
ದಿನವಿಡೀ ಕಚೇರಿ (Office) ಯಲ್ಲಿ ಕೆಲಸ (Work) ಮಾಡುವವರಿಗೆ ವ್ಯಾಯಾಮ (Exercise) ಮಾಡಲು ಸಮಯವಿರುವುದಿಲ್ಲ. ಸದಾ ಕುಳಿತು ಕೆಲಸ ಮಾಡುವವರ ಆರೋಗ್ಯ (Health) ಹದಗೆಡುವುದರ ಜೊತೆಗೆ ತೂಕ ಸಹ ಹೆಚ್ಚಾಗುತ್ತದೆ. ಒಂದೇ ಕಡೆ ದೀರ್ಘಕಾಲ ಕುಳಿತುಕೊಳ್ಳುವುದರಿಂದ ಹೊಟ್ಟೆಯ ಕೊಬ್ಬು ಬಹಳಷ್ಟು ಹೆಚ್ಚಾಗುತ್ತದೆ. ದೇಹದಲ್ಲಿ ಕೊಬ್ಬು ಹೆಚ್ಚಾಗುವ ಜೊತೆಗೆ ಮಾನಸಿಕ ಅನಾರೋಗ್ಯ ಕೂಡ ಹದಗೆಡುತ್ತದೆ. ಕಚೇರಿ ಹಾಗೂ ಮನೆ ಕೆಲಸದ ಮಧ್ಯೆ ವ್ಯಾಯಾಮ ಮಾಡಲು ಬಿಡುವು ಸಿಗ್ತಿಲ್ಲ ಎನ್ನುವವರು ಕಚೇರಿಯಲ್ಲಿಯೇ ಕೆಲ ಸಿಂಪಲ್ ಟಿಪ್ಸ್ ಮೂಲಕ ದೇಹ-ಮನಸ್ಸಿನ ದಣಿವನ್ನು ಕಡಿಮೆ ಮಾಡಿಕೊಳ್ಳಬಹುದು. ಇದ್ರಿಂದ ತೂಕ ಕಡಿಮೆಯಾಗುವ ಜೊತೆಗೆ ಸೋಮಾರಿತನ ಮಾಯವಾಗುತ್ತದೆ.
ತೂಕ ಇಳಿಸಿಕೊಳ್ಳಲು ಕಚೇರಿಯಲ್ಲಿ ಮಾಡಿ ಈ ಕೆಲಸ
ಪ್ರತಿ 30 ನಿಮಿಷಗಳಿಗೊಮ್ಮೆ ಕುರ್ಚಿಯಿಂದ ಎದ್ದೇಳಿ: ನಿಮ್ಮ ದೇಹದ ತೂಕವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಲು ಬಯಸಿದರೆ ಕೆಲಸದ ಮಧ್ಯೆ ಬ್ರೇಕ್ ತೆಗೆದುಕೊಳ್ಳಬೇಕಾಗುತ್ತದೆ. ಪ್ರತಿ 30 ನಿಮಿಷಗಳ ನಂತರ ನೀವು ಕುರ್ಚಿಯಿಂದ ಎದ್ದು ಓಡಾಡಿ. ಹೀಗೆ ಮಾಡುವುದರಿಂದ ನಿಮ್ಮ ದೇಹವು ಕ್ರಿಯಾಶೀಲವಾಗಿರುತ್ತದೆ. ಇದರಿಂದಾಗಿ ತೂಕವನ್ನು ನಿಯಂತ್ರಿಸಬಹುದು. ಇದರೊಂದಿಗೆ ಕಣ್ಣುಗಳಿಗೂ ವಿಶ್ರಾಂತಿ ದೊರೆಯುತ್ತದೆ. ಆಲಸ್ಯದ ಮನಸ್ಸಿಗೆ ಸ್ವಲ್ಪ ರಿಲ್ಯಾಕ್ಸ್ ಸಿಕ್ಕಂತಾಗುತ್ತದೆ.
World Sleep Day: ನಿದ್ದೆ ಕಡಿಮೆಯಾದ್ರೆ ಎಂಥಾ ಗಂಭೀರ ಕಾಯಿಲೆ ಬರುತ್ತೆ ನೋಡಿ !
ಉಸಿರಾಟದ ಬಗ್ಗೆ ಇರಲಿ ಗಮನ: ಹೃದಯ ಮತ್ತು ಮನಸ್ಸು ಆರೋಗ್ಯವಾಗಿರಲು ದೀರ್ಘವಾಗಿ ಉಸಿರಾಡುವ ಅಗತ್ಯವಿದೆ. ಉಸಿರಾಟ ಸರಿಯಾಗಿದ್ದರೆ ಅನೇಕ ರೋಗಗಳಿಂದ ನಾವು ದೂರವಿರಬಹುದು. ದೀರ್ಘ ಉಸಿರಾಟ ಕ್ರಿಯೆ ದೇಹದಲ್ಲಿ ರಕ್ತ ಪರಿಚಲನೆ ಸುಧಾರಿಸುತ್ತದೆ. ಇದರಿಂದ ಸೋಮಾರಿತನ ಕಾಡುವುದಿಲ್ಲ. ಇದರೊಂದಿಗೆ ದೇಹದ ತೂಕವನ್ನೂ ನಿಯಂತ್ರಿಸಬಹುದು.
ಚಹಾ-ಟೀ ಚಟ ಬಿಡಿ, ನೀರನ್ನು ಮರೆಯದಿರಿ: ಸದಾ ಒಂದೇ ಕಡೆ ಕುಳಿತು ಕೆಲಸ ಮಾಡುವುದ್ರಿಂದ ಮನಸ್ಸು ದಣಿದಿರುತ್ತದೆ. ನಮಗೆ ತಿಳಿಯದೆ ನಿದ್ರೆ ಆವರಿಸಲು ಶುರುವಾಗುತ್ತದೆ. ಅನೇಕ ಬಾರಿ ಕೆಲಸ ಮಾಡಲು ಮನಸ್ಸಿರುವುದಿಲ್ಲ. ಆಗ ಉದ್ಯೋಗಿಗಳು ಮೊರೆ ಹೋಗುವುದು ಟಿ-ಕಾಫಿಯನ್ನು. ದಿನಕ್ಕೆ ಎರಡು ಬಾರಿ ಟೀ-ಕಾಫಿ ಸೇವನೆ ಒಳ್ಳೆಯದು. ಆದ್ರೆ ದಿನಕ್ಕೆ ನಾಲ್ಕೈದು ಬಾರಿ ಇದ್ರ ಸೇವನೆ ಮಾಡಿದ್ರೆ ಆರೋಗ್ಯ ಹದಗೆಡುತ್ತದೆ. ಚಹಾ ಮತ್ತು ಕಾಫಿಯ ಅತಿಯಾದ ಸೇವನೆಯು ತೂಕ ಹೆಚ್ಚಾಗಲು ಕಾರಣವಾಗಬಹುದು. ಹಾಗಾಗಿ ನೀವು ಆರೋಗ್ಯಕ ಪಾನೀಯವನ್ನು ಜೊತೆಗಿಟ್ಟುಕೊಳ್ಳಿ.
ಎಲ್ಲಕ್ಕಿಂತ ಬೆಸ್ಟ್ ಅಂದ್ರೆ ನೀರು (Water). ಕಚೇರಿ ಕೆಲಸದ ಮಧ್ಯೆಯೂ ನೀರು ಸೇವನೆ ಮರೆಯಬೇಡಿ. ಪ್ರತಿ ದಿನ 8-10 ಲೋಟ ನೀರು ಸೇವನೆ ಮಾಡಿದ್ರೆ ದೇಹದಲ್ಲಿರುವ ಕಲ್ಮಶ ಹೊರಗೆ ಹೋಗಿ ನಿಮ್ಮ ಆರೋಗ್ಯ ಸುಧಾರಿಸುವ ಜೊತೆಗೆ ಕೊಬ್ಬು ಕರಗುತ್ತದೆ.
ನಿಮ್ಮ ಊಟ ಹೀಗಿರಲಿ: ಮಧ್ಯಾಹ್ನದ ಊಟ ಆಟೋಗ್ಯಕರವಾಗಿರಬೇಕು. ಕೆಲಸವರು ತೂಕ ಇಳಿಸುವ ನೆಪದಲ್ಲಿ ಆಹಾರ ಸೇವನೆ ಮಾಡುವುದಿಲ್ಲ. ಮತ್ತೆ ಕೆಲವರು ಫಾಸ್ಟ್ ಫುಡ್ ಗಳನ್ನು ಮಧ್ಯಾಹ್ನ ಸೇವನೆ ಮಾಡ್ತಾರೆ. ಇವೆರಡೂ ಒಳ್ಳೆಯದಲ್ಲ. ಆದಷ್ಟು ಮನೆಯಿಂದಲೇ ಬಾಕ್ಸ್ ತೆಗೆದುಕೊಂಡು ಹೋಗಲು ಪ್ರಯತ್ನಿಸಿ. ಪೌಷ್ಟಿಕಾಂಶದ ಆಹಾರವನ್ನು ಹೆಚ್ಚಾಗಿ ಸೇವನೆ ಮಾಡಿ. ಇದ್ರಿಂದ ದೇಹದ ತೂಕ ನಿಯಂತ್ರಣದಲ್ಲಿರುವುದಲ್ಲದೆ ಆರೋಗ್ಯ ಹದಗೆಡುವುದಿಲ್ಲ.
Coffee addiction ಆರೋಗ್ಯಕ್ಕೆ ಒಳ್ಳೇದೋ, ಕೆಟ್ಟದ್ದೋ?
ಕುಳಿತುಕೊಳ್ಳುವ ಭಂಗಿ ಸರಿಯಾಗಿರಲಿ: ನೀವು ಕುಳಿತುಕೊಳ್ಳುವ ಭಂಗಿ ನಿಮ್ಮ ಹೊಟ್ಟೆಯ ಕೊಬ್ಬನ್ನು ಹೆಚ್ಚಿಸುತ್ತದೆ ಎಂಬುದು ನೆನಪಿರಲಿ. ಕುರ್ಚಿಯ ಮೇಲೆ ಒರಗಿ ಕುಳಿತುಕೊಳ್ಳುವುದ್ರಿಂದ ಹೊಟ್ಟೆಯ ಕೊಬ್ಬು ಹೆಚ್ಚಾಗುತ್ತದೆ. ಕೆಲಸ ಮಾಡುವಾಗ ಯಾವಾಗಲೂ ನೇರವಾಗಿ ಕುರ್ಚಿಯ ಮೇಲೆ ಕುಳಿತುಕೊಳ್ಳಲು ಪ್ರಯತ್ನಿಸಿ. ಇದು ನಿಮ್ಮನ್ನು ಕ್ರಿಯಾಶೀಲವಾಗಿರಿಸುತ್ತದೆ. ಅಲ್ಲದೆ, ಹೊಟ್ಟೆಯ ಕೊಬ್ಬು ನಿಯಂತ್ರಣದಲ್ಲಿರುತ್ತದೆ.
ಸಣ್ಣ ವ್ಯಾಯಾಮ: ಕುರ್ಚಿಯ ಮೇಲೆ ಕುಳಿತು ನೀವು ಸಣ್ಣಪುಟ್ಟ ವ್ಯಾಯಾಮಗಳನ್ನು ಮಾಡಬಹುದು. ಕಚೇರಿಯಲ್ಲಿ ಆರಾಮಾಗಿ ಕುಳಿತು ಕತ್ತು,ಕೈ,ಕಣ್ಣಿಗೆ ಸಂಬಂಧಿಸಿದ ವ್ಯಾಯಾಮವನ್ನು ಮಾಡಿ. ಇದ್ರಿಂದ ಇಡೀ ದೇಹ ರಿಲ್ಯಾಕ್ಸ್ ಆಗಿ ಮತ್ತೆ ಕೆಲಸ ಮಾಡುವ ಉತ್ಸಾಹ ಬರುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.