Walk for Diabetics: ಮಧುಮೇಹಿಗಳು ಯಾವ ಸಮಯದಲ್ಲಿ ವಾಕಿಂಗ್‌ ಮಾಡಿದ್ರೆ ಬೆಸ್ಟ್?

By Suvarna News  |  First Published Nov 11, 2022, 4:52 PM IST

ಮಧುಮೇಹಿಗಳು ಹೇಗಾದರೂ ಸಕ್ಕರೆ ಮಟ್ಟ ಕಡಿಮೆ ಮಾಡಿಕೊಳ್ಳುವ ಗುರಿ ಹೊಂದಿರುತ್ತಾರೆ. ಹೀಗಾಗಿ, ಸಾಮಾನ್ಯವಾಗಿ ಬೆಳಗ್ಗೆ ವಾಕಿಂಗ್‌, ವ್ಯಾಯಾಮ ಮಾಡುತ್ತಾರೆ. ಆದರೆ, ಮಧುಮೇಹಿಗಳು ಬೆಳಗಿನ ವಾಕ್‌ ಗಿಂತ ಮಧ್ಯಾಹ್ನದ ಬಳಿಕ, ಸಂಜೆ ಹಾಗೂ ರಾತ್ರಿ ಊಟದ ಬಳಿಕ ವಾಕಿಂಗ್‌ ಮಾಡುವುದು ಅತ್ಯುತ್ತಮ ಎನ್ನುತ್ತಾರೆ ತಜ್ಞರು. 
 


ದಿನವೂ ಬೆಳಗ್ಗೆ ಸರಿಯಾದ ಸಮಯಕ್ಕೆ ವಾಕ್‌, ಯೋಗ, ಧ್ಯಾನ ರೂಢಿಸಿಕೊಂಡು, ಬಳಿಕ ಸಮಯಕ್ಕೆ ಸರಿಯಾಗಿ ಆಹಾರ ಸೇವಿಸುವವರು ಬೇರ್ಯಾರೂ ಅಲ್ಲ, ಮಧುಮೇಹಿಗಳು. ಆರೋಗ್ಯದ ಬಗ್ಗೆ ಸ್ವಲ್ಪ ಕಾಳಜಿ ಇರುವ ಮಧುಮೇಹಿಗಳಾಗಿದ್ದರೆ ಖಂಡಿತವಾಗಿ ಅವರ ದಿನಚರಿ ಹೀಗೆಯೇ ಇರುತ್ತದೆ. ಬೆಳಗ್ಗೆ ಎದ್ದಾಕ್ಷಣ ಒಂದಿಷ್ಟು ದೈಹಿಕ ಚಟುವಟಿಕೆ ಮಾಡುತ್ತಾರೆ ಅಥವಾ ಬಲವಂತವಾಗಿಯಾದರೂ ಅವರ ಸಮೀಪವರ್ತಿಗಳು ಅವರಿಂದ ವ್ಯಾಯಾಮ ಮಾಡಿಸುತ್ತಾರೆ. ಆದರೆ, ಹೊಸ ಅಧ್ಯಯನವೊಂದು ಇದೀಗ ಬೇರೆಯದೇ ಆದ ವಿಚಾರವನ್ನು ಹೇಳಿದೆ. ಅದರ ಪ್ರಕಾರ, ಬೆಳಗ್ಗಿನ ವಾಕಿಂಗ್‌ ಗಿಂತ ಸಂಜೆ ಹಾಗೂ ಮಧ್ಯಾಹ್ನದ ಬಳಿಕ ವಾಕಿಂಗ್‌ ಸೇರಿದಂತೆ ದೈಹಿಕ ಚಟುವಟಿಕೆ ನಡೆಸುವುದು ಮಧುಮೇಹಿಗಳ ಆರೋಗ್ಯಕ್ಕೆ ಉತ್ತಮ. ಮಧ್ಯಾಹ್ನದ ಬಳಿಕ ಹಾಗೂ ಸಂಜೆಯ ಸಮಯದಲ್ಲಿ ವ್ಯಾಯಾಮ ಮಾಡುವುದರಿಂದ ಇನ್ಸುಲಿನ್‌ ಪ್ರತಿರೋಧಕ ತಗ್ಗುತ್ತದೆ. ಬೆಳಗಿನ ಹೊತ್ತು ವ್ಯಾಯಾಮ ಮಾಡುವುದಕ್ಕಿಂತ ಸಂಜೆಯ ಸಮಯದ ವ್ಯಾಯಾಮದಿಂದ ದೇಹದ ಕೆಲವು ವ್ಯವಸ್ಥೆಗೆ ಅನುಕೂಲವಾಗುತ್ತದೆ. ಇನ್ಸುಲಿನ್‌ ಗೆ ಪ್ರತಿರೋಧ ಒಡ್ಡುವ ಕೋಶಗಳ ನಿಯಂತ್ರಣ ಇದರಿಂದ ಸಾಧ್ಯವಾಗುತ್ತದೆ ಎಂದು ತಜ್ಞರು ಹೇಳುತ್ತಾರೆ. 

ಟೈಪ್‌ 2 ಮಧುಮೇಹಿಗಳ (Type 2 Diabetes) ಕೋಶಗಳು (Cells) ಇನ್ಸುಲಿನ್‌ ಗೆ (Insulin) ಪ್ರತಿರೋಧ ಒಡ್ಡುತ್ತವೆ. ಇದೇ ಮುಖ್ಯವಾಗಿ ಅಸಹಜತೆಗೆ (Abnormality) ಕಾರಣವಾಗುತ್ತದೆ. ಆದರೆ, ಸಂಜೆಯ ಸಮಯದಲ್ಲಿ ಹೆಚ್ಚು ಚಟುವಟಿಕೆಯಲ್ಲಿ ನಿರತರಾಗಿದ್ದಾಗ ಈ ಸಮಸ್ಯೆ ಕಡಿಮೆ ಆಗುತ್ತದೆ. ಸಂಶೋಧನೆಯ ಪ್ರಕಾರ, ಕೆಟ್ಟ ಜೀವನಶೈಲಿ (Sedentary Lifestyle) ಅನುಸರಿಸುವವರು ಅಂದರೆ, ದಿನವಿಡೀ ಕುಳಿತು, ಮಲಗಿ, ಆಹಾರ ಸೇವನೆ ಮಾಡುತ್ತ ಸಮಯ ಕಳೆಯುವವರು, ಲಿವರ್‌ ಕೊಬ್ಬಿನ (Liver Fat) ಸಮಸ್ಯೆ ಉಳ್ಳವರು, ಇನ್ಸುಲಿನ್‌ ಗೆ ತೀವ್ರ ಪ್ರತಿರೋಧ ಹೊಂದಿರುವವರು ಸಂಜೆಯ ಹೊತ್ತಿನಲ್ಲಿ ವ್ಯಾಯಾಮ (Exercise) ಮಾಡಿದಾಗ ಹೆಚ್ಚು ಪರಿಣಾಮ ಕಂಡುಬಂದಿದೆ. ಇವರಲ್ಲಿ ಶೇ.5ರಷ್ಟು ಪರಿಣಾಮ ಕಂಡುಬಂದಿದ್ದು, ಅದೇ ರೀತಿಯ ಜೀವನಶೈಲಿ ಹೊಂದಿದವರು ಬೆಳಗಿನ ವೇಳೆ ವ್ಯಾಯಾಮ ಮಾಡಿದಾಗ ಶೇ.3ರಷ್ಟು ಮಾತ್ರವೇ ಪರಿಣಾಮ ಕಂಡುಬಂದಿದೆ. 

Food for Diabetics: ಶುಗರ್ ಇದೆ ಅಂತ ಹೊಟ್ಟೆಗೆ ಕಮ್ಮಿ ಮಾಡ್ಕೋಬೇಡಿ, ಈ ಫುಡ್ ತಿನ್ನಬಹುದು ನೋಡಿ

Tap to resize

Latest Videos

ಮಧುಮೇಹ (Diabetes) ಇಳಿಕೆ
ಅಚ್ಚರಿ ಎಂದರೆ, ಮಧ್ಯಾಹ್ನ 12ರಿಂದ ಸಂಜೆ 6ರ ಅವಧಿಯಲ್ಲಿ ಯಾವಾಗಲಾದರೂ ಮಧ್ಯಮ ಪ್ರಮಾಣ ಹಾಗೂ ತೀವ್ರವಾದ ದೈಹಿಕ ಚಟುವಟಿಕೆ ನಡೆಸಿದವರ ಇನ್ಸುಲಿನ್‌ ಪ್ರತಿರೋಧಕ (Resistance) ಶೇ. 18ರಷ್ಟು ಕಡಿಮೆ ಆದರೆ, ಸಂಜೆ 6 ಗಂಟೆಯಿಂದ ಮಧ್ಯರಾತ್ರಿ 12ರವರೆಗೆ ಚಟುವಟಿಕೆ ನಡೆಸಿದವರಲ್ಲಿ ಈ ಪ್ರಮಾಣ ಶೇ.25ರಷ್ಟು ಕಡಿಮೆ ಆಗಿರುವುದು ದಾಖಲಾಗಿದೆ. ಸರಿಸುಮಾರು 56 ವರ್ಷದ 775 ಜನರ ಮೇಲೆ ಈ ಅಧ್ಯಯನ ನಡೆಸಲಾಗಿತ್ತು. ಮಧುಮೇಹದ ಮಟ್ಟವೂ ಕಡಿಮೆ ಆಗಿತ್ತು. 
ದಿನವಿಡೀ ಕುಳಿತುಕೊಂಡು ಕೆಲಸ ಮಾಡುವ ಜೀವನಶೈಲಿ ಅತ್ಯಂತ ಕೆಟ್ಟದ್ದೆಂದು ಎಲ್ಲರಿಗೂ ಗೊತ್ತು. ಆದರೇನು ಮಾಡುವುದು? ಕಚೇರಿಗಳಲ್ಲಿ ಕುಳಿತು ಕೆಲಸ ಮಾಡುವವರಿಗೆ ಇದು ಅನಿವಾರ್ಯ. ಆದರೆ, ಇಂಥವರು ಕೇವಲ ಬೆಳಗ್ಗಿನ ವಾಕ್‌ (Walk), ವ್ಯಾಯಾಮ ಮಾಡುವುದು ಸಾಕಾಗುವುದಿಲ್ಲ. ಸಾಮಾನ್ಯವಾಗಿ, ಮಧುಮೇಹಿಗಳು ವಾರಕ್ಕೆ ಇಂತಿಷ್ಟು ಗಂಟೆ ಸಕ್ರಿಯವಾಗಿ ಇರಬೇಕೆಂದು ಪ್ರಯತ್ನಿಸುತ್ತಾರೆ. ಆದರೆ, ಇದು ಅಷ್ಟು ಸೂಕ್ತವಾದ ಪದ್ಧತಿ ಅಲ್ಲ. ಏಕೆಂದರೆ, ಅವರು ಬೆಳಗಿನ ಸಮಯದಲ್ಲಿ ಮಾತ್ರವೇ ಹೆಚ್ಚು ಸಕ್ರಿಯವಾಗಿದ್ದು, ಬಳಿಕ ದಿನವಿಡೀ ಹೆಚ್ಚು ತಲೆಕೆಡಿಸಿಕೊಳ್ಳಲು ಹೋಗುವುದಿಲ್ಲ. 

Type 3 Diabetes ಕಾಡೋದು ಯಾವಾಗ? ಲಕ್ಷಣಗಳು ಏನಿರುತ್ತೆ?

ಯಾವಾಗ ವಾಕಿಂಗ್‌ ಬೆಸ್ಟ್‌?
ಮಧ್ಯಾಹ್ನ ಊಟದ (Midday Meal) ಬಳಿಕ 5-10 ನಿಮಿಷಗಳ ಅವಧಿಯ ನಡಿಗೆ ಅತ್ಯುತ್ತಮ. ಇದರಿಂದ ಮಧುಮೇಹಿಗಳಿಗೆ ಭಾರೀ ಅನುಕೂಲವಾಗುತ್ತದೆ. ಸಕ್ಕರೆ ಮಟ್ಟ (Sugar Level) ಗಮನಾರ್ಹ ಪ್ರಮಾಣದಲ್ಲಿ ಕಡಿಮೆ ಆಗುತ್ತದೆ. ಹಾಗೆಯೇ, ರಾತ್ರಿ ಊಟವಾದ ಬಳಿಕ ವಾಕಿಂಗ್‌ ಮಾಡುವುದು ಸಹ ಪರಿಣಾಮಕಾರಿ ಎನ್ನಲಾಗುತ್ತದೆ. ಬೆಳಗಿನ ಸಮಯದಲ್ಲಿ ಮನೆಯೊಳಗೆ ಚಿಕ್ಕಪುಟ್ಟ ವ್ಯಾಯಾಮ, ಸಂಜೆಯಲ್ಲೂ ವ್ಯಾಯಾಮ, ಮಧ್ಯಾಹ್ನ ಮತ್ತು ರಾತ್ರಿ ಊಟವಾದ ಬಳಿಕ ನಡಿಗೆ ಮಾಡುವುದರಿಂದ ಮಧುಮೇಹಿಗಳಲ್ಲಿ ಸಕ್ಕರೆ ಪ್ರಮಾಣ ಇಳಿಮುಖವಾಗುತ್ತದೆ ಎಂದು ತಜ್ಞರು ಹೇಳುತ್ತಾರೆ. 

click me!