
ಇಂಗ್ಲೆಂಡ್(ಸೆ.22): ವೈದ್ಯ ಲೋಕ ಅದೆಷ್ಟು ಮುಂದುವರೆದಿದೆ ಎಂದರೆ ಮಾನವನ ರೋಗಗಳಿಗೇನು? ಪ್ರಾಣಿ, ಜಲಚರಗಳ ರೋಗಗಳಿಗೂ ಇದೀಗ ವೈದ್ಯರು ಚಿಕಿತ್ಸೆ ನೀಡುತ್ತಾರೆ.
ಅದರಂತೆ ಇಂಗ್ಲೆಂಡ್’ನ ಬ್ರಿಸ್ಟಸ್’ನ ವೈದ್ಯೆ ಸೋನ್ಯಾ ಮೈಲ್ಸ್ ಕೇವಲ 1 ಗ್ರಾಂ ತೂಕದ ಮೌಲಿ ಪ್ರಜಾತಿಯ ಗೋಲ್ಡ್ ಫಿಶ್’ಗೆ ಶಸ್ತ್ರ ಚಿಕಿತ್ಸೆ ಮಾಡಿ ಮನೆ ಮಾತಾಗಿದ್ದಾರೆ.
1 ಗ್ರಾಂ ತೂಕದ ಗೋಲ್ಡ್ ಫಿಶ್ ಹೊಟ್ಟೆಯಲ್ಲಿದ್ದ ಟ್ಯೂಮರ್’ನ್ನು ಸೋನ್ಯಾ ಮೈಲ್ಸ್ ಯಶಸ್ವಿಯಾಗಿ ತೆಗೆದಿದ್ದು, ಈ ಮೀನು ಇದೀಗ ವಿಶ್ವದ ಅತ್ಯಂತ ಚಿಕ್ಕ ರೋಗಿ ಎಂಬ ಕುಖ್ಯಾತಿಗೆ ಪಾತ್ರವಾಗಿದೆ.
ಒಂದು ಸಣ್ಣ ಪೈಪ್ ಬಳಸಿ ಗೋಲ್ಡ್ ಫಿಶ್ ಟ್ಯೂಮರ್’ನ್ನು ಹೊರ ತೆಗೆಯಲಾಗಿದ್ದು, 40 ನಿಮಿಷಗಳ ಈ ಆಪರೇಶನ್’ಗಾಗಿ ಒಟ್ಟು 8,800 ರೂ. ಖರ್ಚು ಮಾಡಲಾಗಿದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.