Virtual Autism: ಮಗು ಅಳ್ತಾ ಇದೆ ಅಂತ ಮೊಬೈಲ್ ಕೊಟ್ರೆ ಮುಗೀತು ಕಥೆ, ಆಟಿಸಂ ಕಾಡಬಹುದು!

By Suvarna News  |  First Published May 30, 2023, 12:59 PM IST

ಮಗು ಅಳ್ತಿದೆ, ಏನಾಗಿದೆ ನೋಡಿ ಎನ್ನುವ ದಿನ ಹೋಗಿದೆ. ಮಗು ಅಳ್ತಿದೆ ಮೊಬೈಲ್ ಕೊಡಿ ಎನ್ನುವ ಕಾಲ ಇದು. ಮಕ್ಕಳಿಗೆ ಮೊಬೈಲ್ ಅಥವಾ ಟಿವಿ ನೀಡಿದ್ರೆ ಗಲಾಟೆ ಕಡಿಮೆಯಾಗುತ್ತೆ ಎನ್ನುವ ಪಾಲಕರಿಗೆ ಇದು ಮಕ್ಕಳ ಜೀವನ ನರಕ ಮಾಡುತ್ತೆ ಎಂಬ ಸತ್ಯ ಗೊತ್ತೇ ಇಲ್ಲ.
 


ಹುಟ್ಟುಹುಟ್ತಾನೆ ಮೊಬೈಲ್ ಕೈಗೆ ಕೊಡಿ ಎನ್ನುವ ಮಕ್ಕಳು ಈಗಿನವರು. ಇದ್ರಲ್ಲಿ ಮಕ್ಕಳ ದೋಷವೇನಿಲ್ಲ. ಪಾಲಕರು ಆರಂಭದಿಂದಲೇ ಮಕ್ಕಳ ಕೈಗೆ ಮೊಬೈಲ್ ನೀಡಿ ರೂಢಿ ಮಾಡಿರ್ತಾರೆ. ಮಕ್ಕಳು ಸಣ್ಣ ಗಲಾಟೆ ಮಾಡ್ಲಿ, ಊಟ ಮಾಡದೆ ಇರಲಿ ಇಲ್ಲ ಶಾಪಿಂಗ್, ಮನೆಗೆ ಗೆಸ್ಟ್ ಬಂದ ಸಂದರ್ಭವಿರಲಿ, ಮಕ್ಕಳು ಡಿಸ್ಟರ್ಬ್ ಮಾಡ್ತಾರೆ ಎನ್ನುವ ಕಾರಣಕ್ಕೆ ಮಕ್ಕಳ ಕೈಗೆ ಮೊಬೈಲ್ ಕೊಟ್ಟು ಕಳಿಸ್ತಾರೆ. 

ಮಕ್ಕಳಿ (Children) ಗೆ ಕಥೆ ಹೇಳುವ ಬದಲು ಮೊಬೈಲ್ (Mobile) ನಲ್ಲಿ ಕಥೆ ನೋಡುವಂತೆ ಪಾಲಕರು ಸಲಹೆ ನೀಡ್ತಾರೆ. ಕಚೇರಿ ಕೆಲಸದಲ್ಲಿ ಸದಾ ಬ್ಯುಸಿಯಿರುವ ಪಾಲಕರಿಗೆ ಮಕ್ಕಳ ಜೊತೆ ಆಟವಾಡಲು ಸಮಯವಿಲ್ಲ. ಮನೆಯಲ್ಲಿ ಮೂರು ಮತ್ತೊಂದು ಜನರಿರುವ ಕಾರಣ ಮಕ್ಕಳಿಗೆ ಆಟವಾಡಲು ಯಾರೂ ಸಿಗೋದಿಲ್ಲ. ಈ ಖಾಲಿ ಸಮಯದಲ್ಲಿ ಏನು ಮಾಡ್ಬೇಕು ಎಂಬ ಪ್ರಶ್ನೆ ಬಂದಾಗ ಟಿವಿ ಅಥವಾ ಮೊಬೈಲ್ ಆನ್ ಆಗುತ್ತೆ. ಕೆಲ ಮಕ್ಕಳಿಗೆ ಇಡೀ ದಿನ ಮೊಬೈಲ್ ಅಥವಾ ಟಿವಿ ಸೌಂಡ್ ಕೇಳುತ್ತಿರಬೇಕು. ಇಲ್ಲವೆಂದ್ರೆ ಹಠ ಶುರು ಮಾಡ್ತಾರೆ. ಇನ್ನು ಕೆಲ ಮಕ್ಕಳಿಗೆ ಟಿವಿ ಅಥವಾ ಮೊಬೈಲ್ ನೋಡ್ದೆ ಹೋದ್ರೆ ಊಟ ಒಳಗೆ ಹೋಗೋದಿಲ್ಲ. 

Tap to resize

Latest Videos

ಕೋಪಗೊಳ್ಳೋ ಮಕ್ಕಳನ್ನು ಕರೆಕ್ಟಾಗಿ ಸಂಭಾಳಿಸೋದು ಹೇಗೆ? ಇಲ್ಲಿದೆ ಟಿಪ್ಸ್

ಅಯ್ಯೋ ಇನ್ನು ಒಂದು ವರ್ಷವಾಗಿಲ್ಲ ಮಗುಗೆ. ಆಗ್ಲೆ ಮೊಬೈಲ್ ನಲ್ಲಿ ಎಲ್ಲ ಆಪರೇಟ್ ಮಾಡ್ತಾನೆ ಗೊತ್ತಾ?, ಟಿವಿಯಲ್ಲಿ ಬರೋ ಎಲ್ಲ ಕಾರ್ಟೂನ್ ಹೆಸರು ಹೇಳ್ತಾನೆ ಅಂತಾ ಪಾಲಕರು, ಅಜ್ಜ – ಅಜ್ಜಿಯಂದಿರು ಹೆಮ್ಮೆಯಿಂದ ಹೇಳಿಕೊಳ್ತಾರೆ. ಈ ಗೆಜೆಟ್ ಎಷ್ಟು ಮನರಂಜನೆ ನೀಡುತ್ತೋ ಅದರ ಎರಡು ಪಟ್ಟು ಆರೋಗ್ಯವನ್ನು ಹಾಳು ಮಾಡುತ್ತೆ. ಊಟ, ಅಧ್ಯಯನದ ಅನ್ನದೆ ಎಲ್ಲ ಸಮಯದಲ್ಲೂ ಮೊಬೈಲ್ ವೀಕ್ಷಣೆ ಮಾಡುವ ಅಥವಾ ಟಿವಿ ನೋಡುವ ಮಕ್ಕಳಿಗೆ ದೃಷ್ಟಿ ಸಮಸ್ಯೆ ಮಾತ್ರ ಕಾಡೋದಿಲ್ಲ. ಮಾನಸಿಕ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ. ಗೆಜೆಟ್ ಗಳನ್ನು ಅತಿ ಹೆಚ್ಚು ಸಮಯ ವೀಕ್ಷಣೆ ಮಾಡುವ ಮಕ್ಕಳಿಗೆ ವರ್ಜುವಲ್ ಆಟಿಸಂ ಕಾಡುತ್ತದೆ ಎಂದು ತಜ್ಞರು ಹೇಳಿದ್ದಾರೆ. 

ವರ್ಚುವಲ್ ಆಟಿಸಂ (Virtual Autism) ಅಂದ್ರೇನು? : ವರ್ಚುವಲ್ ಆಟಿಸಂ ನಾಲ್ಕರಿಂದ ಐದು ವರ್ಷದ ಒಳಗಿನ ಮಕ್ಕಳಲ್ಲಿ ಕಾಣಿಸಿಕೊಳ್ಳುವ ಸ್ಥಿತಿ. ಸ್ಮಾರ್ಟ್ಫೋನ್ (Smartphone), ಟಿವಿ, ಲ್ಯಾಪ್ ಟಾಪ್ (Laptop) ಅತಿಯಾದ ಬಳಕೆಯಿಂದ ಮಕ್ಕಳಿಗೆ ಈ ಸಮಸ್ಯೆ ಕಂಡು ಬರುತ್ತದೆ. ಈ ಸ್ಥಿತಿಯಲ್ಲಿ ಮಕ್ಕಳು ಮಾತನಾಡುವ, ಸಮಾಜದಲ್ಲಿ ಇತರ ಜನರೊಂದಿಗೆ ಸಂವಹನ ನಡೆಸಲು ಕಷ್ಟಪಡ್ತಾರೆ. ಒಂದರಿಂದ ಮೂರು ವರ್ಷದ ಮಕ್ಕಳಲ್ಲಿ ಇದ್ರ ಅಪಾಯ ಹೆಚ್ಚು ಎಂದು ತಜ್ಞರು ಹೇಳ್ತಾರೆ. 

Kids Health : ಋತು ಬದಲಾದಂತೆ ಕಾಡುವ ರೋಗದಿಂದ ಮಕ್ಕಳ ರಕ್ಷಣೆ ಹೇಗೆ?

ವರ್ಚುವಲ್ ಆಟಿಸಂ ಲಕ್ಷಣಗಳು : ಇದ್ರ ಲಕ್ಷಣಗಳನ್ನು ಸ್ಪಷ್ಟವಾಗಿ ಹೇಳಲು ಸಾಧ್ಯವಿಲ್ಲ. ವರ್ಚುವಲ್ ಆಟಿಸಂ ಪೀಡಿತ ಮಕ್ಕಳು ಆಕ್ರಮಣಕಾರಿ ನಡವಳಿಕೆ ಹೊಂದಿರುತ್ತಾರೆ. ಸ್ಮಾರ್ಟ್ಫೋನ್ ಚಟಕ್ಕೆ ಬೀಳುವ ಮಕ್ಕಳು ಒಂದರ್ಧಗಂಟೆ ಮೊಬೈಲ್ ಬಿಟ್ರೂ ಚಡಪಡಿಕೆಗೆ ಒಳಗಾಗ್ತಾರೆ. ಏಕಾಗ್ರತೆಯ ಸಮಸ್ಯೆ ಈ ಮಕ್ಕಳನ್ನು ಕಾಡುತ್ತದೆ.  ನಿದ್ರೆಯ ತೊಂದರೆ ಅನುಭವಿಸುವ ಮಕ್ಕಳು ಕೋಪೋದ್ರೇಕಕ್ಕೆ ಒಳಗಾಗ್ತಾರೆ. 

ವರ್ಚುವಲ್ ಆಟಿಸಂ ಚಿಕಿತ್ಸೆ ಹೇಗೆ? : ಮಕ್ಕಳಲ್ಲಿ ಈ ಲಕ್ಷಣವನ್ನು ನೀವು ಗಮನಿಸಿದ್ದೇ ಆದಲ್ಲಿ ಅದನ್ನು ನಿರ್ಲಕ್ಷ್ಯ ಮಾಡಬಾರದು. ಮಕ್ಕಳಿಗೆ ವರ್ಜುವಲ್ ಆಟಿಸಂ ಸಮಸ್ಯೆಯಾಗಿದೆ ಎಂಬ ಸತ್ಯವನ್ನು ನೀವು ಒಪ್ಪಿಕೊಳ್ಳುವ ಜೊತೆಗೆ ಅವರನ್ನು ವೈದ್ಯರ ಬಳಿ ಕರೆದೊಯ್ಯಬೇಕು. ಪಾಲಕರು ಭಯಪಡುವ ಅಗತ್ಯವಿಲ್ಲ. ಇದಕ್ಕೆ ಸೂಕ್ತ ಥೆರಪಿಗಳು ಲಭ್ಯವಿದೆ. ಮಾತನಾಡುವ ಚಿಕಿತ್ಸೆ, ವಿಶೇಷ ಶಿಕ್ಷಣ ಚಿಕಿತ್ಸೆ ಮತ್ತು ವ್ಯಕ್ತಿತ್ವ ಅಭಿವೃದ್ಧಿ ಚಿಕಿತ್ಸೆ ಮೂಲಕ ಮಕ್ಕಳನ್ನು ಸಾಮಾನ್ಯ ಸ್ಥಿತಿಗೆ ತರುವ ಪ್ರಯತ್ನ ನಡೆಯುತ್ತದೆ.
 

click me!