ಗುಪ್ತಾಂಗ, ಚರ್ಮ, ಮೆದುಳಿಗೆ ಹಾನಿ, ಬ್ಲ್ಯಾಕ್ ಫಂಗಸ್‌ಗಿಂತಲೂ ಡೇಂಜರ್ ಈ ವೈಟ್‌ ಫಂಗಸ್!

By Suvarna NewsFirst Published May 21, 2021, 9:46 AM IST
Highlights

* ಕೊರೋನಾ, ಬ್ಲ್ಯಾಕ್‌ ಫಂಗಸ್‌ ಬೆನ್ನಲ್ಲೇ ದೇಶದಲ್ಲಿ ವೈಟ್‌ ಫಂಗಸ್‌ ಕಾಟ

* ಕಪ್ಪು ಶಿಲೀಂಧ್ರಕ್ಕಿಂತಲೂ ಡಂಝರ್ ಆಗಿರುವ ವೈಟ್‌ ಫಂಗಸ್‌ ಲಕ್ಷಣಗಳೇನು?

* ವೈಟ್‌ ಫಂಗಸ್‌ ಹರಡೋದು ಹೇಗೆ? ಚಿಕಿತ್ಸೆ ಏನು? ಇಲ್ಲಿದೆ ಎಲ್ಲಾ ವಿವರ

ನವದೆಹಲಿ(ಮೇ.21): ಕೊರೋನಾ ಎರಡನೇ ಅಲೆ ಅಬ್ಬರ ಇನ್ನೂ ನಿಂತಿಲ್ಲ, ಹೀಗಿರುವಾಗಲೇ ಬ್ಲ್ಯಾಕ್ ಫಂಗಸ್ ದಾಳಿ ಇಟ್ಟಿತ್ತು. ಹಾಗೋ ಹೀಗೋ ಸುಧಾರಿಸಿಕೊಂಡು ಬ್ಲ್ಯಾಕ್‌ ಫಂಗಸ್‌ಗೆ ಚಿಕಿತ್ಸೆ ನೀಡಲಾರಂಭಿಸಿದ ಬೆನ್ನಲ್ಲೇ ವೈಟ್‌ ಫಂಗಸ್‌ ಕೂಡಾ ದಾಳಿ ಇಟ್ಟಿದೆ. ಇದು ಗಾಯದ ಮೇಲೆ ಬರೆ ಎಳೆದಂತಾಗಿದೆ. ಬಿಹಾರದಲ್ಲಿ ವೈಟ್‌ ಫಂಗಸ್‌ನ ನಾಲ್ಕು ಪ್ರಕರಣಗಳು ಬೆಳಕಿಗೆ ಬಂದಿವೆ. ಈ ಸೋಂಕಿತರಲ್ಲಿ ಪಾಟ್ನಾದ ಡಾಕ್ಟರ್ ಕೂಡಾ ಒಬ್ಬರು. ವರದಿಗಳನ್ನು ಗಮನಿಸುವುದಾದರೆ, ಈ ವೈಟ್‌ ಫಂಗಸ್‌, ಬ್ಲ್ಯಾಕ್‌ ಫಂಗಸ್‌ಗಿಂತಲೂ ಡೇಂಜರ್ ಎಂದು ತಿಳಿದು ಬಂದಿದೆ.

ಬ್ಲ್ಯಾಕ್‌ ಫಂಗಸ್‌ಗೆ ಉಚಿತವಾಗಿ ಚಿಕಿತ್ಸೆ: ಸರ್ಕಾರದ ಮಹತ್ವದ ನಿರ್ಧಾರ!

ವೈಟ್‌ ಫಂಗಸ್ ಯಾಕೆ ಬಹಳ ಅಪಾಯಕಾರಿ?

ಆರೋಗ್ಯ ತಜ್ಞರ ಅನ್ವಯ ಕಪ್ಪು ಶಿಲೀಂಧ್ರಕ್ಕಿಂತಲೂ ವೈಟ್‌ ಫಂಗಸ್ ಬಹಳ ಅಪಾಯಕಾರಿ ಯಾಕೆಂದರೆ ಇದು ಶ್ವಾಸಕೋಶದ ಜೊತೆ ದೇಹದ ಇತರ ಭಾಗಗಳಿಗೂ ಹಾನಿಯುಂಟು ಮಾಡುತ್ತದೆ. ಉಗುರು, ಚರ್ಮ, ಹೊಟ್ಟೆ, ಮೆದುಳು, ಗುಪ್ತಾಂಗ ಹಾಗೂ ಮುಖ ಹೀಗೆ ಎಲ್ಲೆಡೆ ಪ್ರಭಾವ ಬೀರುತ್ತದೆ. ಸೋಂಕಿತರ ಸಿಟಿ ಸ್ಕ್ಯಾನ್‌ನಲ್ಲಿ ಕೊರೋನಾದಂತಹ ಸೋಂಕು ಹರಡುತ್ತಿರುವುದು ಸಾಬೀತಾಗಿದೆ. 

ಬಿಳಿ ಶಿಲೀಂಧ್ರ ಹೇಗೆ ಹುಟ್ಟಿಕೊಳ್ಳುತ್ತದೆ?

ಸೆಂಟರ್‌ ಫಾರ್‌ ಡಿಸೀಸ್ ಕಂಟ್ರೋಲ್‌ ಆಂಡ್‌ ಪ್ರಿವೆಂಶನ್ ಅನ್ವಯ ಈ ಶಿಲೀಂಧ್ರ ನಮ್ಮ ಸುತ್ತಲಿನ ಪರಿಸರದಲ್ಲಿ ಇರುತ್ತದೆ. ಅದರಲ್ಲೂ ವಿಶೇಷವಾಗಿ ಮಣ್ಣು, ಕೊಳೆಯುವ ಕಾರ್ಬನ್‌ಯುಕ್ತ ಪದಾರ್ಥಗಳಾದ ಎಲೆ, ಹಣ್ಣು, ತರಕಾರಿಗಳ ರಾಶಿ, ಅಥವಾ ಕೊಳೆತ ಕಟ್ಟಿಗೆ ರಾಶಿಯಲ್ಲಿ ಹುಟ್ಟಿಕೊಳ್ಳುತ್ತದೆ.

ಚಿಕಿತ್ಸೆ ವೇಳೆ ಸ್ಟಿರಾಯಿಡ್‌ ದುರುಪಯೋಗ, ಇದೇ ಬ್ಲ್ಯಾಕ್‌ ಫಂಗಸ್‌ಗೆ ಕಾರಣ: ಏಮ್ಸ್

ಮ್ಯೂಕೋರ್ಮೈಕೋಸಿಸ್ನ ಲಕ್ಷಣಗಳೇನು?

ತಜ್ಞರ ಅನ್ವಯ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ನೀಡದಿದ್ದರೆ ಮ್ಯೂಕೋರ್ಮೈಕೋಸಿಸ್ ಅತ್ಯಂತ ಅಪಾಯಕಾರಿಯಾಗಬಲ್ಲದು. ತಲೆ ನೋವು, ಮುಖದ ಊತ, ದೃಷ್ಟಿ ದೋಷ, ಕಣ್ಣು ನೋವು, ಕೆನ್ನೆ ಹಾಗೂ ಕಣ್ಣಿನ ಊತ, ಮೂಗಿನ ಸುತ್ತ ಕಪ್ಪು ಕಲೆ, ಕೆಮ್ಮು, ರಕ್ತ ವಾಂತಿ, ಮೂಡ್‌ ಸ್ವಿಂಗ್ಸ್ ಇದರ ಲಕ್ಷಣಗಳಾಗಿವೆ.

ಇದಕ್ಕೆ ಚಿಕಿತ್ಸೆ ಹೇಗೆ?

ಆಂಟಿ ಫಂಗಲ್ ಇನ್ಫೆಕ್ಷನ್, ಇದರ ಒಂದು ಡೋಸ್‌ ಮೊತ್ತ ಬರೋಬ್ಬರಿ 3,500 ರೂ. ಇದನ್ನು ಪ್ರತಿ ದಿನ ಎಂಟು ವಾರ ನೀಡಬೇಕಾಗುತ್ತದೆ. ಡ್ರಗ್‌ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ ಕಳೆದ ಮಾರ್ಚ್‌ನಲ್ಲಿ ಮುಂಬೈನಲ್ಲಿರುವ ಬಯೋ- ಫಾರ್ಮಾಸ್ಯುಟಿಕಲ್ ಫರ್ಮ್ ಭಾರತ್ ಸೀರಂ ಹಾಗೂ ವ್ಯಾಕ್ಸಿನ್ ಲಿಮಿಟೆಡ್‌ಗೆ ಆಂಟಿ ಫಂಗಲ್ ಔಷಧ ಲಿಪೊಸೋಮಲ್ ಎಂಫೋಟೆರಿಸಿನ್ ಬಿ ಅಥವಾ ಎಲ್‌ಎಎಂಬಿ ಬಳಕೆಗೆ ಅನುಮತಿ ನೀಡಿದೆ. 

click me!