Beauty Tips for men: ಮಾರುಕಟ್ಟೆಯಲ್ಲಿ ಬಗೆ ಬಗೆಯ ಅಲೋವೆರಾ ಉತ್ಪನ್ನಗಳಿವೆ. ಸೌಂದರ್ಯ ವರ್ಧಕದ ಜೊತೆ ಔಷಧಿಗೂ ಇದನ್ನು ಬಳಸಲಾಗುತ್ತದೆ. ಇದ್ರಲ್ಲಿ ಸಾಕಷ್ಟು ಪೋಷಕಾಂಶವಿದ್ದು, ಇದನ್ನು ಪುರುಷರು ಬಳಸಿದ್ರೆ ಅನೇಕ ಪ್ರಯೋಜನ ಪಡೆಯಬಹುದಾಗಿದೆ.
ಇತ್ತೀಚಿನ ದಿನಗಳಲ್ಲಿ ಅಲೋವೆರಾ (AloeVera)ಕ್ಕೆ ಬೇಡಿಕೆ ಹೆಚ್ಚಾಗಿದೆ. ಅದನ್ನು ಸೌಂದರ್ಯ (Beauty( ವರ್ಧಕಗಳಾಗಿ ಬಳಸಲಾಗ್ತಿದೆ. ಚರ್ಮ (Skin) ಮತ್ತು ಕೂದಲಿನ ಸಮಸ್ಯೆಗಳಿಗೆ ಇದು ರಾಮಬಾಣ ಎನ್ನಬಹುದು. ಅಲೋವೆರಾ ಬಿಸಿ ಗುಣ ಹೊಂದಿದ್ದರೂ, ಇದು ಆರೋಗ್ಯಕ್ಕೆ ತುಂಬಾ ಒಳ್ಳೆಯದೆಂದು ಪರಿಗಣಿಸಲಾಗಿದೆ. ಬಹುತೇಕ ಮಹಿಳೆಯರು ಅಲೋವೆರಾ ಬಳಕೆ ಮಾಡ್ತಾರೆ. ಆದ್ರೆ ಪುರುಷರು ಸೌಂದರ್ಯ ವರ್ದಕಗಳನ್ನು ಬಳಸುವುದು ಕಡಿಮೆ. ಪುರುಷರು ಕೂಡ ಅಲೋವೆರಾವನ್ನು ಬಳಸಬೇಕು. ಇದು ಅವರಿಗೆ ಅನೇಕ ರೀತಿಯಲ್ಲಿ ಪ್ರಯೋಜನವನ್ನು ನೀಡುತ್ತದೆ. ಜೀವಸತ್ವಗಳು, ಖನಿಜಗಳು, ಆಂಟಿಆಕ್ಸಿಡೆಂಟ್‌ಗಳು, ಅಮೈನೋ ಆಮ್ಲಗಳನ್ನು ಅಲೋವೆರಾ ಹೊಂದಿದ್ದು, ಇದು ಆರೋಗ್ಯಕ್ಕೆ ಹಲವು ರೀತಿಯಲ್ಲಿ ಪ್ರಯೋಜ ನೀಡುತ್ತದೆ. ಅಲೋವೆರಾ ಜೆಲ್ ಅನ್ನು ಶವರ್ ಜೆಲ್, ಮಾಯಿಶ್ಚರೈಸರ್, ಶೇವಿಂಗ್ ಕ್ರೀಮ್, ಸನ್‌ಸ್ಕ್ರೀನ್ ಇತ್ಯಾದಿಗಳಲ್ಲಿ ವ್ಯಾಪಕವಾಗಿ ಬಳಸಲಾಗುತ್ತಿದೆ.
ಅಲೋವೆರಾ ಜೆಲ್ ಉರಿಯೂತ, ಬ್ಯಾಕ್ಟೀರಿಯಾ ವಿರೋಧಿ, ಉತ್ಕರ್ಷಣ ನಿರೋಧಕ ಗುಣಲಕ್ಷಣಗಳನ್ನು ಹೊಂದಿದೆ. ಸುಟ್ಟ ಗಾಯಗಳಿಗೆ ಇದನ್ನು ಹಿಂದಿನಿಂದಲೂ ಬಳಸಲಾಗ್ತಿದೆ. ಸನ್ ಬರ್ನ್ ರೂಪದಲ್ಲೂ ಇದು ಬಳಕೆಯಾಗ್ತಿದೆ. ಇದು ಉರಿಯೂತವನ್ನು ಕಡಿಮೆ ಮಾಡುತ್ತದೆ. ಅನೇಕ ಚರ್ಮದ ಸಮಸ್ಯೆಗಳನ್ನು ಗುಣಪಡಿಸುತ್ತದೆ. ಇದು ಕೇವಲ ಸೌಂದರ್ಯ ವರ್ದಕವಲ್ಲ, ಅಲೋವೆರಾ ಜೆಲ್ ಸೇವನೆ ಮಾಡ್ಬಹುದು. ಇದನ್ನು ಜ್ಯೂಸ್ ರೀತಿಯಲ್ಲೂ ಕುಡಿಯಬಹುದು. ಇಂದು ಪುರಷರಿಗೆ ಅಲೋವೆರಾ ಜೆಲ್ ಹೇಗೆ ಪ್ರಯೋಜನಕಾರಿ ಎಂಬುದನ್ನು ಹೇಳ್ತೇವೆ.
ಪುರುಷರಿಗೆ ಅಲೋವೆರಾ ಜೆಲ್ ಪ್ರಯೋಜನಗಳು :
ಸುಕ್ಕಿಗೆ ಮದ್ದು : ಅನೇಕರ ಮುಖದ ಮೇಲೆ ಸುಕ್ಕುಗಳಿರುತ್ತವೆ. ಇದು ಅವರ ಮುಖ ಸೌಂದರ್ಯ ಹಾಳು ಮಾಡುವ ಜೊತೆಗೆ ವಯಸ್ಸಾದಂತೆ ಕಾಣಿಸುತ್ತದೆ. ಅಲೋವೆರಾ ಚರ್ಮದ ಮೇಲಿನ ಸುಕ್ಕುಗಳನ್ನು ತೆಗೆದುಹಾಕುತ್ತದೆ. ಅಲೋವೆರಾದಲ್ಲಿರುವ ಸ್ಟೆರಾಲ್‌ಗಳು ಕಾಲಜನ್ ಮತ್ತು ಹೈಲುರಾನಿಕ್, ಆಮ್ಲದ ಉತ್ಪಾದನೆಯನ್ನು ಉತ್ತೇಜಿಸುತ್ತದೆ. ಇದು ಚರ್ಮವನ್ನು ತೇವಗೊಳಿಸುತ್ತದೆ. ಇದ್ರಿಂದ ಸುಕ್ಕು ಕಡಿಮೆಯಾಗುತ್ತದೆ.
ಸೂರ್ಯನ ಕಿರಣಗಳಿಂದ ರಕ್ಷಣೆ : ಅಲೋವೆರಾ ಜೆಲ್ ಸೂರ್ಯನ ಹಾನಿಕಾರಕ ಯುವಿ ಕಿರಣಗಳಿಂದ ಉಂಟಾಗುವ ಹಾನಿಗಳಿಂದ ನಮ್ಮ ದೇಹವನ್ನು ರಕ್ಷಿಸುತ್ತದೆ. ಕೆಲ ಪುರುಷರು ಬಹಳ ಸಮಯ ಸೂರ್ಯನ ಯುವಿ ಕಿರಣಕ್ಕೆ ಮೈ ಒಡ್ಡಿಕೊಂಡು ಕೆಲಸ ಮಾಡ್ತಾರೆ. ಅದ್ರಿಂದಾಗುವ ಹಾನಿ ತಪ್ಪಿಸಬೇಕೆಂದ್ರೆ ಪುರುಷರು ಅಲೋವೆರಾ ಜೆಲ್ ಅನ್ವಯಿಸಿಕೊಳ್ಳಬೇಕು.
ಅಗತ್ಯಕ್ಕಿಂತ ಹೆಚ್ಚು ನಿದ್ದೆ ಮಾಡುವುದು ಸಹ ಆರೋಗ್ಯಕ್ಕೆ ಅಪಾಯ
ಮೊಡವೆಗೆ ಪರಿಹಾರ : ಅಲೋವೆರಾ ಸ್ಯಾಲಿಸಿಲಿಕ್ ಆಮ್ಲವನ್ನು ಹೊಂದಿದೆ. ಇದು ಆಂಟಿಬ್ಯಾಕ್ಟೀರಿಯಲ್ ಮತ್ತು ಉರಿಯೂತ ಕಡಿಮೆ ಮಾಡುತ್ತದೆ. ಇದು ಮೊಡವೆ ಉಂಟುಮಾಡುವ ಬ್ಯಾಕ್ಟೀರಿಯಾ ಕೊಲ್ಲಲು ನೆರವಾಗುತ್ತದೆ.
ಮೃದು ತ್ವಚೆ : ಅಲೋವೆರಾ ಜೆಲ್ ನಲ್ಲಿರುವ ಪೋಷಕಾಂಶಗಳು ತ್ವಚೆಗೆ ಒಳ್ಳೆಯದು. ಇದು ತ್ವಚೆಯನ್ನು ಮೃದುವಾಗಿಡುತ್ತದೆ. ಅಮೈನೋ ಆಮ್ಲಗಳು ಗಟ್ಟಿಯಾದ ಚರ್ಮದ ಕೋಶಗಳನ್ನು ಮೃದುಗೊಳಿಸುತ್ತವೆ.
ಹಲ್ಲುಗಳ ಪ್ಲೇಕ್ ಗೆ ಔಷಧಿ : ಹಲ್ಲುಗಳಲ್ಲಿ ಪ್ಲೇಕ್ ಸಂಗ್ರಹವಾಗಿದ್ದರೆ, ಅಲೋವೆರಾ ಜೆಲ್ ಅದನ್ನು ಕಡಿಮೆ ಮಾಡುತ್ತದೆ. ಅಲೋವೆರಾ ಮೌತ್ವಾಶ್ ಉಸಿರಾಟವನ್ನು ತಾಜಾಗೊಳಿಸುತ್ತದೆ. ಅಲೋವೆರಾ ಜೆಲ್ ಟೂತ್ಪೇಸ್ಟ್ ಬಳಸುವುದರಿಂದ ಒಸಡಿನ ಸಮಸ್ಯೆ ಕಡಿಮೆಯಾಗುತ್ತದೆ.
ದೇಹಕ್ಕೆ ಶಕ್ತಿ : ಅಲೋವೆರಾದಲ್ಲಿರುವ ಮೆಗ್ನೀಸಿಯಮ್, ಪೊಟ್ಯಾಸಿಯಮ್ ಮುಂತಾದ ಎಲೆಕ್ಟ್ರೋಲೈಟ್ ಗಳು ದೇಹವನ್ನು ಹೈಡ್ರೇಟ್ ಮಾಡುತ್ತವೆ. ವ್ಯಾಯಾಮ ಮಾಡಿದ ನಂತ್ರ ಅಲೋವೆರಾ ಜೆಲ್ ನಿಂದ ತಯಾರಿಸಿದ ಪಾನೀಯ ಕುಡಿಯುವುದು ಒಳ್ಳೆಯದು.
ಮಲಬದ್ಧತೆ ಶಮನ : ಮಲಬದ್ಧತೆಯ ಸಮಸ್ಯೆ ಇದ್ದವರು ಅಲೋವೆರಾ ಸೇವಿಸಬೇಕು. ಮಲಬದ್ಧತೆಯನ್ನು ಹೋಗಲಾಡಿಸಲು ಇದು ಅತ್ಯುತ್ತಮವಾಗಿದೆ.
ಗಾಯಕ್ಕೆ ಒಳ್ಳೆಯದು : ಪುರುಷರು ಶೇವಿಂಗ್ ಮಾಡುವಾಗ ಚರ್ಮ ಕತ್ತರಿಸಿ ಹೋದ್ರೆ ಕಿರಿಕಿರಿಯಾಗುತ್ತದೆ. ಅಂಥ ಸಂದರ್ಭದಲ್ಲಿ ಗಾಯಕ್ಕೆ ಅಲೋವೆರಾ ಜೆಲ್ ಹಚ್ಚಬೇಕು.
Clean Ear: ಕಿವಿಯನ್ನು ಸ್ವಚ್ಛಗೊಳಿಸಬೇಕಾ? ಬೇಡವಾ?
ಮಧುಮೇಹ ರೋಗಿಗಳಿಗೆ ಉತ್ತಮ : ಟೈಪ್-2 ಡಯಾಬಿಟಿಸ್ ರೋಗಿಗಳು ಪ್ರತಿ ದಿನ ಎರಡು ಚಮಚ ಅಲೋವೆರಾ ಜ್ಯೂಸ್ ಕುಡಿಯಬೇಕು. ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಲು ನೆರವಾಗುತ್ತದೆ.