Health Food: ಮಕ್ಕಳಿಗೆ ರಾಗಿ ನೀಡಿ, ಆರೋಗ್ಯ ಕಾಪಾಡಿ

By Suvarna News  |  First Published Aug 25, 2022, 12:13 PM IST

ಮಕ್ಕಳ ಆರೋಗ್ಯ ಪಾಲಕರ ದೊಡ್ಡ ಚಿಂತೆ. ಮಕ್ಕಳಿಗೆ ಪೌಷ್ಟಿಕ ಆಹಾರ ನೀಡಲು ಪ್ರತಿಯೊಬ್ಬರೂ ಬಯಸ್ತಾರೆ. ಆದ್ರೆ ಏನೇನು ನೀಡ್ಬೇಕು ಎಂಬ ಚಿಂತೆ ಕಾಡುತ್ತದೆ. ಮಕ್ಕಳ ದೇಹ ಬಲ ಪಡೆಯಬೇಕೆಂದ್ರೆ ರಾಗಿ ಕೊಟ್ಟು ನೋಡಿ.
 


ಮಕ್ಕಳ ಆರೋಗ್ಯ ಬಹಳ ಮುಖ್ಯ. ಆರು ತಿಂಗಳ ನಂತ್ರ ಮಕ್ಕಳಿಗೆ ತಾಯಿ ಹಾಲಿನ ಜೊತೆಗೆ ಬೇರೆ ಆಹಾರ ನೀಡುವಂತೆ ವೈದ್ಯರು ಸಲಹೆ ನೀಡ್ತಾರೆ. ಆದ್ರೆ ಯಾವುದನ್ನು ಮಕ್ಕಳಿಗೆ ನೀಡ್ಬೇಕು ಎಂಬ ಪ್ರಶ್ನೆ ಪಾಲಕರನ್ನು ಕಾಡುತ್ತದೆ. ಮಕ್ಕಳು ಬೇಗ ಅನಾರೋಗ್ಯಕ್ಕೆ ಒಳಗಾಗ್ತಾರೆ. ಮಕ್ಕಳಿಗೆ ನೀಡುವ ಕೆಲವೊಂದು ಆಹಾರ ಜೀರ್ಣವಾಗದೆ ಸಮಸ್ಯೆಯಾಗುತ್ತದೆ. ಹಾಗಿರುವಾಗ ಮಕ್ಕಳಿಗೆ ಏನು ನೀಡ್ಬೇಕು ಎಂಬ ಪ್ರಶ್ನೆ ಕಾಡುತ್ತದೆ. ಮಕ್ಕಳು ದೊಡ್ಡವರಾದಂತೆ ಅವರಿಗೆ ಹೆಚ್ಚಿನ ಶಕ್ತಿಬೇಕಾಗುತ್ತದೆ. ಬೆಳೆಯುವ ಮಕ್ಕಳಿಗೆ ರಾಗಿ  ತುಂಬಾ ಪ್ರಯೋಜನಕಾರಿ. ಇದು ಪೋಷಕಾಂಶಗಳಿಂದ ಸಮೃದ್ಧವಾಗಿದೆ. ರಾಗಿಯಲ್ಲಿ ಪ್ರೋಟೀನ್, ಕ್ಯಾಲ್ಸಿಯಂ, ಫೈಬರ್, ಕಾರ್ಬೋಹೈಡ್ರೇಟ್‌ಗಳಿದ್ದು ದೇಹಕ್ಕೆ ತ್ವರಿತ ಶಕ್ತಿ ನೀಡುತ್ತದೆ. ರಾಗಿಯನ್ನು ಮಗುವಿಗೆ 6 ತಿಂಗಳ ನಂತರ ಸುಲಭವಾಗಿ ನೀಡಬಹುದು. ಮಕ್ಕಳಿಗೆ ರಾಗಿ ನೀಡುವು ಮೊದಲು ವೈದ್ಯರ ಜೊತೆ ಮಾತನಾಡುವುದು ಒಳ್ಳೆಯದು. ಮಗುವಿನ ಸರ್ವಾಂಗೀಣ ಬೆಳವಣಿಗೆಗೆ ರಾಗಿ ತುಂಬಾ ಒಳ್ಳೆಯದು. ಮಕ್ಕಳಿಗೆ ರಾಗಿ ತಿನ್ನುವುದರಿಂದ ಆಗುವ ಲಾಭಗಳು ಏನು ಎಂಬುದನ್ನು ನಾವಿಂದು ಹೇಳ್ತೇವೆ.

ಮಕ್ಕಳ (Children) ಆರೋಗ್ಯಕ್ಕೆ ರಾಗಿ (Millet) : 

Tap to resize

Latest Videos

ಬಲಪಡೆಯುವ ಮೂಳೆ (Bone) : ರಾಗಿ ಮೂಳೆಗಳನ್ನು ಗಟ್ಟಿಗೊಳಿಸುತ್ತದೆ. ಮಕ್ಕಳಿಗೆ ರಾಗಿಯನ್ನು ನೀಡುವುದರಿಂದ ಅವರ ಮೂಳೆಗಳು ಬಲಗೊಳ್ಳುತ್ತವೆ ಮತ್ತು ಅವರ ಒಟ್ಟಾರೆ ಬೆಳವಣಿಗೆ ಸರಿಯಾಗಿ ನಡೆಯುತ್ತದೆ. ರಾಗಿಯಲ್ಲಿ ವಿಟಮಿನ್ ಡಿ (Vitamin D ) ಕೂಡ ಸಮೃದ್ಧವಾಗಿದೆ, ಇದು ಮೂಳೆಗಳನ್ನು ಆರೋಗ್ಯ (Health) ವಾಗಿಡಲು ಸಹಾಯ ಮಾಡುತ್ತದೆ. ರಾಗಿ ಮೂಳೆ ಮುರಿತದ ಅಪಾಯವನ್ನು ಕಡಿಮೆ ಮಾಡುತ್ತದೆ. ರಾಗಿಯ ನಿಯಮಿತ ಸೇವನೆಯು ಮಕ್ಕಳ ದೇಹದಲ್ಲಿ ಕ್ಯಾಲ್ಸಿಯಂ (Calcium) ಪ್ರಮಾಣವನ್ನು ಹೆಚ್ಚಿಸುತ್ತದೆ. ರಾಗಿಗೆ ಸಕ್ಕರೆ ಅಥವಾ ಬೆಲ್ಲ ಹಾಗಿ ಅಥವಾ ರಾಗಿಗೆ ಉಪ್ಪು ಹಾಕಿ ನೀಡಬಹುದು. 

ರಕ್ತಹೀನತೆಗೆ ರಾಗಿ ಸಹಕಾರಿ : ರಾಗಿಯು ಮಗುವಿನ ದೇಹದಲ್ಲಾಗುವ ರಕ್ತದ ಕೊರತೆಯನ್ನು ನೀಗಿಸುತ್ತದೆ. ವಿಟಮಿನ್ ಸಿ ಕೂಡ ರಾಗಿಯಲ್ಲಿ ಕಂಡುಬರುತ್ತದೆ. ಇದು ದೇಹದಲ್ಲಿ ಕಬ್ಬಿಣವನ್ನು ಹೀರಿಕೊಳ್ಳಲು ಸಹಾಯ ಮಾಡುತ್ತದೆ.  

ಜೀರ್ಣಕ್ರಿಯೆ ಸುಲಭ : ರಾಗಿ ಸುಲಭವಾಗಿ ಜೀರ್ಣವಾಗುತ್ತದೆ. ಹಾಗಾಗಿ ಮಕ್ಕಳಿಗೆ ರಾಗಿಯನ್ನು ಆರಾಮವಾಗಿ ನೀಡಬಹುದು. ಇದರಲ್ಲಿರುವ ಫೈಬರ್ ಮಗುವಿಗೆ ಹೊಟ್ಟೆ ತುಂಬಿದ ಅನುಭವ ನೀಡುತ್ತದೆ. ರಾಗಿಯನ್ನು ಮಕ್ಕಳಿಗೆ ಯಾವಾಗ ಬೇಕಾದರೂ ನೀಡಬಹುದು. ರಾಗಿ ಸೇವನೆ ಮಾಡುವ ಮಕ್ಕಳಿಗೆ ಹೊಟ್ಟೆ ನೋವು ಸೇರಿದಂತೆ ಯಾವುದೇ ಸಮಸ್ಯೆ ಇರುವುದಿಲ್ಲ. ಮಲಬದ್ಧತೆಯ ಸಮಸ್ಯೆ ಇರುವುದಿಲ್ಲ. ಸುಲಭವಾಗಿ ತಿಂದ ಆಹಾರ ಜೀರ್ಣವಾಗುತ್ತದೆ. 

ಬಗೆ ಬಗೆಯ ಚಟ್ನಿ ತಿನ್ನಿ, ಆರೋಗ್ಯ ಚೆನ್ನಾಗಿರುತ್ತೆ

ರಾಗಿಯಲ್ಲಿದೆ ಅವಶ್ಯಕ ಪ್ರೋಟೀನ್ : ಮಕ್ಕಳ ದೇಹದ ಉತ್ತಮ ಬೆಳವಣಿಗೆಗೆ ಪ್ರೋಟೀನ್ ಬಹಳ ಅವಶ್ಯಕ ಅಂಶವಾಗಿದೆ. ಮಕ್ಕಳು ರಾಗಿಯನ್ನು ತಿನ್ನಿವುದರಿಂದ ತ್ವರಿತ ಶಕ್ತಿ ದೊರೆಯುತ್ತದೆ. ರಾಗಿಯನ್ನು ನೀಡುವುದರಿಂದ ಮಕ್ಕಳು ಕಡಿಮೆ ಅನಾರೋಗ್ಯಕ್ಕೆ ಒಳಗಾಗುತ್ತಾರೆ ಮತ್ತು ಮಗುವಿನ ರೋಗನಿರೋಧಕ ಶಕ್ತಿ ಬಲಗೊಳ್ಳುತ್ತದೆ. ರಾಗಿ ಸೇವನೆಯಿಂದ ಮಕ್ಕಳ ಮಾಂಸಖಂಡಗಳು ಬಲಗೊಳ್ಳುತ್ತವೆ.
 
ಶಿಶುಗಳಿಗೆ ರಾಗಿ ನೀಡುವುದ್ರಿಂದ ಆಗುವ ಲಾಭಗಳು :  ಶಿಶುಗಳ ತೂಕ ಹೆಚ್ಚಾಗಲು ರಾಗಿ ಸಹಕಾರಿ.  ರಾಗಿಯಲ್ಲಿ ಪ್ರೋಟೀನ್, ಕ್ಯಾಲ್ಸಿಯಂ, ಫೈಬರ್, ವಿಟಮಿನ್ ಡಿ, ವಿಟಮಿನ್ ಬಿ1 ಇತ್ಯಾದಿಗಳಿವೆ. ಇವೆಲ್ಲವೂ ಮಗುವಿನ ತೂಕವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಮಗುವಿಗೆ ರಾಗಿಯನ್ನು ತಿನ್ನಿಸುವುದು ಮಗುವಿನ ಸರಿಯಾದ ಬೆಳವಣಿಗೆಗೆ ಸಹಾಯ ಮಾಡುತ್ತದೆ.

Health Tips : ಟೀ ಕುಡಿತಿದ್ದಂತೆ ಹೊಟ್ಟೆ ಊದಿಕೊಂಡ್ರೆ ಡಾಕ್ಟರ್ ಹತ್ರ ಹೋಗಿ

ಗೋಧಿಯು ಅಂಟುರಹಿತ ಆಹಾರ ಪದಾರ್ಥವಾಗಿರುವುದರಿಂದ ಅಲರ್ಜಿ ಇರುವ ಮಕ್ಕಳಿಗೆ ರಾಗಿ ಪ್ರಯೋಜನಕಾರಿಯಾಗಿದೆ. ಮೊದಲ ಬಾರಿಗೆ ಮಗುವಿಗೆ ಸ್ವಲ್ಪ ಪ್ರಮಾಣದ ರಾಗಿಯನ್ನು ಮಾತ್ರ ನೀಡಿ. ಮಗುವಿಗೆ ರಾಗಿ ಕಿಚಡಿ ಮತ್ತು ಗಂಜಿ ನೀಡಬಹುದು.

click me!