ಯಾವಾಗ್ಲೂ ಮೊಡವೆಯ ಸಮಸ್ಯೆನಾ ? ಮುಖದಲ್ಲಿ ಸುಕ್ಕುಗಳಾಗಿದ್ಯಾ ? ಮಾರ್ಕೆಟ್‌ನಲ್ಲಿ ಸಿಗೋ ಯಾವ್ಯಾವುದೋ ಕೆಮಿಕಲ್ (Chemical) ಮಿಕ್ಸ್‌ಡ್ ಕ್ರೀಮ್ ಹಚ್ಚೋಕೆ ಹೋಗ್ಬೇಡಿ. ಮೊಡವೆ (Pimple), ಸುಕ್ಕುಗಳಂತಹ ಅನೇಕ ಚರ್ಮದ ಸಮಸ್ಯೆಗಳನ್ನು ನಿಭಾಯಿಸಲು ಕುಂಬಳಕಾಯಿ (Pumpkin Seeds) ಬೆಸ್ಟ್.
ಪ್ರಪಂಚ (World) ದ ಬಹುತೇಕ ಎಲ್ಲ ಕಡೆ ಕುಂಬಳಕಾಯಿ (Pumpkin ) ಸಿಗುತ್ತದೆ. ಆದ್ರೆ ಅನೇಕರು ಈ ಕುಂಬಳಕಾಯಿಯನ್ನು ತಿನ್ನುವುದಿಲ್ಲ. ನೋಡಲು ಸುಂದರಾಗಿಲ್ಲ ಎನ್ನುವ ಕಾರಣಕ್ಕೂ ಅದನ್ನು ತಿನ್ನದಿರುವವರಿದ್ದಾರೆ. ನೀವೂ ಇವರಲ್ಲಿ ಒಬ್ಬರಾಗಿದ್ದರೆ ಕುಂಬಳಕಾಯಿ ಸೌಂದರ್ಯ (Beauty) ನೋಡಿ ಅದರ ಸೇವನೆ ಬಿಡಬೇಡಿ. ಯಾಕೆಂದ್ರೆ ಕುಂಬಳಕಾಯಿ ನಿಮ್ಮ ಸೌಂದರ್ಯವನ್ನು ಹೆಚ್ಚಿಸುತ್ತದೆ. ಕುಂಬಳಕಾಯಿ ಬೀಜ (Seed) ದಿಂದ ಹಿಡಿದು ಅದರ ತಿರುಳಿನ ವರೆಗೂ ಎಲ್ಲವೂ ಪೋಷಕಾಂಶ (Nutrition) ಗಳಿಂದ ಕೂಡಿರುತ್ತದೆ.
ಕುಂಬಳಕಾಯಿಯಲ್ಲಿರುವ ಎಲ್ಲಾ ಪೋಷಕಾಂಶಗಳು ಚರ್ಮವನ್ನು ಹೈಡ್ರೀಕರಿಸುವುದರಿಂದ ಹಿಡಿದು ಒಳಗಿನಿಂದ ಚರ್ಮವನ್ನು ಆರೋಗ್ಯಗೊಳಿಸುವವರೆಗೆ ಅನೇಕ ಕೆಲಸಗಳನ್ನು ಮಾಡುತ್ತದೆ. ಕುಂಬಳಕಾಯಿಯು ಕಿಣ್ವಗಳು, ಜೀವಸತ್ವಗಳು ಮತ್ತು ಆಲ್ಫಾ ಹೈಡ್ರಾಕ್ಸಿ ಆಮ್ಲಗಳನ್ನು ಹೊಂದಿರುತ್ತದೆ. ಇದು ಚರ್ಮದ ಸತ್ತ ಕೋಶಗಳನ್ನು ಒಡೆಯುವ ಜೊತೆಗೆ ಹೊಸ ಕೋಶ ರಚನೆಯ ಪ್ರಕ್ರಿಯೆಯನ್ನು ವೇಗಗೊಳಿಸುತ್ತದೆ.
ಚರ್ಮದ ಸೌಂದರ್ಯ ಹಾಳಾಗಿದ್ದು, ಸಾಕಷ್ಟು ಕ್ರೀಮ್ ಬಳಸಿಯೂ ಪ್ರಯೋಜನವಾಗಿಲ್ಲ ಎನ್ನುವವರು ಕುಂಬಳಕಾಯಿ ಬಳಸಿ ನೋಡಿ. ಇದು ಉತ್ತಮ ಪ್ರಯೋಜನವನ್ನು ನೀಡುತ್ತದೆ. ನಿಮ್ಮ ಚರ್ಮಕ್ಕೆ ಕುಂಬಳಕಾಯಿ ಹೇಗೆ ಪ್ರಯೋಜನಕಾರಿ ಎಂಬ ವಿಷ್ಯವನ್ನು ನಾವಿಂದು ಹೇಳ್ತೇವೆ.
ಚರ್ಮಕ್ಕೆ ಪ್ರಯೋಜನಕಾರಿ ಕುಂಬಳಕಾಯಿ:
ಸುಕ್ಕುಗಳಿಗೆ ಬೈ-ಬೈ ಹೇಳಿ: ತಿನ್ನಲು ಕುಂಬಳಕಾಯಿ ಇಷ್ಟಪಡದೆ ಇದ್ದರೂ ಸುಕ್ಕುಗಳನ್ನು ತಡೆಯಲು ನೀವು ಅದನ್ನು ಬಳಸಬಹುದು. ಬೆಳಿಗ್ಗೆ ಎದ್ದಾಗ ಮುಖದ ಮೇಲೆ ಸುಕ್ಕುಗಳು ಕಂಡರೆ ಅದಕ್ಕೆ ಕುಂಬಳಕಾಯಿ ಉತ್ತಮ ಚಿಕಿತ್ಸೆಯಾಗಿದೆ. ಕುಂಬಳಕಾಯಿ ಕಿಣ್ವಗಳೊಂದಿಗೆ ಆಲ್ಫಾ ಹೈಡ್ರಾಕ್ಸಿ ಆಮ್ಲಗಳನ್ನು ಹೊಂದಿದೆ. ಇದು ಜೀವಕೋಶದ ವಹಿವಾಟನ್ನು ಉತ್ತೇಜಿಸುತ್ತದೆ. ಜೀವಕೋಶದ ವಹಿವಾಟು ವೇಗವಾಗಿ ಮುಖದ ಕಾಂತಿ ಹೆಚ್ಚಾಗುತ್ತದೆ. ಕುಂಬಳಕಾಯಿಯಲ್ಲಿ ಉತ್ತಮ ಪ್ರಮಾಣದ ವಿಟಮಿನ್ ಸಿ ಕೂಡ ಇದೆ. ಇದು ಕೋಲೆಜನ್ ನಂತಹ ಪ್ರೋಟೀನ್‌ಗಳ ಸಹಾಯದಿಂದ ಚರ್ಮವನ್ನು ಬಲಪಡಿಸುವ ಕೆಲಸ ಮಾಡುತ್ತದೆ.
ಫೇಸ್ ಮಾಸ್ಕ್ ಹೀಗೆ ತಯಾರಿಸಿ: ಮುಖದ ಮೇಲಿನ ಸುಕ್ಕುಗಳನ್ನು ಹೋಗಲಾಡಿಸಲು, ಕುಂಬಳಕಾಯಿ ಫೇಸ್ ಮಾಸ್ಕ್ ತಯಾರಿಸಿ ಬಳಸಿ. ಕಾಲು ಕಪ್ ಕುಂಬಳಕಾಯಿ, ಅರ್ಧ ಚಮಚ ಅರಿಶಿನ ಪುಡಿ ಮತ್ತು ಒಂದು ಚಮಚ ಜೇನುತುಪ್ಪವನ್ನು ಬೆರೆಸಿ ಅದನ್ನು ಮಿಕ್ಸಿ ಮಾಡಿ. ಈ ಮಿಶ್ರಣವನ್ನು ಮುಖ ಮತ್ತು ಕುತ್ತಿಗೆಗೆ ಹಚ್ಚಿ ಮತ್ತು 15 ನಿಮಿಷಗಳ ನಂತರ ತೊಳೆಯಿರಿ. ಇದನ್ನು ನಿಯಮಿತವಾಗಿ ಮಾಡುವುದರಿಂದ ಮುಖದ ಸುಕ್ಕುಗಳು ಮಾಯವಾಗುತ್ತವೆ.
ಎಣ್ಣೆಯುಕ್ತ ಚರ್ಮದ ಸಮಸ್ಯೆಗೆ ಇಲ್ಲಿದೆ ಪರಿಹಾರ: ಕುಂಬಳಕಾಯಿ ಬೀಜಗಳಲ್ಲಿ ಸತುವು ಸಮೃದ್ಧವಾಗಿದೆ. ಇದು ಮೇದೋಗ್ರಂಥಿಗಳ ಸ್ರಾವ ಉತ್ಪಾದನೆಯನ್ನು ನಿಯಂತ್ರಿಸುವ ಶಕ್ತಿಯನ್ನು ಹೊಂದಿದೆ. ಇದರರ್ಥ ಮೊಡವೆಗಳಿಂದ ತೊಂದರೆಗೊಳಗಾದ ಜನರಿಗೆ ಈ ಬೀಜಗಳು ಮಾಂತ್ರಿಕವಾಗಿ ಕೆಲಸ ಮಾಡುತ್ತವೆ.
ಹಣ್ಣು ತಿಂದು ಬೀಜ ಎಸೀಬೇಡಿ. ಇದ್ರಲ್ಲೆಷ್ಟು ಔಷಧೀಯ ಗುಣವಿದೆ ತಿಳ್ಕೊಳ್ಳಿ
ಬಳಸುವುದು ಹೇಗೆ ?: ಎಣ್ಣೆಯುಕ್ತ ಚರ್ಮದವರು ಪ್ರತಿ ದಿನ ಕುಂಬಳಕಾಯಿ ಬೀಜವನ್ನು ಸೇವಿಸುತ್ತ ಬಂದರೆ ಸಮಸ್ಯೆ ಕಡಿಮೆಯಾಗುತ್ತದೆ. ಆದರೆ, ಅವುಗಳನ್ನು ಸೀಮಿತ ಪ್ರಮಾಣದಲ್ಲಿ ಸೇವನೆ ಮಾಡಬೇಕಾಗುತ್ತದೆ.
ಕಪ್ಪು ಕಲೆ ಕಡಿಮೆ ಮಾಡುತ್ತೆ ಕುಂಬಳಕಾಯಿ ಬೀಜ: ಮುಖದ ಮೇಲೆ ಕಾಣಿಸಿಕೊಳ್ಳುವ ಕಪ್ಪು ಕಲೆಗಳನ್ನು ಹೋಗಲಾಡಿಸುವುದು ದೊಡ್ಡ ಸಮಸ್ಯೆ. ಮಹಿಳೆಯರು ಕಪ್ಪು ಕಲೆಗಳನ್ನು ಮರೆಮಾಚಲು ಅನೇಕ ರೀತಿಯ ಸೌಂದರ್ಯವರ್ಧಕಗಳನ್ನು ಬಳಸುತ್ತಾರೆ. ಆದರೆ ಕಲೆಗಳು ಶಾಶ್ವತವಾಗಿ ಹೋಗುವುದಿಲ್ಲ. ಅಂತಹ ಪರಿಸ್ಥಿತಿಯಲ್ಲಿ, ಕುಂಬಳಕಾಯಿ ಈ ಕಪ್ಪು ಕಲೆಗಳಿಗೆ ನೈಸರ್ಗಿಕ ಪರಿಹಾರವಾಗಿದೆ.
ಸಣ್ಣಗಾಗ್ಬೇಕಾ ? ಜಿಮ್‌ಗೆ ಹೋಗಿ ಕಷ್ಟಪಡೋದೇನು ಬೇಡ, ಸಿಂಪಲ್ ಟಿಪ್ಸ್ ಇಲ್ಲಿದೆ
ಬಳಸುವುದು ಹೇಗೆ? : ಕಪ್ಪು ಕಲೆಗಳನ್ನು ಹೋಗಲಾಡಿಸಲು, 1 ಚಮಚ ಕುಂಬಳಕಾಯಿ ಪ್ಯೂರಿ, 1 ಚಮಚ ಜೇನುತುಪ್ಪ, 1 ಚಮಚ ನಿಂಬೆ ರಸ ಮತ್ತು 1 ಚಮಚ ವಿಟಮಿನ್ ಇ ಎಣ್ಣೆಯನ್ನು ಬೆರೆಸಿ ಫೇಸ್ ಪ್ಯಾಕ್ ತಯಾರಿಸಿ. ಈ ಮಿಶ್ರಣವನ್ನು ತೇವ ಮುಖದ ಮೇಲೆ 30 ನಿಮಿಷಗಳ ಕಾಲ ಅಥವಾ ಅದು ಒಣಗುವವರೆಗೆ ಇರಿಸಿ ಮತ್ತು ನಂತರ ಉಗುರು ಬೆಚ್ಚಗಿನ ನೀರಿನಿಂದ ತೊಳೆಯಿರಿ.