ಒಣ ಖರ್ಜೂರದ ಹಣ್ಣು ತಿನ್ನುವುದರಿಂದ ನಿಮಗೆ ಅನೇಕ ಆರೋಗ್ಯ ಪ್ರಯೋಜನಗಳು ಉಂಟಾಗುತ್ತವೆ. ನರದೌರ್ಬಲ್ಯ ನಿವಾರಣೆಯೂ ಅದರಲ್ಲಿ ಒಂದು.
ಡ್ರೈ ಫ್ರೂಟ್ಸ್ ಗಳು ನಮಗೆ ಎಂದಿಗೂ ಆರೋಗ್ಯಕರವೇ. ಎಲ್ಲಾ ವಯಸ್ಸಿನವರಿಗೂ ಡ್ರೈ ಫ್ರೂಟ್ಸ್ ಸೇವನೆ ತುಂಬಾ ಒಳ್ಳೆಯದು. ಅದರಲ್ಲೂ ಖರ್ಜೂರ ನಮ್ಮ ದೇಹಕ್ಕೆ ನಮ್ಮ ಊಹೆಗೂ ಮೀರಿದ ಆರೋಗ್ಯದ ಲಾಭಗಳನ್ನು ಒದಗಿಸಿ ಕೊಡುತ್ತದೆ. ಅದರಲ್ಲೂ ಹಾಲಿನ ಜೊತೆ ಮಿಶ್ರಣ ಮಾಡಿ ಖರ್ಜೂರವನ್ನು ಸೇವನೆ ಮಾಡುವುದರಿಂದ ದುಪ್ಪಟ್ಟು ಆರೋಗ್ಯ ಪ್ರಯೋಜನಗಳು ನಮ್ಮದಾಗುತ್ತವೆ. ಲೈಂಗಿಕ ಆರೋಗ್ಯದಿಂದ ಹಿಡಿದು ದೇಹದ ರೋಗ - ನಿರೋಧಕ ಶಕ್ತಿಯನ್ನು ಹೆಚ್ಚು ಮಾಡುವವರೆಗೂ ಖರ್ಜೂರದ ವ್ಯಾಪ್ತಿ ಹಬ್ಬಿದೆ.
ಲೈಂಗಿಕ ಆರೋಗ್ಯ ವೃದ್ಧಿ
ಲೈಂಗಿಕ ಜೀವನ ಸಂತೃಪ್ತಿ ಕೊಡಬೇಕು ಮತ್ತು ಜನನಾಂಗಗಳ ಆರೋಗ್ಯಕ್ಕೆ ಯಾವುದೇ ತೊಂದರೆ ಎದುರಾಗಬಾರದು. ಹಾಲು ಸಮೇತ ಖರ್ಜೂರ ಸೇವನೆಯಿಂದ ಸಾಕಷ್ಟು ಪ್ರಯೋಜನ ಇದೆ. ದೇಹದ ಎಂಡಾರ್ಫಿನ್- ಇದು ಸುಖ ಸಂತೋಷ ನೀಡುವ ಹಾರ್ಮೋನ್, ಟೆಸ್ಟೋಸ್ಟಿರಾನ್ ಹಾಗೂ ಆಂಡ್ರೋಜೆನ್- ಇವುಗಳು ಲೈಂಗಿಕ ಶಕ್ತಿಯನ್ನು ಪ್ರಚೋದಿಸುವ ಹಾರ್ಮೋನ್‌ಗಳು ಇವುಗಳನ್ನು ಉದ್ದೀಪಸುತ್ತದೆ. ನಿತ್ಯ ಬೆಳಗ್ಗೆ ಒಂದು ಲೋಟ ಬಿಸಿ ಹಾಲಿನ ಜೊತೆಗೆ ನೆನೆಸಿದ ಖರ್ಜೂರ ಸೇವಿಸಿದರೆ ಒಂದೆರಡು ತಿಂಗಳಲ್ಲಿ ಅದರ ಫಲ ನಿಮಗೇ ತಿಳಿಯುತ್ತದೆ.
undefined
ಮಾಂಸ - ಖಂಡಗಳ ಬಲವರ್ಧನೆ
ಪ್ರೋಟೀನ್ ಅಂಶದ ವಿಚಾರ ತೆಗೆದುಕೊಂಡರೆ ಖರ್ಜೂರದಲ್ಲಿ ಅಧಿಕ ಪ್ರಮಾಣದ ಪ್ರೊಟೀನ್ ಅಂಶವಿದೆ. ಹಾಗಾಗಿ ಹಾಲು ಮತ್ತು ಖರ್ಜೂರವನ್ನು ಒಟ್ಟಿಗೆ ಸೇರಿಸಿ ಸೇವನೆ ಮಾಡಿದ ಸಂದರ್ಭದಲ್ಲಿ ನಮ್ಮ ಮೂಳೆಗಳ ಸಾಂದ್ರತೆ ಹೆಚ್ಚಾಗುವುದರ ಜೊತೆಗೆ ಮಾಂಸ - ಖಂಡಗಳ ಬಲವರ್ಧನೆ ಉಂಟಾಗುವುದು ಸಹಜ. ಹಾನಿಗೊಳಗಾದ ಮಾಂಸ - ಖಂಡಗಳನ್ನು ಇದು ರಿಪೇರಿ ಮಾಡುತ್ತದೆ.
ದೇಹದಲ್ಲಿ ಶಕ್ತಿವರ್ಧನೆ
ಬೆಳಗಿನ ಸಮಯದಲ್ಲಿ ಒಂದು ವೇಳೆ ನಾವು ಉಪಹಾರ ಸರಿಯಾಗಿ ಮಾಡದಿದ್ದರೆ ಮಧ್ಯಾಹ್ನದ ಹೊತ್ತಿಗೆ ನನಗೆ ವಿಪರೀತ ಹೊಟ್ಟೆ ಹಸಿವಾಗಿ ದೇಹಕ್ಕೆ ಹೆಚ್ಚಿನ ಆಯಾಸ ಎದುರಾಗುತ್ತದೆ. ಆದರೆ ಖರ್ಜೂರ ಮತ್ತು ಹಾಲು ನಮ್ಮನ್ನು ಈ ಸಂಕಷ್ಟದಿಂದ ಪಾರು ಮಾಡುತ್ತದೆ ಎಂದು ಹೇಳಬಹುದು. ಏಕೆಂದರೆ ಖರ್ಜೂರಗಳಲ್ಲಿ ' ಗ್ಲೂಕೋಸ್ ' ಅಂಶ ಮತ್ತು ' ಫ್ರಕ್ಟೋಸ್ ' ಅಂಶ ಹೆಚ್ಚಾಗಿರುವ ಕಾರಣ ನಮ್ಮ ದೇಹಕ್ಕೆ ತಕ್ಷಣವೇ ಶಕ್ತಿಯನ್ನು ಒದಗಿಸಿ ಇಡೀ ದಿನ ಚೈತನ್ಯದಿಂದ ಕೂಡಿ ನಮ್ಮ ಕೆಲಸ ಕಾರ್ಯಗಳಲ್ಲಿ ತೊಡಗಿಕೊಳ್ಳುವಂತೆ ಅನುವು ಮಾಡಿಕೊಡುತ್ತದೆ.
ಡಾರ್ಕ್ ಚಾಕಲೇಟ್ ಎಂಬ ಮ್ಯಾಜಿಕಲ್ ಪವರ್ ಇರುವ ಸಿಹಿ ಔಷಧ ...
ರಕ್ತಹೀನತೆ ಹೋಗಲಾಡಿಸುತ್ತದೆ
ಖರ್ಜೂರದಲ್ಲಿ ಅತ್ಯಧಿಕ ಪ್ರಮಾಣದ ಕಬ್ಬಿಣದ ಅಂಶ ಇದೆ. ಹಾಗಾಗಿ ಪ್ರತಿ ದಿನ ನಿತ್ಯ ನಿಯಮಿತವಾಗಿ ಈ ಖರ್ಜೂರ ಹಾಕಿದ ಹಾಲನ್ನು ಕುಡಿಯುವುದರಿಂದ ನಿಮ್ಮ ರಕ್ತದ ಹರಿವಿನಲ್ಲಿ ಕಬ್ಬಿಣದ ಅಂಶ ಶೇಖರಣೆಗೊಂಡು ನಿಮ್ಮ ದೇಹವನ್ನು ಹೆಚ್ಚು ಬಳಲಿಕೆಯಿಂದ ದೂರ ಮಾಡುವುದು ಮಾತ್ರವಲ್ಲದೆ ಅನೀಮಿಯಾ ಸಮಸ್ಯೆಯಿಂದ ನಿಮ್ಮನ್ನು ಕಾಪಾಡುತ್ತದೆ.
ಹೊಳಪಿನ ತ್ವಚೆ
ಯಾರಿಗೆ ಮುಖದ ಭಾಗದಲ್ಲಿ ಸುಕ್ಕುಗಳು, ಮೊಡವೆಗಳು ಮತ್ತು ಇನ್ನಿತರ ಚರ್ಮದ ಸಮಸ್ಯೆಗಳು ಕಂಡು ಬರುತ್ತವೆ. ಅವರು ಖರ್ಜೂರವನ್ನು ಮತ್ತು ಹಾಲನ್ನು ಮಿಶ್ರಣ ಮಾಡಿ ಪ್ರತಿ ದಿನ ಸೇವನೆ ಮಾಡುತ್ತಾ ಬಂದರೆ ತಮ್ಮ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು. ಖರ್ಜೂರ ಮಿಶ್ರಿತ ಹಾಲು ದೇಹದಲ್ಲಿ ರಕ್ತ ಸಂಚಾರವನ್ನು ಹೆಚ್ಚು ಮಾಡುತ್ತದೆ. ಇದರಿಂದ ಮುಖದ ಭಾಗಕ್ಕೆ ಮತ್ತು ದೇಹದ ಎಲ್ಲಾ ಭಾಗಗಳಿಗೆ ರಕ್ತ ಸಂಚಾರ ಸರಾಗವಾಗಿ ಆಗುವುದರ ಮೂಲಕ ಸುಕ್ಕುಗಳ ನಿವಾರಣೆ ಆಗುತ್ತದೆ. ಇದರ ಜೊತೆಗೆ ಹೊಳಪಿನ ಚರ್ಮ ಕೂಡ ನಿಮ್ಮದಾಗುತ್ತದೆ.
ಆಯುರ್ವೇದದ ಈ ಎಂಟು ಅಂಶಗಳನ್ನು ಪಾಲಿಸಿದರೆ ಗಂಭೀರ ಸಮಸ್ಯೆಗಳೇ ಕಾಡುವುದಿಲ್ಲ ...
ಕೀಲು ನೋವುಗಳಿಂದ ಮುಕ್ತಿ
ಹಾಲಿನಲ್ಲಿ ಖರ್ಜೂರಗಳನ್ನು ಮಿಶ್ರಣ ಮಾಡಿ ಸೇವನೆ ಮಾಡುವುದರಿಂದ ಖರ್ಜೂರ ಮತ್ತು ಹಾಲಿನಲ್ಲಿ ಕಂಡು ಬರುವ ಕ್ಯಾಲ್ಸಿಯಂ ಅಂಶ ನಮಗೆ ದೇಹಕ್ಕೆ ದುಪ್ಪಟ್ಟು ಪ್ರಮಾಣದಲ್ಲಿ ಸೇರ್ಪಡೆ ಆಗುತ್ತದೆ. ಇದರಿಂದ ನಮ್ಮ ಮೂಳೆಗಳ ಆರೋಗ್ಯ ಅಭಿವೃದ್ಧಿಗೊಂಡು ಕೀಲು ನೋವು ಮತ್ತು ಮೂಳೆಗಳಿಗೆ ಸಂಬಂಧ ಪಟ್ಟ ಆರೋಗ್ಯ ಸಮಸ್ಯೆಗಳು ದೂರಾಗುತ್ತವೆ. ಇಷ್ಟೇ ಅಲ್ಲದೆ ನಮ್ಮ ಮೂಳೆಗಳ ಸಾಂದ್ರತೆ ಸಹ ಹೆಚ್ಚಾಗುತ್ತದೆ. ಮಹಿಳೆಯರು 40 ವರ್ಷ ದಾಟಿದ ನಂತರ ದೇಹದಲ್ಲಿ ಮೂಳೆಗಳ ಸಾಂದ್ರತೆ ನಿಧಾನವಾಗಿ ಕಡಿಮೆಯಾಗುತ್ತಾ ಬರುತ್ತದೆ ಮತ್ತು ಮೂಳೆಗಳಿಗೆ ಹಾಗೂ ಕೀಲುಗಳಿಗೆ ಸಂಬಂಧ ಪಟ್ಟ ನೋವುಗಳು ಕಾಣಿಸಿಕೊಳ್ಳಲು ಪ್ರಾರಂಭವಾಗುತ್ತವೆ. ಇದಕ್ಕಾಗಿ ನೀವು ಪ್ರತಿ ದಿನ 5 - 6 ಖರ್ಜೂರಗಳನ್ನು ಹಾಲಿನಲ್ಲಿ ಮಿಶ್ರಣ ಮಾಡಿ ಸೇವನೆ ಮಾಡಬೇಕು.
ದೇಹತೂಕ ಹೆಚ್ಚಿಸಬಹುದು
ಖರ್ಜೂರಗಳಲ್ಲಿ ಕಂಡು ಬರುವ ಕ್ಯಾಲೊರಿ ಅಂಶಗಳು ಹಾಲಿನೊಂದಿಗೆ ಮಿಶ್ರಣ ಆಗುವುದರಿಂದ ಖರ್ಜೂರ ಮಿಶ್ರಿತ ಹಾಲಿನ ಸೇವನೆಯಿಂದ ಸಹಜವಾಗಿ ನಮ್ಮ ದೇಹದ ತೂಕ ಹೆಚ್ಚಾಗುತ್ತದೆ. ಕಡಿಮೆ ತೂಕ ಹೊಂದಿರುವ ಮಕ್ಕಳಿಗೆ ಅವರ ಬೆಳವಣಿಗೆಯ ಸಮಯದಲ್ಲಿ ಅಂದರೆ 9 ರಿಂದ 14 ವರ್ಷದ ಮಕ್ಕಳಿಗೆ ಖರ್ಜೂರ ಮಿಶ್ರಿತ ಹಾಲನ್ನು ಪ್ರತಿದಿನ ಸೇವನೆ ಮಾಡಲು ಕೊಡುವುದರಿಂದ ಮಕ್ಕಳು ದಷ್ಟಪುಷ್ಟವಾಗಿ ಬೆಳೆಯುತ್ತಾರೆ. ಖರ್ಜೂರಗಳನ್ನು ಸೇವಿಸುವ ಜೊತೆಗೆ ಪ್ರತಿ ದಿನ ಎರಡರಿಂದ ಮೂರು ಕಪ್ ಹಾಲು ಸೇವನೆ ಮಾಡುವುದು ಒಳ್ಳೆಯದು ಮತ್ತು ರಾತ್ರಿ ಮಲಗಲು ತೆರಳುವ ಮುಂಚೆ ಒಂದು ಕಪ್ ಈ ಹಾಲನ್ನು ಸೇವನೆ ಮಾಡತಕ್ಕದ್ದು.
ಲವಂಗ ಆರೋಗ್ಯಕ್ಕೆ ಒಳ್ಳೇಯದು ಹೌದು, ಹಾಗಂತ ಬೇಕಾಬಿಟ್ಟಿ ಸೇವಿಸಿದ್ರೆ ಗೋವಿಂದ ...