
ಸಾಮಾನ್ಯವಾಗಿ ದೇವರ ಪೂಜೆಗೆ ಕರ್ಪೂರ(Camphor) ಬಳಸುವುದು ಎಲ್ಲರಿಗೂ ಗೊತ್ತೇ ಇರುವ ವಿಷಯ. ಆದರೆ, ಪೂಜೆಗಷ್ಟೇ ಅಲ್ಲದೆ, ಆರೋಗ್ಯ(Health)ಕ್ಕೆ ಕೂಡಾ ಕರ್ಪೂರದಿಂದ ಹತ್ತಾರು ಲಾಭಗಳಿವೆ. ಆಯುರ್ವೇದ(Ayurveda) ಗ್ರಂಥಗಳಲ್ಲಂತೂ ಕರ್ಪೂರದ ಆರೋಗ್ಯ ಲಾಭಗಳ ಬಗ್ಗೆ ವಿವರವಾದ ಉಲ್ಲೇಖಗಳಿವೆ. ಅದರಂತೆ ಕರ್ಪೂರವು ನಾಡಿ, ಮಸ್ತಕ ಹಾಗೂ ಹೃದಯ ಉತ್ತೇಜಕವಾಗಿದೆ. ವಾತ ಹರ, ದುರ್ಗಂಧ ನಾಶಕ, ಕಾಮೋತ್ತೇಜಕವಾಗಿದೆ. ಹಾಗಾಗಿ, ಚೂರ್ಣ, ತೈಲ, ಮುಲಾಂ, ದಂತಮಂಜನ, ಪೌಡರ್ ಮುಂತಾದ ರೂಪದ ಆಯುರ್ವೇದ ಔಷಧಿಗಳ ತಯಾರಿಕೆಯಲ್ಲಿ ಕರ್ಪೂರವನ್ನು ಹೇರಳವಾಗಿ ಬಳಸುತ್ತಾರೆ. ಹಾಗಿದ್ದರೆ ಕರ್ಪೂರದ ಪ್ರಯೋಜನಗಳನ್ನು ವಿವರವಾಗಿ ನೋಡೋಣ.
ಜ್ವರ(fever)ಕ್ಕೆ ಮದ್ದು
ಈಗಂತೂ ಜ್ವರ, ಕೆಮ್ಮು, ಶೀತ ಸಾಮಾನ್ಯ ಸಮಸ್ಯೆಗಳು. ಜ್ವರ ಹೆಚ್ಚಾದಾಗ, ಕರ್ಪೂರವನ್ನು ವೀಳ್ಯದ ರಸದಲ್ಲಿ ಬೆರೆಸಿ ಕೊಡುವುದರಿಂದ ದೇಹ ಬೇಗ ಬೆವರುತ್ತದೆ. ಇದರಿಂದ ಜ್ವರದ ತೀಕ್ಷ್ಣತೆ ಕಡಿಮೆಯಾಗುತ್ತದೆ. ಸನ್ನಿಪಾತ ಜ್ವರದಲ್ಲಿ ಪ್ರಜ್ಞೆ ತಪ್ಪಿದಾಗ ಕೂಡಾ ಕರ್ಪೂರ ಕೊಡುವುದರಿಂದ ಉಪಯೋಗವಿದೆ. ಕಾಲರಾಕ್ಕೆ ಕರ್ಪೂರ ಉತ್ತಮ ಔಷಧ.
ತಲೆನೋವು(headache) ಶಮನ
ತಲೆನೋವು ತೀವ್ರವಾಗಿ ಪದೇ ಪದೇ ಬಾಧಿಸುತ್ತಿದ್ದರೆ ಕರ್ಪೂರವನ್ನು ತುಪ್ಪದಲ್ಲಿ ಬೆರೆಸಿ ಹಣೆಗೆ ತಿಕ್ಕುವುದರಿಂದ ತಲೆನೋವು ಗುಣವಾಗುತ್ತದೆ. ಕರ್ಪೂರದ ಎಣ್ಣೆಗಳು ಕೂಡಾ ತಲೆನೋವಿಗೆ ರಾಮಬಾಣವಾಗಬಲ್ಲವು.
Food and Health: ಈ ಅನಾರೋಗ್ಯ ಕಾಡುತ್ತಿದ್ದರೆ ರವೆ, ಕಡ್ಲೆಹಿಟ್ಟು ತಿನ್ಬೇಡಿ
ಜೇನು(honeybee) ಕಚ್ಚಿದಾಗ
ಜೇನು ಹುಳ, ಚೇಳು, ನೊಣ, ಕಂಚಿಗಾರ ಮೊದಲಾದ ಹುಳಗಳು ಕಚ್ಚಿದಾಗ ಚರ್ಮ ಊದಿಕೊಳ್ಳುತ್ತದೆ. ಅಲ್ಲಿ ತೀವ್ರತರದ ನೋವು, ತುರಿಕೆ ಕಾಣಿಸಿಕೊಳ್ಳುತ್ತದೆ. ಇಂಥ ಸಮಯದಲ್ಲಿ ಕೂಡಲೇ ಕರ್ಪೂರವನ್ನು ವೀಳ್ಯದೆಲೆಯ ರಸದಲ್ಲಿ ಬೆರೆಸಿ ಊದಿಕೊಂಡ ಜಾಗಕ್ಕೆ ಹಚ್ಚಿ ತಿಕ್ಕಬೇಕು. ಜೊತೆಗೆ ಸ್ವಲ್ಪ ರಸವನ್ನು ಹೊಟ್ಟೆಗೂ ಕೊಡಬೇಕು. ಇದರಿಂದ ಉರಿ ಕಡಿಮೆಯಾಗಿ ಕೂಡಲೇ ವಿಷದ ಪ್ರಭಾವ ತಗ್ಗುತ್ತದೆ.
ವಾಂತಿ ಬೇಧಿ(diarrhea)
ವಾಂತಿ ಬೇಧಿ ಬಾಧಿಸುತ್ತಿದ್ದರೆ ರೋಗಿಗೆ ಆಗಾಗ ಕರ್ಪೂರವನ್ನು ಹಾಲಿಗೆ ಬೆರೆಸಿ ಅರ್ಕವನ್ನು ಕುಡಿಸಬೇಕು. ಕೂಡಲೇ ವಾಂತಿ ಬೇಧಿ ಕಟ್ಟುತ್ತದೆ. ಆದರೆ, ಸಕ್ಕರೆಯೊಡನೆ ಹೆಚ್ಚಾಗಿ ಕರ್ಪೂರ ಸೇವಿಸಿದರೆ ಅದರಿಂದಲೇ ವಾಂತಿಯಾಗುತ್ತದೆ.
ಹೊಟ್ಟೆನೋವು(Stomachache)
ಸಕ್ಕರೆಯೊಡನೆ ಕರ್ಪೂರವನ್ನು ಬೆರೆಸಿ ಬಿಸಿನೀರಲ್ಲಿ ಕೊಡುವುದರಿಂದ ಹೊಟ್ಟೆನೋವು ಗುಣವಾಗುತ್ತದೆ. ಅತಿಸಾರ, ಸಂಧಿವಾತ, ಜ್ವರ, ಉಬ್ಬಸಕ್ಕೆ ಕೂಡಾ ಈ ಮನೆಮದ್ದು ಶಮನಕಾರಿಯಾಗಬಲ್ಲದು.
ಗಾಯಗಳಿಗೆ
ಶಸ್ತ್ರಗಳಿಂದ ಏಟು ಬಿದ್ದು ಗಾಯವಾಗಿ ರಕ್ತ ಸುರುಯುತ್ತಿದ್ದರೆ, ಕೂಡಲೇ ಕರ್ಪೂರವನ್ನು ಹಾಕಿ ಬಟ್ಟೆಯನ್ನು ಕಟ್ಟುವುದರಿಂದ ರಕ್ತ ಸುರಿಯುವುದು ನಿಲ್ಲುತ್ತದೆ. ಜೊತೆಗೆ ಗಾಯವೂ ಬೇಗ ಗುಣವಾಗುತ್ತದೆ.
Health Tips: ರಾತ್ರಿಯಲ್ಲಿ ಆಗಾಗ್ಗೆ ಶೌಚಾಲಯಕ್ಕೆ ಹೋಗ್ತೀರಾ? ಇದು ಅಪಾಯಕಾರಿ
ಕಾಮೋತ್ತೇಜಕ
ಲಘು ಸುಗಂಧಯುಕ್ತವಾಗಿರುವ ಕರ್ಪೂರವು ವೀರ್ಯವರ್ಧಕವಾಗಿ ಕೆಲಸ ಮಾಡುತ್ತದೆ. ಬಾಯಿ ಹಾಗೂ ಮೈಯ್ಯ ದುರ್ಗಂಧ ತೊಲಗಿಸಲೂ ಬಳಸಬಹುದು. ಇದರಿಂದ ಸಂಗಾತಿಗೆ ನೀವು ಹೆಚ್ಚು ಆಕರ್ಷಕರೆನಿಸುವಿರಿ. ಆಗಾಗ ಹಾಲಿನಲ್ಲಿ ಸ್ವಲ್ಪ ಸೇವಿಸುವುದರಿಂದ ಕರ್ಪೂರ ಶರೀರದಲ್ಲಿ ಸ್ಪೂರ್ತಿಯನ್ನು ತುಂಬಿ ಕಾಮೋತ್ತೇಜಕವಾಗಿ ಕೆಲಸ ಮಾಡುತ್ತದೆ, ಇದೇ ಅಲ್ಲದೆ ಶೀತ(cold), ಹಿಸ್ಟೀರಿಯಾ, ಯೋನಿ ದೋಷ, ಕಫ, ನಿದ್ರಾಹೀನತೆ, ಅತಿ ಬಾಯಾರಿಕೆ ಮುಂತಾದ ಆರೋಗ್ಯ ಸಮಸ್ಯೆಗಳಿಗೂ ಕರ್ಪೂರ ಅತ್ಯುತ್ತಮ ಔಷಧ (medicine). ಹಾಗಂಥ ಅತಿಯಾದ ಸೇವನೆ ಒಳ್ಳೆಯದಲ್ಲ. ಮಗುವಿಗೆ ಹಾಲುಣಿಸುವ ತಾಯಂದಿರು ಕರ್ಪೂರದಿಂದ ದೂರ ಉಳಿಯುವುದು ಒಳ್ಳೆಯದು. ಏಕೆಂದರೆ, ಕರ್ಪೂರವು ಹಾಲನ್ನು ಕಡಿಮೆ ಮಾಡುತ್ತದೆ.
ಹೇಗೆ ತಯಾರಿಸುತ್ತಾರೆ?
ಇಷ್ಟೆಲ್ಲ ಆರೋಗ್ಯ ಲಾಭಗಳಿರುವ ಈ ಕರ್ಪೂರ ಎಲ್ಲಿ ಸಿಗುತ್ತದೆ ಗೊತ್ತಾ? ಚೀನಾ, ಸುಮಾತ್ರಾ, ಜಪಾನ್‌ಗಳಲ್ಲಿ ಹೆಚ್ಚಾಗಿ ಕರ್ಪೂರದ ಮರಗಳನ್ನು ಬೆಳೆಯಲಾಗುತ್ತದೆ. ಈ ಮರಗಳು ಸುಮಾರು 60-80 ಅಡಿ ಎತ್ತರ ಬೆಳೆದು ಹಬ್ಬುತ್ತವೆ. ನಂತರ ಇದರಲ್ಲಿ ಬಿಳಿ ಬಣ್ಣದ ಹೂವುಗಳು ಬಿಡುತ್ತವೆ. ಈ ಹೂವುಗಳಿಂದ ಗೊಂಚಲು ಗೊಂಚಲಾಗಿ ಹಣ್ಣುಗಳಾಗುತ್ತವೆ. ಈ ಹಣ್ಣುಗಳಲ್ಲಿರುವ ಬೀಜಗಳು ಕರ್ಪೂರದ ಪರಿಮಳವನ್ನೇ ಬೀರುತ್ತವೆ. ಈ ಬೀಜಗಳು ಬಿದ್ದು ನೈಸರ್ಗಿಕವಾಗಿ ಮತ್ತಷ್ಟು ಮರಗಳಾಗುತ್ತವೆ. ಆದರೆ, ಕರ್ಪೂರ ಸಿಗುವುದು ಈ ಬೀಜಗಳಿಂದಲ್ಲ. ಬದಲಿಗೆ ಕಾಂಡಕ್ಕೆ ಅಲ್ಲಲ್ಲಿ ಗಾಯ ಮಾಡಿದಾಗ ಅಲ್ಲಿಂದ ಜಿನುಗುವ ಹಾಲಿನಿಂದ. ಈ ಹಾಲು, ಹಾಗೂ ಎಲೆಗಳನ್ನು ಬಳಸಿ ಕರ್ಪೂರ ತಯಾರಿಸುತ್ತಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.