ಬಿಟೌನ್ ಬೆಡಗಿಯರ ಇಮ್ಯೂನಿಟಿ ಮಂತ್ರ, ಹೀಗ್ ಮಾಡಿ ಸ್ಟ್ರಾಂಗ್ ಆಗಿ

By Suvarna News  |  First Published Jul 17, 2020, 3:06 PM IST

ಮಲೈಕಾ ಅರೋರಾಳಿಂದ ಹಿಡಿದು ಅನುಷ್ಕಾ ಶರ್ಮಾಳವರೆಗೆ ಬಾಲಿವುಡ್ ಬೆಡಗಿಯರೆಲ್ಲ ಸೋಷ್ಯಲ್ ಮೀಡಿಯಾದಲ್ಲಿ ತಾವು ಸೇವಿಸುತ್ತಿರುವ ಇಮ್ಯುನಿಟಿ ಬೂಸ್ಟರ್ ಬಗ್ಗೆ ಹಂಚಿಕೊಳ್ಳುತ್ತಿದ್ದಾರೆ. 


ಉತ್ತಮ ರೋಗ ನಿರೋಧಕ ವ್ಯವಸ್ಥೆ ಹೊಂದುವುದು ಅತ್ಯಗತ್ಯ. ಅದರಲ್ಲೂ ಈ ಕೊರೋನಾ ಕಾಲದಲ್ಲಿ ಎಲ್ಲರೂ ಸಾಧ್ಯವಾದಷ್ಟು ಇಮ್ಯುನಿಟಿ ಹೆಚ್ಚಿಸಿಕೊಳ್ಳುವ ಪ್ರಯತ್ನದಲ್ಲಿ ತೊಡಗಿಸಿಕೊಂಡಿದ್ದಾರೆ. ಕಷಾಯದಿಂದ ಹಿಡಿದು ಹಣ್ಣುತರಕಾರಿಗಳ ಸೇವನೆ ಹೆಚ್ಚಿಸುವವರೆಗೆ ಜನ ಸಾಧ್ಯವಾದಷ್ಟು ಆರೋಗ್ಯ ಹೆಚ್ಚಿಸಿಕೊಳ್ಳುವತ್ತ ಗಮನ ಹರಿಸುತ್ತಿದ್ದಾರೆ. ಉತ್ತಮ ಆಹಾರ, ನಿದ್ರೆ, ವ್ಯಾಯಾಮ, ಸಕ್ಕರೆಗೆ ಮಿತಿ, ಒತ್ತಡ ನಿರ್ವಹಣೆ, ಹೈಡ್ರೇಶನ್ ಮುಂತಾದ ಅಭ್ಯಾಸಗಳು ಇಮ್ಯುನಿಟಿ ಹೆಚ್ಚಿಸುತ್ತವೆ. 

ವೈದ್ಯರು, ಆಯುಷ್ ಇಲಾಖೆ ಸೇರಿದಂತೆ ಹಲವು ತಜ್ಞರು ನೈಸರ್ಗಿಕವಾಗಿ ಇಮ್ಯುನಿಟಿ ಹೆಚ್ಚಿಸಿಕೊಳ್ಳಲು ಏನು ಮಾಡಬೇಕೆಂಬ ಕುರಿತು ಸಲಹೆಗಳನ್ನೂ ನೀಡುತ್ತಲೇ ಇದ್ದಾರೆ. ಕಲ್ಲುಗುಂಡಿನಂತೆ ಫಿಟ್ ಆಗಿರುವ ಬಾಲಿವುಡ್ ಸೆಲೆಬ್ರಿಟಿಗಳು ಕೂಡಾ ಕೆಲವು ಇಮ್ಯುನಿಟಿ ಬೂಸ್ಟರ್ ರೆಸಿಪಿಯನ್ನು ಸೋಷ್ಯಲ್ ಮೀಡಿಯಾಗಳಲ್ಲಿ  ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಿದ್ದಾರೆ. ಅಂಥ ಕೆಲ ಟಿಪ್ಸ್ ಇಲ್ಲಿವೆ. 

ಲಾಕ್‌ಡೌನ್‌ ಸಮಯಕ್ಕಾಗಿ ಮಸ್ಟ್‌ ಟ್ರೈ ಸರಳ ರೆಸಿಪಿಗಳು

Tap to resize

Latest Videos

ಮಲೈಕಾ ಅರೋರಾ
46ನೇ ವಯಸ್ಸಿನಲ್ಲೂ ಹದಿಹರೆಯದವರಂತೆ ದೇಹದ ಫಿಟ್ನೆಸ್ ಕಾಪಾಡಿಕೊಂಡಿರುವ ಮಲೈಕಾ ಅರೋರಾ ತನ್ನ ಇಮ್ಯೂನಿಟಿ ಬೂಸ್ಟರ್ ರೆಸಿಪಿಯನ್ನು ಇನ್ಸ್ಟಾದಲ್ಲಿ ಹಂಚಿಕೊಂಡಿದ್ದಾಳೆ. ರೆಸಿಪಿ ವಿಡಿಯೋದಲ್ಲಿ ಮಲೈಕಾ ನೆಲ್ಲಿಕಾಯಿ, ಅರಿಶಿನ, ಕಾಳುಮೆಣಸಿನ ಪುಡಿ, ಶುಂಠಿ ಬೇರು ಹಾಗೂ ಆ್ಯಪಲ್ ಸೈಡರ್ ವಿನೆಗರ್‌ನ್ನು ಬ್ಲೆಂಡ್ ಮಾಡಿ ಸೇವಿಸುತ್ತಾಳೆ. ಜನರು ವಾಣಿಜ್ಯ ಉತ್ಪನ್ನಗಳನ್ನು ಬಳಸುವ ಬದಲು ಹೀಗೆ ಮನೆಯಲ್ಲೇ ತಯಾರಿಸಿಕೊಂಡ ಪರಂಪರಾಗತ ಆರ್ಗ್ಯಾನಿಕ್ ರೆಸಿಪಿ ಸೇವಿಸಬೇಕೆಂದು ಕೇಳಿಕೊಂಡಿದ್ದಾಳೆ. 

ಅನುಷ್ಕಾ ಶರ್ಮಾ
ಅನುಷ್ಕಾ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಜೋಡಿ ಕೂಡಾ ಫಿಟ್ನೆಸ್‌ಗಾಗಿ ತಮ್ಮದೇ ಫಾರ್ಮುಲಾ ಕಂಡುಕೊಂಡಿದ್ದಾರೆ. ಅವರು ಬೆಳಗ್ಗೆ ಹಾಲಿಗೆ ಅರಿಶಿನ ಹಾಕಿಕೊಂಡು ಸೇವಿಸುವ ಅಭ್ಯಾಸ ಹೊಂದಿದ್ದಾರೆ. ನಂತರದಲ್ಲೂ ಅರಿಶಿನ, ಶುಂಠಿ ಹಾಗೂ ಕಾಳುಮೆಣಸು ಹಾಕಿ ತಯಾರಿಸಿದ ಟೀ ಸೇವಿಸುತ್ತಾರಂತೆ. ಇದೆಲ್ಲದರ ಜೊತೆಗೆ ಬಹಳಷ್ಟು ನೀರು ಕುಡಿಯುತ್ತಾರೆ, ಕೆಲವೊಮ್ಮೆ ನೀರಿಗೆ ನಿಂಬೆರಸ ಹಾಕಿಕೊಂಡು ಸೇವಿಸುತ್ತಾರೆ. 

ಸೊನಾಲಿ ಬೇಂದ್ರೆ
ತನಗೆ ಕ್ಯಾನ್ಸರ್ ಎಂದು ತಿಳಿದಾಗಿನಿಂದ, ಅಂದರೆ ಕಳೆದೆರಡು ವರ್ಷಗಲಿಂದ ಸೊನಾಲಿ ಬೇಂದ್ರೆ ಇಮ್ಯುನಿಟಿ ಹೆಚ್ಚಿಸಿಕೊಳ್ಳಲು ಒಂದೇ ರೆಸಿಪಿಯನ್ನು ಬಳಸುತ್ತಾಳಂತೆ. ಅದೆಂದರೆ ಪಾಲಕ್, ವಾಲ್‌ನಟ್, ನೆಲ್ಲಿಕಾಯಿ, ಕ್ಯಾರೆಟ್, ಅರಿಶಿನ, ಶುಂಠಿ, ಏಪ್ರಿಕಾಟ್, ಕ್ರ್ಯಾನ್‌ಬೆರೀಸ್, ಬಾದಾಮಿ, ಚಕ್ಕೆ ಹಾಗೂ ಸೇಬು ಸೇರಿಸಿ ತಯಾರಿಸಿದ ಸ್ಮೂತಿ. ಇದನ್ನು ಪ್ರತಿ ದಿನ ಸೇವಿಸುವ ಜೊತೆಗೆ ಸಾಧ್ಯವಾದಷ್ಟು ಬಿಸಿ ನೀರು ಕುಡಿಯುವಂತೆ ಸಲಹೆ ನೀಡುತ್ತಾಳೆ ಆಕೆ. 

ಬಿಪಾಶಾ ಬಸು
ಕೃಷ್ಣಸುಂದರಿ ಬಿಪಾಶಾ ಕೂಡಾ ಬಹಳ ಫಿಟ್ ನಟಿ ಎಂಬುದರಲ್ಲಿ ಅನುಮಾನವಿಲ್ಲ. ಆಕೆ ತನ್ನ ಆರೋಗ್ಯಕ್ಕಾಗಿ ಪ್ರತಿದಿನ ಅರಿಶಿನ, ಜೀರಿಗೆ, ಧನಿಯಾ, ಶುಂಠಿ, ಕರಿಮೆಣಸು, ಚಕ್ಕೆ ಹಾಗೂ ಏಲಕ್ಕಿಯಿಂದ ತಯಾರಿಸಿದ ಪುಡಿಯನ್ನು ಬಿಸಿನೀರಿಗೆ ಅಥವಾ ದಾಲ್‌ಗೆ ಹಾಕಿಕೊಂಡು ಸೇವಿಸುತ್ತಾಳಂತೆ. 

ರಾಕುಲ್ ಪ್ರೀತ್ ಸಿಂಗ್
ರಾಕುಲ್ ಪ್ರೀತ್ ಸಿಂಗ್ ತನ್ನ ನ್ಯೂಟ್ರಿಶನಿಸ್ಟ್ ರಾಶಿ ಚೌಧರಿ ಹಂಚಿಕೊಂಡ ರೆಸಿಪಿಯನ್ನೇ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾಳೆ. ಅದರಂತೆ ಶುಂಠಿ, ಪೆಪ್ಪರ್, ಅರಿಶಿನ, ಚಕ್ಕೆ, ಲವಂಗವನ್ನು 500 ಎಂಎಲ್ ನೀರಿಗೆ ಹಾಕಿಕೊಂಡು ಅದು ಅರ್ಧದಷ್ಟಾಗುವವರೆಗೆ ಕಾದು, ಬಳಿಕ ಜೇನುತುಪ್ಪ ಸೇರಿಸಿಕೊಂಡು ಕುಡಿಯಬೇಕು. ಕಾಫಿಯ ಬದಲಿಗೆ ಈ ಕಷಾಯ ಅಭ್ಯಾಸ ಮಾಡಿಕೊಳ್ಳುವುದು ಒಳ್ಳೆಯದು ಎಂದು ಅವಳು ಹೇಳಿದ್ದಾಳೆ. 

ಫರ್ಟಿಲಿಟಿ ಹೆಚ್ಚಿಸೋ ಫುಡ್ಸ್... ಮಗು ಬೇಕೆಂದ್ರೆ ಆಹಾರಕ್ಕೆ ಗಮನ ಹರಿಸ ...

ಕರೀನಾ ಕಪೂರ್
ಕರೀನಾ ಉತ್ತಮ ಆರೋಗ್ಯಕ್ಕಾಗಿ ಪಾಲಕ್ ಹಾಗೂ ಸೋರೆಕಾಯಿಯ ಮೇಲೆ ಅವಲಂಬಿತಳಾಗಿದ್ದಾಳಂತೆ. ಆಕೆ ಪಾಲಕ್ ಸೂಪ್ ಹಾಗೂ ಸೋರೆಕಾಯಿಯ ಸೂಪನ್ನು ನಿಯಮಿತವಾಗಿ ಸೇವಿಸುತ್ತಾಳೆ. ಇವುಗಳಲ್ಲಿ ಹಲವಾರು ವಿಟಮಿನ್‌ಗಳು, ಮಿನರಲ್‌ಗಳು ಹಾಗೂ ಆ್ಯಂಟಿಆಕ್ಸಿಡೆಂಟ್‌ಗಳಿವೆ.


 

click me!