Health and COVID: ಕೋವಿಡ್‌ನಿಂದಾಗಿ ಮಧುಮೇಹ ಹೆಚ್ಚಾಗಿದೆ, 20ರಲ್ಲಿ ಒಬ್ಬರಿಗೆ ಬಂತು ಶುಗರ್

By Suvarna News  |  First Published Apr 20, 2023, 5:44 PM IST

ಕೋವಿಡ್ ಸೋಂಕಿನಿಂದಾಗಿ 20 ಜನರಲ್ಲಿ ಒಬ್ಬರು ಮಧುಮೇಹಕ್ಕೆ ತುತ್ತಾಗಿದ್ದಾರೆ ಎಂದು ಹೊಸ ಅಧ್ಯಯನವೊಂದು ಹೇಳಿದೆ. ಮೊದಲೇ ಮಧುಮೇಹದ ಅಪಾಯ ಹೆಚ್ಚಾಗಿರುವವರಲ್ಲಿ ಕೋವಿಡ್ ಬಳಿಕ ಸಮಸ್ಯೆ ಉಂಟಾಗಿದೆ ಎಂದು ತಿಳಿಸಿದೆ. 
 


ಕೋವಿಡ್ ಬಳಿಕ ಮಧುಮೇಹ ಬಂತು, ಕೋವಿಡ್ ಸಮಯದಲ್ಲಿ ನೀಡಿದ ಔಷಧ ಅಥವಾ ಅದು ದೇಹದ ಮೇಲೆ ಬೀರಿರುವ ಪರಿಣಾಮಗಳ ಕಾರಣದಿಂದಾಗಿ  ವಿಶ್ವದಾದ್ಯಂತ ಮಧುಮೇಹಿಗಳ ಸಂಖ್ಯೆ ತೀವ್ರವಾಗಿ ಹೆಚ್ಚಿದೆ ಎನ್ನುವ ಮಾತುಗಳನ್ನು ಕೇಳಿರಬಹುದು. ಕೆಲವು ವೈದ್ಯರೂ ಇದನ್ನು ವೈಯಕ್ತಿಯಕವಾಗಿ ಪುಷ್ಟೀಕರಿಸುತ್ತಾರೆ. ಆದರೆ, ಯಾವುದೇ ಖಚಿತ ಅಧ್ಯಯನಗಳಿಲ್ಲದೆ ಈ ಬಗ್ಗೆ ಏನೂ ಹೇಳಲೂ ಸಾಧ್ಯವಿರಲಿಲ್ಲ. ಇದೀಗ, ವ್ಯಾಂಕೋವರ್ ನಲ್ಲಿರುವ ಬ್ರಿಟಿಷ್ ಕೋಲಂಬಿಯಾ ಸೆಂಟರ್ ಫಾರ್ ಡಿಸೀಸಸ್ ಕಂಟ್ರೋಲ್ ಆಂಡ್ ಸೇಂಟ್ ಪಾಲ್ಸ್ ಹಾಸ್ಪಿಟಲ್ ಕಡೆಯಿಂದ ಇಂಥದ್ದೊಂದು ಅಧ್ಯಯನ ನಡೆದಿದ್ದು, ಕೋವಿಡ್ ಗೂ ಹೆಚ್ಚುತ್ತಿರುವ ಮಧುಮೇಹಕ್ಕೂ ಸಂಬಂಧ ಇರುವುದನ್ನು ಗುರುತಿಸಿದೆ. ಹೊಸ ಮಧುಮೇಹದ ಪ್ರಕರಣಗಳಿಗೆ ಕೋವಿಡ್ ನೇರವಾಗಿ ಸಂಬಂಧವಿರಬಹುದು ಎಂದು ಈ ಅಧ್ಯಯನ ಹೇಳಿದೆ. ಇದುವರೆಗಿನ ಹಲವು ಅಧ್ಯಯನಗಳು ಸಹ ಸಾರ್ಸ್-ಕೋವ್-2 ಸೋಂಕು ಮಧುಮೇಹದ ಅಪಾಯ ಹೆಚ್ಚಿಸುವ ಎಲ್ಲ ಅಂಶಗಳನ್ನೂ ಹೊಂದಿದೆ ಎನ್ನುವುದನ್ನು ಸಾಬೀತುಪಡಿಸಿದ್ದವು. ಎಷ್ಟೋ ಜನರಲ್ಲಿ ಮಧುಮೇಹದ ಪೂರ್ವ ಆರಂಭಿಕ ಲಕ್ಷಣಗಳು ಇರುತ್ತವೆ. ಅಂದರೆ, ರಕ್ತದಲ್ಲಿ ಸಕ್ಕರೆ ಮಟ್ಟ ಹೆಚ್ಚಿರುವುದಿಲ್ಲ ಆದರೆ, ಮಧುಮೇಹಕ್ಕೆ ತುತ್ತಾಗುವ ಎಲ್ಲ ಅಪಾಯಗಳೂ ಇವರಲ್ಲಿರುತ್ತವೆ. ಇಂಥವರಲ್ಲಿ ಕೋವಿಡ್ ಬಳಿಕ ಮಧುಮೇಹ ಕಂಡುಬಂದಿರುವ ಸಾಧ್ಯತೆ ಇದೆ. 
ಕೋವಿಡ್ (Covid) 2ನೇ ಅಲೆಯ (2nd Wave) ವೇಳೆ 40 ವರ್ಷದ ಆಸುಪಾಸಿನ ಜನರ ಮೇಲೆ ಹೆಚ್ಚು ಪ್ರಭಾವ ಉಂಟಾಗಿತ್ತು. ಸೋಂಕಿಗೆ ತುತ್ತಾಗಿದ್ದು, ಹಲವು ದಿನಗಳಾದರೂ ತೀವ್ರತೆ ಕಡಿಮೆ ಆಗದವರ ಚಿಕಿತ್ಸೆಗೆ ಬಹುದೊಡ್ಡ ಪ್ರಮಾಣದಲ್ಲಿ ಸ್ಟಿರಾಯ್ಡ್ (Steroid) ಬಳಕೆ ಮಾಡಲಾಗಿತ್ತು. ತಜ್ಞರ ಪ್ರಕಾರ, ಈ ಸ್ಟಿರಾಯ್ಡ್ ಗೂ ಮಧುಮೇಹಕ್ಕೂ (Diabetes) ಎಂದಿನಿಂದಲೂ ಆಗಿಬರುವುದಿಲ್ಲ. ಇದೂ ಸಹ ಮಧುಮೇಹದ ಹೆಚ್ಚಳಕ್ಕೆ ಮುಖ್ಯ ಕೊಡುಗೆ ನೀಡಿದೆ ಎನ್ನುವ ಮಾತೂ ಇದೆ. ಆದರೆ, ಅಧ್ಯಯನಗಳ (Study) ಹೊರತಾಗಿ ಈ ಮಾತನ್ನು ಪುಷ್ಟೀಕರಿಸಲು ಸಾಧ್ಯವಿಲ್ಲ. ಹೀಗಾಗಿ, ಈಗ ಹೊರಬಂದಿರುವ ಅಧ್ಯಯನ ಹೆಚ್ಚು ಮಹತ್ವ ಪಡೆದುಕೊಂಡಿದೆ. 

ಬಿಸಿಲಿಗೆ 12 ಮಂದಿ ಸಾವು, ಮಾರಣಾಂತಿಕ ಹೀಟ್‌ಸ್ಟ್ರೋಕ್‌ನಿಂದ ಬಚಾವ್ ಆಗೋದು ಹೇಗೆ?

Tap to resize

Latest Videos

ಶೇ.3-5ರಷ್ಟು ಮಧುಮೇಹ
ಬ್ರಿಟಿಷ್ ಕೋಲಂಬಿಯಾ (British Columbia) ಸಂಸ್ಥೆ ವಿಜ್ಞಾನಿಗಳು ಕೋವಿಡ್ ಸೋಂಕಿಗೆ (Infection) ಒಳಗಾಗಿದ್ದ 6 ಲಕ್ಷಕ್ಕೂ ಅಧಿಕ ಜನರನ್ನು ಅಧ್ಯಯನ ಮಾಡಿದ್ದಾರೆ. ಇವರೆಲ್ಲರೂ ಮಧುಮೇಹಕ್ಕೆ ತುತ್ತಾಗುವ ಎಲ್ಲ ಸಾಧ್ಯತೆಗಳನ್ನೂ ಹೆಚ್ಚಾಗಿ ಹೊಂದಿದ್ದರು. ಈ ತಂಡ ಕೋವಿಡ್ ಸೋಂಕು, ಲಸಿಕೆ (Vaccination) ಮತ್ತು ಸೋಂಕಿತರ ಸಮಗ್ರ ದಾಖಲೆಗಳನ್ನು ಪರಿಶೀಲನೆ ಮಾಡಿದೆ. ಇವರ ಪ್ರಕಾರ, ಸೋಂಕಿತರಲ್ಲಿ ಟೈಪ್ 1 ಮತ್ತು ಟೈಪ್ 2 ಮಧುಮೇಹ ಕಂಡುಬರುವ ಅಪಾಯ ಹೆಚ್ಚಾಗಿತ್ತು. ಹಾಗೆಯೇ, ಒಟ್ಟೂ ಸೋಂಕಿತರಲ್ಲಿ ಶೇ.3-5ರಷ್ಟು ಹೊಸ ಮಧುಮೇಹದ ಪ್ರಕರಣಗಳು ಕೋವಿಡ್ ಸೋಂಕಿಗೆ ನೇರವಾಗಿ ಸಂಬಂಧಿಸಿವೆ ಎಂದು ಈ ಅಧ್ಯಯನ ಹೇಳಿದೆ. ಅಂದರೆ, 100 ಜನರಲ್ಲಿ ಸರಿಸುಮಾರು ಐವರು ಕೋವಿಡ್ ನಿಂದಾಗಿಯೇ ಮಧುಮೇಹಕ್ಕೆ ಒಳಗಾಗಿದ್ದಾರೆ. 20 ಜನರ ಪೈಕಿ ಒಬ್ಬರಲ್ಲಿ ಕೋವಿಡ್ ಕಾರಣದಿಂದಲೇ ಮಧುಮೇಹ ಉಂಟಾಗಿದೆ ಎಂದರೆ ಇದು ಅದೆಷ್ಟು ತೀವ್ರವಾಗಿ ಜನಜೀವನದ ಮೇಲೆ ಪರಿಣಾಮ (Effect) ಬೀರಿದೆ ಎನ್ನುವುದನ್ನು ಅರಿಯಬಹುದು. 

Corona Virusನಿಂದಲೂ ಬರಬಹುದು ಸಾವು! ರಕ್ತದಲ್ಲಿಯೇ ಗೊತ್ತಾಗುತ್ತೆ

ಮೊದಲೇ ಅಂದಾಜಿತ್ತು!
ವಿಜ್ಞಾನಿಗಳು (Scientists) ಕೋವಿಡ್ ಸೋಂಕಿನ ಆರಂಭದ ದಿನಗಳಲ್ಲೇ ಕೆಲವು ಎಚ್ಚರಿಕೆ ನೀಡಿದ್ದುದನ್ನು ಗಮನಿಸಬಹುದು. ಈ ಸೋಂಕು ಮೊದಲು ಉಸಿರಾಟದ ವ್ಯವಸ್ಥೆಯ (Respiratory System) ಮೇಲೆ ಪರಿಣಾಮ ಬೀರುತ್ತದೆ. ಬಳಿಕ, ಇತರ ಅಂಗಾಂಗಗಳ ಮೇಲೂ ಪರಿಣಾಮ ಬೀರುತ್ತದೆ. ಆರೋಗ್ಯದ (Health) ಮೇಲೆ ತೀವ್ರ (Acute) ಹಾಗೂ ದೀರ್ಘಕಾಲದ (Chronic) ಪ್ರಭಾವ ಗ್ಯಾರೆಂಟಿ ಎಂದು ಹೇಳಿದ್ದರು.
 

click me!