
ನ್ಯೂಯಾರ್ಕ್(ಜು.14) ಏನೇ ಸಾಹಸ ಮಾಡಿದರೂ ಪ್ರಪಂಚದಲ್ಲಿ ಕೊರೋನಾ ನಿಯಂತ್ರಣಕ್ಕೆ ಬರುತ್ತಿಲ್ಲ. ಈ ನಡುವೆ ವಿಶ್ವ ಆರೋಗ್ಯ ಸಂಸ್ಥೆ ಮತ್ತೊಂದು ದೊಡ್ಡ ಎಚ್ಚರಿಕೆ ನೀಡಿದೆ.
ಕೊರೊನಾ ವೈರಸ್ ಸೋಂಕು ತಡೆಗಟ್ಟಲು ಮುನ್ನೆಚ್ಚರಿಕಾ ಕ್ರಮ ಅತೀ ಮುಖ್ಯ ಇದನ್ನ ಕಡೆಗಣಿಸಿದರೆ ಕೊರೋನಾ ಅಪಾಯದ ಹಂತ ಮೀರಿ ನಡೆಯಲಿದೆ ಎಂದು WHO ಎಚ್ಚರಿಸಿದೆ.
ವಿಶ್ವದಾದ್ಯಂತ 13.1(1 ಕೋಟಿ 31 ಲಕ್ಷ) ಮಿಲಿಯನ್ ಜನರಲ್ಲಿ ಕೊರೋನಾ ಇಲ್ಲಿಯವರೆಗೆ ಕಾಣಿಸಿಕೊಂಡಿದೆ. ಐದು ಲಕ್ಷ ಜನ ಪ್ರಾಣ ಕಳೆದುಕೊಂಡಿದ್ದಾರೆ. 7.23 ಮಿಲಿಯನ್ ಜನ ರಿಕವರಿಯಾಗಿದ್ದಾರೆ.
ವಿಶ್ವ ಆರೋಗ್ಯ ಸಂಸ್ಥೆಯ ಮಹಾನಿರ್ದೇಶಕ ಟೆಡ್ರೋಸ್ ಅಧನೋಮ್ ಘೆಬ್ರೆಯಾಸುಸ್ ಇದೀಗ ಮತ್ತೊಂದು ಎಚ್ಚರಿಕೆ ನೀಡಿದ್ದಾರೆ. ಕೊರೋನಾ ವೈರಸ್ ಮೂಲ ಎಚ್ಚರಿಕೆ ಕ್ರಮ ಅನುಸರಣೆ ಮಾಡುವುದನ್ನು ತಪ್ಪಿದರೆ ಪರಿಸ್ಥಿತಿ ನಿಭಾಯಿಸಲು ಸಾಧ್ಯವಿಲ್ಲ ಎಂದಿದ್ದಾರೆ.
ಕೊರೋನಾ ಕಂಡುಹಿಡಿಯುವ ಮೂರು ವಿಧಾನ; ಅಗತ್ಯವಾಗಿ ತಿಳಿದುಕೊಳ್ಳಿ
ಸೋಂಕು ನಿಯಂತ್ರಣ ಕ್ರಮ ಅನುಸರಣೆಯಲ್ಲಿ ಅನೇಕ ರಾಷ್ಟ್ರಗಳು ತಪ್ಪು ದಾರಿಯಲ್ಲಿ ಸಾಗಿವೆ. ಜನರು ಕೂಡ ಈ ಸೋಂಕಿನ ಅಪಾಯವನ್ನು ಕಡೆಗಣಿಸುತ್ತಿದ್ದಾರೆ. ಇದರಿಂದ ಅಪಾಯ ಹತ್ತಿರವಾಗುತ್ತಿದ್ದು ಸಾಮಾಜಿಕ ಅಂತರ ಮರೆತರೆ ದುರಂತ ಎಂದು ತಿಳಿಸಿದ್ದಾರೆ.
ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸಬೇಕು. ಆಗಾಗ ಕೈ ತೊಳೆಯುವುದನ್ನು ಮರೆಯಬಾರದು. ಕೆಮ್ಮು-ಜ್ವರದಂತಹ ಸೋಂಕು ಲಕ್ಷಣಗಳು ಇರುವವರು ಜನರ ನಡುವೆ ಓಡಾಡದೇ ಮನೆಯಲ್ಲಿಯೇ ಪ್ರತ್ಯೇಕವಾಗಿ ಉಳಿಯಬೇಕು. ಸರ್ಕಾರ ಸಹ ಕಟ್ಟುನಿಟ್ಟಿನ ಕ್ರಮಕ್ಕೆ ಜತೆಯಾಗಿರಬೇಕು ಎಂದು ತಿಳಿಸಿದ್ದಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.