ಕೊವಿಡ್ ಹೆಚ್ಚಳ: ಆಸ್ಪತ್ರೆಗೆ ದಾಖಲಾದ 24 ತಾಸೊಳಗೆ 7 ಸಾವು!

By Kannadaprabha NewsFirst Published Jan 1, 2024, 6:16 AM IST
Highlights

ರಾಜ್ಯದಲ್ಲಿ ಕೊರೋನಾ ಸಕ್ರಿಯ ಸೋಂಕು ಒಂದು ಸಾವಿರ ಗಡಿ ತಲುಪಿದ್ದು, ಒಟ್ಟು ಸಾವಿನ ಸಂಖ್ಯೆ 12ಕ್ಕೆ ಏರಿಕೆಯಾಗಿದೆ. ಈ ಸಾವಿನ ಪೈಕಿ ಏಳು ಮಂದಿ ಆಸ್ಪತ್ರೆಗೆ ದಾಖಲಾದ 24 ಗಂಟೆಗಳ ಒಳಗಾಗಿ ಸಾವನ್ನಪ್ಪಿದ್ದು, ವಿಳಂಬವಾಗಿ ಆಸ್ಪತ್ರೆಗೆ ದಾಖಲು ಮಾಡಿರುವುದು ಸಾವಿನ ಪ್ರಮಾಣ ಹೆಚ್ಚಳವಾಗಲು ಕಾರಣವಾಗಿರುವುದು ಆತಂಕ ಸೃಷ್ಟಿಸಿದೆ.

ಬೆಂಗಳೂರು (ಜ.1) : ರಾಜ್ಯದಲ್ಲಿ ಕೊರೋನಾ ಸಕ್ರಿಯ ಸೋಂಕು ಒಂದು ಸಾವಿರ ಗಡಿ ತಲುಪಿದ್ದು, ಒಟ್ಟು ಸಾವಿನ ಸಂಖ್ಯೆ 12ಕ್ಕೆ ಏರಿಕೆಯಾಗಿದೆ. ಈ ಸಾವಿನ ಪೈಕಿ ಏಳು ಮಂದಿ ಆಸ್ಪತ್ರೆಗೆ ದಾಖಲಾದ 24 ಗಂಟೆಗಳ ಒಳಗಾಗಿ ಸಾವನ್ನಪ್ಪಿದ್ದು, ವಿಳಂಬವಾಗಿ ಆಸ್ಪತ್ರೆಗೆ ದಾಖಲು ಮಾಡಿರುವುದು ಸಾವಿನ ಪ್ರಮಾಣ ಹೆಚ್ಚಳವಾಗಲು ಕಾರಣವಾಗಿರುವುದು ಆತಂಕ ಸೃಷ್ಟಿಸಿದೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಡಿ.22ರಂದು ಆಸ್ಪತ್ರೆಗೆ ದಾಖಲಾಗಿದ್ದ 51 ವರ್ಷದ ವ್ಯಕ್ತಿ ಡಿ.23ರಂದು ಸಾವನ್ನಪ್ಪಿದ್ದರು. ಹಾಸನದಲ್ಲಿ ಉಸಿರಾಟ ಸಮಸ್ಯೆಯಿಂದ ಡಿ.22ರಂದು ದಾಖಲಾಗಿದ್ದ ವ್ಯಕ್ತಿ ಡಿ.23ರಂದು ಮೃತಪಟ್ಟಿದ್ದರು. ಮತ್ತೊಬ್ಬ ವ್ಯಕ್ತಿ ಡಿ.25ರಂದು ದಾಖಲಾಗಿ ಅದೇ ದಿನ ಮೃತಪಟ್ಟರು. ಇದೇ ರೀತಿ ಒಟ್ಟು ಏಳು ಮಂದಿ ಆಸ್ಪತ್ರೆಗೆ ದಾಖಲಾದ 24 ಗಂಟೆಗಳ ಒಳಗಾಗಿ ಸಾವನ್ನಪ್ಪಿದ್ದಾರೆ. ಇದಕ್ಕೆ ವಿಳಂಬದ ದಾಖಲಾತಿಯೇ ಕಾರಣ ಎಂಬುದು ಆರೋಗ್ಯ ಇಲಾಖೆ ಅಧಿಕಾರಿಗಳ ಮಾತು. 

ಬಿಸಿಲಿಗೆ ಹೆಸರುವಾಸಿಯಾಗಿದ್ದ ಈ ಜಿಲ್ಲೆಯಲ್ಲಿ ರಾಜ್ಯದಲ್ಲೇ ಅತಿ ಹೆಚ್ಚು ಚಳಿ!

ಹಿಂದಿನ ಅಲೆಗಳಲ್ಲಿ ಕೊರೋನಾ ಬಗ್ಗೆ ಭಯ ಇತ್ತು. ಸೋಂಕು ಲಕ್ಷಣ ಇಲ್ಲದಿದ್ದರು ಬೆಡ್‌ ಸಿಗುವುದಿಲ್ಲ ಎಂಬ ಭಯಕ್ಕೆ ಆಸ್ಪತ್ರೆಗೆ ದಾಖಲಾಗುತ್ತಿದ್ದರು. ಇದೀಗ ಸೋಂಕು ಲಕ್ಷಣ ಹೆಚ್ಚಿದ್ದರೂ ನಿರ್ಲಕ್ಷ್ಯ ಮಾಡುತ್ತಿದ್ದಾರೆ ಎಂದು ಕೊರೋನಾ ತಾಂತ್ರಿಕ ಸಲಹಾ ಸಮಿತಿ ಸದಸ್ಯರೊಬ್ಬರು ತಿಳಿಸಿದ್ದಾರೆ.

ಮಧುಮೇಹ, ಅಧಿಕ ರಕ್ತದೊತ್ತಡ, ಕಿಡ್ನಿ ಸಮಸ್ಯೆ, ಹೃದಯ ಸಂಬಂಧಿ ಸಮಸ್ಯೆ ಹಾಗೂ ಉಸಿರಾಟ ಸಮಸ್ಯೆಯುಳ್ಳ ಕೊರೋನಾ ಸೋಂಕಿತರು ಹೋಂ ಐಸೊಲೇಷನ್‌ ಆಯ್ಕೆ ತೆಗೆದುಕೊಳ್ಳುವ ಮೊದಲು ವೈದ್ಯರನ್ನು ಸಂಪರ್ಕಿಸಿ ತಮ್ಮ ಆರೋಗ್ಯದ ಬಗ್ಗೆ ಅಭಿಪ್ರಾಯ ಪಡೆಯಬೇಕು ಎಂದು ತಾಂತ್ರಿಕ ಸಲಹಾ ಸಮಿತಿ ಸದಸ್ಯ ಡಾ.ರಜತ್‌ ಆತ್ರೇಯ ಅಭಿಪ್ರಾಯಪಟ್ಟಿದ್ದಾರೆ. 

ಹೊಸ ವರ್ಷಾಚರಣೆಗೆ ರಾಜ್ಯದ ಪ್ರವಾಸಿ ತಾಣಗಳಲ್ಲಿ ರಶ್‌; ಹಂಪಿಗೆ 1 ಲಕ್ಷ, ಅಂಜನಾದ್ರಿ, ಗೋಕರ್ಣಕ್ಕೆ 25 ಸಾವಿರ ಭಕ್ತರ ಭೇಟಿ!

ಕೊರೋನಾ ಸೋಂಕಿತರಿಗೆ 7 ದಿನಗಳ ಹೋಂ ಐಸೊಲೇಷನ್‌ ವಿಧಿಸಿದ್ದರೂ ವೈದ್ಯರು ಮನೆಯಲ್ಲೇ ರೋಗಿಯನ್ನು ಭೇಟಿ ಮಾಡಬೇಕು. ತನ್ಮೂಲಕ ಅಗತ್ಯವಿರುವವರಿಗೆ ಸೂಕ್ತ ಸಮದಯಲ್ಲಿ ಆಸ್ಪತ್ರೆಗೆ ದಾಖಲಾಗಲು ತಿಳಿಸಬೇಕು. ಜತೆಗೆ ಡೆತ್‌ ಆಡಿಟ್‌ ಮಾಡಿಸಬೇಕು. ಇದರಿಂದ ರೋಗಿಗಳ ಸಾವಿಗೆ ಕಾರಣಗಳೂ ತಿಳಿದು ಬರಲಿವೆ ಎಂದು ತಾಂತ್ರಿಕ ಸಲಹಾ ಸಮಿತಿಯ ಮತ್ತೊಬ್ಬ ಸದಸ್ಯರು ತಿಳಿಸಿದರು.

click me!