ಸೋಂಕಿತರ ಮೃತದೇಹ ಇನ್ನು ಕುಟುಂಬಸ್ಥರಿಗೆ ಹಸ್ತಾಂತರ..!

By Suvarna News  |  First Published Sep 9, 2020, 2:58 PM IST

ಕೊರೋನಾ ಪ್ರೊಟೋಕಾಲ್ ಪ್ರಕಾರ ಸೋಂಕಿತರ ಮೃತದೇಹ ಯಾವುದೇ ಕಾರಣಕ್ಕೂ ಕುಟುಂಬಸ್ಥರಿಗೆ ನೀಡುತ್ತಿರಲಿಲ್ಲ. ಆದರೆ ಈಗ ಕೊರೋನಾದಿಂದ ಮೃತಪಟ್ಟರೂ ಮೇತದೇಹ ಕುಟುಂಬಕ್ಕೆ ಹಸ್ತಾಂತರಿಸಲು ನಿರ್ಧರಿಸಲಾಗಿದೆ.


ಮಾನವೀಯ ದೃಷ್ಟಿ ಮತ್ತು ಜನರ ಭಾವನೆಗಳನ್ನು ಅರ್ಥ ಮಾಡಿಕೊಂಡು ಕೊರೋನಾದಿಂದ ಮೃತಪಟ್ಟವರ ಮೃತದೇಹ ಕುಟುಂಬಸ್ಥರಿಗೆ ಹಸ್ತಾಂತರಿಸುವಂತೆ ರಾಜಸ್ಥಾನ ಸರ್ಕಾರ ಮತ್ತು ಆರೋಗ್ಯ ಇಲಾಖೆ ಸೂಚನೆ ನೀಡಿದೆ.

ಕೊರೋನಾ ಪ್ರೊಟೋಕಾಲ್ ಪ್ರಕಾರ ಸೋಂಕಿತರ ಮೃತದೇಹ ಯಾವುದೇ ಕಾರಣಕ್ಕೂ ಕುಟುಂಬಸ್ಥರಿಗೆ ನೀಡುತ್ತಿರಲಿಲ್ಲ. ಆದರೆ ಈಗ ಕೊರೋನಾದಿಂದ ಮೃತಪಟ್ಟರೂ ಮೇತದೇಹ ಕುಟುಂಬಕ್ಕೆ ಹಸ್ತಾಂತರಿಸಲು ನಿರ್ಧರಿಸಲಾಗಿದೆ. ಕೊರೋನಾ ಸೋಂಕಿತ ಮೃತದೇಹವನ್ನು ಕುಟುಂಬಸ್ಥರಿಗೆ ನೀಡಿ ಕೊರೋನಾ ಪ್ರೊಟೋಕಾಲ್ ಪ್ರಕಾರ ಅಂತ್ಯ ಸಂಸ್ಕಾರ ನೆರವೇರಿಸಲು ಸರ್ಕಾರ ಅವಕಾಶ ನೀಡಿದೆ.

Tap to resize

Latest Videos

ಕೊನೆಗೂ ಶಾಲೆ ಪ್ರಾರಂಭಕ್ಕೆ ಮುಹೂರ್ತ ಫಿಕ್ಸ್: ಮಾರ್ಗಸೂಚಿ ಪ್ರಕಟ

ಕೊರೋನಾ ಸೋಂಕಿತ ಮೃತದೇಹದ ಅಂತಿಮ ಸಂಸ್ಕಾರಕ್ಕೆ ಕುಟುಂಬಸ್ಥರಿಗೆ ಅವಕಾಶ ನೀಡಿ ಮೃತದೇಹ ಹಸ್ತಾಂತರಿಸಲು ಸಿಎಂ ಆರೋಗ್ಯ ಇಲಾಖೆಗೆ ಸೂಚಿಸಿದ್ದಾರೆ. ದೇಶಾದ್ಯಂತ ಕೊರೋನಾ ವೇಗವಾಗಿ ಹರಡುತ್ತಿದೆ. ಹೀಗಿರುವಾಗ ಸಾರ್ವಜನರಿಕರು ಹೆಚ್ಚು ಜಾಗೃತೆ ವಹಿಸಬೇಕು ಎಂದು ಆರೋಗ್ಯ ಸಚಿವ ಡಾ. ರಘು ಶರ್ಮಾ ತಿಳಿಸಿದ್ದಾರೆ.

ತಜ್ಞರ ಪ್ರಕಾರ ಕೊರೋನಾ ಎಂಜಲಿನ ಮೂಲಕ ಹರಡುತ್ತದೆ ಎನ್ನಲಾಗುತ್ತಿದೆ. ಆದರೆ ಮೃತದೇಹದಿಂದ ಕೊರೋನಾ ಹರಡುವ ಬಗ್ಗೆ ಸಾಕ್ಷಿ ಇಲ್ಲ. ಹಾಗಾಗಿ ಮೃತದೇಹ ಅಂತ್ಯ ಸಂಸ್ಕಾರ ಸಂದರ್ಭ ಮುಂಜಾಗೃತೆಗಳನ್ನು ತೆಗೆದುಕೊಳ್ಳಬೇಕು ಎಂದು ಹೇಳಿದ್ದಾರೆ.

ಕೊರೋನಾ ಹೆಚ್ಚಳ: ಕರ್ನಾಟಕ ಸೇರಿ ಹಾಟ್ ಸ್ಪಾಟ್ ಜಿಲ್ಲೆಗಳ ಮೇಲೆ ಕೇಂದ್ರ ನೇರ ನಿಗಾ

ಗೈಡ್‌ಲೈನ್ಸ್ ಪ್ರಕಾರ ಪ್ರತಿ ಮೃತದೇಹಕ್ಕೆ ಕೊರೋನಾ ಪರೀಕ್ಷೆ ಮಾಡಿಸಬೇಕೆಂದಿಲ್ಲ. ಕೊರೋನಾ ರೋಗಿಯ ಸಂಪರ್ಕದಲ್ಲಿದ್ದು ಮೃತಪಟ್ಟ ಸಂದರ್ಭದಲ್ಲಿ ಪರೀಕ್ಷೆ ಮಾಡಬೇಕು. ಹಾಗಾಗಿ ಪರೀಕ್ಷೆ ವರದಿಗಾಗಿ ಕಾಯದೆ ದೇಹವನ್ನು ಕುಟುಂಬಸ್ಥರಿಗೆ ಬಿಟ್ಟುಕೊಡಬಹುದು. ಪ್ರತಿ ಮೃತದೇಹಕ್ಕೆ ಅಟೋಸ್ಪೈ ಮಾಡುವುದು ಅನಿವಾರ್ಯವಲ್ಲ. ಯಾವುದೇ ಕಾರಣಕ್ಕೆ ಪೋಸ್ಟ್ ಮಾರ್ಟಂ ಮಾಡಬೇಕೆಂದಿದ್ದರೆ ಅದು ಪ್ರೊಟೋಕಾಲ್ ಪ್ರಕಾರವೇ ಆಗಿರಬೇಕು ಎಂದು ಶರ್ಮಾ ತಿಳಿಸಿದ್ದಾರೆ.

ಪ್ರೊಟೋಕಾಲ್ ಪ್ರಕಾರ ಟ್ರಾನ್ಸಪರೆಂಟ್ ಬ್ಯಾಗ್‌ನಲ್ಲಿ ಮೃತದೇಹವನ್ನು ಕುಟುಂಬಸ್ಥರು ಒಯ್ಯಬಹುದು. ಕುಟುಂಬಸ್ಥರು ಮೃತದೇಹದ ಬಗ್ಗೆ ಜಿಲ್ಲಾಡಳಿತಕ್ಕೆ ಮಾಹಿತಿ ನೀಡಲೇಬೇಕು. ಯಾವುದಾದರೂ ಕುಟುಂಬ ಕೊರೋನಾ ಪಾಸಿಟಿವ್ ಮೃತದೇಹ ಒಯ್ಯಲಯ ಇಚ್ಛಿಸದಿದ್ದರೆ ಸ್ಥಳೀಯ ಆಡಳಿತ ಅಂತಿಮ ಸಂಸ್ಕಾರ ಮಾಡಬೇಕಾಗುತ್ತದೆ.

click me!