾಡುವಾಗ ಸುವಾಸನೆ ಸಹ ಮುಖ್ಯ. ಒಂದೊಂದು ಟೂತ್‌ಪೇಸ್ಟ್ ಒಂದೊಂದು ರೀತಿಯ ರುಚಿಯನ್ನು ಹೊಂದಿರುತ್ತದೆ. ಟೂತ್‌ಪೇಸ್ಟ್‌ನ್ನು ಸಿಹಿಯಾಗಿಸಲು ಸ್ಯಾಕ್ರರಿನ್ ಮತ್ತು ಸೋರ್ಬಿಟೋಲ್‌ ಹಾಕಲಾಗುತ್ತದೆ. ಆದ್ರೆ ಈ ಟೂತ್‌ಪೇಸ್ಟ್ ಗಳು ಸಕ್ಕರೆ ಹೊಂದಿದೆಯೇ ಎಂಬುದನ್ನು ನೋಡಬೇಕು. ಸಕ್ಕರೆಯಿರುವ ಟೂತ್ ಪೇಸ್ಟ್ ಹಲ್ಲುಗಳು ಕೊಳೆಯಲು ಕಾರಣವಾಗುತ್ತವೆ. 

click me!