ಬ್ರೆಜಿಲ್‌ನಿಂದ ತಂದ ಕೋಳಿ ಮಾಂಸದಲ್ಲಿ ಕೊರೋನಾ ಪಾಸಿಟಿವ್..!

By Suvarna NewsFirst Published Aug 13, 2020, 6:55 PM IST
Highlights

ಕೊರೋನಾ ಆತಂಕ ಹೆಚ್ಚಾಗುತ್ತಿರುವ ಸಂದರ್ಭದಲ್ಲಿಯೇ ಬ್ರೆಜಿಲ್‌ನಿಂದ ಆಮದು ಮಾಡಿಕೊಂಡ ಕೋಳಿ ಮಾಂಸ ಕೊರೋನಾ ಪಾಸಿಟಿವ್ ಇರುವುದು ತಿಳಿದುಬಂದಿದೆ.

ಬೀಜಿಂಗ್(ಆ.13): ಕೊರೋನಾ ಆತಂಕ ಹೆಚ್ಚಾಗುತ್ತಿರುವ ಸಂದರ್ಭದಲ್ಲಿಯೇ ಬ್ರೆಜಿಲ್‌ನಿಂದ ಆಮದು ಮಾಡಿಕೊಂಡ ಕೋಳಿ ಮಾಂಸ ಕೊರೋನಾ ಪಾಸಿಟಿವ್ ಇರುವುದು ತಿಳಿದುಬಂದಿದೆ. ಚೀನಾದ ಶೆನ್‌ಝೆನ್ ನಗರದಲ್ಲಿ ಬ್ರೆಜಿಲ್‌ನಿಂದ ಆಮದು ಮಾಡಲಾಗಿದ್ದ ಕೋಳಿ ಮಾಂಸ ಕೊರೋನಾ ಪಾಸಿಟವ್ ಎಂದು ಅಲ್ಲಿ ಸ್ಥಳೀಯ ಆಡಳಿತ ತಿಳಿಸಿದೆ.

ಚೀನಾದ ಸ್ಥಳೀಯ ರೋಗ ನಿಯಂತ್ರಣ ಕೇಂದ್ರ ಬ್ರೆಜಿಲ್‌ನಿಂದ ಆಮದು ಮಾಡಲಾಗಿದ್ದ ಕೋಳಿ ಮಾಂಸದ ಮೇಲ್ಪದರವನ್ನು ಟೆಸ್ಟ್ ಮಾಡಿದ್ದಾರೆ. ಈ ಸಂದರ್ಭ ಕೊರೋನಾ ಪಾಸಿಟಿವ್ ದೃಢಪಟ್ಟಿದೆ.

ಸಮುದ್ರ ಆಹಾರ ಪ್ಯಾಕೆಜಿಂಗ್‌ನಲ್ಲಿ ಕೊರೋನಾ ಪತ್ತೆ, ಚೀನಾಕ್ಕೆ ಏನ್ ಹೇಳೋದು ಮತ್ತೆ!

ಬೀಜಿಂಗ್‌ನಲ್ಲಿ ಕೊರೋನಾ ಕಾಣಿಸಿಕೊಂಡಾಗ ಅದು ನಗರದ ಕ್ಸಿನ್ಫಾಡಿ ಸೀಫುಡ್‌ ಮಾರ್ಕೆಟ್‌ ಜೊತೆ ಲಿಂಕ್ ಹೊಂದಿದೆ ಎಂಬ ಉದ್ದೇಶದಿಂದ ಜೂನ್ ನಂತರ ಆಮದು ಮಾಡಲಾಗುವ ಮಾಂಸ ಹಾಗೂ ಸೀಫುಡ್ ತಪಾಸಣೆ ಮಾಡಲಾಗುತ್ತಿತ್ತು.

ಬ್ರೆಜಿಲ್‌ನಿಂದ ಆಮದು ಮಾಡಲಾದ ಘನೀಕೃತ ಕೋಳಿ ಮಾಂಸದ ಸಂಪರ್ಕಕ್ಕೆ ಯಾರ್ಯಾರು ಬಂದಿದ್ದಾರೋ ಅವರನ್ನು ಹುಡುಕಿ ಟೆಸ್ಟ್ ಮಾಡಲಾಗಿದೆ. ಇನ್ನು ಮಾಂಸ ಶೇಖರಣಾ ಘಟಕಗಳಿಗೂ ಭೇಟಿ ನೀಡಿ ಕೊರೋನಾ ಟೆಸ್ಟ್ ನಡೆಸಲಾಗಿದ್ದು, ಇಲ್ಲಿ ಎಲ್ಲ ಕಡೆ ಕೊರೋನಾ ನೆಗೆಟಿವ್ ವರದಿ ಬಂದಿದೆ.

ಕೊರೋನಾಗೆ ರಷ್ಯಾ ಲಸಿಕೆ , ಅಧ್ಯಕ್ಷ ಪುಟಿನ್ ಮಗಳಿಗೆ ಮೊದಲ ಇಂಜೆಕ್ಷನ್!

ಈ ಬಗ್ಗೆ ಬೀಜಿಂಗ್‌ನಲ್ಲಿರುವ ಬ್ರೆಜಿಲ್ ರಾಜಭಾರ ಕಚೇರಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆಮದು ಮಾಂಸಹಾರದಲ್ಲಿ ಕೊರೋನಾ ವೈರಸ್ ಕಾಣಿಸಿಕೊಂಡಿರುವುದರಿಂದ ಜನರು ಎಚ್ಚೆತ್ತುಕೊಳ್ಳಬೇಕು ಎಂದು ಶೆನ್‌ಝೆನ್ ಸ್ಥಳೀಯ ಕೊರೋನಾ ನಿಯಂತ್ರಣ ಕೇಂದ್ರ ಸೂಚನೆ ನೀಡಿದೆ.

ಎಕ್ವಾಡರ್‌ನಿಂದ ಆಮದು ಮಾಡಲಾದ ಸಿಗಡಿಯ ಪ್ಯಾಕ್‌ಗಳಲ್ಲಿ ಕೊರೋನಾ ವೈರಸ್ ಇತ್ತು ಎಂದು ಚೀನಾ ಬುಧವಾರ ಆರೋಪಿಸಿತ್ತು. ಮಾಂಸ ಹಾಗೂ ಸೀಫುಡ್ ಆಮುದ ಮಾಡುವ ಪ್ರಮುಖ ಬಂದರುಗಳಲ್ಲಿ ಚೀನಾ ಈಗಾಗಲೇ ಸ್ಕ್ರೀನಿಂಗ್ ನಡೆಸುತ್ತಿದೆ.

ದೇಶದಲ್ಲಿಂದು ಅತೀ ಹೆಚ್ಚು ಕೊರೋನಾ ಸೋಂಕಿತರು ಗುಣಮುಖ..! ಒಟ್ಟು ಸಂಖ್ಯೆ 17 ಲಕ್ಷ

ಇನ್ನು ಬ್ರೆಜಿಲ್ ಸೇರಿ ಹಲವು ಕಡೆಗಳಿಂದ ಮಾಂಸ ಆಮದು ಮಾಡುವುದನ್ನು ಜೂನ್ ಮಧ್ಯದಲ್ಲೇ ಚೀನಾ ತಡೆದಿದೆ. ಚೀನಾದಲ್ಲಿ ಮೊದಲ ಕೊರೋನಾ ವೈರಸ್ ಪ್ರಕರಣ ವುಹಾನ್‌ನ ಹುವನಾನ್ ಸೀ ಫೂಡ್ ಮಾರ್ಕೆಟ್‌ನಲ್ಲಿ ಪತ್ತೆಯಾಗಿತ್ತು. 

click me!