
ಬೆಳಗ್ಗೆ ಎದ್ದು ಕಾಫಿ ಕುಡಿಯಲಿಲ್ಲ ಎಂದರೆ ದಿನವಿಡಿ ಮೂಡ್ ಸರಿ ಇರೋದಿಲ್ಲ. ಕೆಲವರಿಗೆ ಹಾಸಿಗೆ ಮೇಲೆಯೇ ಕಾಫಿ ಬೇಕಾಗುತ್ತದೆ. ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಕಾಫಿ ಕುಡಿಯುವುದರಿಂದ ದೇಹದ ಆರೋಗ್ಯದ ಮೇಲಾಗುವ ಪರಿಣಾಮ ಹಲವಾರಿವೆ. ಈ ಬಗ್ಗೆ ಇಲ್ಲಿದೆ ಮಾಹಿತಿ.
ಒಂದು ಕಪ್ ಕಾಫಿ ತನ್ನದೇ ಆದ ಪ್ರಯೋಜನಗಳನ್ನು ಹೊಂದಿದೆ ಮತ್ತು ದೀರ್ಘಾಯುಷ್ಯ, ಹೃದ್ರೋಗ, ಮಧುಮೇಹ, ಆಲೈಝಿಮರ್ ಕಾಯಿಲೆ ಮತ್ತು ಕ್ಯಾನ್ಸರ್ ತಡೆಗಟ್ಟುವಿಕೆಯಿಂದ ಆರೋಗ್ಯದ ಮೇಲೆ ಕಾಫಿಯ ಧನಾತ್ಮಕ ಪರಿಣಾಮ ಬೀರುತ್ತದೆ ಎಂದು ಹಲವಾರು ಅಧ್ಯಯನಗಳು ಹೇಳಿವೆ. ಅದಾಗ್ಯೂ, ಬೆಳಿಗ್ಗೆ ಕಾಫಿ ಕುಡಿಯುವುದು ಒಳ್ಳೆಯದಕ್ಕಿಂತ ಹೆಚ್ಚು ಹಾನಿ ಮಾಡುತ್ತದೆ ಮತ್ತು ಜೀರ್ಣಕಾರಿ ಸಮಸ್ಯೆಗಳು, ರಕ್ತದಲ್ಲಿನ ಸಕ್ಕರೆಯ ಅಸಮತೋಲನ, ಇತರೆ ವಿಷಯಗಳ ನಡುವೆ ಒತ್ತಡದ ಮಟ್ಟ ಹೆಚ್ಚಳಕ್ಕೆ ಕಾರಣವಾಗಬಹುದು. ನಮ್ಮ ಕಾರ್ಟಿಸೋಲ್ ಮಟ್ಟಗಳು ಈಗಾಗಲೇ ಹೆಚ್ಚಾಗಿರುವುದರಿಂದ ಮತ್ತು ಕಾಫಿ ಕುಡಿಯುವುದರಿಂದ ಒತ್ತಡದ ಹಾರ್ಮೋನ್ ಮಟ್ಟವನ್ನು ಇನ್ನಷ್ಟು ಹೆಚ್ಚಿಸಬಹುದು ಮತ್ತು ಇದು ಮೂಡ್ ಬದಲಾವಣೆಗೆ ಕಾರಣವಾಗಬಹುದು ಮತ್ತು ಆತಂಕವನ್ನು ಹೆಚ್ಚಿಸಬಹುದು.
ಕಾಫಿಯನ್ನು ಯಾವ ಸಮಯಕ್ಕೆ ಬೇಕಾದರೂ ಕುಡಿಯಬಾರದು. ಅದರಲ್ಲೂ ಎದ್ದ ತಕ್ಷಣ ಖಾಲಿ ಹೊಟ್ಟೆಯಲ್ಲಿ ಕಾಫಿ ಕುಡಿಯುವುದು ಒಳ್ಳೆಯದೇ ಎಂಬುದರ ಬಗ್ಗೆ ಅಧ್ಯಯನಗಳು ನಡೆದಿದೆ. ಅನೇಕ ಜನರಿಗೆ, ಕಾಫಿ ಅವರ ಬೆಳಗಿನ ದಿನಚರಿಯ ಅತ್ಯಗತ್ಯ ಭಾಗವಾಗಿದೆ. ಎಲ್ಲಕ್ಕಿಂತ ಮುಂಚೆಯೇ ಅಂದರೆ ಖಾಲಿ ಹೊಟ್ಟೆಯಲ್ಲಿ ಕಾಫಿ ಕುಡಿಯುವುದರಿಂದ ಅಡ್ಡಪರಿಣಾಮಗಳು ಉಂಟಾಗುತ್ತದೆ.
ಖಾಲಿ ಹೊಟ್ಟೆಯಲ್ಲಿ ಕಾಫಿ ಕುಡಿಯುವುದರಿಂದ ಉಬ್ಬುವುದು, ವಾಕರಿಕೆ, ಅಜೀರ್ಣಕ್ಕೆ ಕಾರಣವಾಗಬಹುದು. ಕಾಫಿ ಹೊಟ್ಟೆಯ ಆಮ್ಲದ ಉತ್ಪಾದನೆಯನ್ನು ಉತ್ತೇಜಿಸುತ್ತದೆ. ಹಾನಿಕಾರಕ ಹೊಟ್ಟೆಯ ಆಮ್ಲದ ಉತ್ಪಾದನೆಯಲ್ಲಿನ ಈ ಹೆಚ್ಚಳವು ದೇಹದ ಜೀರ್ಣಾಂಗ ವ್ಯವಸ್ಥೆಗೆ ತೀವ್ರವಾಗಿ ಅಡ್ಡಿಪಡಿಸುತ್ತದೆ. ಅಜೀರ್ಣ, ಉಬ್ಬುವುದು, ವಾಕರಿಕೆ ಮುಂತಾದ ಸಮಸ್ಯೆಗಳನ್ನು ಉಂಟುಮಾಡುತ್ತದೆ.
ಸಂಜೆ ಕಾಫಿ ಕುಡಿಯುವುದರಿಂದ ತೂಕ ಹೆಚ್ಚಾಗುತ್ತದೆಯೇ?
ಒತ್ತಡದ ಹಾರ್ಮೋನ್‌ಗಳನ್ನು ಹೆಚ್ಚಿಸುತ್ತದೆ
ಖಾಲಿ ಹೊಟ್ಟೆಯಲ್ಲಿ ಕಾಫಿ ಸೇವಿಸುವುದರಿಂದ ಕಾರ್ಟಿಸೋಲ್ ಅನ್ನು ಹೆಚ್ಚಿಸುತ್ತದೆ. ಇದು ಅಂಡೋತ್ಪತ್ತಿ, ತೂಕ ಮತ್ತು ಹಾರ್ಮೋನುಗಳ ಸಮತೋಲನವನ್ನು ಋಣಾತ್ಮಕವಾಗಿ ಪರಿಣಾಮ ಬೀರುತ್ತದೆ. ಒತ್ತಡದ ಹಾರ್ಮೋನ್ ಎಂದು ಕರೆಯಲ್ಪಡುವ ಇದನ್ನು ಇತರೆ ವಿಷಯಗಳ ಜೊತೆಗೆ, ಶಕ್ತಿಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಬೆಳಗ್ಗೆ ಎದ್ದೇಳುವ ಸಮಯದಲ್ಲಿ ನೈಸರ್ಗಿಕವಾಗಿ ಎಚ್ಚರಗೊಳ್ಳುವಂತೆ ಮಾಡುತ್ತದೆ ಮತ್ತು ಕುತೂಹಲಕಾರಿಯಾಗಿ, ಕಾಫಿ ಕಾರ್ಟಿಸೋಲ್ ಉತ್ಪಾದನೆಯನ್ನು ಉತ್ತೇಜಿಸುತ್ತದೆ.
ರಕ್ತದ ಸಕ್ಕರೆ ಮಟ್ಟ ದುರ್ಬಲ
ಖಾಲಿ ಹೊಟ್ಟೆಯಲ್ಲಿ ಕಾಫಿ ಕುಡಿಯುವುದರಿಂದ ದೇಹದಲ್ಲಿ ರಕ್ತದಲ್ಲಿ ಸಕ್ಕರೆ ನಿಯಂತ್ರಣ ದುರ್ಬಲಗೊಳ್ಳುತ್ತದೆ.
ಮೂಡ್ ಬದಲಾವಣೆ
ಖಾಲಿ ಹೊಟ್ಟೆಯಲ್ಲಿ ಕಾಫಿ ಕುಡಿಯುವುದರಿಂದ ಮೂಡ್ ಬದಲಾವಣೆಗಳು ಸೇರಿದಂತೆ ಕಂಪನ, ಶೇಕ್ಸ್ ಮತ್ತು ಇತರೆ ಹಿಂತೆಗೆದುಕೊಳ್ಳುವ ಪರಿಣಾಮಗಳನ್ನು ನೀಡಬಹುದು.
ಹಾರ್ಮೋನ್ ತೊಂದರೆ
ಲೆವೊಥೈರಾಕ್ಸಿನ್ (ಸಂಶ್ಲೇಷಿತ ಥೈರಾಯ್ಡ್ ಹಾರ್ಮೋನ್) ಹೀರಿಕೊಳ್ಳುವಿಕೆಯ ಮೇಲೆ ಪರಿಣಾಮ ಬೀರುತ್ತದೆ. ಇದರಿಂದಾಗಿ T4 ಅನ್ನು T3 ಹಾರ್ಮೋನುಗಳಿಗೆ ಪರಿವರ್ತಿಸುವ ಮೇಲೆ ಪರಿಣಾಮ ಬೀರುತ್ತದೆ.
ಮಧುಮೇಹ ಕಾಡ್ಬಾರ್ದು ಅಂದ್ರೆ ಕೆಫೀನ್ ಮುಕ್ತ ಚಿಕೋರಿ ಕಾಫಿ ಕುಡೀರಿ
ಗರ್ಭಿಣಿಯರೇ ಕಾಫಿ ಬಿಟ್ಟುಬಿಡಿ
ಕಾಫಿ ಕುಡಿಯುವುದರಿಂದ ಮಿತವಾಗಿರಬೇಕು ಎಂದು ತಜ್ಞರು ಹೇಳುತ್ತಾರೆ. ಏಕೆಂದರೆ ಯುವಕರಲ್ಲಿ ಅದರ ಪ್ರಭಾವ 7 ಗಂಟೆಗಳ ಕಾಲ ಇರುತ್ತದೆ. ಅಲದೆ ಇದರಲ್ಲಿನ ಕೆಫಿನ್ ಅಂಶವು ನಿದ್ರೆಯನ್ನು ಓಡಿಸುತ್ತದೆ. ಕೆಫಿನ್ ಅಂಶವು ಪ್ಲೆಸೆಂಟಾಗೆ ಸುಲಭವಾಗಿ ಪ್ರವೇಶಿಸುತ್ತದೆ. ಹಾಗಾಗಿ ಗರ್ಭಿಣಿಯರು ಕಾಫಿ ಕುಡಿಯುವುದನ್ನು ಕಡಿಮೆ ಮಾಡಬೇಕು. ದಿನದಲ್ಲಿ ಅವರು ಎರಡು ಕಪ್‌ಗಳಷ್ಟು ಕಾಫಿಯನ್ನು ಮಾತ್ರ ಕುಡಿಯಬೇಕು. ಹೆಚ್ಚಾಗಿ ಕುಡಿದರೆ ಹೊಟ್ಟೆಯಲ್ಲಿನ ಮಗುವಿಗೆ ತೊಂದರೆಯಾಗುತ್ತದೆ. ಗರ್ಭಿಣಿಯರಿಗೆ ಕಾಫಿಯ ಪ್ರಭಾವ 16 ಗಂಟೆಗಳ ದೀರ್ಘಕಾಲದವರೆಗೆ ಪರಿಣಾಮ ಇರುತ್ತದೆ.
ಕಾಫಿ ಸೇವಿಸುವ ಉತ್ತಮ ಸಮಯ ಇದು
ದೇಹದಲ್ಲಿನ ಆಕ್ಸಿಡೇಟಿವ್ ಒತ್ತಡ ಮತ್ತು ಉರಿಯೂತಕ್ಕೆ ಗಮನಾರ್ಹ ಕೊಡುಗೆಯಾಗಿದೆ. ಆಯಾಸ, ಚರ್ಮದ ಸಮಸ್ಯೆಗಳು, ಮಧುಮೇಹ ಮತ್ತು ಸ್ವಯಂ ನಿರೋಧಕ ಪರಿಸ್ಥಿತಿಗಳು ಉರಿಯೂತಕ್ಕೆ ಸಂಬAಧಿಸಿದ ಕೆಲವು ಪರಿಸ್ಥಿತಿಗಳಾಗಿವೆ. ಬೆಳಗ್ಗೆ ಕಾಫಿ ಸೇವಿಸುವ ಉತ್ತಮ ಸಮಯ ಎಂದರೆ ಅದು ಬೆಳಗಿನ ಉಪಾಹಾರದ ನಂತರ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.