Covid Insomnia: ಕೋವಿಡ್‌ ನಿದ್ರೆಗೂ ಕುತ್ತು ತಂದಿದ್ದು ಹೇಗೆ?

Published : Jun 16, 2022, 05:04 PM IST
Covid Insomnia: ಕೋವಿಡ್‌ ನಿದ್ರೆಗೂ ಕುತ್ತು ತಂದಿದ್ದು ಹೇಗೆ?

ಸಾರಾಂಶ

ಕೋವಿಡ್‌ ಇನ್‌ ಸೋಮ್ನಿಯಾ ಇತ್ತೀಚೆಗೆ ಮತ್ತೆ ಹೆಚ್ಚುತ್ತಿದೆ. ಅಧಿಕ ಜನರು ನಿದ್ರಾಹೀನತೆಯಿಂದ ಬಳಲುತ್ತಿರುವುದು ಬೆಳಕಿಗೆ ಬಂದಿದೆ. ಹಿಂದೆಯೂ ಇದೇ ರೀತಿ ನಿದ್ರಾಹೀನತೆ ಅನುಭವಿಸಿರುವವರು ನೀವಾಗಿದ್ದರೆ ಈ ಬಾರಿ ಅದನ್ನು ಚೆನ್ನಾಗಿ ನಿರ್ವಹಿಸಿ. ಸೂಕ್ತ ಕ್ರಮಗಳ ಮೂಲಕ ನಿದ್ರಾಹೀನತೆಯನ್ನು ಹೊಡೆದೋಡಿಸಿ.  

ಕೋವಿಡ್‌ (Covid) ಸಾಂಕ್ರಾಮಿಕದ ಆರಂಭದ ದಿನಗಳಲ್ಲಿ ಅಂದರೆ, ಲಾಕ್‌ ಡೌನ್‌ ನಿಂದ (Lockdown) ಜನರು ಮನೆಯೊಳಗೆ ಲಾಕ್‌ ಆಗಿದ್ದ ಸಮಯದಲ್ಲಿ ಹಲವರು ನಿದ್ರಾಹೀನತೆ (Insomnia) ಸಮಸ್ಯೆಗೆ ತುತ್ತಾಗಿರುವುದು ಬಹಿರಂಗವಾಗಿತ್ತು. ನಂತರದ ದಿನಗಳಲ್ಲಿ ಅಂದರೆ, ಎರಡನೇ ಅಲೆಯಲ್ಲಿ ಬಹುತೇಕ ಜನಸಮೂಹ ಕೋವಿಡ್‌ ಸೋಂಕಿಗೆ ಒಳಗಾದಾಗಲೂ ಈ ಸಮಸ್ಯೆ ಹೆಚ್ಚಾಗಿದ್ದುದನ್ನು ವೈದ್ಯಕೀಯ ದಾಖಲೆಗಳು ಖಚಿತಪಡಿಸಿದ್ದವು. ಅದೆಲ್ಲ ಕೆಲವು ತಿಂಗಳ ಹಿಂದಿನ ಮಾತಾಯಿತು. ಈಗ ಮತ್ತೆ ಕೆಲವು ದಿನಗಳಿಂದ ನಿದ್ರಾಹೀನತೆಯ ಸಮಸ್ಯೆ ಬೆಳಕಿಗೆ ಬರುತ್ತಿರುವುದು ಆತಂಕದ ಸಂಗತಿ. 

ಕೆಲವರು ಜನರು ಇನ್‌ ಸೋಮ್ನಿಯಾ ಲಕ್ಷಣಗಳನ್ನು ಇತ್ತೀಚೆಗೆ ಭಾರೀ ಸ್ಪಷ್ಟವಾಗಿ ಹೊಂದಿರುವುದು ಬೆಳಕಿಗೆ ಬಂದಿದೆ. ಕೋವಿಡ್‌ ಸೋಂಕಿಗೆ ಒಳಗಾದವರಿಗೆ ನಿದ್ರೆ ಮಾಡಲು ತೊಂದರೆಯಾಗುವ ಈ ಸಮಸ್ಯೆಯನ್ನು  ಕೊರೋನಾಸೋಮ್ನಿಯಾ ಅಥವಾ ಕೋವಿಡ್‌ ಸೋಮ್ನಿಯಾ (Covidsomnia) ಎಂದೇ ಗುರುತಿಸಲಾಗಿದೆ. ಅಲ್ಲದೆ, ಇತ್ತೀಚೆಗೆ ಬಹಳಷ್ಟು ಜನ ನಿರಂತರವಾಗಿ ಸುಸ್ತು (Fatigue) ಜತೆಗೆ ನಿದ್ರೆ ಸಮಸ್ಯೆಯನ್ನು ಅನುಭವಿಸುತ್ತಿದ್ದಾರೆ. ಇದನ್ನು “ಲಾಂಗ್‌ ಕೋವಿಡ್‌ʼ (Long Covid) ಅಥವಾ ದೀರ್ಘಾವಧಿ ಕೋವಿಡ್‌ ಎಂದು ಈಗ ಕರೆಯಲಾಗುತ್ತಿದೆ.  ಅಷ್ಟಕ್ಕೂ ಕೋವಿಡ್‌ ಸೋಂಕಿನಿಂದ ನಮ್ಮ ನಿದ್ರೆಯ ಮೇಲೆ ಯಾಕೆ ಪರಿಣಾಮವಾಗುತ್ತದೆ? ಏಕೆ ಈ ಸಮಸ್ಯೆ ವ್ಯಕ್ತಿಯಿಂದ ವ್ಯಕ್ತಿಯಲ್ಲಿ ಭಿನ್ನವಾಗಿರುತ್ತದೆ ಗೊತ್ತೇನು? 

ಕೊರೋನಾ ಸ್ಫೋಟಕ್ಕೆ ಚೀನಾ ಲ್ಯಾಬ್ ಕಾರಣವಿರಬಹುದು: WHO

ನಿದ್ರೆ ಮತ್ತು ರೋಗನಿರೋಧಕತೆ (Sleep and Immunity)
ನಮ್ಮ ದೇಹ ಯಾವುದೇ ರೀತಿಯ ಸೋಂಕಿಗೆ ಒಳಗಾದಾಗ ರೋಗನಿರೋಧಕ ಶಕ್ತಿ ಎಚ್ಚೆತ್ತುಕೊಳ್ಳುತ್ತದೆ. ಇದರ ಭಾಗವಾಗಿ, ನಮ್ಮ ಕೋಶಗಳು ಸೈಟೊಕೀನ್ಸ್‌ (Cytokines) ನಂತಹ ಪ್ರೊಟೀನ್‌ (Proteins) ಅನ್ನು ಉತ್ಪಾದಿಸುತ್ತವೆ. ಈ ಪ್ರೊಟೀನ್‌ ಚೆನ್ನಾಗಿ ನಿದ್ರೆ ಬರಲು ಸಹಾಯಕ. ಇದನ್ನು ನಿದ್ರೆ ನಿಯಮಿತಗೊಳಿಸುವ ಅಂಶ ಎಂದೇ ಕರೆಯಲಾಗುತ್ತದೆ. ಇವು ಹೆಚ್ಚು ಉತ್ಪಾದನೆಯಾಗಿ ನಿದ್ರೆ ಬರಲು ಕಾರಣವಾಗುತ್ತವೆ. ಹೀಗಾಗಿಯೇ ಹುಷಾರಿಲ್ಲದಿರುವಾಗ ನಿದ್ರೆ ಹೆಚ್ಚು. ಚೆನ್ನಾಗಿ ನಿದ್ರೆ ಬಂದಾಗ ಈ ಪ್ರೊಟೀನ್‌ ಉತ್ಪಾದನೆಯಾಗುವ ಪ್ರಮಾಣವೂ ಹೆಚ್ಚು. ಹೀಗೆ ನಿದ್ರೆ ಹಾಗೂ ರೋಗನಿರೋಧಕ ಶಕ್ತಿ ಒಂದಕ್ಕೊಂದು ಸಂಬಂಧ ಹೊಂದಿವೆ. ಕೋವಿಡ್‌ ನಲ್ಲಿ ಪರಿಸ್ಥಿತಿ ಹೀಗಿರುವುದಿಲ್ಲ. ರೋಗ ನಿರೋಧಕ ಶಕ್ತಿ ಅಪಾರ ಪ್ರಮಾಣದಲ್ಲಿ ಕುಸಿದಿರುತ್ತದೆ. ಹೀಗಾಗಿ, ಚೆನ್ನಾಗಿ ನಿದ್ರೆ ಬರುವುದಿಲ್ಲ. ಹಾಗೂ ಉತ್ತಮ ನಿದ್ರೆ ಇಲ್ಲದಿರುವಾಗ ಸೈಟೊಕಿನ್ಸ್‌ ಉತ್ಪಾದನೆಯೂ ಕುಸಿಯುತ್ತದೆ. ಆಗ ನಿದ್ರೆಗೆ ಸಂಬಂಧಿಸಿದ ಸಮಸ್ಯೆ ಆರಂಭವಾಗುತ್ತದೆ. 

ನಿದ್ರೆ ಮತ್ತು ಕೋವಿಡ್‌
ಇದುವರೆಗಿನ ಸಂಶೋಧನೆಗಳ ಪ್ರಕಾರ, ಸಾಮಾನ್ಯ ನೆಗಡಿ (Comon Cold) ಬಂದಾಗಲೂ ನಿದ್ರೆಗೆ ಸಂಬಂಧಿಸಿದ ಸಮಸ್ಯೆ ಇದ್ದೇ ಇರುತ್ತದೆ. ನಿದ್ರೆ ಅವಧಿಯಲ್ಲಿ ಕಡಿತ, ಪದೇ ಪದೆ ಎಚ್ಚರವಾಗುವುದು ಮುಂತಾದ ತೊಂದರೆಗಳು ಉಂಟಾಗುತ್ತವೆ. ಶ್ವಾಸಕೋಶದ ಸೋಂಕಿರುವ (Lungs Infection) ವ್ಯಕ್ತಿ ನಿದ್ರೆ ಮಾಡುವ ಸಮಯ ಹೆಚ್ಚು. ಆದರೆ, ಗುಣಮಟ್ಟದ ನಿದ್ರೆ ಕಡಿಮೆ. ಹಾಗೆಯೇ ನಿದ್ರೆ ಬರುವುದಕ್ಕೂ ಹೆಚ್ಚು ಸಮಯ ತಗಲುತ್ತದೆ. ಕೋವಿಡ್‌ ರೋಗಿಗಳ ಮೇಲೆ ನಡೆಸಿದ್ದ ಅಧ್ಯಯನದಲ್ಲೂ ಇದು ಸಾಬೀತಾಗಿದೆ. ನಮ್ಮ ದೇಹದ ರೋಗನಿರೋಧಕ ಶಕ್ತಿಯ ಪ್ರತಿಕ್ರಿಯೆ ಆಧರಿಸಿ ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನತೆ ಕಂಡುಬರುತ್ತದೆ. 

ಕೊಳಕಾಗಿರೋ ಪುರುಷರಿಂದ ಹರಡುತ್ತೆ ರೋಗ

ನಿದ್ರಾಹೀನತೆಯಿಂದ ಪಾರಾಗೋದು ಹೇಗೆ?
ಕೋವಿಡ್‌ ನಿದ್ರಾಹೀನತೆ ಇತ್ತೀಚಿಗೆ ಅತಿ ಸಾಮಾನ್ಯವಾಗುತ್ತಿದೆ. ಹೀಗಾಗಿ, ಈ ಸಮಸ್ಯೆ ನಿಮಗೂ ಇದ್ದರೆ ಹೆಚ್ಚು ಯೋಚಿಸಬೇಡಿ. ಮೊದಲನೆಯದಾಗಿ, ನಿದ್ರೆ ಕಡಿಮೆ ಆದರೂ ಕಿರಿಕಿರಿ ಮಾಡಿಕೊಳ್ಳಬೇಡಿ. ಬೇಗ ನಿದ್ರೆ ಬಾರದಿದ್ದರೆ, ನಿದ್ರೆಯ ಗುಣಮಟ್ಟ ಚೆನ್ನಾಗಿಲ್ಲದಿದ್ದರೆ, ಪದೇ ಪದೆ ಎಚ್ಚರವಾದರೆ ಬೇಸರಿಸಿಕೊಳ್ಳಬೇಡಿ. ಅದನ್ನು ಸಹಜವಾಗಿ ಸ್ವೀಕರಿಸಿ ಮೂಡ್‌ (Mood) ಮೇಲೆ ಯಾವುದೇ ವ್ಯತ್ಯಾಸವಾಗದಂತೆ ನೋಡಿಕೊಳ್ಳಿ. ದೀರ್ಘ ಸಮಯ ಹಗಲು ನಿದ್ರೆ ಮಾಡಬೇಡಿ. ಹಾಸಿಗೆ (Bed) ಸಮೀಪ ಹೆಚ್ಚು ಬೆಳಕಿರದಂತೆ ನೋಡಿಕೊಳ್ಳಿ. ನಿದ್ರೆ ಮಾಡುವ ಒಂದು ಗಂಟೆಗೂ ಮುನ್ನ ಮೊಬೈಲ್‌ (Mobile) ನಂತಹ ಗ್ಯಾಜೆಟ್‌ (Gadgets)ಗಳನ್ನು ದೂರವಿಡಿ. ಮನಸ್ಸನ್ನು ಶಾಂತಗೊಳಿಸಿಕೊಳ್ಳಿ. ಉಸಿರಾಟದ ವ್ಯಾಯಾಮ (Breathing Exercise) ಮಾಡುವುದು ಉತ್ತಮ. ಹೀಗೆ ಮಾಡುತ್ತಿದ್ದರೆ ಕೆಲವೇ ದಿನಗಳಲ್ಲಿ ಕೋವಿಡ್‌ ಇನ್‌ ಸೋಮ್ನಿಯಾ ಹೇಳಹೆಸರಿಲ್ಲದಂತೆ ಮಾಯವಾಗುತ್ತದೆ.  

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಕೆಲ್ಸ ಮಾಡೋವಾಗ ಮಾತ್ರವಲ್ಲ ರಜೆಯಲ್ಲೂ ಕಾಡುತ್ತೆ ಖಿನ್ನತೆ, ಹಾಲಿಡೇ ಡಿಪ್ರೆಷನ್ ಅಂದ್ರೇನು?
Heart Problemಗೆ ಎಲ್ಲರೂ ಹೇಳೋ ಕಾರಣವಲ್ಲವೇ ಅಲ್ಲ, ಪೌಷ್ಟಿಕ ತಜ್ಞರ ಮಹಾವಂಚನೆ ಬಯಲಿಗೆ