ಖಾಲಿ ಹೊಟ್ಟೆಗೆ ಟೀ ಕುಡಿದರೆ ಆರೋಗ್ಯದ ಮೇಲೆ ಬೀರುತ್ತಾ ಪರಿಣಾಮ?

By Suvarna News  |  First Published Jul 26, 2022, 4:40 PM IST

ಬೆಳಗ್ಗೆ ಎದ್ದಹಾಗೆ ಟೀ ಕುಡಿಯೋದು ಹಲವರಿಗೆ ಅಭ್ಯಾಸ. ನಿದ್ದೆ ಮೂಡ್ ಹೋಗುತ್ತೆ, ಫ್ರೆಶ್ ಆಗ್ತೀವಿ ಅನ್ನೋದು ಟೀ ಕುಡಿಯೋದಕ್ಕೆ ರೀಸನ್ ಆದರೆ ನಿಜಕ್ಕೂ ಖಾಲಿ ಹೊಟ್ಟೆಗೆ ಟೀ ಕುಡಿದರೆ ಏನಾಗುತ್ತೆ ಗೊತ್ತಾ?


ಬೆಳಗಿನ ಉಪಾಹಾರದೊಂದಿಗೆ ಒಂದು ಕಪ್ ಚಹಾ ಸೇವಿಸುವುದು ನಿಮ್ಮ ಆರೋಗ್ಯಕ್ಕೆ ಒಳ್ಳೆಯದು ಎಂದು ನೀವು ಕೇಳಿರಬಹುದು. ಆದಾಗ್ಯೂ, ಖಾಲಿ ಹೊಟ್ಟೆಯಲ್ಲಿ ಚಹಾವನ್ನು ಕುಡಿಯುವುದರಿಂದ ಕೆಲವು ಅಡ್ಡಪರಿಣಾಮಗಳಿವೆ ಎಂದು ನೀವು ತಿಳಿದುಕೊಳ್ಳಬೇಕು. ಇದು ಅಜೀರ್ಣ ಮತ್ತು ಎದೆಯುರಿ ಉಂಟುಮಾಡಬಹುದು, ಅದಕ್ಕಾಗಿಯೇ ಟೀ ಕುಡಿಯೋದಾದ್ರೆ ಆಹಾರದ ಜೊತೆಗೇ ಕುಡಿಯಿರಿ, ಖಾಲಿ ಹೊಟ್ಟೆಯಲ್ಲಿ ಟೀ ಕುಡಿಯಬೇಡಿ ಎಂದು ವೖದ್ಯರು ಹೇಳುತ್ತಾರೆ. ಬೆಳಗ್ಗೆ ಎದ್ದ ಹಾಗೆ ಟೀ ಕುಡಿಯೋದರಿಂದ ಆ ಕ್ಷಣಕ್ಕೆ ನಿದ್ದೆ ಮೂಡಿನಿಂದ ಹೊರಬಂದ ಅನುಭವವಾಗಬಹುದು. ಆದರೆ ದೇಹಕ್ಕೆ ಇದರಿಂದ ಹಾನಿಯಿದೆ. ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಚಹಾವನ್ನು ಸೇವಿಸುವುದರಿಂದ ಉಂಟಾಗುವ ಅಡ್ಡಪರಿಣಾಮಗಳು ಹಲವಿವೆ. ಟೀಯಲ್ಲಿರುವ ಥಿಯೋಫಿಲಿನ್‌ ದೇಹದಲ್ಲಿ ನಿರ್ಜಲೀಕರಣ, ಕಾಂಸ್ಟಿಪೇಶನ್ ಮೊದಲಾದ ಸಮಸ್ಯೆಗಳಿಗೆ ಕಾರಣವಾಗುತ್ತೆ. ಅವುಗಳಲ್ಲಿ ಕೆಲವು ಇಲ್ಲಿವೆ.

ವ್ಯಾಯಾಮ ಮಾಡಿ ಟೀ ಸೇವನೆ ಮಾಡಿದ್ರೆ ಏನಾಗುತ್ತೆ?
ಬೆಳಗ್ಗೆ ಎದ್ದ ಹಾಗೆ ಎಕ್ಸರ್‌ಸೈಸ್‌(Exercise) ಮಾಡ್ತೀರಿ. ಆಮೇಲೆ ಒಂದು ಲೋಟ ಟೀ ಕುಡಿಯೋಣ ಅಂತ ಹೊರಡ್ತೀರಿ. ಆದರೆ ವ್ಯಾಯಾಮದ ಬಳಿಕ ಹೊಟ್ಟೆ ಹಸಿದುಕೊಂಡಿರುತ್ತೆ. ಈ ಹೊತ್ತಿಗೆ ಟೀ ಕುಡಿಯೋದು ಒಳ್ಳೆಯದಲ್ವೇ ಅಲ್ಲ. ಜೊತೆಗೆ ಖಾಲಿ ಹೊಟ್ಟೆಗೆ ಟೀ ಬಿದ್ದಾಗ ದೇಹದ ಉಷ್ಣತೆಯಲ್ಲಿ ಕೊಂಚ ಏರು ಪೇರಾಗೋದು ಸೂಕ್ಷ್ಮವಾಗಿ ಗಮನಿಸಿದರೆ ನಿಮ್ಮ ಗಮನಕ್ಕೂ ಬರುತ್ತದೆ. ಅತಿಯಾದ ಬೆವರುವಿಕೆ ಅಥವಾ ದಿನದಲ್ಲಿ ಅತಿಯಾದ ವ್ಯಾಯಾಮದಿಂದ ನಿರ್ಜಲೀಕರಣದಿಂದ ಉಂಟಾಗಬಹುದು. ಇದರ ಜೊತೆಗೆ ಟೀ(Tea)ಯೂ ನಿರ್ಜಲಿಕರಣಕ್ಕೆ ಕಾರಣವಾಗುತ್ತೆ. ಮಲಗುವ ಮುನ್ನ ಸಾಕಷ್ಟು ನೀರು ಕುಡಿಯುವುದರಿಂದ ಮತ್ತು ಹಗಲಿನ ಬದಲು ರಾತ್ರಿಯಲ್ಲಿ ನಿಮ್ಮ ಔಷಧಿಗಳನ್ನು ತೆಗೆದುಕೊಳ್ಳುವುದರಿಂದ ಇದನ್ನು ತಡೆಯಬಹುದು, ವಿಶೇಷವಾಗಿ ನೀವು ಅಧಿಕ ರಕ್ತದೊತ್ತಡ ಅಥವಾ ಹೃದಯ ವೈಫಲ್ಯದಂತಹ ಹೃದಯ ಸಮಸ್ಯೆಗಳಿದ್ದರೆ (Heart Problem) ಖಾಲಿ ಹೊಟ್ಟೆಯಲ್ಲಿ ಟೀ ಕುಡಿಯೋ ಸಾಹಸ ಮಾಡಲು ಖಂಡಿತಾ ಹೋಗಬೇಡಿ.

Tap to resize

Latest Videos

ಬೇಕಾಬಿಟ್ಟಿ ತಿಂದು ವರ್ಕೌಟ್‌ ಮಾಡಿದ್ರೆ ನೋ ಯೂಸ್‌ !

ನಿದ್ರಾಹೀನತೆ (Sleeplessness)
ರಾತ್ರಿ ಹೊತ್ತು ಈಗೀಗ ಹೆಚ್ಚಿನವರು ಮಲಗೋ ಬಹಳ ಹೊತ್ತಿನ ಮೊದಲೇ ಆಹಾರ ಸೇವಿಸಿರುತ್ತಾರೆ. ಹೀಗಾಗಿ ಹೊಟ್ಟೆ ಖಾಲಿ ಇರುತ್ತೆ. ಸಂಜೆ ಮೇಲೆ ಖಾಲಿ ಹೊಟ್ಟೆಯಲ್ಲಿ ಚಹಾ ಸೇವನೆ ಮಾಡೋದರಿಂದ ನಿದ್ರಾ ಹೀನತೆ ಆವರಿಸಬಹುದು. ರಾತ್ರಿಯಿಡೀ ನೀವು ನಿದ್ದೆಯಿಲ್ಲದೆ ಒದ್ದಾಡುವಂತಾಗಬಹುದು. ಇದು ಮರುದಿನದ ನಿಮ್ಮ ಚಟುವಟಿಕೆಗಳ ಮೇಲೆ ಪರಿಣಾಮ ಬೀರಬಹುದು. ನಿದ್ರಾಹೀನತೆಯಿಂದ ಸುಸ್ತು, ಒತ್ತಡ ಉಂಟಾಗಬಹುದು. ಇದು ನಿಮ್ಮ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಬಹುದು. ಹೊಟ್ಟೆ ಉಬ್ಬರಿಸಿದ ಹಾಗೆ, ಆಹಾರದಲ್ಲಿ ರುಚಿ ಕಡಿಮೆ ಆದ ಹಾಗೆಲ್ಲ ಆಗಬಹುದು.

ತಲೆನೋವು (Headache)
ಟೀಯಲ್ಲಿರುವ ಕೆಫಿನ್‌ನಿಂದ ಖಾಲಿ ಹೊಟ್ಟೆಯಲ್ಲಿ ಟೀ ಕುಡಿದರೆ, ಅತಿಯಾಗಿ ಟೀ ಕುಡಿದರೆ ತಲೆನೋವು(Headache) ಬರಬಹುದು. ಟೀ ಪುಡಿ ತಯಾರಿಕೆಗೆ ಬಳಸುವ ಕೆಲವೊಂದು ಅಂಶಗಳಿಂದ ಮೈಗ್ರೇನ್(Migraine) ಬರುವ ಸಾಧ್ಯತೆಯೂ ಇದೆ ಎಂದು ತಜ್ಞರು ಹೇಳುತ್ತಾರೆ. ಎಷ್ಟೋ ಸಲ ತಲೆನೋವು ಕಡಿಮೆ ಆಗಲಿ ಅಂತಲೇ ಟೀ ಕುಡಿಯೋರಿದ್ದಾರೆ. ಅವರಿದ್ದನ್ನು ಗಮನಿಸಬೇಕು.

ಹದಿಹರೆಯ ಹುಡುಗಿಯರನ್ನು ಕಾಡೋ ಹಿಸ್ಟೀರಿಯಾಗೆ ಮನೆ ಮದ್ದು

ಹೊಟ್ಟೆ ಉಬ್ಬುವುದು ಮತ್ತು ಗ್ಯಾಸ್ಟ್ರಿಕ್
- ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಚಹಾವನ್ನು ಸೇವಿಸುವ ಮತ್ತೊಂದು ಅಡ್ಡ ಪರಿಣಾಮವೆಂದರೆ ನಿಮ್ಮ ಜೀರ್ಣಾಂಗ ವ್ಯವಸ್ಥೆಯಲ್ಲಿ ಆಗುವ ಅವ್ಯವಸ್ಥೆ. ಹೊಟ್ಟೆ ಉಬ್ಬರಿಸಿದಂತಾಗುವುದು, ಹೊಟ್ಟೆಯೊಳಗೆ ಗ್ಯಾಸ್ ತುಂಬಿಕೊಂಡ ಫೀಲ್(Feel) ಆಗಬಹುದು. ಇನ್ನೊಂದು ಮುಖ್ಯವಾದ ವಿಷಯ ಎಂದರೆ ಆಹಾರವನ್ನು ತಿನ್ನುವ ಮೊದಲು ಬಿಸಿ ಟೀಯನ್ನು ಸೇವಿಸಿದಾಗ, ಅದು ನಿಮ್ಮ ಹೊಟ್ಟೆಯನ್ನು ಹಿಗ್ಗಿಸುತ್ತದೆ. ಈ ಪ್ರಕ್ರಿಯೆಯು ನಿಮ್ಮ ಜೀರ್ಣಾಂಗ ವ್ಯವಸ್ಥೆಯೊಳಗೆ ಒತ್ತಡವನ್ನು ಹೆಚ್ಚಿಸುತ್ತದೆ, ಇದು ಹೊಟ್ಟೆ ಉಬ್ಬರಿಸಿದ ಹಾಗಾಗೋದು, ಗ್ಯಾಸ್ಟ್ರಿಕ್‌ಗೆ ಕಾರಣವಾಗುತ್ತದೆ.

ತಲೆತಿರುಗುವಿಕೆ
ಕೆಫೀನ್ ಕೆಲವು ಜನರಲ್ಲಿ ತಲೆತಿರುಗುವಿಕೆಯನ್ನು ಉಂಟುಮಾಡುತ್ತದೆ. ಇದು ನಿರ್ಜಲೀಕರಣ ಅಥವಾ ನಿರ್ಜಲೀಕರಣದ ಕಾರಣದಿಂದಾಗಿರಬಹುದು ಅಥವಾ ಈ ಕ್ಷಣದಲ್ಲಿ ನಾವು ಗುರುತಿಸಲಾಗದ ಇತರ ಕಾರಣಗಳಿಂದಾಗಿರಬಹುದು.

ಅನಿಯಮಿತ ಹೃದಯ ಬಡಿತ
ಕೆಫೀನ್ ಕೆಲವು ಜನರಲ್ಲಿ ಹೃದಯ ಬಡಿತವನ್ನು ಹೆಚ್ಚಿಸಲು ಹೆಸರುವಾಸಿಯಾಗಿದೆ, ಈ ಅಸಹಜ ಹೃದಯ ಬಡಿತವು ಆತಂಕ ಹೆಚ್ಚು ಮಾಡಬಹುದು ಮತ್ತು ಪ್ಯಾನಿಕ್ ಅಟ್ಯಾಕ್‌ಗಳಿಗೆ ಕಾರಣವಾಗಬಹುದು. ನೀವು ಆರೋಗ್ಯವಾಗಿರಲು ಬಯಸಿದರೆ, ನಿಮ್ಮ ದಿನವನ್ನು ಪ್ರಾರಂಭಿಸುವ ಮೊದಲು ಖಾಲಿ ಹೊಟ್ಟೆಯ ಚಹಾವನ್ನು ತಪ್ಪಿಸುವುದು ಮುಖ್ಯ.

click me!