ಬೇಸಿಗೆಯಲ್ಲಿ ಕಾಟ ಕೊಡೋ ಬೆವರುಗುಳ್ಳೆ ಬರದಿರಲು ಹೀಗೆ ಮಾಡಿ ಸಾಕು

Published : Mar 30, 2022, 08:24 AM IST
ಬೇಸಿಗೆಯಲ್ಲಿ ಕಾಟ ಕೊಡೋ ಬೆವರುಗುಳ್ಳೆ ಬರದಿರಲು ಹೀಗೆ ಮಾಡಿ ಸಾಕು

ಸಾರಾಂಶ

ಬೇಸಿಗೆ (Summer) ಬಂತೂಂದ್ರೆ ಸಾಕು ಬೆವರುಗುಳ್ಳೆಯ ಕಾಟ ಶುರುವಾಗುತ್ತೆ. ಒಣಚರ್ಮದ (Dry Sking) ಅನುಭವ, ತುರಿಕೆ ಮೊದಲಾದ ಸಮಸ್ಯೆಗಳು ಕಂಡು ಬರುತ್ತವೆ. ಹಾಗಿದ್ರೆ ಬೇಸಿಗೆಯಲ್ಲಿ ಕಿರಿಕಿರಿಯುಂಟು ಮಾಡೋ ಬೆವರುಗುಳ್ಳೆ ಬರದಂತಿರಲು ಏನು ಮಾಡ್ಬೋದು.

ಬೇಸಿಗೆ (Summer) ಕಾಲ ಶುರುವಾಯ್ತು ಅಂದ್ರೆ ಸಾಕು ಆರೋಗ್ಯ ಸಮಸ್ಯೆಗಳು ಶುರುವಾಗಿ ಬಿಡುತ್ತವೆ. ಅದರಲ್ಲೂ ಹೆಚ್ಚಾಗಿ ಚರ್ಮದ ಸಮಸ್ಯೆ (Skin Problems)ಗಳು ಹೆಚ್ಚಾಗುತ್ತವೆ. ಅದರಲ್ಲೂ ಬೇಸಿಗೆಯಲ್ಲಿ ಬೆವರುಗುಳ್ಳೆಯ ಸಮಸ್ಯೆಯಂತೂ ಸಾಮಾನ್ಯವಾಗಿ ಎಲ್ಲರಲ್ಲೂ ಕಂಡು ಬರುತ್ತದೆ. ಸರಿಯಾದ ಆಹಾರ ತಿನ್ನುವುದು, ಬಟ್ಟೆಯನ್ನು ಧರಿಸುವುದು, ಚರ್ಮದ ಬಗ್ಗೆ ಹೆಚ್ಚಿನ ಕಾಳಜಿ ವಹಿಸೋದ್ರಿಂದ ಮಾತ್ರ ಇಂಥಹಾ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು.

ಬೇಸಿಗೆಯಲ್ಲಿ ಬೆವರುಗುಳ್ಳೆ ಉಂಟಾಗಲು ಕಾರಣವೇನು ?
ಬೇಸಿಗೆಯಲ್ಲಿ ಬಿಸಿಲಿನ ತಾಪಮಾನ ಹೆಚ್ಚಿರುತ್ತೆದೆ. ಧಗೆಯ ಪರಿಣಾಮ ದೇಹದಲ್ಲಿ ಹೆಚ್ಚು ಬೆವರು (Sweat) ಉತ್ಪತ್ತಿಯಾಗಲು ಆರಂಭವಾಗುತ್ತದೆ. ಈ ಬೆವರು ಸಾಮಾನ್ಯವಾಗಿ ಸೂಕ್ಷ್ಮವಾದ ಬ್ಯಾಕ್ಟೀರಿಯಾ (Bacteria)ಗಳನ್ನು ಹೊಂದಿರುತ್ತವೆ. ಬೇಸಿಗೆಯ ಸಮಯದಲ್ಲಿ ಪ್ರತಿನಿತ್ಯ ದೇಹವನ್ನು ಶುಚಿಗೊಳಿಸದಿದ್ದರೆ ಇದು ಬೆವರು ಗುಳ್ಳೆಗಳಾಗಿ ಪರಿವರ್ತನೆಯಾಗುತ್ತದೆ.

ಬೇಸಿಗೆ ಬಂತೆಂದರೆ ತ್ವಚೆಯನ್ನು ಕಾಪಾಡಿಕೊಳ್ಳಲು ಹಲವು ಪ್ರಯತ್ನಗಳನ್ನು ಮಾಡಬೇಕಾಗುತ್ತದೆ. ಬೆವರಿನಿಂದ ಉಂಟಾಗುವ ತೇವಾಂಶದಿಂದ ಚರ್ಮ ಸಂಬಂಧಿತ ಸಮಸ್ಯೆಗಳು ಹೆಚ್ಚಾಗುತ್ತೆ. ಬೇಸಿಗೆಯಲ್ಲಿ, ನಿರ್ಜಲೀಕರಣ, ಬಿಸಿಲು, ಬ್ಲ್ಯಾಕ್ ಹೆಡ್ಸ್ ಮತ್ತು ಮೊಡವೆ, ತುರಿಕೆ, ಬೆವರು ಗುಳ್ಳೆಗಳಂತಹ ಸಮಸ್ಯೆಗಳು ಹೆಚ್ಚಾಗುತ್ತವೆ.

ರಾತ್ರಿ ಹೊತ್ತಲ್ಲಿ ಬೆವರುತಿದ್ರೆ ನಿರ್ಲಕ್ಷ್ಯ ಮಾಡ್ಬೇಡಿ!

ಬೆವರುಗುಳ್ಳೆಗಳು ಬಾರದಂತೆ ಎಚ್ಚರವಹಿಸುವುದು ಹೇಗೆ ? 
ಪ್ರತಿನಿತ್ಯ ಸ್ನಾನ ಮಾಡಿ: ಬೇಸಿಗೆಯಲ್ಲಿ ಚರ್ಮದ ಸಮಸ್ಯೆ ಕಾಡದಿರಲು ಪ್ರತಿನಿತ್ಯ ಸ್ನಾನ ಮಾಡುವ ಅಭ್ಯಾಸವನ್ನು ರೂಢಿ ಮಾಡಿಕೊಳ್ಳಿ. ಇದರಿಂದ ಮೈಯಲ್ಲಿ ಬೆವರು ಅಂಟಿ ನಿಲ್ಲುವುದು ತಪ್ಪುತ್ತದೆ. ಹೀಗಾಗಿ ಚರ್ಮದ ಸಮಸ್ಯೆಗಳು ಹೆಚ್ಚಾಗಿ ಕಾಣಿಸಿಕೊಳ್ಳವುದಿಲ್ಲ.ಸ್ನಾನ ಮಾಡುವುದರಿಂದ ಬೇಸಿಗೆಯಲ್ಲಿ ತಲೆದೋರುವ ದೇಹದ ದುರ್ಗಂಧ ಸಹ ಇಲ್ಲವಾಗುತ್ತದೆ.

ಮಾಯಿಶ್ಚರೈಸರ್‌ ಹಚ್ಚಿಕೊಳ್ಳಿ: ಸ್ನಾನದ ನಂತರ ದೇಹಕ್ಕೂ ಕೂಡ ಮಾಯಿಶ್ಚರೈಸರ್‌ ಅನ್ವಯಿಸುವುದನ್ನು ಮರೆಯಬೇಡಿ. ಮಾಯಿಶ್ಚರೈಸ್‌ ಮಾಡುವುದರಿಂದ ಚರ್ಮಕ್ಕೆ ಬೇಕಾದ ಅಗತ್ಯವಾದ ತೇವಾಂಶ ದೊರೆಯುತ್ತದೆ. ಇದು ಬೆವರುಗುಳ್ಳೆಗಳು ಬರುವುದನ್ನು ತಡೆಯುತ್ತದೆ.

ಹೆಚ್ಚು ನೀರು ಕುಡಿಯಿರಿ: ಬೇಸಿಗೆಯಲ್ಲಿ ದೇಹ ಹೈಡ್ರೇಟ್ ಆಗಿರಬೇಕಾದುದು ಮುಖ್ಯ. ಹೀಗಾಗಿ ಹೆಚ್ಚು ಹೆಚ್ಚು ನೀರು ಕುಡಿಯಿರಿ. ದೇಹ ಡಿಹೈಡ್ರೇಟ್ ಆಗದಂತೆ ನೋಡಿಕೊಳ್ಳಿ. ಬೇಸಿಗೆಯಲ್ಲಿ ದೇಹವನ್ನು ತೇವಾಂಶದಿಂದ ಇಡುವುದರಿಂದ ಹೀಟ್ ಸ್ಟ್ರೋಕ್ ಮತ್ತು ನಿರ್ಜಲೀಕರಣದಂತಹ ಸಮಸ್ಯೆಗಳನ್ನು ತಡೆಯಬಹುದು. ಅತಿಯಾದ ಬೆವರುವಿಕೆ ನಿಯಂತ್ರಿಸಲು ಹೆಚ್ಚು ಹಣ್ಣಿನ ರಸ ಮತ್ತು ನೀರನ್ನು ಕುಡಿಯಿರಿ.

healthy Summerಗಾಗಿ ಈ ಕೆಲ್ಸ ಮಾಡಿ

ಒಟ್‌ ಮೀಲ್‌ ಸ್ನಾನ ಮಾಡಿ: ಓಟ್ಸ್ ತಿನ್ನೋದು ಆರೋಗ್ಯಕ್ಕೆ ಒಳ್ಳೇದು ಅಂತ ನಿಮ್ಗೆ ಗೊತ್ತಿರಬಹುದು. ಆದ್ರೆ ಬೇಸಿಗೆಯಲ್ಲಿ ಓಟ್‌ ಮೀಲ್ ಸ್ನಾನ ಚರ್ಮದ ಆರೋಗ್ಯಕ್ಕೆ ಬೆಸ್ಟ್‌. ಒಂದು ವೇಳೆ ತುರಿಕೆ, ಬೆವರಿನ ಗುಳ್ಳೆಗಳಂತಹ ಸಮಸ್ಯೆಯನ್ನು ನೀವು ಅನುಭವಿಸುತ್ತಿದ್ದರೆ ಓಟ್‌ ಮೀಲ್‌ನ ಸ್ನಾನ ಉಪಯುಕ್ತವಾಗಿದೆ. ಓಟ್‌ ಮೀಲ್‌ ಆಂಟಿಆಕ್ಸಿಡೆಂಟ್ ಗುಣಗಳನ್ನು ಹೊಂದಿದ್ದು, ಚರ್ಮದ ಸಮಸ್ಯೆಗಳನ್ನು ಗುಣಪಡಿಸುತ್ತದೆ. ಉಗುರುಬೆಚ್ಚಗಿನ ನೀರಿನಲ್ಲಿ 2 ರಿಂದ 3 ಚಮಚ ಓಟ್‌ ಮೀಲ್‌ ಪುಡಿಯನ್ನು ನೀರಿನ ಬಕೆಟ್‌ನಲ್ಲಿ ಹಾಕಿ 5 ನಿಮಿಷ ಬಿಡಿ. ನಂತರ ಸ್ನಾನ ಮಾಡಿ. ಹೀಗೆ ವಾರಕ್ಕೆ 3 ರಿಂದ 4 ಬಾರಿ ಓಟ್‌ ಮೀಲ್‌ನಿಂದ ಸ್ನಾನ ಮಾಡುವುದರಿಂದ ಚರ್ಮ ವ್ಯಾಧಿಗಳಿಂದ ಮುಕ್ತಿ ಹೊಂದಬಹುದು.

ಬೆವರುಗುಳ್ಳೆಗಳು ಆದಾಗ ಏನು ಮಾಡಬಹುದು ?

ಶ್ರೀಗಂಧ-ಅನೇಕ ಚರ್ಮದ ಅನೇಕ ಸಮಸ್ಯೆಗಳನ್ನು ನಿವಾರಿಸಲು ಶತಮಾನಗಳಿಂದಲೂ ಶ್ರೀಗಂಧವನ್ನು ಬಳಸಲಾಗುತ್ತಿದೆ. ಬೆವರುಗುಳ್ಳೆಯನ್ನು ನಿವಾರಿಸಲೂ ಇದು ಅತ್ಯುತ್ತಮ. 1 ರಿಂದ 2 ಚಮಚ ಶ್ರೀಗಂಧದ ಶುದ್ಧ ಪುಡಿಯನ್ನು ನೀರಿನಲ್ಲಿ ಕಲಸಿ, ಬೆವರು ಗುಳ್ಳೆಗಳಾಗಿರುವ ಜಾಗದಲ್ಲಿ ಹಚ್ಚಿ. ಸುಮಾರು 30 ನಿಮಿಷಗಳ ನಂತರ ತಣ್ಣೀರಿನಲ್ಲಿ ತೊಳೆಯಿರಿ. ನೀವು ರಾತ್ರಿಯ ಸಮಯದಲ್ಲಿ ಹಚ್ಚಿ ಬೆಳಿಗ್ಗೆ ಸ್ನಾನ ಮಾಡಬಹುದು.

​ಬೇವು-ಬೇವು ಕೂಡ ಹಲವಾರು ಚರ್ಮದ ದದ್ದುಗಳಿಗೆ ಚಿಕಿತ್ಸೆ ನೀಡುತ್ತದೆ. ಇದು ಆಂಟಿಮೈಕ್ರೊಬಿಯಲ್‌ ಮತ್ತು ಉರಿಯೂತ ವಿರೋಧಿ ಗುಣಲಕ್ಷಣಗಳನ್ನು ಹೊಂದಿದೆ ಎಂದು ಸಂಶೋಧನೆಗಳು ಸಾಬೀತು ಪಡಿಸಿವೆ. ಪರಿಣಾಮಕಾರಿಯಾಗಿ ನಿಮ್ಮ ಬೆವರು ಗುಳ್ಳೆಗಳಿಗೆ ಚಿಕಿತ್ಸೆ ನೀಡಲು ಬೇವು ಅತ್ಯುತ್ತಮವಾಗಿದೆ. ಬೇವಿನ ಪುಡಿಯನ್ನು ನೀರಿನಲ್ಲಿ ಮಿಶ್ರಣ ಮಾಡಿ, ಬೆವರು ಗುಳ್ಳೆಯಾಗಿರುವ ಚರ್ಮ ಪ್ರದೇಶಕ್ಕೆ ಹಚ್ಚಿ 30 ನಿಮಿಷಗಳ ನಂತರ ಸ್ನಾನ ಮಾಡಿ.

​ಅಲೋವೆರಾ-ಬೆವರಿನ ಗುಳ್ಳೆಗಳಲ್ಲ ಅಲೋವೆರಾ ಹಚ್ಚುವುದರಿಂದ ಸಮಸ್ಯೆ ಬೇಗ ಕಡಿಮೆಯಾಗುತ್ತದೆ. ಅಲೋವೆರಾದಲ್ಲಿರುವ ಗುಣಗಳು  ಬ್ಯಾಕ್ಟೀರಿಯಾವನ್ನು ಕೊಲ್ಲುತ್ತದೆ. ಉರಿಯೂತ ಮತ್ತು ನಂಜುನಿರೋಧಕವಾಗಿರುವ ಅಲೋವೆರಾ ಸೋಂಕುಗಳ ವಿರುದ್ಧ ಹೋರಾಡುವ ಮೂಲಕ ಚರ್ಮವನ್ನು ತಂಪಾಗಿಸುತ್ತದೆ. ತಾಜಾ ಅಲೋವೆರಾ ಲೋಳೆಗೆ ಅರ್ಧ ಚಮಚ ಅರಿಶಿಣವನ್ನು ಬೆರಸಿ. ಬೆವರುಗುಳ್ಳೆಗಳು ಇರುವ ಪ್ರದೇಶಕ್ಕೆ ಹಚ್ಚಿರಿ. ಹೀಗೆ ಮಾಡುವುದರಿಂದ ನಿಮ್ಮ ಬೆವರು ಗುಳ್ಳೆಗಳು ಕಡಿಮೆಯಾಗುತ್ತದೆ.

ಬೇಸಿಗೆಯಲ್ಲಿ ತಂಪಾಗಿರಲು ಬೇರೇನು ಮಾಡಬೇಕು
ಕಾಟನ್ ಬಟ್ಟೆಗಳನ್ನು ಧರಿಸಿ: ಬೇಸಿಗೆಯಲ್ಲಿ ಕಾಟನ್‌ ಬಟ್ಟೆಗಳನ್ನು ಧರಿಸುವುದು ಅತ್ಯುತ್ತಮ.  ಕಾರಣ ಕಾಟನ್‌ ಬಟ್ಟೆಗಳು ಬೆವರನ್ನು ಸಂಪೂರ್ಣವಾಗಿ ಹೀರಿಕೊಳ್ಳುತ್ತವೆ. ಹಗುರವಾದ ಕಾಟನ್ ಬಟ್ಟೆಗಳನ್ನು ಹಾಕಿಕೊಳ್ಳಿ. ಬಿಗಿಯಾದ ಬಟ್ಟೆಗಳನ್ನು ಧರಿಸುವುದನ್ನು ನಿಲ್ಲಿಸಿ. ಇದು ಚರ್ಮದ ತುರಿಕೆಗೆ ಕಾರಣವಾಗುತ್ತದೆ.

ಆರೋಗ್ಯಕರ ಆಹಾರ ಪದ್ಧತಿ ಅನುಸರಿಸಿ : ಬೇಸಿಗೆಯಲ್ಲಿ ಹಣ್ಣುಗಳು ಮತ್ತು ತರಕಾರಿಗಳಿಂದ ಸಮೃದ್ಧವಾಗಿರುವ ಆಹಾರವನ್ನು ತಿನ್ನಿ. ಸಂಸ್ಕರಿಸಿದ ಆಹಾರಗಳು, ಕರಿದ ಮತ್ತು ಮಸಾಲೆಯುಕ್ತ ಆಹಾರಗಳು, ಕೆಂಪು ಮಾಂಸದ ಆಹಾರತಳನ್ನು ಹೆಚ್ಚು ತಿನ್ನಬೇಡಿ. ಕಾಪಿ, ಟೀ ಆದಷ್ಟು ಕಡಿಮೆ ಕುಡಿಯಿರಿ. ತಂಪಾದ ಜ್ಯೂಸ್ ಹೆಚ್ಚು ಸೇವಿಸಿ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ನೀವು ಸಣ್ಣ ಸಣ್ಣ ವಿಷಯಕ್ಕೂ ಬೇಜಾರು ಮಾಡ್ಕೋತೀರಾ?: ಇಲ್ಲಿವೆ 5 ಮನೋವೈಜ್ಞಾನಿಕ ಕಾರಣಗಳು
Storage Tips: ತಪ್ಪಾಗಿ ಸಹ ಈ 5 ಹಣ್ಣನ್ನು ಫ್ರಿಜ್‌ನಲ್ಲಿ ಇಡಬಾರದು..