ನಮ್ಮ ಸಾಂಪ್ರದಾಯಿಕ ವೈದ್ಯ ಪದ್ಧತಿಗಳಲ್ಲಿ ದೇಹದ ರೋಗ ನಿರೋಧಕ ಶಕ್ತಿ ಹೆಚ್ಚಿಸಿ ಕೊರೋನಾ ಬಾರದಂತೆ ದೂರವಿಡಲಂತೂ ಸಾಧ್ಯವಿದೆ. ಅದು ಹೇಗೆ ಅಂತ ಆಯುಷ್ ಇಲಾಖೆ ಹೇಳಿದೆ.
ಕೊರೋನಾ ವೈರಸ್ ಬಂದರೆ ಅದನ್ನು ಗುಣಪಡಿಸಲು ನೇರವಾದ ಮದ್ದುಗಳು ನಮ್ಮ ಸಾಂಪ್ರದಾಯಿಕ ವೈದ್ಯ ಪದ್ಧತಿಗಳಲ್ಲಿ ಇದೆಯೋ ಇಲ್ಲವೋ ಗೊತ್ತಿಲ್ಲ. ಬಹುಶಃ ಸರಿಯಾಗಿ ಹುಡುಕಿದರೆ ಸಿಗಲೂಬಹುದು. ಅನ್ವೇಷಣೆ ನಡೆಯಬೇಕಷ್ಟೆ. ಆದರೆ, ದೇಹದ ರೋಗ ನಿರೋಧಕ ಶಕ್ತಿ ಹೆಚ್ಚಿಸಿ ಕೊರೋನಾ ಬಾರದಂತೆ ದೂರವಿಡಲಂತೂ ಸಾಧ್ಯವಿದೆ. ಅದು ಹೇಗೆ ಅಂತ ಆಯುಷ್ ಇಲಾಖೆ ಹೇಳಿದೆ. ಅದು ಹೀಗೆ.
- ದಿನವಿಡೀ ಬಿಸಿ ನೀರು ಕುಡಿಯುತ್ತಿರಿ.
- ಪ್ರತಿದಿನ ಮುಂಜಾನೆ ಕನಿಷ್ಠ ಪಕ್ಷ ಅರ್ಧ ಗಂಟೆ ಯೋಗಾಸನ, ಪ್ರಾಣಾಯಾಮ, ಧ್ಯಾನಗಳನ್ನು ಅಭ್ಯಾಸ ಮಾಡಿ.
- ಅಡುಗೆಯಲ್ಲಿ ಬೆಳ್ಳುಳ್ಳಿ, ಅರಶಿನ, ಜೀರಿಗೆ, ಕೊತ್ತಂಬರಿ, ಕಾಳುಮೆಣಸು, ಲವಂಗಗಳನ್ನು ಹೆಚ್ಚಾಗಿ ಬಳಸಿ.
undefined
- ಬೆಳಗ್ಗೆ ಒಂದು ಟೀಸ್ಪೂನ್‌ನಷ್ಟು ಚ್ಯವನಪ್ರಾಶ ಸೇವಿಸುವುದು ಒಳ್ಳೆಯದು. ಡಯಾಬಿಟಿಸ್ ಇರುವವರು ಶುಗರ್ ಇಲ್ಲದ ಚವನಪ್ರಾಶ ಸೇವಿಸಬೇಕು.
- ತುಳಸಿ, ದಾಲ್ಷಿನ್ನಿ, ಕಾಳುಮೆಣಸು, ಶುಂಠಿ ಹಾಕಿದ ಹರ್ಬಲ್ ಟೀ ದಿನಕ್ಕೆರಡು ಬಾರಿ ಕುಡಿಯಿರಿ. ಅಗತ್ಯವಿದ್ದರೆ ರುಚಿಗೆ ತಕ್ಕಷ್ಟು ಬೆಲ್ಲ ಹಾಗೂ ಲಿಂಬೆಹುಳಿ ಸೇರಿಸಿಕೊಳ್ಳಿ.
- 150 ಮಿಲಿಲೀಟರ್ ನೀರಿಗೆ ಅರ್ಧ ಟೀಸ್ಪೂನ್ ಅರಿಶಿನ ಪುಡಿ ಹಾಕಿಕೊಂಡು ದಿನಕ್ಕೆರಡು ಬಾರಿ ಸೇವಿಸಿ.
- ದಿನಕ್ಕೆರಡು ಬಾರಿ, ಸಂಜೆ ಮತ್ತು ಮುಂಜಾನೆ, ಎರಡೂ ಮೂಗಿನ ಹೊಳ್ಳೆಗಳಿಗೆ ತುಪ್ಪ, ಸಾಸಿವೆ ಎಣ್ಣೆ ಅಥವಾ ತೆಂಗಿನೆಣ್ಣೆಯನ್ನು ಲೇಪಿಸಿಕೊಳ್ಳಿ.
ಮೈ-ಕೈ ಕ್ಲೀನ್ ಮಾಡಿಯೇನೋ ತೊಳೆಯುತ್ತೀರಿ, ಆದ್ರೆ ಟವೆಲ್ ಕಥೆಯೇನು?
-ಆಯಿಲ್ ಪುಲ್ಲಿಂಗ್: ಸಾಸಿವೆ ಎಣ್ಣೆ ಅಥವಾ ತೆಂಗಿನೆಣ್ಣೆಯನ್ನು ಒಂದು ಟೀಸ್ಪೂನ್‌ನಷ್ಟು ತೆಗೆದುಕೊಂಡು ಅದನ್ನು ಬಾಯಿಯಲ್ಲಿ ಹಾಕಿಕೊಂಡು ಒಂದು ಅಥವಾ ಎರಡು ನಿಮಿಷ ಮುಕ್ಕುಳಿಸಿ ನಂತರ ಉಗಿಯಿರಿ. ಹೀಗೆ ದಿನಕ್ಕೆರಡು ಬಾರಿ ಮಾಡಬಹುದು.
- ಒಣಕೆಮ್ಮು ಇದ್ದಾಗ, ಬಿಸಿನೀರಿನಲ್ಲಿ ಪುದಿನ ಎಲೆ ಅಥವಾ ಅಜುವಾನ ಹಾಕಿಕೊಂಡು ಅದರ ಹಬೆಯನ್ನು ಒಳಗೆಳೆದುಕೊಳ್ಳಬೇಕು. ದಿನಕ್ಕೊಮ್ಮೆ ಹೀಗೆ ಮಾಡಿದರೆ ಸಾಕು.
- ಒಣಕೆಮ್ಮು ಇದ್ದರೆ, ಲವಂಗದ ಪುಡಿಯನ್ನು ಸಾವಯವ ಸಕ್ಕರೆ ಅಥವಾ ಜೇನಿನ ಜೊತೆ ಸೇರಿಸಿಕೊಂಡು ದಿನಕ್ಕೆರಡು ಬಾರಿ ಸೇವಿಸಿ.
ಮನೆಯಲ್ಲೇ ಕುಳಿತು ಖಿನ್ನತೆ ಬೇಕಿದೆ ಎಚ್ಚರ, ತಜ್ಞರ ಸಲಹೆ
ಈ ಮೇಲಿನ ವೈದ್ಯ ಪದ್ಧತಿಗಳನ್ನು ಹಿರಿಯ ಆಯುರ್ವೇದ, ಯುನಾನಿ, ಸಿದ್ಧ ಹಾಗೂ ಹೋಮಿಯೋಪತಿ ವೈದ್ಯರು ಶಿಫಾರಸು ಮಾಡಿದ್ದಾರೆ. ಇವು ಸಾಮಾನ್ಯ ಆರೋಗ್ಯ ಇದ್ದವರಿಗೂ, ಸಾಮಾನ್ಯ ಕೆಮ್ಮು ಮತ್ತು ಶೀತ ನೆಗಡಿ ಕಾಡಿದವರಿಗೂ ಸೂಕ್ತ. ಇದರಿಂದ ಈ ಕಾಯಿಲೆ ಲಕ್ಷಣಗಳು ಕಡಿಮೆಯಾಗದೆ ಇದ್ದರೆ, ಮೂರು ದಿನಕ್ಕಿಂತ ಹೆಚ್ಚು ಕಾಲ ಉಳಿದರೆ, ಆಗ ವೈದ್ಯರನ್ನು ಕಂಡು ಅಗತ್ಯವಿದ್ದರೆ ಹೆಚ್ಚಿನ ಔಷಧ ಸೇವಿಸಬೇಕಾದೀತು.
ಆಯುರ್ವೇದ ವೈದ್ಯ ಡಾ.ಮುರಳೀಧರ್ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ನೀಡಿದ ಸಲಹೆ ಇದು..