Men Health : ತಂದೆಯಾಗೋ ಕನಸನ್ನೇ ಭಗ್ನಗೊಳಿಸ್ಬಹುದು ತಣ್ಣೀರು

Published : Apr 26, 2023, 02:21 PM IST
Men Health : ತಂದೆಯಾಗೋ ಕನಸನ್ನೇ ಭಗ್ನಗೊಳಿಸ್ಬಹುದು ತಣ್ಣೀರು

ಸಾರಾಂಶ

ದೇಹಕ್ಕೆ ಸಾಕಷ್ಟು ನೀರು ಬೇಕು. ದಿನಕ್ಕೆ ಎರಡರಿಂದ ಮೂರು ಲೀಟರ್ ನೀರು ಕುಡಿಯಬೇಕೆಂದು ವೈದ್ಯರು ಹೇಳ್ತಾರೆ. ಆದ್ರೆ ಕುಡಿಯೋದು ಯಾವ ನೀರು ಎಂಬುದು ಮುಖ್ಯವಾಗುತ್ತದೆ. ತಣ್ಣನೆಯ ನೀರು ಬಾಯಾರಿಕೆ ನೀಗಿಸುತ್ತೆ ವಿನಃ ಆರೋಗ್ಯವನ್ನು ಸುಧಾರಿಸೋದಿಲ್ಲ.  

ಬಿರುಬೇಸಿಗೆಯಲ್ಲಿ ಎಲ್ಲರೂ ತಣ್ಣನೆಯ ನೀರು ಅಥವಾ ಪಾನೀಯಗಳನ್ನೇ ಕುಡಿಯಲು ಇಷ್ಟಪಡುತ್ತಾರೆ. ವಿಪರೀತ ಸೆಕೆಯಲ್ಲಿ ತಣ್ಣನೆಯ ನೀರು ಕುಡಿಯುವುದು, ತಣ್ಣನೆಯ ನೀರಿನ ಸ್ನಾನ ಮಾಡುವುದು ಸಾಮಾನ್ಯ ಸಂಗತಿ. ಕೆಲವರು ಬೇಸಿಗೆಕಾಲ, ಚಳಿಗಾಲ ಎನ್ನದೆ ಎಲ್ಲ ಕಾಲಗಳಲ್ಲೂ ತಣ್ಣನೆಯ ನೀರಿನ ಸ್ನಾನ ಮಾಡುತ್ತಾರೆ. ಅನೇಕ ಮಂದಿ ಫ್ರಿಜ್ ನಲ್ಲಿ ಇರಿಸಿದ ತಣ್ಣನೆಯ ನೀರನ್ನೇ ಯಾವಾಗಲೂ ಕುಡಿಯುತ್ತಾರೆ. ದೇಹಕ್ಕೆ ಹಿತವೆನಿಸುವ ಇಂತಹ ತಣ್ಣನೆಯ ನೀರು ಪುರುಷರ ತಂದೆಯಾಗುವ ಕನಸನ್ನೇ ನಾಶಮಾಡಬಹುದೆಂಬ ಸಂಗತಿ ಹಲವರಿಗೆ ತಿಳಿದಿಲ್ಲ.

ಹೆಚ್ಚುತ್ತಿರುವ ಇಲೆಕ್ಟ್ರಾನಿಕ್ (Electronic) ಡಿವೈಸ್ ಗಳ ಬಳಕೆ ಹಾಗೂ ಒತ್ತಡದ ಜೀವನ ಶೈಲಿಯಿಂದಾಗಿ ಈಗಾಗಲೇ ಮಹಿಳೆ ಹಾಗೂ ಪುರುಷರಲ್ಲಿ ಫಲವತ್ತತೆ (Fertility) ಕಡಿಮೆಯಾಗುತ್ತಿದೆ. ಇದರಿಂದಲೇ ಹಲವು ರೀತಿಯ ಸಂತಾನೋತ್ಪತ್ತಿ ಸಮಸ್ಯೆಗಳು ಎದುರಾಗುತ್ತಿವೆ. ಜನರು ನಿತ್ಯ ಜೀವನದಲ್ಲಿ ಬಳಸುವ ಅನೇಕ ಆಹಾರ ವಸ್ತುಗಳೇ ಅವರ ಆರೋಗ್ಯ ಮತ್ತು ಫರ್ಟಿಲಿಟಿಯ ಮೇಲೆ ಪ್ರಭಾವ ಬೀರುತ್ತವೆ. ಫಲವತ್ತತೆಯನ್ನು ಹೆಚ್ಚಿಸಲು ಕೇವಲ ಮಹಿಳೆಯರು ಮಾತ್ರವಲ್ಲ ಪುರುಷರು ಕೂಡ ಮುನ್ನಚ್ಚರಿಕೆ ವಹಿಸಿಬೇಕಿದೆ. ಪುರುಷರ ಸಂತಾನೋತ್ಪತ್ತಿಯ ಸಮಸ್ಯೆಗೆ ತಣ್ಣನೆಯ ನೀರು (Water) ಕೂಡ ಕಾರಣವಾಗಿದೆ.

ಈ ಮನುಷ್ಯ ಹೇಳ್ತಿರೋದು ಸುಳ್ಳುಅಂತ ಪತ್ತೆ ಹಚ್ಚೋದು ಹೇಗೆ ಗೊತ್ತಾ?

ವೀರ್ಯದ (Sperm) ಮೇಲೆ ಪ್ರಭಾವ : ಕೆಲವು ತಜ್ಞರು ಹೇಳುವಂತೆ ತಣ್ಣನೆಯ ನೀರು ಮತ್ತು ತಣ್ಣನೆಯ ತಾಪಮಾನ ಪುರುಷರ ಫಲವತ್ತತೆಯ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಹೆಚ್ಚು ತಣ್ಣನೆಯ ನೀರನ್ನು ಬಳಸುವುದರಿಂದ ವೀರ್ಯದ ಉತ್ಪಾದನೆ ಮತ್ತು ಗುಣಮಟ್ಟ ಎರಡೂ ಕಡಿಮೆಯಾಗುತ್ತದೆ. ವೀರ್ಯವನ್ನು ಉತ್ಪಾದಿಸಲು ವೃಷಣಗಳಿಗೆ ದೇಹದ ಉಳಿದ ಭಾಗಗಳಿಗಿಂತ ಕಡಿಮೆ ತಾಪಮಾನ ಸಾಕು. ಆದ್ದರಿಂದ ವ್ಯಕ್ತಿ ವಿಪರೀತ ತಣ್ಣನೆಯ ನೀರನ್ನು ಸೇವಿಸುವುದು ಅಥವಾ ತಣ್ಣನೆಯ ನೀರಿನ ಸ್ನಾನ ಹಾಗೂ ತಣ್ಣನೆಯ ತಾಪಮಾನದಲ್ಲಿ ವಾಸಿಸುವುದರಿಂದ ವ್ಯಕ್ತಿಯ ಶರೀರದಲ್ಲಿ ವೀರ್ಯ ಉತ್ಪಾದನೆ ಕಡಿಮೆಯಾಗುತ್ತದೆ. ಇಂದಿನ ಜೀವನಶೈಲಿಯಲ್ಲಿ ಪುರುಷ ಹಾಗೂ ಮಹಿಳೆಯರಲ್ಲಿ ಹೆಚ್ಚಿನ ಮಂದಿ ಹವಾ ನಿಯಂತ್ರಿತ ಕೊಠಡಿಗಳಲ್ಲಿ ಕೆಲಸ ಮಾಡುವುದರಿಂದ ಕೂಡ ಶರೀರದಲ್ಲಿ ತಾಪಮಾನ ವೈಪರೀತ್ಯ ಸಹಜವಾಗಿಯೇ ಆಗುತ್ತದೆ. ಎಸಿ ಕೂಡ ಸಂತಾನೋತ್ಪತ್ತಿಯ ಸಮಸ್ಯೆಗೆ ಕಾರಣವಾಗಬಹುದು.

ತಣ್ಣನೆಯ ನೀರಿನಿಂದ (Cold Water) ಏನಾಗುತ್ತದೆ? : ವೈದ್ಯರುಗಳು ಹೇಳುವಂತೆ ಹೆಚ್ಚು ತಣ್ಣನೆಯ ತಾಪಮಾನದಲ್ಲಿ ಇರುವುದರಿಂದ ಹಾಗೂ ಅದರ ಬಳಕೆಯಿಂದ ಅಂಡಕೋಶದಲ್ಲಿ ರಕ್ತದ ಪ್ರಭಾವ ಕಡಿಮೆಯಾಗುತ್ತದೆ. ಇದರಿಂದ ವೀರ್ಯ ಉತ್ಪಾದನೆಗೆ ಅವಶ್ಯವಾದ ತಾಪಮಾನವನ್ನು ನಿರ್ವಹಿಸುವುದು ಕೂಡ ಕಷ್ಟವಾಗಬಹುದು. ಅದಕ್ಕಾಗಿಯೇ ವೈದ್ಯರು ಸಾಧ್ಯವಾದಷ್ಟು ತಣ್ಣನೆಯ ನೀರು ಮತ್ತು ತಂಪಾದ ತಾಪಮಾನದಿಂದ ದೂರವಿರಿ ಎಂದು ಸಲಹೆ ನೀಡುತ್ತಾರೆ.

ಒಬ್ಬ ವ್ಯಕ್ತಿ ತಣ್ಣನೆಯ ನೀರನ್ನು ಅತಿಯಾಗಿ ಬಳಸುವುದರಿಂದ ರಕ್ತನಾಳಗಳು ಸಂಕುಚಿತಗೊಳ್ಳುತ್ತವೆ. ಇದನ್ನು ವಾಸೊಕನ್ಸ್ಟ್ರಿಕ್ಷನ್ ಎನ್ನುತ್ತಾರೆ. ಇದರಿಂದ ಯೋನಿಯ ಅಂಗಗಳಿಗೆ ರಕ್ತದ ಸಂಚಾರ ಕಡಿಮೆಯಾಗುತ್ತದೆ. ಇದು ನಿಮಿರುವಿಕೆಯ ಮೇಲೂ ಪರಿಣಾಮ ಬೀರಬಹುದು. ರಕ್ತನಾಳಗಳು ಸಂಕುಚಿತಗೊಂಡಾಗ ರಕ್ತದ ಹರಿವು ನಿಧಾನಗೊಳ್ಳುತ್ತದೆ. ವಾಸೊಕನ್ಸ್ಟ್ರಿಕ್ಷನ್ ಸೌಮ್ಯ ಅಥವಾ ತೀವ್ರವಾಗಿರಬಹುದು. ಇದು ಔಷಧ ಅಥವಾ ಮಾನಸಿಕ ಸ್ಥಿತಿಗಳ ಮೇಲೂ ಸಂಭವಿಸಬಹುದು.

Healthy Foods : ಯಾರು ಗೋಧಿ ರೊಟ್ಟಿ ತಿನ್ಬೇಕು,ಯಾರು ತಿನ್ಬಾರದು?

ಯಾವಾಗ ಹೆಚ್ಚು ಪ್ರಭಾವ ಬೀರುತ್ತೆ :  ಅಪರೂಪಕ್ಕೊಮ್ಮೆ ತಣ್ಣನೆಯ ನೀರನ್ನು ಬಳಸುವುದರಿಂದ ಪುರುಷರ ಫರ್ಟಿಲಿಟಿಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಅದೇ ಒಬ್ಬ ವ್ಯಕ್ತಿ ನಿರಂತರವಾಗಿ ತಣ್ಣನೆಯ ನೀರನ್ನು ಬಳಸುವುದರಿಂದ ವೀರ್ಯ ಉತ್ಪಾದನೆ ಹಾಗೂ ವೀರ್ಯದ ಗುಣಮಟ್ಟದಲ್ಲಿ ದೋಷ ಉಂಟಾಗುತ್ತದೆ. ಹಾಗಾಗಿ ತಂದೆಯಾಗುವ ಇಚ್ಛೆ ಹೊಂದಿರುವವರು ಅಥವಾ ಫ್ಯಾಮಿಲಿ ಪ್ಲಾನಿಂಗ್ ನಲ್ಲಿ ಇರುವವರು ಹೆಚ್ಚು ಜಾಗರೂಕರಾಗಿರಬೇಕು. ತಂದೆಯಾಗುವ ಕನಸನ್ನು ಸಾಕಾರಗೊಳಿಸಲು ಶರೀರದ ಆರೋಗ್ಯ ಹಾಗೂ ತಾಪಮಾನ ಎರಡನ್ನೂ ಕಾಯ್ದುಕೊಳ್ಳುವುದು ಅತ್ಯವಶ್ಯವಾಗಿದೆ. ಇಂತಹ ಸಮಸ್ಯೆ ಇದ್ದಲ್ಲಿ ಅದಕ್ಕೆ ಸಂಬಂಧಿಸಿದ ಪರಿಹಾರದ ಬಗ್ಗೆ ವೈದ್ಯರನ್ನು ಸಂಪರ್ಕಿಸಿ ಸೂಕ್ತ ಪರಿಹಾರ ಕಂಡುಕೊಳ್ಳಬೇಕು.
 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

Foods that Block Arteries: ನೀವು ಪ್ರತಿದಿನ ಸೇವಿಸೋ ಈ ಆಹಾರಗಳೇ ಹೃದಯಾಘಾತಕ್ಕೆ ಕಾರಣವಾಗಬಹುದು ಎಚ್ಚರ
ಕೆಲ್ಸ ಮಾಡೋವಾಗ ಮಾತ್ರವಲ್ಲ ರಜೆಯಲ್ಲೂ ಕಾಡುತ್ತೆ ಖಿನ್ನತೆ, ಹಾಲಿಡೇ ಡಿಪ್ರೆಷನ್ ಅಂದ್ರೇನು?