ಬಣ್ಣಗಳ ಚಿತ್ತಾರದಲ್ಲಿ ಅರಳುವ ಮನಸ್ಸು!

Suvarna News   | Asianet News
Published : Dec 28, 2019, 12:39 PM IST
ಬಣ್ಣಗಳ ಚಿತ್ತಾರದಲ್ಲಿ ಅರಳುವ ಮನಸ್ಸು!

ಸಾರಾಂಶ

ಕೆಲಸದ ಒತ್ತಡ, ಜಂಜಾಟಗಳಿಂದ ಬ್ರೇಕ್ ಪಡೆದು ಮನಸ್ಸು ಮಗುವಿನಂತೆ ಖುಷಿ ಖುಷಿಯಿಂದ ಇರಬೇಕು ಎನ್ನುವವರಿಗೆ ಕಲರಿಂಗ್ ಹೇಳಿ ಮಾಡಿಸಿದ ಚಟುವಟಿಕೆ. ಇತ್ತೀಚಿನ ದಿನಗಳಲ್ಲಿ ಒತ್ತಡದಿಂದ ಪಾರಾಗಲು ಆಧುನಿಕ ಅಪ್ಪ-ಅಮ್ಮಂದಿರು ಮಕ್ಕಳ ಬಣ್ಣದ ಪೆನ್ಸಿಲ್‍ಗಳ ಮೊರೆ ಹೋಗುತ್ತಿದ್ದಾರೆ. ಕಲರಿಂಗ್‍ಗೆ ಮನಸ್ಸಿನ ದುಗುಡಗಳನ್ನು ದೂರ ಮಾಡುವ ಸಾಮಥ್ರ್ಯವಿರುವುದು ವೈಜ್ಞಾನಿಕವಾಗಿಯೂ ಸಾಬೀತಾಗಿದೆ. 

ಆಫೀಸ್‍ನಲ್ಲಿ ಕೆಲಸ ಮಾಡಿದಷ್ಟು ಮುಗಿಯುತ್ತಿಲ್ಲ. ಒಪ್ಪಿಸಿದ ಕೆಲಸವನ್ನು ಡೆಡ್‍ಲೈನ್‍ವೊಳಗೆ ಮುಗಿಸದಿದ್ದರೆ ಬಾಸ್‍ನಿಂದ ಬೈಗುಳ ತಪ್ಪಿದ್ದಲ್ಲ. ಇದೇ ಟೆನ್ಷನ್‍ನಲ್ಲಿ ಮನೆಗೆ ಬರುವ ನಿಮಗೆ ಪತಿಯೋ ಇಲ್ಲವೆ ಪತ್ನಿಯೋ ಏನಾದರೂ ಮಾತನಾಡಿದರೆ ಕೋಪ ನೆತ್ತಿಗೇರುತ್ತದೆ. ದೊಡ್ಡ ಕದನವೇ ನಡೆದು ನೆಮ್ಮದಿ ಮತ್ತಷ್ಟು ಹಾಳಾಗುತ್ತದೆ. ಇಂಥ ಸಮಯದಲ್ಲಿ ಒಂದು ಖಾಲಿ ಹಾಳೆ ತೆಗೆದುಕೊಂಡು ಮನಸ್ಸಿಗೆ ತೋಚಿದ ಚಿತ್ರ ಬಿಡಿಸಿ, ಅದಕ್ಕೆ ಕಲರ್ ಹಾಕಿ ನೋಡಿ? ಮನಸ್ಸು ಸ್ತೀಮಿತಕ್ಕೆ ಬಂದಿರುತ್ತದೋ ಇಲ್ಲವೋ? ಒತ್ತಡದಿಂದ ಮುಕ್ತಿ ಪಡೆಯಲು ಕಲರಿಂಗ್ ನೆರವು ನೀಡುತ್ತದೆ ಎಂಬುದು ಅನೇಕ ಅಧ್ಯಯನಗಳಿಂದ ಸಾಬೀತಾಗಿದೆ.

ಆಧುನಿಕ ಜೀವನಶೈಲಿಯ ಪರಿಣಾಮ ಇಂದು ಒತ್ತಡವನ್ನು ಬೇತಾಳದಂತೆ ಸದಾ ಬೆನ್ನ ಮೇಲೆ ಹೊತ್ತು ತಿರುಗುವ ವಯಸ್ಕರು ಕ್ರೆಯನ್ಸ್ ಹಾಗೂ ಬಣ್ಣದ ಪೆನ್ಸಿಲ್‍ಗಳನ್ನು ಹಿಡಿದು ಕಲರಿಂಗ್ ಎಂಬ ಬಾಲ್ಯದ ಚಟುವಟಿಕೆಯತ್ತ ಗಮನ ಕೇಂದ್ರೀಕರಿಸುತ್ತಿರುವುದು ವಿಶೇಷ.

ಕಂಪ್ಯೂಟರ್‌ ನೋಡಿದ್ರೆ ಕಣ್ಣು ಸುಸ್ತಾಗುತ್ತಾ? ಈ ಫುಡ್‌ಗಳನ್ನು ಸೇವಿಸಿ!

ಕಲರಿಂಗ್ ಮಾಡುವುದರಿಂದ ಎಷ್ಟೊಂದು ಪ್ರಯೋಜನಗಳಿವೆ ಗೊತ್ತಾ ನಿಮಗೆ?

ಮನಸ್ಸು ಹಕ್ಕಿಯಂತೆ ಹಗುರ: ಸದಾ ಬ್ಯುಸಿಯಾಗಿರುವ, ವರ್ಕ್ ಪ್ರೆಷರ್ ಹೆಚ್ಚಿರುವ ವ್ಯಕ್ತಿಗೆ ಮನಸ್ಸನ್ನು ತಣಿಸಲು ಕಲರಿಂಗ್ ಹೇಳಿ ಮಾಡಿಸಿದ ಚಟುವಟಿಕೆ. ಕಲರಿಂಗ್ ಮಾಡುವಾಗ ನಿಮ್ಮನ್ನು ನೀವು ಅದರಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಳ್ಳುವ ಕಾರಣ ನಿಮಗೆ ಒತ್ತಡ ಹಾಗೂ ಉದ್ವೇಗವುಂಟು ಮಾಡುವ ವಿಷಯಗಳತ್ತ ಗಮನ ಹರಿಸಲು ಸಾಧ್ಯವಾಗುವುದಿಲ್ಲ. ಇದರಿಂದ ಮನಸ್ಸಿನಲ್ಲಿ ಶಾಂತಿ ನೆಲೆಸುತ್ತದೆ. ಕಲರಿಂಗ್ ಮಿದುಳಿನಲ್ಲಿರುವ ಹೆದರಿಕೆ ಹುಟ್ಟಿಸುವ ಕೇಂದ್ರವನ್ನು ಸಾಂತ್ವನಗೊಳಿಸುವ ಮೂಲಕ ಮನಸ್ಸಿನ ಉದ್ವೇಗವನ್ನು ಶಮನಗೊಳಿಸುತ್ತದೆ.

ಸೃಜನಶೀಲತೆಯ ಗಣಿ: ಕಲರಿಂಗ್ ಎಂದರೆ ಸೃಜನಶೀಲತೆ. ಒಬ್ಬ ವ್ಯಕ್ತಿ ಎಷ್ಟು ಕ್ರಿಯೇಟಿವ್ ಆಗಿದ್ದಾನೆ ಎಂಬುದನ್ನು ಆತ ಬಿಡಿಸುವ ಚಿತ್ರ ಸೂಚಿಸುತ್ತದೆ. ಸೃಜನಶೀಲತೆ ಹೊಂದಿರುವ ವ್ಯಕ್ತಿಗಳು ಮಾತ್ರ ಸುಂದರ ಚಿತ್ರ ಬಿಡಿಸಿ ಸೂಕ್ತ ಬಣ್ಣಗಳನ್ನು ತುಂಬಿಸಬಲ್ಲರು. ಸ್ಯಾನ್ ಫ್ರಾನ್ಸಿಸ್ಕೋ ಸ್ಟೇಟ್ ಯುನಿವರ್ಸಿಟಿ ನಡೆಸಿದ ಅಧ್ಯಯನದ ಪ್ರಕಾರ ನೀವು ಆಫೀಸ್ ಹೊರಗೆ ಸೃಜನಾತ್ಮಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿರುವುದರಿಂದ ಆಫೀಸ್ ಕೆಲಸಗಳಲ್ಲಿ ಹೆಚ್ಚು ನಾವೀನ್ಯ ಹಾಗೂ ಟೀಮ್ ಸ್ಪಿರಿಟ್ ತೋರ್ಪಡಿಸಲು ಸಾಧ್ಯವಾಗುತ್ತದೆ. ಆಫೀಸ್ ಕೆಲಸಗಳಲ್ಲಿ ನೀವು ಸೃಜನಶೀಲತೆಯನ್ನು ತೋರ್ಪಡಿಸಿದಾಗ ಉಳಿದವರಿಗಿಂತ ಭಿನ್ನವಾಗಿ ಗುರುತಿಸಲ್ಪಡುತ್ತಿರಿ. ನಿಮ್ಮ ಈ ಕೌಶಲ್ಯವೇ ಉನ್ನತ ಹುದ್ದೆಗೇರಲು ಮೆಟ್ಟಿಲಾಗುತ್ತದೆ. 

ಇದನ್ನ ತಿಂದ್ರೆ ಹ್ಯಾಂಗ್ ಓವರ್‌ನಿಂದ ಪಾರಾಗ್ತೀರ!

ನಿದ್ರೆಯ ಸಾಂಗತ್ಯ: ರಾತ್ರಿ ಹಾಸಿಗೆ ಮೇಲೆ ಎಷ್ಟೇ ಹೊರಳಾಡಿದರೂ ನಿದ್ರೆ ಬರುತ್ತಿಲ್ಲ ಎಂದಾದರೆ ಕಲರಿಂಗ್ ಬುಕ್ ಹಿಡಿದು ಗೀಚಲು ಪ್ರಾರಂಭಿಸಿ. ಕೆಲವೇ ನಿಮಿಷಗಳಲ್ಲಿ ನಿದ್ರೆ ನಿಮ್ಮನ್ನು ಆವರಿಸುತ್ತದೆ ಎನ್ನುತ್ತಾರೆ ವಿಜ್ಞಾನಿಗಳು. ಮೊಬೈಲ್ ಅಥವಾ ಟ್ಯಾಬ್ಲೇಟ್ ಹಿಡಿದುಕೊಂಡು ಹಾಸಿಗೆ ಮೇಲೆ ಮಲಗಿದರೆ ನಿದ್ರೆ ನಿಮ್ಮಿಂದ ದೂರವಾಗುತ್ತದೆ. ಅದೇ ಪುಸ್ತಕ ಹಿಡಿದರೆ ನಿದ್ರೆ ನಿಮ್ಮನ್ನು ಹುಡುಕಿಕೊಂಡು ಬರುತ್ತದೆ ಎಂಬುದು ಅನೇಕ ಅಧ್ಯಯನಗಳಿಂದ ಸಾಬೀತಾಗಿದೆ. ಚೆನ್ನಾಗಿ ನಿದ್ರೆ ಮಾಡುವುದರಿಂದ ಮಿದುಳು ಹಾಗೂ ದೇಹಕ್ಕೆ ಅಗತ್ಯ ವಿಶ್ರಾಂತಿ ಸಿಗುತ್ತದೆ. ಇದರಿಂದ ತ್ವಚೆಯ ಕಾಂತಿ ಹೆಚ್ಚುತ್ತದೆ. ಕಣ್ಣಿನ ಕೆಳಭಾಗದಲ್ಲಿ ಕಾಣಿಸುವ ಕಪ್ಪು ವರ್ತುಲಗಳು ದೂರವಾಗುತ್ತವೆ. ಇದರಿಂದ ಸಹಜವಾಗಿಯೇ ನಿಮ್ಮ ಮುಖದ ಅಂದ ಹೆಚ್ಚುತ್ತದೆ. 

ಪಾಸಿಟಿವ್ ಪರ್ಸ್‍ನಾಲಿಟಿ: ಕ್ರೆಯನ್ಸ್ ಹಾಗೂ ಬಣ್ಣದ ಪೆನ್ಸಿಲ್‍ಗಳನ್ನು ನೋಡಿದ ತಕ್ಷಣ ನಿಮಗೆ ಏನು ನೆನಪಾಗುತ್ತದೆ ಹೇಳಿ? ಬಾಲ್ಯದ ದಿನಗಳು ಅಲ್ಲವೆ? ಬಾಲ್ಯ ಎಂದ ತಕ್ಷಣ ಮನಸ್ಸು ಪ್ರಫುಲ್ಲವಾಗುತ್ತದೆ. ಹಳೆಯ ನೆನಪುಗಳಿಗೆ ಮರಳುವ ಮೂಲಕ ನಿಮ್ಮಲ್ಲಿ ಹೊಸ ಉತ್ಸಾಹ ಮೂಡಿಸುವ ಜೊತೆಗೆ ಪಾಸಿಟಿವ್ ಭಾವನೆಗಳನ್ನು ಹುಟ್ಟು ಹಾಕುತ್ತದೆ. ಈ ಪಾಸಿಟಿವ್ ಯೋಚನೆಗಳು ಉದ್ಯೋಗ ಸ್ಥಳದಲ್ಲಿ ನೀವು ಧೈರ್ಯದಿಂದ ಮುನ್ನುಗಲು ನೆರವು ನೀಡುತ್ತವೆ. ಹೊಸ ಹೊಸ ಜವಾಬ್ದಾರಿಗಳನ್ನು ಒಪ್ಪಿಕೊಳ್ಳಲು ಕಾರಣವಾಗುತ್ತವೆ. 

ಉದಾಸೀನ ಬಿಟ್ಟು ಬ್ರಷ್ ಮಾಡಿ, ಇಲ್ಲವಾದರೆ ಹೃದಯಕ್ಕೆ ಹಾನಿಯಾದೀತು ಎಚ್ಚರ!

ಖುಷಿಯ ಖಜಾನೆ: ಬಣ್ಣ ಎಂದರೇನೆ ಅಲ್ಲೊಂದು ಜೀವಂತಿಕೆ ಕಾಣಿಸುತ್ತದೆ. ಉತ್ಸಾಹ, ಹುಮ್ಮಸ್ಸು, ಹುರುಪು ಇವೆಲ್ಲವೂ ಬಣ್ಣಗಳೊಂದಿಗೆ ನಂಟು ಹೊಂದಿವೆ. ಬಣ್ಣಗಳು ನಮ್ಮ ಮನಸ್ಸಿನ ಮೇಲೆ ಗಾಢ ಪ್ರಭಾವ ಬೀರಬಲ್ಲವು. ಹೀಗಿರುವಾಗ ಬಣ್ಣಗಳೊಂದಿಗೆ ಆಟವಾಡುವ ಕಲರಿಂಗ್ ಎಂಬ ಪ್ರಕ್ರಿಯೆ ಸಹಜವಾಗಿಯೇ ಮನಸ್ಸಿನ ದುಗುಡಗಳನ್ನು ಮರೆಸಿ ಖುಷಿ ನೀಡುತ್ತದೆ. 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಇವನ್ನೆಲ್ಲಾ ಸ್ಟೀಲ್ ಪಾತ್ರೆಯಲ್ಲಿ ಹಾಕಿಡಬೇಡಿ.. ರುಚಿ, ಪರಿಮಳ ಇರಲ್ಲ, ಆರೋಗ್ಯನೂ ಹಾಳಾಗುತ್ತೆ!
Foods that Block Arteries: ನೀವು ಪ್ರತಿದಿನ ಸೇವಿಸೋ ಈ ಆಹಾರಗಳೇ ಹೃದಯಾಘಾತಕ್ಕೆ ಕಾರಣವಾಗಬಹುದು ಎಚ್ಚರ