Immunity Increase: ನೈಸರ್ಗಿಕವಾಗಿ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಿ

By Suvarna News  |  First Published Jan 11, 2022, 7:00 PM IST

ನೈಸರ್ಗಿಕ ವಿಧಾನದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುವುದು ಸದ್ಯದ ಆಯ್ಕೆಯಾಗಬೇಕು. ಸೂರ್ಯನ ಕಿರಣಗಳಿಗೆ ದೇಹವನ್ನು ಒಡ್ಡಿಕೊಳ್ಳುವುದರಿಂದ ವಿಟಮಿನ್ ಡಿ ಕೊರತೆ ನಿವಾರಣೆಯಾಗಿ ರೋಗ ನಿರೋಧಕ ಶಕ್ತಿ ಸದೃಢವಾಗುತ್ತದೆ. 
 


ಕೊರೋನಾ ವೈರಸ್ (Corona) ಕಾಣಿಸಿಕೊಂಡಾಗಿನಿಂದಲೂ ತಜ್ಞರು ನೀಡುತ್ತಿರುವ ಎಚ್ಚರಿಕೆ, 'ರೋಗ ನಿರೋಧಕ (Immunity Power) ಶಕ್ತಿಯನ್ನು ಬಲಪಡಿಸಿಕೊಳ್ಳಿ, ಇದರಿಂದ ಕೊರೋನಾ ಹೆಚ್ಚು ಬಾಧಿಸದಂತೆ ನೋಡಿಕೊಳ್ಳಬಹುದು’ ಎಂದು. ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಕೊರೋನಾ ಎರಡನೇ ಅಲೆಯ ವೇಳೆಗೆ ಬಹುತೇಕ ಎಲ್ಲರೂ ಸಾಕಷ್ಟು ವಿಧಾನಗಳನ್ನು ಅನುಸರಿಸಿದ್ದರು. ಆದರೆ, ನಂತರದ ದಿನಗಳಲ್ಲಿ ಬದುಕು (Life) ಸಾಮಾನ್ಯ ಸ್ಥಿತಿಗೆ ಮರಳುತ್ತಿದೆ ಎನ್ನುವಾಗ ಎಚ್ಚರಿಕೆ (Care) ತುಸು ಕಡಿಮೆಯಾಗಿತ್ತು. ಇದೀಗ ಸೋಂಕು (Infection) ಮತ್ತೆ ಹೆಚ್ಚಳವಾಗಿದೆ, ಅಷ್ಟೇ ಅಲ್ಲ, ರೂಪಾಂತರಿ ಒಮಿಕ್ರಾನ್ (Omicron)  ಕೂಡ ವಕ್ಕರಿಸಿದೆ. ಇದಕ್ಕೂ ಪರಿಹಾರವೆಂದರೆ, ರೋಗ ನಿರೋಧಕ ಶಕ್ತಿಯನ್ನು ಬಲಪಡಿಸಿಕೊಳ್ಳುವುದೇ ಆಗಿದೆ.

ರೋಗ ನಿರೋಧಕ ಶಕ್ತಿ ವೃದ್ಧಿಯಾದಾಗ ಕೊರೋನಾ ಸೇರಿದಂತೆ ಅದರ ಯಾವುದೇ ರೂಪಾಂತರಿಗಳನ್ನು ಎದುರಿಸಲು ಸಾಧ್ಯ. ಹೀಗಾಗಿ, ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳುವತ್ತ ಗಮನ ನೀಡುವುದು ಸದ್ಯದ ಆಯ್ಕೆಯಾಗಬೇಕು. ಕೊರೋನಾ ಮೊದಲ ಮತ್ತು ಎರಡನೇ ಅಲೆಯಲ್ಲಿ ಮನೆಮನೆಗಳಲ್ಲಿ ಕಷಾಯ ಮಾಡಿಕೊಂಡು ಕುಡಿಯುವ ಅಭ್ಯಾಸ ಆರಂಭವಾಗಿತ್ತು. ಕಷಾಯ ಒಳ್ಳೆಯದೇ, ಅದರಲ್ಲಿ ಎರಡು ಮಾತಿಲ್ಲ. ಆದರೆ, ಕಷಾಯ (kada) ಕೆಲವರ ದೇಹಕ್ಕೆ ಉಷ್ಣವನ್ನುಂಟು ಮಾಡಿ ಕೆಲ ಸಮಸ್ಯೆಗಳಿಗೆ ಕಾರಣವಾಗಿತ್ತು. ಉಷ್ಣಕ್ಕೆ ಕಾರಣವಾಗುವ ಶುಂಠಿ, ಕಾಳುಮೆಣಸುಗಳನ್ನು ಯದ್ವಾತದ್ವಾ ಬಳಸಿದ್ದ ಪರಿಣಾಮ ಆಸಿಡಿಟಿ(Acidity), ಮೂಗಿನಲ್ಲಿ ರಕ್ತ ಸೋರುವುದು ಇಂಥವೆಲ್ಲ ಸಮಸ್ಯೆಗಳು ಕಂಡುಬಂದಿದ್ದವು. ಮಿತವಾಗಿ ಬಳಕೆ ಮಾಡಿದವರಿಗೆ ಯಾವ ಸಮಸ್ಯೆಯೂ ಆಗಿರಲಿಲ್ಲ. ಹಾಗೆಯೇ, ಈ ಸಮಯದಲ್ಲೂ ಮಿತವಾಗಿ ಕಷಾಯ ಸೇವನೆ ಮಾಡುವುದೊಳಿತು.

Tap to resize

Latest Videos

ಇನ್ನು, ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳುವ ಅತ್ಯಂತ ನೈಸರ್ಗಿಕ ವಿಧಾನವೆಂದರೆ, ಬೆಳಗಿನ (Morning) ಸೂರ್ಯ ರಶ್ಮಿ(Sun Light)ಗೆ ಮೈ ಒಡ್ಡುವುದು!

ಸೂರ್ಯ ರಶ್ಮಿಯ ಟಾನಿಕ್

ಹೌದು, ಬೆಳಗಿನ ಸೂರ್ಯನ ಕಿರಣಗಳಲ್ಲಿ ಸುಮ್ಮನೆ ಕುಳಿತುಕೊಂಡು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಸಾಧ್ಯ. ನಮ್ಮ ತ್ವಚೆ (Skin) ಸೂರ್ಯಕಿರಣಗಳ ಸಂಪರ್ಕಕ್ಕೆ ಬಂದಾಗ ದೇಹದಲ್ಲಿರುವ ಕೊಬ್ಬಿನಿಂದ ವಿಟಮಿನ್ ಡಿ (Vitamin D) ಉತ್ಪಾದನೆಯಾಗುತ್ತದೆ. ಸೂರ್ಯನ ಕಿರಣಗಳಿಗೆ ನಿಲ್ಲುವುದರಿಂದ ವಿಟಮಿನ್ ಡಿ ಕೊರತೆ (Shortage) ನಿವಾರಣೆಯಾಗುವ ಜತೆಗೆ, ರೋಗ ನಿರೋಧಕ ಶಕ್ತಿ ದೃಢವಾಗುತ್ತದೆ. ಇದರಿಂದ ಕೋವಿಡ್-19, ಯಾವುದೇ ರೂಪಾಂತರಿ ವೈಸರ್ ಹಾಗೂ ಇತರ ಹಲವಾರು ರೋಗಗಳ ವಿರುದ್ಧ ಸುರಕ್ಷತೆ ಪಡೆದುಕೊಳ್ಳಬಹುದು. ಸೋಂಕು ಬರುವುದೇ ಇಲ್ಲವೆಂದಲ್ಲ, ಆದರೆ, ನಮ್ಮ ದೇಹ ಸೋಂಕಿನ ವಿರುದ್ಧ ಸುಲಭವಾಗಿ ಹೋರಾಡಿ, ಗೆಲ್ಲಲು ಇದರಿಂದ ಸಾಧ್ಯವಾಗುತ್ತದೆ. 

ಚಳಿಗಾಲದಲ್ಲಿ ಸೂರ್ಯನ ಬಿಸಿಲು ಪಡೆಯುವ ಪ್ರಯೋಜನಗಳೇನು ?

ನಿಮಗೆ ಗೊತ್ತೇ? ನಮ್ಮ ದೇಶದಲ್ಲಿ ಶೇ.70-90ರಷ್ಟು ಜನರಲ್ಲಿ ವಿಟಮಿನ್ ಡಿ ಕೊರತೆಯಿದೆ. ಈ ಕೊರತೆಯಿಂದ ರೋಗ ನಿರೋಧಕ ಶಕ್ತಿ ಕೂಡ ಕುಗ್ಗಿರುತ್ತದೆ. ಇದರ ನಿವಾರಣೆಗೆಂದು ಸೂರ್ಯ ಕಿರಣಗಳಿಗೆ ಒಡ್ಡಿಕೊಳ್ಳುವ ಪರಿಪಾಠವಿದ್ದರೆ ಕ್ರಮೇಣ ರೋಗ ನಿರೋಧಕ ಶಕ್ತಿಯೂ ಬಲವರ್ಧನೆಯಾಗಿರುವುದು ನಿಮ್ಮ ಗಮನಕ್ಕೆ ಬಂದಿರಬಹುದು.

ಅಷ್ಟಕ್ಕೂ, ವಿಟಮಿನ್ ಡಿ ಕೊರತೆ ನಿವಾರಣೆ ಮಾಡಿಕೊಳ್ಳುವುದರಿಂದ ಏನೆಲ್ಲ ಸಮಸ್ಯೆಗಳಿಂದ ಮುಕ್ತಿ ಪಡೆಯಬಹುದು, ಗೊತ್ತೇ? ಆಸ್ಟಿಯೋಪೊರೋಸಿಸ್, ಕ್ಯಾನ್ಸರ್ (Cancer), ಖಿನ್ನತೆ (Dipression) ಮತ್ತು ಮಾಂಸಖಂಡಗಳ ದೌರ್ಬಲ್ಯದಿಂದ ರಕ್ಷಿಸಿಕೊಳ್ಳಬಹುದು. 
ಕೆಲವೇ ಕೆಲವು ಆಹಾರಗಳಲ್ಲಿ ವಿಟಮಿನ್ ಡಿ ಇರುತ್ತದೆ. ಮೀನೆಣ್ಣೆ, ಕೆಲವು ಜಾತಿಯ ಮೀನುಗಳು (ಸ್ವಾರ್ಡ್, ಸಾಲ್ಮನ್, ಟ್ಯೂನಾ) ಹಾಗೂ ಅಣಬೆಗಳಲ್ಲಿ ವಿಟಮಿನ್ ಡಿ ಇರುತ್ತದೆ. ಆದರೆ, ಅದಕ್ಕಾಗಿ ಪ್ರತಿದಿನ ಇವುಗಳನ್ನು ಸೇವನೆ ಮಾಡುವುದು ಸಾಧ್ಯವಿಲ್ಲ. ಯಾವುದೇ ವೆಚ್ಚವಿಲ್ಲದೆ, ಅತ್ಯಂತ ಸರಳ ಹಾಗೂ ಸುಲಭವಾಗಿ ನೈಸರ್ಗಿಕ ವಿಧಾನಗಳಿಂದ ರೋಗ ನಿರೋಧಕ ಶಕ್ತಿ ವೃದ್ಧಿಸಿಕೊಳ್ಳಲು ವಾರಕ್ಕೆ ಕನಿಷ್ಠ 30 ನಿಮಿಷಗಳ ಕಾಲ ಬೆಳಗಿನ ಸಮಯದ ಸೂರ್ಯ ಕಿರಣಕ್ಕೆ ಒಡ್ಡಿಕೊಳ್ಳಬೇಕು. ಚಳಿಗಾಲ(Winter) ದಲ್ಲಿ ಮಧ್ಯಾಹ್ನ(Mid Day) ದ ಬಿಸಿಲಾದರೂ ಸರಿ. ಬೇಸಿಗೆ (Summer)ಯಲ್ಲಿ ಬೆಳಗಿನ ಹೊತ್ತೇ ಕ್ಷೇಮ.

click me!