Time Management: ನಿಮ್ಮ ಸಮಯವೆಲ್ಲ ಎಲ್ಲಿ ವ್ಯರ್ಥವಾಗುತ್ತಿದೆ, ನಿಮಗೆ ಗೊತ್ತೆ?

By Suvarna News  |  First Published Nov 16, 2021, 4:05 PM IST

ದಿನವಿಡೀ ಏನೋ ಮಾಡುತ್ತಿರುತ್ತೀರಿ. ಆದರೆ ಬೇಕಾದ ಕೆಲಸ ಯಾವುದೂ ಆಗಿರುವುದೇ ಇಲ್ಲ. ಇಂಥ ಸನ್ನಿವೇಶ ನೀವೂ ಗಮನಿಸಿದ್ದೀರಾ? ಹಾಗಿದ್ದರೆ ನಿಮ್ಮ ಸಮಯ ಎಲ್ಲಿ ಹೋಯಿತು?


ನಿಮ್ಮ ಸಮಯ (Time waste) ಸುಮ್ಮನೇ ವ್ಯರ್ಥವಾಗುತ್ತಿದೆ ಎಂಬುದನ್ನು ನೀವೂ ಗಮನಿಸಿರಬಹುದು. ದಿನವಿಡೀ ಸಮಯ ಇರುತ್ತದೆ, ಆದರೆ ಯಾವ ಕೆಲಸವೂ ಆಗಿರುವುದಿಲ್ಲ. ಹಾಗಾದರೆ ಸಮಯವೆಲ್ಲಾ ಎಲ್ಲಿ ಸೋರಿಹೋಯಿತು? ಈ ಕೆಳಗಿನ ಕೆಲವು ಸೂತ್ರಗಳನ್ನು ಅನುಸರಿಸಿದರೆ ನೀವು ಸಮಯವನ್ನು ಇನ್ನಷ್ಟು ಜಾಣತನದಿಂದ ನಿಭಾಯಿಸುವುದನ್ನು ಕಲಿಯುತ್ತೀರಿ. ಮಿಗಿಲಾಗಿ, ಪೋಲಾಗುವ ಸಮಯ ಎಲ್ಲಿ ಹೋಗುತ್ತಿದೆ ಎಂಬುದು ನಿಮಗೆ ಗೊತ್ತಾಗುತ್ತದೆ.

ನೀವು ದಿನನಿತ್ಯ ಮಾಡುವ ಕೆಲವು ಚಟುವಟಿಕೆಗಳು ಸಮಯ ವ್ಯರ್ಥವಾಗಿಸುವುದನ್ನು ಬಿಟ್ಟು ಉತ್ಪಾದಕ ಆಗುವುದು ಹೇಗೆ? ಇದಕ್ಕೆ ಸ್ವಲ್ಪ ಪ್ರಯತ್ನ ಬೇಕೇ ಬೇಕು. ಕೆಲವರು ನಿಮ್ಮ ಸಮಯವನ್ನು ನುಂಗಿಹಾಕುತ್ತಾರೆ. ಅದು ನಿಮಗೇ ಬಹುಶಃ ತಿಳಿದಿರಲಿಲ್ಲ! ನಿಮ್ಮ ದೈನಂದಿನ ದಿನಚರಿಯಿಂದ ಹೆಚ್ಚಿನ ಸಮಯವನ್ನು ಪಡೆಯಲು ಸಾಧ್ಯವಾಗುವಂತೆ, ವ್ಯರ್ಥವಾಗುವ ಎಲ್ಲವನ್ನೂ ತಪ್ಪಿಸಬಹುದು ಎಂಬುದನ್ನು ಗಮನಿಸಿ.

Latest Videos

undefined

ಸಮಯ ತಳ್ಳುವುದು (Procrastination)

ಇದು ತುಂಬಾ ಸಾಮಾನ್ಯವಾಗಿದೆ ಮತ್ತು ನಮಗೆ ಇದರ ಬಗ್ಗೆ ತಿಳಿದಿದೆ. ಸಮಯ ತಳ್ಳುವುದು ಅಥವಾ ಮುಂದಕ್ಕೆ ಹಾಕುವುದು. ನಾವು ಏನನ್ನು ಮಾಡಬೇಕು ಎಂಬುದು ನಮಗೆ ಚೆನ್ನಾಗಿ ತಿಳಿದಿದ್ದರೂ ಅದನ್ನು ಮಾಡಲು ಬಯಸುವುದಿಲ್ಲ. ನಾಳೆ ಮಾಡೋಣ, ನಾಡಿದು ಮಾಡೋಣ ಎಂದು ಮುಂದೆ ಹಾಕುತ್ತಾ ಇರುತ್ತೇವೆ. ಯಾವ್ಯಾವುದೋ ಅನುಪಯುಕ್ತ ಕೆಲಸಗಳನ್ನು ಮಾಡುತ್ತ ಇರುತ್ತೇವೆ. ನಂತರ ತಡವಾದಾಗ ಮತ್ತು ಡೆಡ್‌ಲೈನ್‌ ನಮ್ಮ ತಲೆಯ ಮೇಲಿರುವಾಗ ಗಡಿಬಿಡಿ ಮಾಡುತ್ತೇವೆ. ಸುಲಭವಾಗಿ ಮೊದಲೇ ಪೂರ್ಣಗೊಳಿಸಬಹುದಿತ್ತೆಂದು ಪೇಚಾಡುತ್ತೇವೆ. ಇದು ನಮ್ಮಲ್ಲಿ ಅಪರಾಧ ಭಾವ ಮೂಡಿಸುತ್ತದೆ. ಕಾಲ ಮುಂದೂಡುವಿಕೆಯನ್ನು ಕೈಬಿಟ್ಟರೆ ನಿಜವಾಗಿಯೂ ಹೆಚ್ಚು ಪರಿಣಾಮಕಾರಿಯಾಗಿರುತ್ತೀರಿ.

ಸಾಮಾಜಿಕ ಜಾಲತಾಣಗಳು (Social sites)

ನಿಮ್ಮ ಬದುಕಿಗೆ ಅಥವಾ ಭಾವಲೋಕಕ್ಕೆ ಯಾವುದೇ ಮೌಲ್ಯ ಸೇರಿಸದ ವಿಡಿಯೋಗಳನ್ನು ನೋಡುತ್ತಾ, ಫೇಸ್‌ಬುಕ್, ಟ್ವಿಟರ್‌ಗಳಲ್ಲಿ ಯಾರದೋ ಟೀಕೆಗಳಿಗೆ ಪ್ರತಿಕ್ರಿಯೆ ನೀಡುತ್ತಾ, ಕಾಲ ತಳ್ಳುತ್ತೀರಿ. ದಿನದಲ್ಲಿ ಒಂದರ್ಧ ಗಂಟೆ ಹೀಗೆ ಮಾಡಿದರೆ ಓಕೆ. ಆದರೆ ಸಮಯವು ನಿಮ್ಮ ಅರಿವಿಗೇ ಬರದೆ ಹಾರುತ್ತದೆ. ಫೋನ್ ಅಥವಾ ಲ್ಯಾಪ್‌ಟಾಪ್ ಪರದೆಯ ಮೇಲೆ ಗಂಟೆಗಳನ್ನು ಕಳೆಯುತ್ತೀರಿ. ನೀವು ಎಷ್ಟು ಸಮಯವನ್ನು ವ್ಯರ್ಥ ಮಾಡಿದ್ದೀರಿ ಎಂದು ನಂತರ ನಿಮಗೆ ತಿಳಿಯುತ್ತದೆ, ಅದನ್ನು ಇತರ ಚಟುವಟಿಕೆಗಳಿಗೆ ಸುಲಭವಾಗಿ ಬಳಸಿಕೊಳ್ಳಬಹುದು. ಸಾಮಾಜಿಕ ಮಾಧ್ಯಮದಲ್ಲಿ ಟ್ರೆಂಡಿಂಗ್ ಆಗಿರುವುದನ್ನು ನೀವು ತಿಳಿದುಕೊಳ್ಳಲು ಗರಿಷ್ಠ 30 ನಿಮಿಷಗಳನ್ನು ಮೀಸಲಿಟ್ಟರೆ ಸಾಕು.

ಬೇರೆಯವರ ಕೆಲಸ

ನಿಮ್ಮ ಕೆಲಸ ಮೊದಲು ಮಾಡದೆ ಬೇರೆಯವರ ಕೆಲಸ ಮೈಮೇಲೆ ಎಳೆದುಕೊಳ್ಳುವುದು ಅಪಾಯ. ಅಂದರೆ ನಿಮ್ಮ ಪೋಷಕರು ಅಥವಾ ಸಂಗಾತಿಯ ಕೆಲಸವನ್ನು ಪೂರ್ಣಗೊಳಿಸಬಾರದು ಎಂದಲ್ಲ. ನಾವು ಹೇಳುತ್ತಿರುವುದು ನೀವು ಇತರರಿಗೆ ಸಹಾಯ ಮಾಡಬೇಕು, ಅದು ಒಳ್ಳೆಯದು, ಆದರೆ ತುರ್ತು ಪರಿಸ್ಥಿತಿ ಅಲ್ಲದಿದ್ದರೆ ಮೊದಲು ನಿಮ್ಮ ಸ್ವಂತ ಕೆಲಸವನ್ನು ಮುಗಿಸಿ. ನಿಮ್ಮ ಸ್ನೇಹಿತರಿಗೆ ಸಮಯವನ್ನು ಬೇರೆಡೆ ನೀಡಿ ಅಥವಾ ಇತರರಿಗಾಗಿ ಕೆಲಸ ಮಾಡಲು ಕೆಲವು ನಿಮಿಷಗಳನ್ನು ಮೀಸಲಿಡಿ. ಕಳೆದುಹೋದ ಸಮಯವನ್ನು ಸರಿದೂಗಿಸಲು ಯಾರೂ ನಿಮಗೆ ಸಹಾಯ ಮಾಡುವುದಿಲ್ಲ!

Hindu Wedding Ritual: ಪತಿ-ಪತ್ನಿ ಜೊತೆಯಾಗಿಡುವ ಏಳು ಹೆಜ್ಜೆಗಳ ಅರ್ಥವೇನು?

ಕಸದ ಸೃಷ್ಟಿ

ನೀವು ಯಾವುದನ್ನಾದರೂ ಬಳಸಿ ಕೆಲಸ ಮುಗಿಸಿದ ಬಳಿಕ, ಅದು ಎಲ್ಲಿಂದ ಬಂದಿದೆಯೋ ಅದನ್ನು ಮತ್ತೆ ಅಲ್ಲೇ ಇರಿಸಬೇಕು. ಇಲ್ಲವಾದರೆ, ಕೆಲಸ ಉಗಿದ ಮೇಲೂ ಆಮೇಲೆ ನಿಮಗೆ ಅನಗತ್ಯವಾದ ಸಾಧನ ಸಂಗತಿಗಳು ರಾಶಿಬಿದ್ದು ಅದನ್ನು ಸರಿಪಡಿಸಲು ಸಮಯವನ್ನು ವ್ಯರ್ಥ ಮಾಡುತ್ತೀರಿ. ಆದ್ದರಿಂದ ಎಲ್ಲವನ್ನು ಇದ್ದಲ್ಲಿಯೇ ಇರಿಸುವುದು ಉತ್ತಮ. ನಿಮಗೆ ಹೆಚ್ಚು ಅಗತ್ಯವಿರುವಾಗ ಆ ವಸ್ತುಗಳನ್ನು ಹುಡುಕಲು ಸಮಯ ವ್ಯರ್ಥವಾಗುವುದಿಲ್ಲ. ಸುಲಭವಾಗುತ್ತದೆ.

ನಕಾರಾತ್ಮಕ ವ್ಯಕ್ತಿಗಳು (Negetive persons)

ನಕಾರಾತ್ಮಕ ವ್ಯಕ್ತಿಗಳು ನಿಮ್ಮ ಸಮಯವನ್ನು, ಆಲೋಚನೆಯನ್ನು ತಿಂದುಹಾಕುತ್ತಾರೆ. ನೀವು ಇದೀಗ ಜೊತೆಗೆ ತೊಡಗಿಸಿಕೊಂಡಿರುವ ವ್ಯಕ್ತಿ ನಕಾರಾತ್ಮಕ ಮತ್ತು ವಿಷಕಾರಿ ಮನುಷ್ಯ ಎಂದು ನಿಮಗೆ ತಿಳಿದಿದ್ದರೆ, ಅವರ ಮೇಲೆ ಏಕೆ ಸಮಯವನ್ನು ವ್ಯರ್ಥ ಮಾಡುತ್ತೀರಿ? ಇದು ನಕಾರಾತ್ಮಕತೆಯನ್ನು ಹೆಚ್ಚಿಸುವುದರ ಹೊರತಾಗಿ ಬೇರೆ ಏನನ್ನೂ ನಿಮಗೆ ಕೊಡುವುದಿಲ್ಲ, ನಿಮ್ಮ ವ್ಯಕ್ತಿತ್ವಕ್ಕೆ ಏನನ್ನೂ ಸೇರಿಸುವುದಿಲ್ಲ ಮತ್ತು ನಿಮ್ಮನ್ನು ಸಾಕಷ್ಟು ಖಾಲಿ ಮಾಡುತ್ತದೆ.

Chanakya neeti : ಹೆಂಡತಿಯಲ್ಲಿ ಈ ಗುಣಗಳಿದ್ದರೆ ಗಂಡನಿಗೆ ಯಶಸ್ಸು ಕಟ್ಟಿಟ್ಟ ಬುತ್ತಿ!

click me!