Winter Care: ಚಳಿಗಾಲದ ತ್ವಚೆ ಸಮಸ್ಯೆಗೆ ಸಾಸಿವೆ ಎಣ್ಣೆ ಬಳಸಿ ನೋಡಿ

By Suvarna NewsFirst Published Jan 17, 2023, 6:01 PM IST
Highlights

ಸಾಸಿವೆ(Mustard) ಕೇವಲ ಒಗ್ಗರಣೆಗಷ್ಟೇ ಬಳಸಲಾಗುತ್ತದೆ. ಸಾಸಿವೆಗೆ ಅಡುಗೆಯಲ್ಲಿ ಬಹಳ ಮಹತ್ವದ ಸ್ಥಾನವಿದೆ. ಆಯುರ್ವೇದದಲ್ಲಿ(Ayurveda) ಸಾಸಿವೆ ಎಣ್ಣೆಯನ್ನು ಔಷಧವಾಗಿ ಬಳಸಲಾಗುತ್ತದೆ. ಚಳಿಗಾಲದಲ್ಲಿ(Winter) ಸಾಸಿವೆ ಎಣ್ಣೆಯನ್ನು ಬಳಸುವುದರಿಂದ ಆರೋಗ್ಯಕ್ಕೆ ಬಹಳ ಲಾಭವಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.

ಅಡುಗೆ ಮನೆಯ ಸಾಂಬರ್ ಬಟ್ಟಲಿನಲ್ಲಿ ಯಾವ ಪದಾರ್ಥ ಇಲ್ಲದಿದ್ದರೂ ಪರವಾಗಿಲ್ಲ ಆದರೆ ಸಾಸಿವೆ(Mustard) ಇದ್ದೇ ಇರುತ್ತದೆ. ಅಡುಗೆ ಪದಾರ್ಥಗಳಲ್ಲಿ ಗುಪ್ತವಾಗಿ(Hidden) ಅಡಗಿ ಕುಳಿತುಕೊಳ್ಳುವ ಈ ಸಾಸಿವೆ ಸದ್ದಿಲ್ಲದೆ ನಮ್ಮ ದೇಹದಲ್ಲಿ ಔಷಧವಾಗಿಯೂ(Medicine) ಕೆಲಸ ಮಾಡುತ್ತದೆ. ಕೆಲವರಿಗೆ ಒಗ್ಗರಣೆ ಇಲ್ಲದಿದ್ದರೆ ಅಡುಗೆ ಅಪೂರ್ಣವಾಗಿರುತ್ತದೆ, ಒಂದು ಚೆಟ್ಟಣಿಯಿಂದ ಹಿಡಿದು ಎಲ್ಲಾ ಪದಾರ್ಥಗಳಿಗೂ ಈ ಸಾಸಿವೆ ಮುಂಚೂಣಿಯಲ್ಲಿರುತ್ತದೆ. ಬಹುತೇಕ ಉಪ್ಪಿನಕಾಯಿಗಳಿಗೆ(Pickle) ಸಾಸಿವೆ ಎಣ್ಣೆಯನ್ನು ಬಳಸುತ್ತಾರೆ. ಇದರಿಂದ ಉಪ್ಪಿನಕಾಯಿ ಬಹುಬೇಗ ಹಾಳಾಗುವುದಿಲ್ಲ ಜೊತೆಗೆ ರುಚಿಯೂ(Taste) ಹೆಚ್ಚಿಸಲು ಸಹಾಯ ಮಾಡುತ್ತದೆ. ಅಷ್ಟೇ ಅಲ್ಲದೆ ಕೆಲವು ಆಚರಣೆಗಳಲ್ಲೂ ಮಹತ್ವ ಪಡೆದಿರುವ ಈ ಸಾಸಿವೆಯು ಪುಟ್ಟ ಮಕ್ಕಳಿಗೆ ದೃಷ್ಟಿ ತೆಗೆಯಲೂ ಸಹ ಬಳಸಲಾಗುತ್ತದೆ.

ಆಹಾರದ ರುಚಿಯನ್ನು ಹೆಚ್ಚಿಸುವ ಈ ಸಾಸಿವೆ ಆರೋಗ್ಯಕ್ಕೆ ಬಹಳ ಒಳ್ಳೆಯ ಸ್ನೇಹಿತ. ಇದು ವಿವಿಧ ಆರೋಗ್ಯ ಸಂಬAಧಿ ಸಮಸ್ಯೆಗಳನ್ನು ನಿವಾರಿಸುವ ಗುಣವನ್ನು ಹೊಂದಿದೆ. ಸಾಸಿವೆಯ ಎಣ್ಣೆಯನ್ನು ಬಹಳ ಮುಖ್ಯವಾಗಿ ಸೌಂದರ್ಯ ವಲಯಗಳಲ್ಲಿ ಬಳಸಲಾಗುತ್ತದೆ. ಅದರಲ್ಲೂ ಚಳಿಗಾಲದಲ್ಲಿ ಈ ಎಣ್ಣೆಯ ಪ್ರಯೋಜನಗಳು ತ್ವಚೆಗೆ ತುಂಬಾ ಉಯುಕ್ತವಾಗಿದೆ.

Shani Dev Puja: ಶನಿಗೆ ಏಕೆ ಸಾಸಿವೆ ಎಣ್ಣೆಯನ್ನೇ ಅರ್ಪಿಸಲಾಗುತ್ತದೆ?

ತ್ವಚೆ ಹಾಗೂ ಸಾಸಿವೆ ಎಣ್ಣೆ ಪ್ರಯೋಜನಗಳು
1. ಮುಲ್ತಾನಿ ಮಿಟ್ಟಿ(Multhani mitti) ಅಂದರೆ ಜೇಡಿಮಣ್ಣಿನೊಂದಿ ಸಾಸಿವೆ ಎಣ್ಣೆಯನ್ನು ಬಳಸುವುದರಿಂದ ತ್ವಚೆಗೆ ಬಹಳ ಪರಿಣಾಮಕಾರಿಯಾಗಿದೆ. ಸಾಸಿವೆ ಮತ್ತು ಸಸ್ಯಜನ್ಯ ಎಣ್ಣೆಯನ್ನು ಇದಕ್ಕೆ ಸೇರಿಸಬಹುದು. ಮೊದಲು ಮುಲ್ತಾನಿ ಮಣ್ಣನ್ನು ಸ್ವಲ್ಪ ಸಮಯ ನೀರಿನಲ್ಲಿ ನೆನೆಸಿಡಿ. ನಂತರ ಇದಕ್ಕೆ ಸಾಸಿವೆ ಎಣ್ಣೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಈ ಮಿಶ್ರಣವನ್ನು ಮುಖಕ್ಕೆ(Face Mask) ಮಾಸ್ಕನಂತೆ ಹಚ್ಚಿಕೊಳ್ಳಿ. ಒಂದರ್ಧಗAಟೆಗಳ ಕಾಲ ಬಿಟ್ಟು ಉಗುರುಬೆಚ್ಚಗಿನ(Warm Water) ನೀರಿನಿಂದ ಮುಖ ತೊಳೆಯಿರಿ. ಇದು ಚರ್ಮವನ್ನು ಹಗುರಗೊಳಿಸಲು ಸಹಾಯ ಮಾಡುತ್ತದೆ.

2. ಸಾಸಿವೆ ಎಣ್ಣೆ ಮತ್ತು ಪುದೀನಾದೊಂದಿಗೆ(Mint) ಬೆರೆಸಿ ಮುಖ ಅಥವಾ ಇಡೀ ದೇಹಕ್ಕೆ ಹಚ್ಚಬಹುದು. ಎಣ್ಣೆಯನ್ನು ನೇರವಾಗಿ ಹಚ್ಚುವುದರಿಂದ ತ್ವಚೆಯು ಕಾಂತಿಯುತವಾಗಿರುತ್ತದೆ. 

3. ಚಳಿಗಾಲದಲ್ಲಿ ಮೈ ಕೈ ಒಡೆಯುವುದು ಸಾಮಾನ್ಯ. ಅದರಲ್ಲೂ ತುಟಿ ಒಡೆದಾಗ ಉರಿ, ನಗುವು ಹಾಗೂ ಬಾಯಿ ಬಿಡಲೂ ಸಾಧ್ಯವಾಗುವುದಿಲ್ಲ. ಈ ಸಮಸ್ಯೆಗೆ ಸಾಸಿವೆ ಎಣ್ಣೆಯು ಉತ್ತಮ ಔಷಧವಾಗಿದೆ. ತುಟಿ ಒಡೆದಿದ್ದರೆ ರಾತ್ರಿ ಮಲಗುವಾಗ ಒಂದು ಹನಿ ಸಾಸಿವೆ ಎಣ್ಣೆಯನ್ನು ಹೊಕ್ಕಳಿಗೆ ಹಾಕಿದರೆ ಒಡೆದ ತುಟಿಗಳು ನಿಲ್ಲುತ್ತವೆ.

Health Tips: ಸಾಸಿವೆ ಎಣ್ಣೆಯಿಂದ ಮಸಾಜ್ ಮಾಡಿ ನೋಡಿ ಏನೆಲ್ಲ ಬೆನಿಫಿಟ್ಸ್ ಇದೆ ಅಂತ!

4. ಸಾಸಿವೆ ಎಣ್ಣೆಯಿಂದ ದೇಹಕ್ಕೆ ಮಸಾಜ್ ಮಾಡಿ ಬಿಸಿಲಿನಲ್ಲಿ ನಿಂತರೆ ಚರ್ಮದ ಸಮಸ್ಯೆ ನಿವಾರಣೆಯಾಗುತ್ತದೆ. 100 ಗ್ರಾಂ ಸಾಸಿವೆ ಎಣ್ಣೆಯಲ್ಲಿ ಒಂದು ಬೆಳೆ ಬೆಳ್ಳುಳ್ಳಿ(Garlic) ಹಾಕಿ ಚೆನ್ನಾಗಿ ಕುದಿಸಿ. ತಣ್ಣಗಾದಾಗ ಅದನ್ನು ಸೋಸಿ ಕೂದಲಿಗೆ ಹಚ್ಚಿ ಮಸಾಜ್ ಮಾಡುವುದರಿಂದ ಕೂದಲು ಉದುರುವುದು ತಡೆಯಬಹುದು.

5. ಚಳಿಗಾಲದಲ್ಲಿ ಕಾಲಿನ ಹಿಮ್ಮಡಿ ಒಡೆಯುವುದು ಸಾಮಾನ್ಯ. ಕೆಲವೊಮ್ಮೆ ಒಡೆದ ಹಿಮ್ಮಡಿಯಿಂದ ರಕ್ತವೂ(Blood) ಬರುತ್ತದೆ. ಹೀಗಿರುವಾಗ ಬೆಚ್ಚಗಿನ ಸಾಸಿವೆ ಎಣ್ಣೆಯನ್ನು ಬೆಳ್ಳುಳ್ಳಿಯೊಂದಿಗೆ ಬೆರೆಸಿ ಒಡೆದ ಹಿಮ್ಮಡಿಗಳ ಮೇಲೆ ಹಚ್ಚುವುದರಿಂದ ಈ ಸಮಸ್ಯೆ ದೂರವಾಗುತ್ತದೆ.

6. ಫಂಕ್ಷನ್‌ಗಳಲ್ಲಿ ಮೇಕಪ್(Makeup) ಮಾಡಿಕೊಂಡ ನಂತರ ಅದನ್ನು ತೆಗೆಯುವುದು ಬಹುತೇಕ ಜನರಿಗೆ ಸಮಸ್ಯೆ. ಅಲ್ಲದೆ ಮೇಕಪ್ ತೆಗೆದ ಮೇಲೆ ಕಾಣಿಸಿಕೊಳ್ಳುವ ಮುಖದ ಮೇಲಿನ ದದ್ದುಗಳು(Acne), ಒರಟುತನ ಸಾಮಾನ್ಯ. ಹಾಗಾಗಿ ಮೇಕಪ್ ಅನ್ನು ತೆಗೆಯಲು ಸಾಸಿವೆ ಎಣ್ಣೆಯನ್ನು ಮೇಕಪ್ ರಿಮೂವರ್(Remover) ಆಗಿ ಬಳಸಬಹುದು. ತ್ವಚೆಯ ಮೇಲೆ ಕಪ್ಪು ಕಲೆಗಳಿದ್ದರೆ ಸಾಸಿವೆ ಎಣ್ಣೆಯನ್ನು ಕಡಲೆ ಹಿಟ್ಟಿಗೆ(Besan Floor) ಸೇರಿಸಿ ಪ್ಯಾಕ್ ಆಗಿಯೂ ಹಚ್ಚಬಹುದು. ಈ ಪ್ಯಾಕ್ ತ್ವಚೆಯನ್ನು ಪೋಷಿಸುತ್ತದೆ. 

click me!