ಚಾಲನೆ ಮಾಡುವಾಗ ಮಧುಮೇಹ ರೋಗಿಗಳಿಗಿರಲಿ ಎಚ್ಚರಿಕೆ

By Suvarna News  |  First Published Apr 23, 2022, 11:09 AM IST

ವಾಹನ ಚಾಲನೆ ಮಾಡುವಾಗ ದೃಷ್ಟಿ,ಗಮನ ಎಲ್ಲವೂ ಮುಖ್ಯ. ಚಾಲನೆ ಮಾಡುವಾಗ ಮೈ ಎಲ್ಲ ಕಣ್ಣಾಗಿರಬೇಕು ಎನ್ನಲಾಗುತ್ತದೆ. ಅಪಘಾತಗಳು ನಮಗೆ ಅರಿವಿಲ್ಲದೆ ಆಗುತ್ತವೆ. ಅಪಘಾತಕ್ಕೆ ಮಧುಮೇಹ ಕೂಡ ಒಂದು ಕಾರಣವಾಗಬಹುದು.  
 


ಮಧುಮೇಹ (Diabetes) ಅಪಾಯಕಾರಿ ರೋಗ (Disease) ಗಳಲ್ಲಿ ಒಂದು ಅಂದ್ರೆ ತಪ್ಪಾಗಲಾರದು. ಇದು ಕ್ರಮೇಣ ಅನೇಕ ರೋಗಗಳಿಗೆ ದೇಹ (Body) ಬಲಿಯಾಗುವಂತೆ ಮಾಡುತ್ತದೆ. ಮಧುಮೇಹದ ಸಮಸ್ಯೆ ಹೊಂದಿರುವವರು ಆರೋಗ್ಯಕರ ಆಹಾರ ಸೇವನೆ ಮಾಡ್ಬೇಕು. ಮಧುಮೇಹದ  ಔಷಧಿಯನ್ನು ನಿಯಮಿತವಾಗಿ ಸೇವನೆ ಮಾಡ್ಬೇಕು. ಆರೋಗ್ಯಕರ ಜೀವನಶೈಲಿಯನ್ನು ಅನುಸರಿಸುವುದು ಬಹಳ ಮುಖ್ಯ. ಈ ಎಲ್ಲದರ ಜೊತೆಗೆ ಮಧುಮೇಹ ಹಾಗೂ ವಾಹನ ಚಾಲನೆಗೆ ಸಂಬಂಧಿಸಿದ ವಿಷಯಗಳನ್ನು ಸಹ ಅರ್ಥಮಾಡಿಕೊಳ್ಳಬೇಕು. ಮಧುಮೇಹದಿಂದ ಬಳಲುತ್ತಿರುವವರು ಡ್ರೈವಿಂಗ್ ಸಮಯದಲ್ಲಿ ಯಾವ ವಿಷಯಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು ಎಂಬುದನ್ನು ತಿಳಿಯಿರಿ.

ಮಧುಮೇಹಿಗಳು ಚಾಲನೆ ಮಾಡುವಾಗ ಏನು ಮಾಡ್ಬೇಕು ? : ಮಧುಮೇಹ ಸಮಸ್ಯೆ ಇರುವಾಗ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸಮತೋಲನಗೊಳಿಸಲು ಮಧುಮೇಹ ರೋಗಿಗಳು ಇನ್ಸುಲಿನ್ ಅಥವಾ ಮಧುಮೇಹ ಔಷಧವನ್ನು ಸೇವಿಸುತ್ತಾರೆ. ಇದರಿಂದ ರಕ್ತದಲ್ಲಿನ ಸಕ್ಕರೆ ಕಡಿಮೆಯಾಗಬಹುದು. ಇದನ್ನು ಹೈಪೊಗ್ಲಿಸಿಮಿಯಾ ಎಂದು ಕರೆಯಲಾಗುತ್ತದೆ. ಮಧುಮೇಹ ರೋಗಿಗಳಿಗೆ ಡ್ರಗ್ಸ್ ಬಳಕೆಯಿಂದಾಗಿ ವಾಹನ ಚಾಲನೆ ಮಾಡುವಾಗ ಏಕಾಗ್ರತೆ ಸಮಸ್ಯೆ ಉಂಟಾಗಬಹುದು. ಚಾಲನೆ ಮಾಡುವಾಗ ಯಾವುದೇ ಸಮಯದಲ್ಲಿ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು.  ಇದಲ್ಲದೆ ಮಧುಮೇಹದ ಔಷಧಿ ಅಥವಾ ಇನ್ಸುಲಿನ್ ತೆಗೆದುಕೊಳ್ಳುವ ರೋಗಿಗಳು, ಅವರು ತೆಗೆದುಕೊಳ್ಳುವ ಇನ್ಸುಲಿನ್ ಅಥವಾ ಔಷಧಿ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುತ್ತದೆಯೇ ಇಲ್ಲವೇ ಎಂಬುದನ್ನು ತಿಳಿದಿರಬೇಕು. ಅನೇಕ ಸಂಶೋಧನೆಗಳ ಪ್ರಕಾರ, ಮಧುಮೇಹದಿಂದ ಇತರ ಕಾಯಿಲೆಗಳ ಅಪಾಯವಿರುತ್ತದೆ. ಹಾಗೆಯೇ ನರಗಳ ಹಾನಿಯ ಸಾಧ್ಯತೆಯೂ ಇರುತ್ತದೆ. ತೋಳುಗಳು ಅಥವಾ ಕಾಲುಗಳ ನರಗಳ ಸಮಸ್ಯೆ ವಾಹನ ಚಾಲನೆ ವೇಳೆ ಸಮಸ್ಯೆ ತಂದೊಡ್ಡಬಹುದು. ಚಾಲನೆ ಮಾಡುವಾಗ ಅಪಘಾತ ಸಂಭವಿಸಬಹುದು. 

Tap to resize

Latest Videos

ಮಧುಮೇಹಿಗಳು ಚಾಲನೆಗೆ ಮುನ್ನ ಇದನ್ನು ತಿಳಿದಿರಿ 

ಸಕ್ಕರೆ ಮಟ್ಟ ಪರೀಕ್ಷಿಸಿ : ಚಾಲನೆಗೆ ಮುನ್ನ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಪರೀಕ್ಷಿಸಿಕೊಳ್ಳಿ. ಈ ಸಮಯದಲ್ಲಿ ನಿಮ್ಮ ರಕ್ತದಲ್ಲಿನ ಸಕ್ಕರೆಯ ಮಟ್ಟವು ಕನಿಷ್ಠ 80 mg/dL ಆಗಿದೆಯೇ ಎಂದು ಖಚಿತಪಡಿಸಿಕೊಳ್ಳಿ. ರಕ್ತದಲ್ಲಿನ ಸಕ್ಕರೆಯ ಮಟ್ಟವು 80 mg/dL ಗಿಂತ ಕಡಿಮೆಯಿದ್ದರೆ, ಸ್ವಲ್ಪ ಲಘು ಆಹಾರವನ್ನು ಸೇವಿಸಿ ಮತ್ತು ಕನಿಷ್ಠ 15 ಗ್ರಾಂ ಕಾರ್ಬೋಹೈಡ್ರೇಟ್‌ಗಳನ್ನು ಸೇವಿಸಲು ಮರೆಯದಿರಿ. ತಿಂಡಿ ತಿಂದು ಮತ್ತೆ ಚಾಲನೆ ಮಾಡಿದ 15 ನಿಮಿಷಗಳ ನಂತರ ಮತ್ತೆ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಪರೀಕ್ಷಿಸಿ.

ತಿಂಡಿ ಸದಾ ನಿಮ್ಮ ಜೊತೆಗಿರಲಿ : ನಿಮ್ಮ ಕಾರಿನಲ್ಲಿ ಯಾವಾಗಲೂ ತಿಂಡಿಗಳನ್ನು ಇಟ್ಟುಕೊಂಡಿರಿ. ಚಾಲನೆ ಮಾಡುವಾಗ ರಕ್ತದಲ್ಲಿನ ಸಕ್ಕರೆಯ ಮಟ್ಟವು ಕಡಿಮೆಯಾದಾಗ ನೀವು ಕಾರ್ಬೋಹೈಡ್ರೇಟ್‌ಗಳನ್ನು ಪೂರೈಸುವ ಗ್ಲೂಕೋಸ್ ಮಾತ್ರೆಗಳು ಅಥವಾ ಜೆಲ್‌ಗಳು, ಜ್ಯೂಸ್  ಸೇವಿಸಬಹುದು. 

ರಕ್ತ ಪರೀಕ್ಷೆ ಯಂತ್ರ : ನಿಮ್ಮ ರಕ್ತದಲ್ಲಿನ ಸಕ್ಕರೆಯನ್ನು ಪರೀಕ್ಷಿಸಲು ಯಂತ್ರವನ್ನು ನಿಮ್ಮೊಂದಿಗೆ ಕೊಂಡೊಯ್ಯಿರಿ. ದಾರಿಯುದ್ದಕ್ಕೂ ಯಾವುದೇ ಹಂತದಲ್ಲಿ ನಿಮ್ಮ ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ಪರಿಶೀಲಿಸಬೇಕಾದರೆ ಅದನ್ನು ಬಳಸಬಹುದು.  

Weight Loss Tips: ಈ ಟಿಪ್ಸ್ ಟ್ರೈ ಮಾಡಿದ್ರೆ ಕೆಲವೇ ದಿನಗಳಲ್ಲಿ ತೂಕ ನಷ್ಟ

ವೈದ್ಯರ ಮಾಹಿತಿ : ಮಧುಮೇಹಿಗಳು ವಾಹನ ಚಲಾಯಿಸುವಾಗ ತಮ್ಮ ವೈದ್ಯರ ಗುರುತಿನ ಚೀಟಿಯನ್ನು ತೆಗೆದುಕೊಂಡು ಹೋಗಲು ಮರೆಯದಿರಿ. ಇದು ಯಾವುದೇ ಕಷ್ಟಕರ ಸಂದರ್ಭಗಳಲ್ಲಿ ನೆರವಿಗೆ ಬರುವ ಜನರಿಗೆ ಸಹಾಯಕ್ಕೆ ಬರುತ್ತದೆ.  

ಕಣ್ಣಿನ ತಪಾಸಣೆ : ಮಧುಮೇಹ ರೋಗಿಗಳು ಕಾಲಕಾಲಕ್ಕೆ ತಮ್ಮ ಕಣ್ಣುಗಳನ್ನು ಪರೀಕ್ಷಿಸುತ್ತಿರಬೇಕು. ಏಕೆಂದರೆ ಮಧುಮೇಹದ ಕಾರಣವು ಕಣ್ಣುಗಳ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.

Health Tips : ಗ್ಯಾಸ್ ಸಮಸ್ಯೆಯಿಂದ ತಲೆನೋವು ಬರ್ತಿದ್ಯಾ? ಇಲ್ಲಿದೆ ಮನೆ ಮದ್ದು

ಚಾಲನೆ ಮಾಡುವಾಗ ಈ ಸಮಸ್ಯೆ ಕಾಡಬಾರದು : ಚಾಲನೆ ಮಾಡುವಾಗ ಆರೋಗ್ಯ ಬಹಳ ಮುಖ್ಯ. ತಲೆನೋವು ಕಾಡಬಾರದು. ಚಾಲನೆ ಮಾಡುವಾಗ ಅಲುಗಾಡಬಾರದು. ಅತಿಯಾಗಿ ಬೆವರು ಬರಬಾರದು. ಮತ್ತೆ ಮತ್ತೆ ಹಸಿವಿನ ಸಮಸ್ಯೆಯಾಗಬಾರದು. ಚಾಲನೆ ಮಾಡುವಾಗ ನಿದ್ರೆ ಬರಬಾರದು. ಚಾಲನೆ ಮಾಡುವಾಗ ತಲೆಸುತ್ತು,ಗೊಂದಲ, ಕಿರಿಕಿರಿ ಭಾವನೆಯುಂಟಾಗಬಾರದು. ಒಂದು ವೇಳೆ ಈ ಸಮಸ್ಯೆಗಳು ಕಾಣಿಸಿಕೊಂಡಲ್ಲಿ ವಾಹನ ಚಲಾಯಿಸಬೇಡಿ.

click me!