ಕೊರೋನಾಕ್ಕೆ ಗಿಡಮೂಲಿಕೆ ಮದ್ದು, ಸಾಗರೋಪಾದಿಯಲ್ಲಿ ಈ ಹಳ್ಳಿಗೆ ಬಂದ್ರು!

By Suvarna News  |  First Published May 21, 2021, 6:02 PM IST

* ಆಂಧ್ರಪ್ರದೇಶದಲ್ಲಿ ಕೊರೋನಾಕ್ಕೆ ಉಚಿತ  ಗಿಡಮೂಲಿಕೆ ಔಷಧ 
* ಪ್ರತಿದಿನ ಆಗಮಿಸುತ್ತಿರುವ ಸಾವಿರಾರು ಜನರು
* ಕೊರೋನಾ ನಿಯಮ ಪಾಲನೆಗೆ ಜಿಲ್ಲಾಡಳಿತದ ಖಡಕ್ ಸೂಚನೆ
* ವಿಡಿಯೋ ಮತ್ತು ಪೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್


ನೆಲ್ಲೂರು(ಮೇ 21) ಕೊರೋನಾಕ್ಕೆ ವಿವಿಧ ಲಸಿಕೆಗಳೂ ಲಭ್ಯವಾಗಿದ್ದು ಹಲವು ದೇಶಗಳು ಮಹಾಮಾರಿಯನ್ನು ಮೆಟ್ಟಿ ನಿಂತಿವೆ. ಭಾರತದಲ್ಲಿ ಲಸಿಕೆ ಅಭಿಯಾನ ನಡೆಯುತ್ತಲೇ ಇದೆ. ಆದರೆ ಈ ಊರಿನ ಜನರು ಮಾತ್ರ ಉಚಿತ ಔಷಧಿಯ ಮೊರೆ ಹೋಗಿದ್ದಾರೆ.

"

Latest Videos

undefined

ಆಂಧ್ರಪ್ರದೇಶದ ನೆಲ್ಲೂರಿನ ಕೃಷ್ಣಪಟ್ಟಣಂ ಹಳ್ಳಿಯಲ್ಲಿ ಕೊರೋನಾಕ್ಕೆ ಉಚಿತ ಔಷಧ ನೀಡಲಾಗುತ್ತದೆ ಎಂದು ಕೇಳಿ ಸಾವಿರಾರು ಜನ ಜಮಾಯಿಸುತ್ತಿದ್ದು ವಿಡಿಯೋ ಮತ್ತು ಚಿತ್ರಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಇಮ್ಯೂನಿಟಿ ಹೆಚ್ಚಳಕ್ಕೆ ಲಸಿಕೆ ಡೋಸ್ ಮಧ್ಯೆ ಮೂರು ತಿಂಗಳ ಅಂತರ ಬೇಕು

ಕೊರೋನಾ ನಿಯಮಗಳನ್ನು ಇಲ್ಲಿ ಕೇಳಲೇಬಾರದು.  ಹಣ ಪಡೆದುಕೊಳ್ಳಲದೇ ಕೊರೋನಾಕ್ಕೆ ಉಚಿತವಾಗಿ ಆಯುರ್ವೇದ ಔಷಧಿ  ನೀಡುತ್ತಿದ್ದಾರೆ ಎಂಬ ಸುದ್ದಿ ಕಾಡ್ಗಿಚ್ಚಿನಂತೆ ಹಬ್ಬಿದೆ. ಜಿಲ್ಲಾಡಳಿತಕ್ಕೂ ಮಾಹಿತಿ ಬಂದಿದ್ದು ಅಲ್ಲಿಗೆ  ತೆರಳಿದಾಗ ಜನರಿಂದ ವಿರೋಧ ಸಹ ವ್ಯಕ್ತವಾಯಿತು. ನಾವು ಔಷಧ ಪಡೆದುಕೊಳ್ಳುತ್ತೇವೆ ಎಂದೇ ನಾಗರಿಕರು ಮುಂದೆ ಬಂದಿದ್ದರು.

ಬೋಗಿನಿ ಆನಂದಯ್ಯ ಅವರಿಂದ ಉಚಿತ ಔಷಧಿ ದೊರೆಯುತ್ತಿದ್ದು ದಿನವೊಂದಕ್ಕೆ ಸಾವಿರಾರು ಜನ ಪಡೆದುಕೊಳ್ಳುತ್ತಿದ್ದಾರೆ. ಈಗಾಗಲೇ 40 ಸಾವಿರ ಜನ ಪಡೆದುಕೊಂಡಿದ್ದಾರೆ  ಎನ್ನುತ್ತಾರೆ ಆನಂದಯ್ಯ.  ಔಷಧಿ ವಿತರಣೆ ಮಾಡಿ ಎಂದು ನನ್ನ ಪುತ್ರ ಒಂದು ಲಕ್ಷ ರೂ. ಹಣ ನೀಡಿದ್ದಾರೆ ಅದನ್ನೇ ಬಳಸಿಕೊಂಡಿದ್ದೇವೆ ಎಂದು ತಿಳಿಸುತ್ತಾರೆ.

ಇನ್ನೊಂದು  ವಿಶೇಷ ಸಂಗತಿ ಎಂದರೆ ಜಿಲ್ಲಾಡಳಿತದ ಕೆಲ ಅಧಿಕಾರಿಗಳೆ ಇದನ್ನು ಪಡೆದುಕೊಂಡಿದ್ದಾರೆ.  ಗಿಡಮೂಲಿಕೆ ಔಷಧ ಇದಾಗಿದ್ದು  ಬಂದವರಿಗೆ ನೀಡುತ್ತಿದ್ದೇವೆ ಎಂದು ಸಂಘಟಕರು ಹೇಳಿದ್ದರೆ.. ದಯವಿಟ್ಟು ನಿಯಮ ಪಾಲನೆ ಮಾಡಿ ಎಂದು ಆಡಳಿತ ಮನವಿ ಮಾಡಿಕೊಂಡಿದೆ.   ಪ್ರತಿ ದಿನವೂ ಆಗಮಿಸುತ್ತಿರುವವರ ಸಂಖ್ಯೆ ಹೆಚ್ಚಾಗಿದ್ದು ಆಡಳಿತವೇ ಭದ್ರತೆಯ ವ್ಯವಸ್ಥೆ ಮಾಡುತ್ತಿದೆ.   ಗಿಡಮೂಲಿಕೆಯ ಮಾಹಿತಿಯನ್ನು ಪಡೆದುಕೊಂಡಿರುವ ಆಯುಚ್ ಇಲಾಖೆ ವರದಿಗಾಗಿ ಕಳಿಸಿಕೊಟ್ಟಿದೆ. 

People throng village for . pic.twitter.com/nv3Q25jY7F

— ur'sGirivsk (@girivsk)
click me!